For Quick Alerts
ALLOW NOTIFICATIONS  
For Daily Alerts

LIC ಜೀವನ್ ಲಕ್ಷ್ಯ ಯೋಜನೆ: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆ

|

ಎಲ್‌ಐಸಿಯ ಜೀವನ್‌ ಲಕ್ಷ್ಯ ಪಾಲಿಸಿಯು ಒಂದು ದತ್ತಿ ಹಾಗೂ ನಾನ್‌ಲಿಂಕ್ಡ್‌ ಪಾಲಿಸಿಯಾಗಿದೆ. ಇದು ಸರಿ ಸುಮಾರು ಕನ್ಯಾದಾನ ಪಾಲಿಸಿಯನ್ನು ಹೋಲುತ್ತದೆ. ಕನ್ಯಾದಾನ ಪಾಲಿಸಿಯು ಹೆಣ್ಣು ಮಕ್ಕಳ ವಿವಾಹಕ್ಕಾಗಿ ಪೋಷಕರು ಮಾಡುವ ಪಾಲಿಸಿಯಾಗಿದೆ.

ಆದರೆ ಈ ಜೀವನ್ ಲಕ್ಷ್ಯ ಯೋಜನೆಯು ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಿದೆ. ಜೀವನ್ ಲಕ್ಷ್ಯ ಯೋಜನೆಯ ಹಣವನ್ನು ನೀವು ಮಕ್ಕಳ ಯಾವುದೇ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳಬಹುದು. ಈ ಪಾಲಿಸಿಯು ಮೆಚ್ಯೂರ್‌ ಆಗುವ ಸಂದರ್ಭದಲ್ಲಿ ಪಾಲಿಸಿದಾರರಿಗೆ ಅಥವಾ ನಾಮಿನಿಗಳಿಗೆ ಉತ್ತಮ ಹಣವನ್ನು ನೀಡುತ್ತದೆ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಜೀವನ್ ಲಕ್ಷ್ಯ ಯೋಜನೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 50 ವರ್ಷಕ್ಕಿಂತ ಕೆಳಗಿನ ಯಾರು ಬೇಕಾದರೂ ಖರೀದಿ ಮಾಡಬಹುದು. ಈ ಪಾಲಿಸಿಯನ್ನು ವಯಸ್ಕರು ಖರೀದಿ ಮಾಡಬೇಕು, ನಿಮ್ಮ ಮಕ್ಕಳ ಹೆಸರಿನಲ್ಲಿ ಖರೀದಿ ಮಾಡಲು ಸಾಧ್ಯವಿಲ್ಲ. ಈ ಪಾಲಿಸಿಯಲ್ಲಿ ನೀಡಲಾಗುವ ಸಾವಿನ ಸಂದರ್ಭದಲ್ಲಿನ ಪಾಲಿಸಿ ಹಣವು ನಿಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಪರಿಹಾರವನ್ನು ನೀಡಲಿದೆ.

ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?

 ಜೀವನ್ ಲಕ್ಷ್ಯ ಯೋಜನೆಯ ಪ್ರೀಮಿಯಂ ಟರ್ಮ್ ಹಾಗೂ ಪಾಲಿಸಿ ಟರ್ಮ್

ಜೀವನ್ ಲಕ್ಷ್ಯ ಯೋಜನೆಯ ಪ್ರೀಮಿಯಂ ಟರ್ಮ್ ಹಾಗೂ ಪಾಲಿಸಿ ಟರ್ಮ್

ಜೀವನ್ ಲಕ್ಷ್ಯ ಯೋಜನೆಯ ಕನಿಷ್ಠ ಪಾಲಿಸಿ ಖರೀದಿ ದರವು ಒಂದು ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಯಾವುದೇ ಗರಿಷ್ಠ ಮಿತಿ ಇಲ್ಲ. ಈ ಪಾಲಿಸಿಯ ಪ್ರೀಮಿಯಂ ಟರ್ಮ್ ಮೂರು ವರ್ಷವಾಗಿದ್ದು, ಇದು ಒಟ್ಟು ಪಾಲಿಸಿ ಟರ್ಮ್‌ಗಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್ ಕನಿಷ್ಠ 13 ವರ್ಷರಿಂದ ಗರಿಷ್ಠ 25 ವರ್ಷ ಆಗಿದೆ. ಹಾಗಾಗಿ ಹೂಡಿಕೆದಾರರು 25 ವರ್ಷಗಳ ಪಾಲಿಸಿಯನ್ನು ಮಾಡುವುದಾದರೆ, ಪ್ರಿಮಿಯಂ ಟರ್ಮ್ 22 ಆಗಿರುತ್ತದೆ. ಪ್ರೀಮಿಯಂ ಅನ್ನು ವರ್ಷ, ತ್ರೈಮಾಸಿಕ ಅಥವಾ ತಿಂಗಳ ಲೆಕ್ಕದಲ್ಲಿ ಪಾವತಿ ಮಾಡಲಾಗುತ್ತದೆ. ಮೊದಲ ವರ್ಷದ ಪ್ರೀಮಿಯಂ ಮೇಲೆ ಶೇಕಡ 4.5 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಎರಡನೇ ವರ್ಷದಿಂದ ತೆರಿಗೆಯು ಶೇಕಡ 2.25 ಆಗಿರುತ್ತದೆ. ಇನ್ನು ಜೀವನ್ ಲಕ್ಷ್ಯ ಯೋಜನೆಯ ಮೆಚ್ಯೂರಿಟಿ ಮೊತ್ತವು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಫೋಷಕರಿಗೆ ಹೆಚ್ಚ ಆಕರ್ಷನೀಯವಾಗಿದೆ. ಪೋಷಕರು ತಮ್ಮ ಮಗು ಜನಿಸಿದ ಬಳಿಕ ಈ ಪಾಲಿಸಿಯನ್ನು 25 ವರ್ಷಗಳ ಪಾಲಿಸಿ ಟರ್ಮ್‌ ಮೇಲೆ ಖರೀದಿ ಮಾಡಿದರೆ, ಮಗುವಿಗೆ 25 ವರ್ಷ ವಯಸ್ಸು ಆದಾಗ ಈ ಹಣವನ್ನು ನೀಡಲಾಗು‌ತ್ತದೆ. ಈ ಸಂದರ್ಭದಲ್ಲಿ ಆ ಹಣವನ್ನು ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬಳಸಿಕೊಳ್ಳಬಹುದು ಅಥವಾ ಮದುವೆಗಾಗಿ ಬಳಸಿಕೊಳ್ಳಬಹುದು. ಆದ್ದರಿಂದ ಫೋಷಕರು ಹೆಚ್ಚಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖರೀದಿ ಮಾಡುವ ಪಾಲಿಸಿಗಳಲ್ಲಿ ಇದು ಬಹಳ ಮುಖ್ಯವಾದ ಪಾಲಿಸಿಯಾಗಿದೆ.

ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?

 ಎಲ್ಐಸಿ ಜೀವನ್ ಲಕ್ಷ್ಯದ ಮೊತ್ತದ ಲೆಕ್ಕಾಚಾರ ಹೇಗೆ?
 

ಎಲ್ಐಸಿ ಜೀವನ್ ಲಕ್ಷ್ಯದ ಮೊತ್ತದ ಲೆಕ್ಕಾಚಾರ ಹೇಗೆ?

ನೀವು 2 ಲಕ್ಷದ ಪಾಲಿಸಿಯನ್ನು 25 ವರ್ಷಗಳ ಟರ್ಮ್‌ಗೆ ಖರೀದಿ ಮಾಡಿದರೆ, ನಿಮ್ಮ ಸಾವು ಸಂಭವಿಸಿದ್ದಲ್ಲಿ ನಿಮ್ಮ ಮಕ್ಕಳಿಗೆ 2,20,000 ರೂಪಾಯಿ ದೊರೆಯುತ್ತದೆ. ಮೊದಲ ವರ್ಷಕ್ಕೆ 9,264 ರೂಪಾಯಿ, ಎರಡನೇ ವರ್ಷದಿಂದ 9,064 ರೂಪಾಯಿ ಪ್ರೀಮಿಯಂ ಲಭಿಸಲಿದೆ. ಮೆಚ್ಯೂರಿಟಿ ರಿಟರ್ನ್ 5,20,000 ರೂಪಾಯಿ ಆಗಿರುತ್ತದೆ. ಅಂದರೆ 25 ವರ್ಷದ ಬಳಿಕ ನಿಮ್ಮ ಮಕ್ಕಳಿಗಾಗಿ 5,20,000 ರೂಪಾಯಿ ಲಭಿಸಲಿದೆ.

ಇನ್ನು ನೀವು 5 ಲಕ್ಷದ ಪಾಲಿಸಿಯನ್ನು 25 ವರ್ಷಗಳ ಟರ್ಮ್‌ಗೆ ಖರೀದಿ ಮಾಡಿದರೆ, ನಿಮ್ಮ ಸಾವು ಸಂಭವಿಸಿದ್ದಲ್ಲಿ ನಿಮ್ಮ ಮಕ್ಕಳಿಗೆ 5,50,000 ರೂಪಾಯಿ ದೊರೆಯುತ್ತದೆ. ಮೊದಲ ವರ್ಷಕ್ಕೆ 22,639 ರೂಪಾಯಿ, ಎರಡನೇ ವರ್ಷದಿಂದ 22,151 ರೂಪಾಯಿ ಪ್ರೀಮಿಯಂ ಲಭಿಸಲಿದೆ. ಮೆಚ್ಯೂರಿಟಿ ರಿಟರ್ನ್ 13 ಲಕ್ಷ ಆಗಿರುತ್ತದೆ.

ನೀವು 10 ಲಕ್ಷದ ಪಾಲಿಸಿಯನ್ನು 25 ವರ್ಷಗಳ ಟರ್ಮ್‌ಗೆ ಖರೀದಿ ಮಾಡಿದರೆ, ನಿಮ್ಮ ಸಾವು ಸಂಭವಿಸಿದ್ದಲ್ಲಿ ನಿಮ್ಮ ಮಕ್ಕಳಿಗೆ 11,00,000 ರೂಪಾಯಿ ದೊರೆಯುತ್ತದೆ. ಮೊದಲ ವರ್ಷಕ್ಕೆ 45,277 ರೂಪಾಯಿ, ಎರಡನೇ ವರ್ಷದಿಂದ 44,302 ರೂಪಾಯಿ ಪ್ರೀಮಿಯಂ ಲಭಿಸಲಿದೆ. ಮೆಚ್ಯೂರಿಟಿ ರಿಟರ್ನ್ 26 ಲಕ್ಷ ಆಗಿರುತ್ತದೆ.

ಈ ಲೆಕ್ಕಾಚಾರವನ್ನು ಎಲ್‌ಐಸಿಯ ಆಲ್‌ ಇನ್‌ ಒನ್‌ ಮೊವೈಕ್‌ ಆಪ್‌ ಮೂಲಕ Goodreturns.in ನಿಂದ ಮಾಡಲಾಗಿದೆ.

 

 ಸಾವಿನ ಪರಿಹಾರವೂ ಕೂಡಾ ದೊರೆಯುತ್ತದೆ ಈ ಎಲ್ಐಸಿ ಯೋಜನೆಯಲ್ಲಿ

ಸಾವಿನ ಪರಿಹಾರವೂ ಕೂಡಾ ದೊರೆಯುತ್ತದೆ ಈ ಎಲ್ಐಸಿ ಯೋಜನೆಯಲ್ಲಿ

ಈ ಎಲ್ಐಸಿ ಜೀವನ್ ಲಕ್ಷ್ಯ ಯೋಜನೆಯ ಜನಪ್ರಿಯತೆಗೆ ಮತ್ತೊಂದು ಕಾರಣ ಸಾವಿನ ಸಂದರ್ಭದಲ್ಲಿ ನಾಮಿನಿಗಳಿಗೆ ಪರಿಹಾರ ದೊರೆಯುವುದು. ಪಾಲಿಸಿ ಮಾಡಿದ ಬಳಿಕ ಪಾಲಿಸಿದಾರರು ಅಥವಾ ಪೋಷಕರು ಸಾವನ್ನಪ್ಪಿದರೆ ಉಳಿದ ಪ್ರೀಮಿಯಂ ಅನ್ನು ವಾಪಾಸ್‌ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಪಾಲಿಸಿದಾರರು ಸಾವನ್ನಪ್ಪಿದ ಬಳಿಕ, ಪಾಲಿಸಿಯ ಅವಧಿ ಕೊನೆಯಾಗುವವರೆಗೆ ನಾಮಿನಿದಾರರಿಗೆ ಶೇಕಡ 10 ರಷ್ಟು ಪಾಲಿಸಿ ಹಣವನ್ನು ಪ್ರತಿ ವರ್ಷ ನೀಡಲಾಗುತ್ತದೆ. ಒಂದು ವೇಳೆ ಹತ್ತು ಲಕ್ಷದ ಪಾಲಿಸಿ ಖರೀದಿ ಮಾಡಿದ್ದರೆ, ಎಲ್‌ಐಸಿಯಿಂದ ಪಾಲಿಸಿಯ ನಾಮಿನಿದಾರರಿಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ಬರಲಿದೆ. ಮೆಚ್ಯೂರಿಟಿ ಸಂದರ್ಭದಲ್ಲಿ ಶೇಕಡ 110 ಹಣವನ್ನು ಎಲ್‌ಐಸಿಯು ನೀಡಲಿದೆ. ಹಾಗೆಯೇ ಬೋನಸ್‌ ಹಾಗೂ ಅಂತಿಮ ಬೋನಸ್‌ ಕೂಡಾ ನೀಡಲಾಗುತ್ತದೆ. ಆದ್ದರಿಂದ ಪಾಲಿಸಿ ಮೆಚ್ಯೂರಿಟಿ ಆಗುವ ಮೊದಲೇ ಪೋಷಕರು ಸಾವನ್ನಪ್ಪಿದರೆ, ಮಕ್ಕಳ ಭವಿಷ್ಯವು ಸುರಕ್ಷಿತವಾಗಿರುತ್ತದೆ. ಇನ್ನು 5 ಅಥವಾ 10 ಅಥವಾ 15 ವರ್ಷದ ಪಾಲಿಸಿದಾರರಿಗೂ ಈ ಸಾವು ಪರಿಹಾರ ದೊರೆಯಲಿದೆ. ಈ ಸಾವು ಪರಿಹಾರವು ಎಲ್ಐಸಿ ಜೀವನ್ ಲಕ್ಷ್ಯ ಯೋಜನೆಯ ಇತರೆ ಎಲ್‌ಐಸಿಯ ಯೋಜನೆಗಿಂತ ತೀರಾ ಭಿನ್ನವಾಗಿಸುತ್ತದೆ.

 ಹೆಚ್ಚುವರಿ ಪ್ರಯೋಜನ ಏನಿದೆ?

ಹೆಚ್ಚುವರಿ ಪ್ರಯೋಜನ ಏನಿದೆ?

ನೀವು ಹತ್ತು ಲಕ್ಷ ಪಾಲಿಸಿ ಖರೀದಿ ಮಾಡಿದರೆ, ಪಾಲಿಸಿದಾರರ ನೈಸರ್ಗಿಕ ಸಾವು ಸಂಭವಿಸಿದ್ದಲ್ಲಿ, ಹತ್ತು ಲಕ್ಷ ರೂಪಾಯಿಯನ್ನು ಪಾವತಿ ಮಾಡಲಾಗುತ್ತದೆ. ನೀವು ಆಕಸ್ಮಿಕವಾಗಿ ಸಾವನ್ನಪ್ಪಿದರೆ, ಹೆಚ್ಚಿನ ಹಣವನ್ನು ನಿಮ್ಮ ಪಾಲಿಸಿ ನಾಮಿನಿಗಳಿಗೆ ನೀಡಲಾಗುತ್ತದೆ. ಇನ್ನು ಪಾಲಿಸಿಯ ಎರಡು ವರ್ಷದ ಬಳಿಕ ನೀವು ಸಾಲವನ್ನು ಪಡೆಯಬಹುದು. ಎರಡು ವರ್ಷದ ಬಳಿಕ ನಿಮ್ಮ ಪಾಲಿಸಿಯನ್ನು ಸರೆಂಡರ್‌ ಕೂಡಾ ಮಾಡಬಹುದು. ಎನ್‌ಆರ್‌ಐಗಳು ಕೂಡಾ ಈ ವಿಮಾ ಪಾಲಿಸಿಯನ್ನು ಖರೀದಿ ಮಾಡಬಹುದು.

English summary

LIC Jeevan Lakshya Investment Plan - Review, Key Features & Benefits in Kannada

LIC Jeevan Lakshya For A Promising Future Of Your Child, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X