ಎಲ್‌ಐಸಿಯ ಹೊಸ ಪಿಂಚಣಿ, ಉಳಿತಾಯ ಯೋಜನೆ: ವಿವರ ಇಲ್ಲಿದೆ
ಪ್ರಸ್ತುತ ಈ ಹಣದುಬ್ಬರ ಸಂದರ್ಭದಲ್ಲಿ ಎಲ್ಲರೂ ಕೂಡಾ ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸುವ ಕಡೆ ಗಮನ ಹರಿಸುತ್ತಾರೆ. ತಮಗೆ ವಯಸ್ಸಾದಾಗ ಹಣಕಾಸು ತೊಂದರೆ ಉಂಟಾಗದಂತೆ ಈಗಲೇ ಹೂಡಿಕೆ, ಉಳಿತಾಯವನ್ನು ಮಾಡುತ್ತಾರೆ. ಇದಕ್ಕಾಗಿ ಎಲ್‌ಐಸಿ ಹಲವಾರು ಯೋಜನೆಗಳನ್ನು ಹೊಂದಿದೆ. ಈಗ ಎಲ್‌ಐಸಿ ಪಿಂಚಣಿ ಪ್ಲಸ್ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ.
ಭವಿಷ್ಯಕ್ಕಾಗಿ ಉಳಿತಾಯ ಮಾಡುವಾಗ ನಾವು ಎಂದಿಗೂ ಒಂದು ವ್ಯವಸ್ಥಿತವಾಗಿ ಹಾಗೂ ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತೇವೆ. ಹಾಗಿರುವಾಗ ನಮಗೆ ಎಲ್‌ಐಸಿ ಯೋಜನೆಗಳೇ ಉತ್ತಮ. ಎಲ್‌ಐಸಿ ಸೆಪ್ಟೆಂಬರ್ 5ರಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಪಿಂಚಣಿಯೂ ಪ್ಲಸ್ ಉಳಿತಾಯ ಯೋಜನೆಯಾಗಿದೆ.
ಈ ಪ್ರೀಮಿಯಂ ಅನ್ನು ಸಾಮಾನ್ಯ ಪಾವತಿ ವಿಧಾನದಲ್ಲಿ ಅಥವಾ ಸಿಂಗಲ್ ಪೇಮೆಂಟ್ ವಿಧಾನದಲ್ಲಿ ಪಾವತಿಸಬಹುದಾಗಿದೆ. ಸಾಮಾನ್ಯ ಪಾವತಿ ವಿಧಾನದಲ್ಲಿ ಪ್ರೀಮಿಯಂ ಅನ್ನು ವಿಮೆ ಪ್ರೀಮಿಯಂ ಪಾವತಿ ಮಾಡುವ ಲೆಕ್ಕಾಚಾರದಂತೆ ಪಾವತಿ ಮಾಡಬಹುದಾಗಿದೆ. ಇನ್ನು ಏಕ ಪಾವತಿಯಲ್ಲಿ ಒಂದೇ ಬಾರಿಗೆ ಒಟ್ಟು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಈ ಹೊಸ ಯೋಜನೆಯ ಫಂಡ್, ಷರತ್ತು, ನಿಯಮ ಮೊದಲಾದ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಪ್ರೀಮಿಯಂ ಮೊತ್ತದ ಬಗ್ಗೆ ಮಾಹಿತಿ
ನಾವು ಎಷ್ಟು ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡುತ್ತೇವೆ ಎಂಬುವುದು ನಮಗೆ ಬಿಟ್ಟ ವಿಚಾರವಾಗಿದೆ. ಪ್ರೀಮಿಯಂ ಮೊತ್ತವನ್ನು ನಾವೇ ನಿರ್ಧಾರ ಮಾಡಬೇಕಾಗುತ್ತದೆ. ಇನ್ನು ಪಾಲಿಸಿ ಅವಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಕೂಡಾ ನೀಡಲಾಗುತ್ತದೆ. ಇದು ಗರಿಷ್ಠ ಹಾಗೂ ಕನಿಷ್ಠ ಪ್ರೀಮಿಯಂ ಮಿತಿಯ ಮೇಲೆ ಅವಲಂಭಿತವಾಗಿರುತ್ತದೆ. ಇನ್ನು ಅವಧಿಯನ್ನು ವಿಸ್ತರಣೆ ಮಾಡುವ ಅವಕಾಶವು ಕೂಡಾ ಇದೆ. ಆದರೆ ಇದಕ್ಕೆ ಷರತ್ತು ಅನ್ವಯವಾಗಲಿದೆ.

ಎಲ್‌ಐಸಿ ಪಾಲಿಸಿ ಹಂಚಿಕೆ ಶುಲ್ಕ
ಇನ್ನು ಪಾಲಿಸಿದಾರರು ಪ್ರೀಮಿಯಂ ಅನ್ನು ನಾಲ್ಕು ವಿಧಾನವಾಗಿ ಹೂಡಿಕೆ ಮಾಡುವ ಅವಕಾಶವಿದೆ. ಇನ್ನು ಪ್ರತಿ ಪ್ರೀಮಿಯಂ ಮೇಲೆಯೂ ಪಾಲಿಸಿದಾರರು ಹಂಚಿಕೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಹಂಚಿಕೆ ದರ ಎಂದು ಕೂಡಾ ಕರೆಯಲಾಗುತ್ತದೆ. ಇನ್ನು ಫಂಡ್ ಅನ್ನು ಬದಲಾವಣೆ ಮಾಡುವ ಅವಕಾಶವು ಕೂಡಾ ಇದೆ. ಈ ಪ್ರೀಮಿಯಂ ಪಾಲಿಸಿಯನ್ನು ಎಲ್‌ಐಸಿ ವೆಬ್‌ಸೈಟ್ ಮೂಲಕ ಅಥವಾ ಏಜೆಂಟ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.

ಎಲ್‌ಐಸಿ ಅತೀ ದೊಡ್ಡ ಕಂಪನಿ
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಭಾರತದ ಐದನೇ ಅತೀ ದೊಡ್ಡ ಕಂಪನಿಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಐದನೇ ದೊಡ್ಡ ಕಂಪನಿಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 5,53,721.92 ಲಕ್ಷ ಕೋಟಿ ರೂಪಾಯಿ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಮಾತ್ರ ಎಲ್‌ಐಸಿ ಷೇರು ಮಾತ್ರ ಭಾರೀ ಕುಸಿದಿದೆ.