For Quick Alerts
ALLOW NOTIFICATIONS  
For Daily Alerts

ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್

|

ಕೊಟಕ್ ಮಹೀಂದ್ರಾ ಬ್ಯಾಂಕ್ ನಿಂದ ತಕ್ಷಣವೇ ಗೃಹಸಾಲಕ್ಕೆ ತಾತ್ವಿಕ ಮಂಜೂರು ಮಾಡುವಂಥ ಡಿಜಿಟಲ್ ಪ್ಲಾಟ್ ಫಾರ್ಮ್- ಕೊಟಕ್ ಡಿಜಿ ಹೋಮ್ ಲೋನ್ಸ್ ಪರಿಚಯಿಸಲಾಗಿದೆ. ಬ್ಯಾಂಕ್ ನಿಂದ ವಾರ್ಷಿಕ ಬಡ್ಡಿ ದರ 6.75%ನೊಂದಿಗೆ ಗೃಹ ಸಾಲವನ್ನು ನೀಡಲಾಗುತ್ತದೆ. ಈ ಬಗ್ಗೆ ಬ್ಯಾಂಕ್ ನಿಂದ ಪ್ರಕಟಣೆ ನೀಡಲಾಗಿದೆ.

ಅದರ ಪ್ರಕಾರ, ಹೋಮ್ ಲೋನ್ ಅರ್ಜಿದಾರರು ತಾವೆಷ್ಟು ಮೊತ್ತದ ಸಾಲ ಪಡೆಯುವುದಕ್ಕೆ ಅರ್ಹರು ಹಾಗೂ ಅದಕ್ಕೆ ಎಷ್ಟು ಬಡ್ಡಿ ದರ ಎಂಬುದನ್ನು ತಕ್ಷಣವೇ ಆನ್ ಲೈನ್ ನಲ್ಲಿ ಪರಿಶೀಲಿಸಬಹುದು. ಜತೆಗೆ ತಾತ್ವಿಕ ಮಂಜೂರಾತಿ ಪತ್ರವನ್ನೂ ತಕ್ಷಣ ಪಡೆಯಬಹುದು. ಇದರಿಂದ ಗೃಹ ಸಾಲ ಪಡೆಯುವುದು ಸುಲಭವಾಗುತ್ತದೆ.

Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್ ಗಳು

 

ತಕ್ಷಣದ ಗೃಹ ಸಾಲವು ಈಗಾಗಲೇ ಬ್ಯಾಂಕ್ ಗ್ರಾಹಕರಾಗಿರುವವರಿಗೆ ಮತ್ತು ಹೊಸಬರಿಗೆ ಇಬ್ಬರಿಗೂ ದೊರೆಯುತ್ತದೆ. ವೇತನದಾರರು ಹಾಗೂ ಸ್ವ ಉದ್ಯೋಗಿಗಳಿಗೂ ಸಿಗುತ್ತದೆ. ಇನ್ನು ಹೊಸದಾಗಿ ಮನೆ ಸಾಲ ಬೇಕೆಂದರೂ ಬಾಕಿ ಮೊತ್ತದ ವರ್ಗಾವಣೆಯಾದರೂ ಅಥವಾ ಸಾಲದ ಟಾಪ್ ಅಪ್ ಆದರೂ ಅರ್ಜಿ ಹಾಕಬಹುದು.

ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್

ತಕ್ಷಣದ ಗೃಹಸಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ಗೃಹ ಸಾಲವೂ ಪೂರ್ತಿಯಾಗಿ ಡಿಜಿಟಲ್ ಮತ್ತು ಕಾಗದರಹಿತ ಪ್ರಕ್ರಿಯೇ ಆಗಿರುತ್ತದೆ. ಕೊಟಕ್ ಡಿಜಿ ಹೋಮ್ ಲೋನ್ಸ್ ನಿಂದ ಡಿಜಿಟಲ್ ಸಾಲ ಮೌಲ್ಯಮಾಪನ ಮಾಡಲಾಗುತ್ತದೆ. ಮತ್ತು ಅರ್ಜಿದಾರರ ಹೋಮ್ ಲೋನ್ ಮೊತ್ತದ ಅರ್ಹತೆಯನ್ನು ತೋರಿಸಲಾಗಿತ್ತದೆ. ಅದರ ಜತೆಗೆ ಬಡ್ಡಿ ದರ ಮತ್ತು ಇಎಂಐ ವಿವರ ಸಹ ಇರುತ್ತದೆ.

ಸಾಲ ಮೊತ್ತದ ಅರ್ಹತೆ ಹೆಚ್ಚು ಮಾಡಿಕೊಳ್ಳುವುದಕ್ಕೆ ಅರ್ಜಿದಾರರು ಮತ್ತೊಬ್ಬರನ್ನು (ಕೋ ಅಪ್ಲಿಕೆಂಟ್) ಜತೆಗೆ ಸೇರಿಸಿಕೊಳ್ಳಬಹುದು. ಅರ್ಜಿದಾರರು ತಾತ್ವಿಕ ಮಂಜೂರಾತಿ ಪತ್ರ ಪಡೆಯುತ್ತಾರೆ. ಮುಂದಿನ ಹಂತವಾಗಿ ಆನ್ ಲೈನ್ ನಲ್ಲಿ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೊಟಕ್ ವೆಬ್ ಸೈಟ್ ಮೂಲಕ ಕೊಟಕ್ ಡಿಜಿ ಹೋಮ್ ಲೋನ್ಸ್ ನಲ್ಲಿ ಅಪ್ಲೈ ಮಾಡಬಹುದು. ಸದ್ಯಕ್ಕೆ ಗ್ರಾಹಕರಾಗಿರುವವರು ಸಹ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಅರ್ಜಿ ಹಾಕಬಹುದು.

ಗೃಹ ಸಾಲ ಮತ್ತು ಬ್ಯಾಲೆನ್ಸ್ ವರ್ಗಾವಣೆಗೆ ವಾರ್ಷಿಕ ಬಡ್ಡಿ ದರ 6.75%* ನಿಂದ ಆರಂಭವಾಗುತ್ತದೆ. ಸದ್ಯಕ್ಕೆ ಮಾರ್ಕೆಟ್ ನಲ್ಲಿ ಲಭ್ಯ ಇರುವ ಗೃಹಸಾಲದ ಅತ್ಯಂತ ಕಡಿಮೆ ಬಡ್ಡಿ ದರ ಇದು.

English summary

Kotak Mahindra Bank Launches Housing Loan Instant Approval Scheme

Private bank Kotak Mahindra Bank launches housing loan instant approval scheme in principle interest rate starting at 6.75% pa.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X