For Quick Alerts
ALLOW NOTIFICATIONS  
For Daily Alerts

ಸಿಇಒ ಜೊತೆ ಒಂದು ಸಭೆ, ಮರುದಿನವೇ 3,000 ಉದ್ಯೋಗಿಗಳ ವಜಾ!

|

ಪ್ರತಿ ದಿನ ಉದ್ಯೋಗ ಕಡಿತದ ಬಗ್ಗೆಯೇ ಸುದ್ದಿ ಕೇಳಿಬರುತ್ತಿದೆ. ನಾವು ಮಾಡುತ್ತಿರುವ ಉದ್ಯೋಗ ಯಾವಾಗ ನಮ್ಮ ಕೈಜಾರಿ ಹೋಗುತ್ತದೆ ಎಂದು ತಿಳಿಯದೆ ಆತಂಕದಲ್ಲಿ ಇರುವ ಅದೆಷ್ಟೋ ಮಂದಿ ಇದ್ದಾರೆ. ಈ ನಡುವೆ ಸಂಸ್ಥೆಯ ಉದ್ಯೋಗಿಗಳ ಜೊತೆ ಸಿಇಒ ಒಂದು ಸಭೆ ನಡೆಸಿ, ಮರುದಿನವೇ ಬರೋಬ್ಬರಿ 3 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿರುವ ಬಗ್ಗೆ ವರದಿಯಾಗಿದೆ.

ಹೌದು, ಈ ಘಟನೆ ನಡೆದಿರುವ ಅಮೆರಿಕಾದ ಅಂತಾರಾಷ್ಟ್ರೀಯ ಹಣಕಾಸು ಸೇವೆ ಮತ್ತು ಹೂಡಿಕೆ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯಲ್ಲಿ. ಈಗಾಗಲೇ ಸಂಸ್ಥೆಯು ಉದ್ಯೋಗ ಕಡಿತವನ್ನು ಘೋಷಣೆ ಮಾಡಿತ್ತು. ಜನವರಿ ತಿಂಗಳಿನಲ್ಲೇ ಸುಮಾರು 3200 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿತ್ತು. ಆದರೆ ಲಭ್ಯವಾದ ಮಾಹಿತಿ ಪ್ರಕಾರ ಒಂದು ದಿನದಲ್ಲೇ 3 ಸಾವಿರ ಮಂದಿಯನ್ನು ವಜಾಗೊಳಿಸಲಾಗಿದೆ.

Goldman Sachs Layoffs: ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಈ ವಾರದಲ್ಲೇ 3,200 ಉದ್ಯೋಗ ಕಡಿತGoldman Sachs Layoffs: ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಈ ವಾರದಲ್ಲೇ 3,200 ಉದ್ಯೋಗ ಕಡಿತ

ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯ ಸಿಇಒ ಡೇವಿಡ್ ಸೋಲೋಮನ್ ಜೊತೆ ಸಭೆಗಾಗಿ ನ್ಯೂಯಾರ್ಕ್‌ನ ಮುಖ್ಯ ಕಚೇರಿಗೆ ಉದ್ಯೋಗಿಗಳನ್ನು ಕರೆದ ಸಂಸ್ಥೆಯು ಸಭೆಯಲ್ಲಿ ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿದೆ. ಸುಮಾರು ಮುಂಜಾನೆ 7.30 ಸಮಯಕ್ಕೆ ಸಭೆಯಲ್ಲಿ ಹಾಜರಾಗುವಂತೆ ಇಮೇಲ್ ಮಾಡಿ, ಸಭೆಗೆ ಬಂದಾಗ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

 ವಜಾಗೊಂಡ ಉದ್ಯೋಗಿ ಹೇಳುವುದೇನು?

ವಜಾಗೊಂಡ ಉದ್ಯೋಗಿ ಹೇಳುವುದೇನು?

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಉದ್ಯೋಗ ಕಳೆದುಕೊಂಡ ವ್ಯಕ್ತಿ, "ಮುಂಜಾನೆ 7.30 ಸಮಯದಲ್ಲಿ ಸಭೆಗೆ ಹಾಜರಾಗುವಂತೆ ಇಮೇಲ್ ಮೂಲಕ ನನಗೆ ತಿಳಿಸಲಾಗಿದೆ. ಸಭೆಯಲ್ಲಿ ನನ್ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಮ್ಯಾನೇಜರ್‌ಗಳು ಕ್ಷಮೆ ಕೇಳಿದರು. ಹಾಗೆಯೇ ಮುಂದಿನ ಜೀವನಕ್ಕೆ ಆಲ್‌ ದಿ ಬೆಸ್ಟ್ ಹೇಳಿದ್ದಾರೆ," ಎಂದು ತಿಳಿಸಿದ್ದಾರೆ. ಉದ್ಯೋಗ ಕಳೆದುಕೊಂಡ ಇನ್ನೋರ್ವ ವ್ಯಕ್ತಿ, "7:30 ಸುಮಾರಿಗೆ ಕಚೇರಿಗೆ ಬರುವಂತೆ ನನಗೆ ಸೂಚನೆ ನೀಡಲಾಗಿತ್ತು. ಆದರೆ ನಾನು ಕೆಲಸದ ಅವಧಿಯಲ್ಲದ ಸಮಯದಲ್ಲಿ ನಡೆದ ಈ ಸಭೆಯ ಬಗ್ಗೆ ಯಾವುದೇ ಪ್ರಶ್ನೆಯನ್ನು ಮಾಡಿಲ್ಲ," ಎಂದಿದ್ದಾರೆ.

 ಉಳಿದ ಉದ್ಯೋಗಿಗಳಲ್ಲಿ ಗೊಂದಲ

ಉಳಿದ ಉದ್ಯೋಗಿಗಳಲ್ಲಿ ಗೊಂದಲ

ಉದ್ಯೋಗದಿಂದ ವಜಾಗೊಂಡವರು ಕೂಡಲೇ ಕಚೇರಿಯನ್ನು ತೊರೆಯಬಹುದು ಅಥವಾ ಬೇರೆ ಉದ್ಯೋಗಿಗಳು ಕಚೇರಿಗೆ ಆಗಮಿಸುವವರೆಗೂ ಕಾದು ಬಳಿಕ ಬೇರೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಕಚೇರಿಯಿಂದ ಹೋಗಬಹುದು ಎಂದು ಸಂಸ್ಥೆಯು ಹೇಳಿದೆ. ಬೆಳ್ಳಿಗ್ಗೆ 9 ಗಂಟೆಗೂ ಮುನ್ನ ತಮ್ಮನ್ನು ಕೆಲಸದಿಂದ ವಜಾಗೊಳಿಸಿದ ಶಾಕ್‌ನಿಂದ ಹೊರಬರಲಾಗದ ಹಲವಾರು ಮಂದಿ ಆ ಕೂಡಲೇ ಕಚೇರಿಯಿಂದ ಹೊರಹೋಗಿದ್ದಾರೆ. ಇನ್ನು ಪ್ರಸ್ತುತ ಸಂಸ್ಥೆಯಲ್ಲಿರುವ ಉದ್ಯೋಗಿಗಳಿಗೆ ತಾವು ಕಚೇರಿಗೆ ಬಂದ ಬಳಿಕವೇ ತಮ್ಮ ಸಹೋದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಸಂಸ್ಥೆಯ ಉದ್ಯೋಗಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಜನವರಿ 2023ರಲ್ಲಿ 3 ಸಾವಿರಕ್ಕೂ ಅಧಿಕ ಮಂದಿಯನ್ನು ಸಂಸ್ಥೆಯು ಉದ್ಯೋಗದಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ.

 ಪತ್ರದ ಮೂಲಕ ಮಾಹಿತಿ ನೀಡಿದ್ದ ಸಿಇಒ

ಪತ್ರದ ಮೂಲಕ ಮಾಹಿತಿ ನೀಡಿದ್ದ ಸಿಇಒ

ಜನವರಿ ತಿಂಗಳಿನಲ್ಲಿ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಈ ಹಿಂದೆ ಸಂಸ್ಥೆಯ ಸಿಇಒ ಡೇವಿಡ್ ಸೋಲೋಮನ್ ತಿಳಿಸಿದ್ದಾರೆ. ತಮ್ಮ ಉದ್ಯೋಗಿಗಳಿಗೆ ಈ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. "ನಾವು ಅತೀ ಜಾಗರೂಕರಾಗಿ ಪರಿಶೀಲನೆಯನ್ನು ಮಾಡುತ್ತೇವೆ. ಈಗಲೂ ಚರ್ಚೆಗಳು ಮುಂದುವರಿದಿದೆ. ಜನವರಿಯ ಮೊದಲಾರ್ಧದಲ್ಲಿಯೇ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಆರಂಭವಾಗಬಹುದು," ಎಂದು ಗೋಲ್ಡ್‌ಮ್ಯಾನ್ ಸಾಚ್ಸ್ ಸಂಸ್ಥೆಯ ಸಿಇಒ ಉದ್ಯೋಗಿಗಳಿಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದರು.

English summary

Layoff Wagon: After One meeting with CEO Goldman Sachs laid off 3,000 employees in a day

layoffs Wagon in 2023: Goldman Sachs, an American multinational investment bank and financial services company, laid off around 3,000 employees in one day after meeting with ce
Story first published: Wednesday, January 18, 2023, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X