ಎಲೆಕ್ಟ್ರಿಕ್ ವಾಹನ ಖರೀದಿಸುವುದರಿಂದ ತೆರಿಗೆಯಲ್ಲೂ ಹಣ ಉಳಿಸಬಹುದೇ? ಹಾಗಾದ್ರೆ ಓದಿ
ಭಾರತದ ಎಲ್ಲ ನಗರಗಳಲ್ಲೂ ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗಾಗಿ ಮತ್ತು ಮುಂದಿನ ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಸಮಯ ಬಂದಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಕಾರಿನ ಬದಲು ಎಲೆಕ್ಟ್ರಿಕ್ ಕಾರನ್ನು ಆರಿಸುವುದು ಪರಿಸರವನ್ನು ಉಳಿಸುವ ಉತ್ತಮ ಹೆಜ್ಜೆಯಾಗಿದೆ.
ಎಲೆಕ್ಟ್ರಿಕ್ ವಾಹನಗಳು ಕೇವಲ ವೆಚ್ಚ ಉಳಿತಾಯ ಮಾತ್ರವಲ್ಲ. ಪರಿಣಾಮಕಾರಿಯೂ ಹೌದು! ಅಲ್ಲದೆ, ಸಾಕಷ್ಟು ತೆರಿಗೆ ಉಳಿತಾಯ ಮಾಡುವ ಪ್ರಯೋಜನಗಳನ್ನೂ ಹೊಂದಿವೆ. ವೈಯಕ್ತಿಕ ಬಳಕೆಗಾಗಿ ಖರೀದಿಸುವ ಎಲೆಕ್ಟ್ರಿಕ್ ರಹಿತ (ಪೆಟ್ರೋಲ್) ವಾಹನಗಳನ್ನು ಭಾರತೀಯ ತೆರಿಗೆ ಕಾನೂನುಗಳ ಅಡಿಯಲ್ಲಿ ಐಷಾರಾಮಿ ಉತ್ಪನ್ನಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ವೃತ್ತಿಪರರು ಸ್ವಯಂ ಸಾಲಗಳ ಮೇಲೆ ಯಾವುದೇ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಆದಾಗ್ಯೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವೆಹಿಕಲ್ (ವಿದ್ಯುತ್ ಚಾಲಿತ ವಾಹನಗಳು) ಮಾಲೀಕರಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವ '80ಇಇಬಿ' ಎಂಬ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದೆ.

ಈ ವಿಭಾಗದ ಅಡಿಯಲ್ಲಿ, ವೇತನ ಪಡೆಯುವ ವೃತ್ತಿಪರರೂ ವಿದ್ಯುತ್ ಚಾಲಿತ ವಾಹನಗಳ ಖರೀದಿಸುವಾಗ ವಿನಾಯಿತಿಯ ಲಾಭ ಪಡೆಯಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸುತ್ತಿದೆ.
ಲಾಭ ಪಡೆಯುವುದು ಹೇಗೆ?:
'80ಇಇಬಿ' ವಿಭಾಗದ ಅಡಿಯಲ್ಲಿ ನಿಮ್ಮ ಮೊದಲ ವಿದ್ಯುತ್ ಚಾಲಿತ ವಾಹನ ಖರೀದಿಯಲ್ಲೇ ಸುಲಭವಾಗಿ ತೆರಿಗೆಯನ್ನು ಉಳಿತಾಯ ಮಾಡಬಹುದಾಗಿದೆ. ಈ ಲಾಭಗಳನ್ನು ಪಡೆಯಲು ಏನೆಲ್ಲಾ ಅರ್ಹತೆಗಳನ್ನು ಒಳಗೊಂಡಿರಬೇಕು ಎಂಬುದನ್ನು 80 ಇಇಬಿ ವಿಭಾಗವೇ ತಿಳಿಸುತ್ತದೆ.
ಸೆಕ್ಷನ್ 80ಇಇಬಿ ಅಡಿಯಲ್ಲಿ 1,50,000 ರೂ.ಗಳ ವರೆಗೆ ಒಟ್ಟು ತೆರಿಗೆ ವಿನಾಯಿತಿ ಲಭ್ಯವಿರಲಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಿದ್ಯುತ್ ಚಾಲಿತ ವಾಹನ ಖರೀದಿಗೆ ಇದು ಅನ್ವಯಿಸುತ್ತದೆ.

ಅರ್ಹತೆಯ ಮಾನದಂಡಗಳೇನು?:
1. ವೈಯಕ್ತಿಕ ತೆರಿಗೆದಾರರು ಮಾತ್ರ ಈ ತೆರಿಗೆ ಕಡಿತದಿಂದ ಪ್ರಯೋಜನ ಪಡೆಯಬಹುದು. ಇತರರಿಗೆ ಇದು ಲಭ್ಯವಿರುವುದಿಲ್ಲ.
ಯಾರಿಗೆ ತೆರಿಗೆ ಪ್ರಯೋಜನ ಸಿಗುವುದಿಲ್ಲ?:
* ಎಒಪಿ (ಅಸೋಸಿಯೇಷನ್ ಆಫ್ ಪರ್ಸನ್ಸ್- (ಸಂಘಟನೆಯ ವ್ಯಕ್ತಿಗಳು)
* ಎಚ್ ಯು ಎಫ್ (ಹಿಂದೂ ಅನ್ಡಿವೈಡೆಡ್ ಫ್ಯಾಮಿಲಿ- (ಹಿಂದೂ ಅವಿಭಜಿತ ಕುಟುಂಬ)
* ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿದ ಸಂಸ್ಥೆಗಳು ಅಥವಾ ಯಾವುದೇ ರೀತಿಯ ತೆರಿಗೆದಾರರು
* ವಿದ್ಯುತ್ ಚಾಲಿತ ವಾಹನ ತೆರಿಗೆ ಕಡಿತಕ್ಕಾಗಿ ಸೆಕ್ಷನ್ 80ಇಇಬಿ ಗೆ ಅನ್ವಯಿಸುವ ಷರತ್ತುಗಳು.

1. ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ತೆರಿಗೆ ವಿನಾಯಿತಿಯ ಅವಕಾಶವಿರುತ್ತದೆ. ಒಂದು ವೇಳೆ ಈಗಾಗಲೇ ವಿದ್ಯುತ್ ಚಾಲಿತ ವಾಹನವನ್ನು ಹೊಂದಿದ್ದರೆ ಸೆಕ್ಷನ್ 80ಇಇಬಿ ಷರತ್ತಿನ ಲಾಭವನ್ನು ಪಡೆಯಲು ಸಾಧ್ಯವಿರುವುದಿಲ್ಲ.
2. ಅಂತೆಯೇ ಏಪ್ರಿಲ್ 1, 2019 ಮತ್ತು ಮಾರ್ಚ್ 31, 2023ರ ನಡುವೆ ಪಾವತಿಸಿದ ಯಾವುದೇ ವಿದ್ಯುತ್ಚಾಲಿತ ವಾಹನಗಳ ತೆರಿಗೆಯು ಸೆಕ್ಷನ್ 80ಇಇಬಿ ಅಡಿಯಲ್ಲಿ ತೆರಿಗೆ ಉಳಿತಾಯಕ್ಕೆ ಅರ್ಹವಾಗಿರುತ್ತದೆ.
3. ಇನ್ನು ವಿದ್ಯುತ್ ಚಾಲಿತ ವಾಹನಕ್ಕೆ ನಗದು ಪಾವತಿಸುವವರು ಸೆಕ್ಷನ್ 80ಇಇಬಿ ಅಡಿಯಲ್ಲಿ ಸಾಲದ ಮೊತ್ತಕ್ಕೆ ಪಾವತಿಸಿದ ಬಡ್ಡಿಯ ಮೇಲೆ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿಗೆ ಅರ್ಹರಿರುತ್ತಾರೆ.
4. ನಗದು ಪಾವತಿಸುವವರಿಗೆ ಮಾತ್ರ ಲಭ್ಯವಿರುತ್ತದೆ. ವಿದ್ಯುತ್ ಚಾಲಿತ ವಾಹನಕ್ಕೆ ನೆರವು ನೀಡಲು ಹಣಕಾಸು ಸಂಸ್ಥೆ ಅಥವಾ ಎನ್ಬಿಎಫ್ಸಿ (ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆ) ಯಿಂದ ಸಾಲವನ್ನು ಬಳಸಲಾಗುತ್ತದೆ.