For Quick Alerts
ALLOW NOTIFICATIONS  
For Daily Alerts

ಗೃಹ ಸಾಲಗಳ ಬಡ್ಡಿದರ ಏರಿಸಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ: ಇಎಂಐ ಹೆಚ್ಚಳ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ಬುಧವಾರ ಪ್ರಮುಖ ರೆಪೋ ದರದಲ್ಲಿ ಏರಿಕೆ ಮಾಡಿ ಘೋಷಣೆ ಮಾಡಿದ್ದಾರೆ. 40 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ಹೆಚ್ಚಳವನ್ನು ಘೋಷಣೆ ಮಾಡಿದ್ದಾರೆ. ನಗದು ಮೀಸಲು ಅನುಪಾತವನ್ನು (CRR) 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದ್ದು, ಬಡ್ಡಿದರಗಳ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ.

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಇಎಂಐ ಹೊರೆ ಹೆಚ್ಚಳ ಆಗುವ ಬಗ್ಗೆ ಭಾರೀ ಚರ್ಚೆಗಳು ನಡೆದಿದೆ. ಅದಲ್ಲದೇ ಎಲ್‌ಐಸಿ ಐಪಿಒ ನಡುವೆ ನಡೆದ ಆರ್‌ಬಿಐ ರೆಪೋ ದರ ಹೆಚ್ಚಳವು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಇಂದು ತಮ್ಮ ರೆಪೋ ದರ ಲಿಂಕ್ಡ್ ಗೃಹ ಸಾಲಗಳ ಬಡ್ಡಿದರಗಳನ್ನು ಹೆಚ್ಚಳ ಮಾಡಿದೆ.

ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?

ಇತ್ತೀಚಿನ ಆರ್‌ಬಿಐ ಪ್ರಕಟಣೆಗೆ ಅನುಗುಣವಾಗಿ ಬ್ಯಾಂಕ್‌ಗಳು ತಮ್ಮ ರೆಪೊ ದರದ ಲಿಂಕ್ಡ್ ಗೃಹ ಸಾಲಗಳಲ್ಲಿ ಬಡ್ಡಿದರ ಹೆಚ್ಚಳವನ್ನು ಘೋಷಿಸಿರುವುದು ಆಶ್ಚರ್ಯವೇನಿಲ್ಲ. ಸಾಮಾನ್ಯವಾಗಿ ಆರ್‌ಬಿಐನ ರೆಪೋ ದರದ ಮೇಲೆ ಬ್ಯಾಂಕುಗಳ ಬಡ್ಡಿದರ ನಿರ್ಧರಿತವಾಗುತ್ತದೆ. ಹಾಗಾದರೆ ಐಸಿಐಸಿಐ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದ ನೂತನ ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಗೃಹ ಸಾಲಗಳ ಬಡ್ಡಿದರ ಏರಿಸಿದ 2 ಬ್ಯಾಂಕುಗಳು: ಇಎಂಐ ಹೆಚ್ಚಳ

ಐಸಿಐಸಿಐ ಬ್ಯಾಂಕ್‌ನ ಬಡ್ಡಿದರ ಎಷ್ಟು?

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ ಟ್ವೀಟ್ ಮಾಡಿದೆ. "ರೆಪೋ ದರ ಏರಿಕೆ ಬೆನ್ನಲ್ಲೇ ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಮೇ 4, 2022 ರಿಂದ ಜಾರಿಗೆ ಬರುವಂತೆ ದರವು ಶೇಕಡ 8.10ಕ್ಕೆ ಹೆಚ್ಚಳವಾಗಿದೆ," ಎಂದು ಬ್ಯಾಂಕ್ ತಿಳಿಸಿದೆ.

ಬ್ಯಾಂಕ್ ಆಫ್ ಬರೋಡಾ ಆರ್‌ಎಲ್‌ಎಲ್‌ಆರ್ ಸಾಲದ ಬಡ್ಡಿ ದರ

"ಮೇ 5, 2022 ರಿಂದ ಜಾರಿಗೆ ಬರುವಂತೆ, ಚಿಲ್ಲರೆ ಸಾಲಗಳಿಗೆ ಸಂಬಂಧಿಸಿದ ಬರೋಡಾ ರೆಪೊ ಲಿಂಕ್ಡ್ ಸಾಲದ ದರ ಶೇಕಡಾ 6.90 ಆಗಿದೆ. ಪ್ರಸ್ತುತ ಆರ್‌ಬಿಐ ರೆಪೋ ದರ: 4.40 ಶೇಕಡಾ + ಮಾರ್ಕ್-ಅಪ್-2.50 ಶೇಕಡಾ, ಎಸ್.ಪಿ.ಒ 25 ಶೇಕಡ," ಎಂದು ಬ್ಯಾಂಕ್ ಆಫ್ ಬರೋಡಾ ವೆಬ್‌ಸೈಟ್ ತಿಳಿಸಿದೆ.

ಏನಿದು ಬಾಹ್ಯ ಬೆಂಚ್‌ಮಾರ್ಕ್ ಸಾಲ ದರ?

ಬಾಹ್ಯ ಬೆಂಚ್‌ಮಾರ್ಕ್ ಸಾಲ ದರಗಳು ರೆಪೊ ದರದಂತಹ ಬಾಹ್ಯ ಮಾನದಂಡಗಳ ಆಧಾರದ ಮೇಲೆ ಬ್ಯಾಂಕ್‌ಗಳು ನಿಗದಿಪಡಿಸಿದ ಸಾಲದ ದರಗಳಾಗಿವೆ. ಇದು ವಾಣಿಜ್ಯ ಬ್ಯಾಂಕುಗಳು ಸಾಲ ನೀಡಬಹುದಾದ ಕನಿಷ್ಠ ಬಡ್ಡಿ ದರವಾಗಿದೆ. ಆರ್‌ಬಿಐ 2010 ರಲ್ಲಿ ಬೇಸ್ ಲೆಂಡಿಂಗ್ ರೇಟ್ (ಬಿಎಲ್‌ಆರ್‌) ಅನ್ನು ಪ್ರಾರಂಭ ಮಾಡಿತು.

English summary

LIC IPO: ICICI Bank, Bank of Baroda hike interest rates of repo rate linked home loans

LIC IPO: ICICI Bank, Bank of Baroda hike interest rates of repo rate linked home loans, EMIs to go up.
Story first published: Thursday, May 5, 2022, 18:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X