For Quick Alerts
ALLOW NOTIFICATIONS  
For Daily Alerts

2020ರಿಂದ LIC ವಿಮಾ ಯೋಜನೆಗಳಲ್ಲಿ ಆಗುವ 5 ಬದಲಾವಣೆ ಗಮನಿಸಿ

By Sushma Chatra
|

ನೀವು ಜೀವ ವಿಮಾ ಯೋಜನೆಯನ್ನು (ಎಲ್ ಐಸಿ) ಮಾಡಿದ್ದೀರಾದರೆ ಅಥವಾ ಮಾಡಿಸುವವರಾದರೆ ಈ ಲೇಖನವನ್ನು ಓದಲೇಬೇಕು. ಜೀವ ವಿಮಾ ಪಾಲಿಸಿಯ ಕೆಲವು ನಿಯಮಗಳು ಮುಂದಿನ ವರ್ಷದಿಂದ ಬದಲಾವಣೆ ಆಗಲಿವೆ. ಈ ಬದಲಾವಣೆಯು ನಿಮ್ಮ ಜೀವ ವಿಮಾ ಯೋಜನೆಯ ಮೇಲೆ ಪರಿಣಾಮ ಬೀರಲಿದೆಯೇ ಅಥವಾ ಇಲ್ಲವೇ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು.

ಭಾಗಶಃ ವಾಪಾಸಾತಿಗೆ ಅವಕಾಶದಿಂದ ಹಿಡಿದು ಹೆಚ್ಚುತ್ತಿರುವ ಪುನರುಜ್ಜೀವನದ ಅವಧಿಯವರೆಗೆ ಅನೇಕ ಜೀವ ವಿಮಾ ಉತ್ಪನ್ನಗಳು ಹಲವಾರು ಬದಲಾವಣೆಗಳಿಗೆ ಮುಂದಿನ ವರ್ಷ ಸಾಕ್ಷಿಯಾಗಲಿದೆ. ಹೊಸ ನಿಯಮಾವಳಿಗಳು ಫೆಬ್ರವರಿ 1, 2020 ರಿಂದ ಜಾರಿಗೆ ಬರಲಿವೆ.

ಗ್ರಾಹಕರಿಗೆ ಲಾಭದಾಯಕವಾಗಲಿ ಎಂಬ ಉದ್ದೇಶದಿಂದಾಗಿ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (IRDAI) ಪಿಂಚಣಿ ನಿಯಮಗಳಿಗೆ, ಯುಲಿಪ್ಸ್ (ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್) ಮತ್ತು ಸಾಂಪ್ರದಾಯಿಕ ಜೀವ ವಿಮಾ ಯೋಜನೆಗಳಿಗೆ ನಿಯಮಗಳನ್ನು ಸಡಿಲಿಸಿದೆ.

ಏನೆಲ್ಲಾ ಬದಲಾವಣೆಗಳು ಆಗಲಿದೆ ಎಂಬುದನ್ನು ಗಮನಿಸಿ.

ಲ್ಯಾಪ್ಸ್ ನಿಯಮಾವಳಿಗಳಲ್ಲಿ ಬದಲಾವಣೆ

ಲ್ಯಾಪ್ಸ್ ನಿಯಮಾವಳಿಗಳಲ್ಲಿ ಬದಲಾವಣೆ

ಯುನಿಟ್ ಲಿಂಕ್ ಆಗಿರುವ ಉತ್ಪನ್ನಗಳು ಲ್ಯಾಪ್ಸ್ ಆಗಿದ್ದಲ್ಲಿ ಪುನರುಜ್ಜೀವನದ (ರಿನೀವಲ್) ಅವಧಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲಾಗಿದೆ. ಲಿಂಕ್ ಆಗಿಲ್ಲದ- ಲ್ಯಾಪ್ಸ್ ಆದ ಉತ್ಪನ್ನಗಳಿಗೆ ಪುನರುಜ್ಜೀವನದ ಅವಧಿ 5 ವರ್ಷಗಳಾಗಿರುತ್ತದೆ. ಈ ಮೊದಲು ಪುನರುಜ್ಜೀವನದ ಅವಧಿ ಕೇವಲ ಎರಡು ವರ್ಷಗಳಿಗೆ ಸೀಮಿತವಾಗಿತ್ತು. ಹಾಗಾದರೆ ಪುನರುಜ್ಜೀವನದ ಅವಧಿ ಎಂದರೇನು? ಪ್ರೀಮಿಯಂ ಪಾವತಿಸದ ದಿನದಿಂದ ಇಂತಿಷ್ಟು ಅವಧಿಯಲ್ಲಿ ಪಾಲಿಸಿ ಲ್ಯಾಪ್ಸ್ ಆಗಿರುತ್ತದೆ. ಆ ರೀತಿ ಲ್ಯಾಪ್ಸ್ ಆದ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು ಅವಕಾಶವಿರುತ್ತದೆ. ಈ ಮುಂಚೆ ಅದಕ್ಕೆ ಇದ್ದ ಕಾಲ ಮಿತಿಯನ್ನು ವಿಸ್ತರಿಸಲಾಗಿದೆ.

ಮೂರನೇ ಒಂದು ಭಾಗದಷ್ಟು ಮೊತ್ತ ತೆರಿಗೆಮುಕ್ತ

ಮೂರನೇ ಒಂದು ಭಾಗದಷ್ಟು ಮೊತ್ತ ತೆರಿಗೆಮುಕ್ತ

ಫೆಬ್ರವರಿ 1ರಿಂದ ಪೆನ್ಷನ್ ಪ್ಲಾನ್ ನ ವಿಥ್ ಡ್ರಾ ಮಿತಿಯು ಅಧಿಕವಾಗುತ್ತದೆ. ಸದ್ಯ ಅಸ್ತಿತ್ವದಲ್ಲಿರುವ 3ನೇ ಒಂದು ಭಾಗದಷ್ಟು ಕಾರ್ಪಸ್ ವಿಥ್ ಡ್ರಾ ಬದಲಾಗಿ ಮುಕ್ತಾಯದ ಅವಧಿಯಲ್ಲಿ ಗರಿಷ್ಠ 60% ಅನ್ನು ಅನುಮತಿಸಲಾಗುತ್ತದೆ. ಆದರೆ ಈ ಪೆನ್ಷನ್ ಪ್ಲಾನ್ ನಲ್ಲಿ ಮೂರನೇ ಒಂದು ಭಾಗದ ಕಾರ್ಪಸ್ ತೆರಿಗೆ ಮುಕ್ತವಾಗಿರುತ್ತದೆ. ಆದರೆ ಗರಿಷ್ಠ ಮಿತಿ 60% ತೆರಿಗೆ ಮುಕ್ತವಾಗಿ ಇರುವುದಿಲ್ಲ. "ಈ ಹೊಸ ತಿದ್ದುಪಡಿಯೊಂದಿಗೆ ಎನ್ ಪಿಎಸ್ ಉತ್ಪನ್ನಗಳಿಗೆ ಅನುಗುಣವಾಗಿ ಪಿಂಚಣಿ ಯೋಜನೆಗಳನ್ನು ಮಾಡಿದೆ. ಇದು ಗ್ರಾಹಕರಿಗೆ ಮತ್ತು ವಿಮಾ ಉದ್ಯಮಕ್ಕೆ ಪ್ರಯೋಜನಕಾರಿಯಾಗಲಿದೆ"ಎಂದು ಎಕ್ಸೈಡ್ ಲೈಫ್ ಇನ್ಷೂರೆನ್ಸ್ ನ ನಿರ್ದೇಶಕರಾಗಿರುವ ಸಂಜಯ್ ತಿವಾರಿ ಹೇಳಿದ್ದಾರೆ.

ಭಾಗಶಃ ವಿಮಾ ಹಣವನ್ನು ವಾಪಸ್ ಪಡೆಯುವ ನಿಯಮ ಬದಲು

ಭಾಗಶಃ ವಿಮಾ ಹಣವನ್ನು ವಾಪಸ್ ಪಡೆಯುವ ನಿಯಮ ಬದಲು

ಅಕಾಲಿಕವಾಗಿ ಭಾಗಶಃ ವಿಮಾ ಹಣವನ್ನು ವಾಪಸ್ ಪಡೆಯುವ ನಿಯಮಗಳನ್ನು ಕೂಡ IRDAI ಬದಲಾಯಿಸಿದೆ. ಒಮ್ಮೆ ಲಾಕ್ ಇನ್ ಅವಧಿ 5 ವರ್ಷ ಮುಗಿದ ನಂತರ ಗ್ರಾಹಕರು ಭಾಗಶಃ ಹಣವನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದ್ದು, 25% ವರೆಗಿನ ಮೊತ್ತವನ್ನು ಪಡೆಯಬಹುದಾಗಿದೆ. ಆದರೆ ಅದಕ್ಕೆ ಪ್ರಮುಖ ಕಾರಣಗಳಿರಬೇಕು. ಭಾಗಶಃ ಹಿಂತೆಗೆದುಕೊಳ್ಳುವಿಕೆಯನ್ನು ಉನ್ನತ ಶಿಕ್ಷಣ, ಮಕ್ಕಳ ಮದುವೆ ಅಥವಾ ಗಂಭೀರ ಆರೋಗ್ಯ ಸಮಸ್ಯೆ ಅಥವಾ ವಸತಿ, ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಅವಕಾಶ ನೀಡಲಾಗಿದೆ. ಈ ಮೊದಲು ರೆಗ್ಯುಲೇಟರ್ ಗಳಿಗೆ ವಿಥ್ ಡ್ರಾ ಮಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಇದೀಗ IRDAIನಿಂದ ನಿಯಮ ಸಡಿಲಿಕೆಗೆ ಒಪ್ಪಿಗೆ ಸಿಕ್ಕಿದೆ.

10 ಪಟ್ಟು ಬದಲಿಗೆ ಏಳು ಪಟ್ಟು ಕಡಿಮೆಯಾಗುತ್ತದೆ

10 ಪಟ್ಟು ಬದಲಿಗೆ ಏಳು ಪಟ್ಟು ಕಡಿಮೆಯಾಗುತ್ತದೆ

45 ವರ್ಷಕ್ಕಿಂತ ಕಡಿಮೆಯಿ ವಯಸ್ಸಿನವರಿಗೆ ಯುಲಿಪ್ ನಲ್ಲಿ ಕನಿಷ್ಠ ಜೀವಿತಾವಧಿಯ ಸದ್ಯ ಲಭ್ಯವಿರುವ 10 ಪಟ್ಟಿನ ಬದಲಾಗಿ ಏಳು ಪಟ್ಟಿಗೆ ಕಡಿಮೆಯಾಗುತ್ತದೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಸ್ತಿತ್ವದಲ್ಲಿರುವ 10 ಪಟ್ಟು ಬದಲಿಗೆ ಏಳು ಪಟ್ಟು ಕಡಿಮೆಯಾಗುತ್ತದೆ. "ಸಮ್ ಅಶ್ಯೂರ್ಡ್" ಎಂಬುದು ಗ್ಯಾರಂಟಿ ಮೊತ್ತವಾಗಿದ್ದು, ಪಾಲಿಸಿ ಹೊಂದಿರುವ ವ್ಯಕ್ತಿಯ ಮರಣಾನಂತರ ಪಾವತಿ ಖಾತರಿ ಇರುವ ಮೊತ್ತವಾಗಿರುತ್ತದೆ.

ಪೆನ್ಷನ್ ಯುಲಿಪ್ ಸೆಗ್ಮೆಂಟ್ ನ ಕಡ್ಡಾಯ ಗ್ಯಾರಂಟಿ ಐಚ್ಛಿಕ

ಪೆನ್ಷನ್ ಯುಲಿಪ್ ಸೆಗ್ಮೆಂಟ್ ನ ಕಡ್ಡಾಯ ಗ್ಯಾರಂಟಿ ಐಚ್ಛಿಕ

ಫೆಬ್ರವರಿ 1 ರಿಂದ ಪೆನ್ಷನ್ ಯುಲಿಪ್ ಸೆಗ್ಮೆಂಟ್ ನ ಕಡ್ಡಾಯ ಗ್ಯಾರಂಟಿಯು ಐಚ್ಛಿಕವಾಗುತ್ತದೆ. ಈ ಮೊದಲು IRDAI ಇದನ್ನು ಕಡ್ಡಾಯಗೊಳಿಸಿತ್ತು. ಪೆನ್ಷನ್ ಯುಲಿಪ್ ಪ್ಲಾನ್ ಗಳು ವಿಮೆದಾರರಿಗೆ ಕಡ್ಡಾಯವಾಗಿತ್ತು. ಇದೀಗ ಪಾಲಿಸಿ ಹೊಂದಿರುವವರು ಹೆಚ್ಚು ಆರಾಮದಾಯಕ ಆಯ್ಕೆಗಳನ್ನು ಹೊಂದಿದ್ದಾರೆ. ಅವರಿಗೆ ಗ್ಯಾರಂಟಿಯ ಅಗತ್ಯತೆ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶವಿದೆ.

English summary

LIC Policy Rules Will Change From 2020; These 5 Things You Must Know

LIC policy rules change from 2020. Here is the 5 major thing you must know.
Story first published: Monday, December 16, 2019, 10:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X