For Quick Alerts
ALLOW NOTIFICATIONS  
For Daily Alerts

CIBIL Score : ಸಿಬಿಲ್ ಸ್ಕೋರ್ ಉತ್ತಮಪಡಿಸಿಕೊಳ್ಳುವ ಸರಳ ಸೂತ್ರ

|

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತ ಹೇಳ್ತಾರೆ. ಈಗ ನಮ್ಮ ಆಸೆ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಎಲ್ಲರಿಗೂ ಸೇವಿಂಗ್ಸ್ ಹಣ ಇರೋದಿಲ್ಲ. ಬಹುತೇಕ ಮಂದಿ ಸಾಲ ಮಾಡಲೇಬೇಕಾದಂಥ ಸ್ಥಿತಿಯಲ್ಲಿ ಇರುತ್ತಾರೆ. ಕೆಲಸಕ್ಕೆ ಸೇರಿದ ಬಳಿಕ ಎಲ್ಲರೂ ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಡೆಯುತ್ತೇವೆ. ಮುಂದೆ ಸಾಲ ಮಾಡಬೇಕಾಗುತ್ತದೆ. ಆಗಲೇ ನಮಗೆ ಕ್ರೆಡಿಟ್ ಸ್ಕೋರ್, ಸಿಬಿಲ್ ಸ್ಕೋರ್ ಇತ್ಯಾದಿ ಸಂಗತಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ.

ನಮ್ಮ ಹಣಕಾಸು ಸ್ಥಿತಿ, ಸಾಲ ತೀರಿಸುವ ಛಾತಿ, ಸಾಮರ್ಥ್ಯ, ಇದು ನಮ್ಮ ಕ್ರೆಡಿಟ್ ಸ್ಕೋರ್‌ನಲ್ಲಿ ವ್ಯಕ್ತವಾಗುತ್ತವೆ. ನೀವು ಈ ಸಾಲ ಮಾಡದೇ ಇದ್ದರೂ ಕ್ರೆಡಿಟ್ ಸ್ಕೋರ್ ಬಗ್ಗೆ ಅರಿವು, ತಿಳಿವಳಿಕೆ ಹೊಂದಿರುವುದು ಬಹಳ ಅಗತ್ಯ. ಮುಂದಿನ ದಿನಗಳಲ್ಲಿ ನೀವು ಹಣಕಾಸು ವ್ಯವಸ್ಥೆಯನ್ನು ಸಮರ್ಪವಾಗಿ ಮಾಡಲು ಸಾಧ್ಯವಾಗುತ್ತದೆ.

ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ಇನ್ನೂ ಹಲವರು ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದರೂ ಅವರಿಗೆ ಲೋನ್ ಸ್ಯಾಂಕ್ಷನ್ ಆಗೋದೇ ಇಲ್ಲ. ಇದೇನಲೆ ತಿಂಗಳಿಗೆ ಚಲೋ ಪಗಾರ ತಗೊಂಡ್ರೂ ಲೋನ್ ಸಿಕ್ಕೋವಲ್ದು ಎಂದು ಬೈದುಕೊಳ್ಳುತ್ತೇವೆ. ಅದಕ್ಕೆ ಬಹುತೇಕ ಕಾರಣ ನಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇರುವುದು.

ಏನಿದು ಕ್ರೆಡಿಟ್ ಸ್ಕೋರು?

ಏನಿದು ಕ್ರೆಡಿಟ್ ಸ್ಕೋರು?

ಪ್ರತಿಯೊಂದು ಬ್ಯಾಂಕೂ ಸಾಲ ಕೊಡುವ ಮುನ್ನ ಅರ್ಜಿದಾರರ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದನ್ನು ಮರೆಯುವುದಿಲ್ಲ. ಪ್ರತಿಯೊಬ್ಬರ ಕ್ರೆಡಿಟ್ ರೇಟಿಂಗ್ ಕೊಡಲು ಭಾರತದಲ್ಲಿ ನಾಲ್ಕು ಏಜೆನ್ಸಿಗಳಿವೆ. ಈಕ್ವಿಪಾಕ್ಸ್, ಸಿಆರ್‌ಐಎಫ್ ಹೈ ಮಾರ್ಕ್, ಟ್ರಾನ್ಸ್‌ಯೂನಿಯನ್ ಸಿಬಿಲ್ (ಸಿಐಬಿಐಎಲ್) ಮತ್ತು ಎಕ್ಸ್‌ಪೀರಿಯನ್ ಸಂಸ್ಥೆಗಳು ಭಾರತದಲ್ಲಿ ಕ್ರೆಡಿಟ್ ರೇಟಿಂಗ್ ಕೊಡುತ್ತವೆ. ಸಾಲ ಒದಗಿಸುವ ಯಾವುದೇ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಈ ನಾಲ್ಕು ಏಜೆನ್ಸಿಗಳ ನೆರವನ್ನು ಪಡೆಯುತ್ತವೆ.

ಬ್ಯಾಂಕ್‌ನಲ್ಲಿ ಹಣಕಾಸು ವಹಿವಾಟು ನಡೆಸುವ ಗ್ರಾಹಕನಿಗೆ ಕ್ರೆಡಿಟ್ ರೇಟಿಂಗ್ ಸಿಗುತ್ತದೆ. ಇದು ಸಾಮಾನ್ಯವಾಗಿ 300ರಿಂದ 900 ಅಂಕಗಳ ಶ್ರೇಣಿಯಲ್ಲಿರುತ್ತದೆ. ಈ ಅಂಕಗಳ ಆಧಾರದ ಮೇಲೆ ಬ್ಯಾಂಕುಗಳು ನಿಮಗೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತವೆ.

 

ಕ್ರೆಡಿಟ್ ಸ್ಕೋರು ಹೇಗೆ?

ಕ್ರೆಡಿಟ್ ಸ್ಕೋರು ಹೇಗೆ?

ಕ್ರೆಡಿಟ್ ಸ್ಕೋರು ಎಂದರೆ ನಿಮ್ಮ ಹಿಂದಿನ ಸಾಲದ ಇತಿಹಾಸ ಹೇಗಿದೆ ಎಂಬುದರ ಸೂಚಕ. ನೀವು ಎಷ್ಟು ಬಾರಿ ಸಾಲ ಪಡೆದಿದ್ದೀರಿ, ಎಷ್ಟು ಹಣ ಸಾಲವಾಗಿ ಪಡೆದಿದ್ದೀರಿ, ಎಂಥ ಸಾಲ ಮಾಡಿದ್ದೀರಿ, ಎಷ್ಟು ನಿಖರವಾಗಿ ಕಂತುಗಳನ್ನು ಕಟ್ಟಿಕೊಂಡು ಹೋಗಿದ್ದೀರಿ, ಕ್ರೆಡಿಟ್ ಕಾರ್ಡ್‌ಗಳೆಷ್ಟಿವೆ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸುತ್ತಾ ಬಂದಿರುವಿರಾ ಇತ್ಯಾದಿ ಎಲ್ಲವನ್ನೂ ಕ್ರೆಡಿಟ್ ಸ್ಕೋರ್‌ನಲ್ಲಿ ನೀಡಲಾಗುತ್ತದೆ. ನೀವು ಬ್ಯಾಂಕ್‌ಗಳಲ್ಲಿ ನೀಡುವ ಪ್ಯಾನ್ ನಂಬರ್ ಮೂಲಕ ಏಜೆನ್ಸಿಗಳಿಗೆ ನಿಮ್ಮ ಕ್ರೆಡಿಟ್ ಹಿಸ್ಟರಿ ಸಂಪೂರ್ಣವಾಗಿ ಗೊತ್ತಾಗುತ್ತದೆ.

ಐದು ಶ್ರೇಣಿಗಳು
 

ಐದು ಶ್ರೇಣಿಗಳು

ಕ್ರೆಡಿಟ್ ಸ್ಕೋರು 300ರಿಂದ 900ರೊಳಗೆ ಇರುತ್ತದೆ. ಇದನ್ನು ಐದು ಭಾಗವಾಗಿ ಮಾಡಲಾಗುತ್ತದೆ.
* 300-600 (ಎಚ್ಚರ)
* 600-649 (ಅನುಮಾನ)
* 650-699 (ಓಕೆ)
* 700-749 (ಉತ್ತಮ)
* 750-900 (ಅತ್ಯುತ್ತಮ)

ಕ್ರೆಡಿಟ್ ಸ್ಕೋರು 750ಕ್ಕೂ ಹೆಚ್ಚು ಇದ್ದರೆ ಅತ್ಯುತ್ತಮ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ. ಬಹಳ ಸುಲಭವಾಗಿ ಸಾಲ ಸಿಗುತ್ತದೆ. 700 ಅಂಕಗಳಿಗಿಂತ ಹೆಚ್ಚು ಕ್ರೆಡಿಟ್ ಸ್ಕೋರು ಇದ್ದರೆ ಸಾಲ ಸಿಗಲು ತೊಂದರೆ ಇಲ್ಲ. ಅದಕ್ಕಿಂತ ಕಡಿಮೆ ಇದ್ದರೆ ಬ್ಯಾಂಕ್‌ನವರು ಸಾಲ ಕೊಡಲು ಬಹಳ ಮೀನ ಮೇಷ ಎಣಿಸುತ್ತಾರೆ.

 

ಕ್ರೆಡಿಟ್ ಸ್ಕೋರ್ ಉತ್ತಮಪಡಿಸುವ ಮಾರ್ಗಗಳು

ಕ್ರೆಡಿಟ್ ಸ್ಕೋರ್ ಉತ್ತಮಪಡಿಸುವ ಮಾರ್ಗಗಳು

* ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೊರು ಎಷ್ಟಿದೆ ಎಂದು ಪರಿಶೀಲಿಸಿ. ಅದಕ್ಕೆ ಸಿಬಿಲ್ ಇತ್ಯಾದಿ ಏಜೆನ್ಸಿಯಿಂದ ಉಚಿತವಾಗಿಯೂ ಪಡೆಯಬಹುದು. ನಿಮ್ಮ ಪ್ಯಾನ್ ನಂಬರ್ ಕೊಟ್ಟರೆ ಸಾಕು ನಿಮಗೆ ಕ್ರೆಡಿಟ್ ರೇಟಿಂಗ್ ಸಿಗುತ್ತದೆ. ಪೇಟಿಎಂ ಆ್ಯಪ್ ಇತ್ಯಾದಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೌಲಭ್ಯ ಇರುತ್ತದೆ.

ಸಿಬಿಲ್ ಅಥವಾ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಕೆಲವೊಮ್ಮೆ ನಿಮ್ಮ ಸಾಲದ ದಾಖಲೆಗಳನ್ನು ಅಪ್‌ಡೇಟ್ ಮಾಡುವಾಗ ತಪ್ಪಾಗಬಹುದು. ನಿಮ್ಮ ಕ್ರೆಡಿಟ್ ರೇಟಿಂಗ್ ಅಸಹಜ ಎನಿಸಿದರೆ ಅದನ್ನು ರಿಪೋರ್ಟ್ ಮಾಡಬಹುದು.

* ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಬಹಳ ಜಾಗ್ರತೆಯಿಂದ ಬಳಸಿರಿ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನಿಗದಿ ಮಾಡಿರುವ ಗರಿಷ್ಠ ಮಿತಿಗಿಂತ ಹೆಚ್ಚು ಹಣ ವ್ಯಯಿಸಲು ಹೋಗದಿರಿ. ಕ್ರೆಡಿಟ್ ಕಾರ್ಡ್‌ನ ಬಿಲ್ ಸರಿಯಾದ ಸಮಯದೊಳಗೆ ಪಾವತಿಸುವುದನ್ನು ಮರೆಯದಿರಿ. ತೀರಾ ಅಗತ್ಯ ಬಿದ್ದರಷ್ಟೇ ಕ್ರೆಡಿಟ್ ಕಾರ್ಡ್ ಮೂಲಕ ಟ್ರಾನ್ಸಾಕ್ಷನ್ ಮಾಡಿ.

* ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದು ಒಂದನ್ನು ಮಾತ್ರ ಸಕ್ರಿಯವಾಗಿ ಬಳಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಉಳಿದೆಲ್ಲಾ ಕಾರ್ಡ್‌ಗಳು ಅನಗತ್ಯವೆನಿಸಿ ಅದನ್ನು ಡೀ ಆ್ಯಕ್ಟಿವೇಟ್ ಮಾಡಲು ಹೋಗಬೇಡಿ. ಯಾಕೆಂದರೆ ನಿಮ್ಮ ಕ್ರೆಡಿಟ್ ರೇಟಿಂಗ್ ಉತ್ತಮಪಡಿಸಿಕೊಳ್ಳಲು ಅದೂ ಒಂದು ಅವಕಾಶ ಒದಗಿಸುತ್ತದೆ. ಒಂದೇ ಕ್ರೆಡಿಟ್ ಕಾರ್ಡನ್ನು ಸಕ್ರಿಯವಾಗಿ ಬಳಸುವುದನ್ನು ಮುಂದುವರಿಸಿ. ಉಳಿದ ಕ್ರೆಡಿಟ್ ಕಾರ್ಡ್‌ಗಳಲ್ಲಿ ಟ್ರಾನ್ಸಾಕ್ಷನ್ ಮಾಡಬೇಡಿ. ಆದರೆ, ಆ್ಯಕ್ಟಿವ್ ಆಗಿರಲಿ. ಇದರಿಂದ ಕ್ರೆಡಿಟ್ ಸ್ಕೋರು ಉತ್ತಮಗೊಳ್ಳುತ್ತದೆ.

* ನೀವು ಸಾಲ ತೆಗೆದುಕೊಳ್ಳುವಾಗ ಕಿರು ಅವಧಿಗಿಂತ ದೀರ್ಘಾವಧಿಗೆ ಕಂತುಗಳನ್ನು ಕಟ್ಟುವ ರೀತಿಯಲ್ಲಿ ಸಾಲ ಪಡೆಯುವುದು ಉತ್ತಮ. ಇದರಿಂದ ನಿಮಗೆ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಸರಿಯಾದ ಸಮಯಕ್ಕೆ ಕಂತುಗಳನ್ನು ಕಟ್ಟಬಹುದು. ನಿಮಗೆ ಹೆಚ್ಚು ಮೊತ್ತದ ಇಎಂಐ ಕಟ್ಟುವಷ್ಟು ಹಣಕಾಸು ಸ್ಥಿತಿ ಉತ್ತಮವಾಗಿದ್ದರೆ ಕಿರು ಅವಧಿಯ ಸಾಲಕ್ಕೆ ಹೋಗಬಹುದು. ಒಟ್ಟಿನಲ್ಲಿ ನೀವು ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಪಾವತಿಸುತ್ತೀರಾ ಎಂಬುದು ಮುಖ್ಯ.

 

English summary

Know What Is CIBIL Score, How To Increase Credit Rating

Know why CIBIL score is important and how to improve it. When using a credit card to pay off debts and obligations, there are a few things you should be aware of.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X