For Quick Alerts
ALLOW NOTIFICATIONS  
For Daily Alerts

2022: ಈ 12 ವೈಯಕ್ತಿಕ ಹಣಕಾಸು ವಿಚಾರಗಳ ಕೊನೆಯ ದಿನ ನೆನಪಿರಲಿ

|

ಈಗ 2022 ಅಂದರೆ ಹೊಸ ವರ್ಷವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನೀವು ಹಲವಾರು ವೈಯಕ್ತಿಯ ಹಣಕಾಸು ವಿಚಾರಗಳನ್ನು ಪೂರ್ತಿ ಮಾಡಬೇಕಾಗಿದೆ. ಈ ಹೊಸ ವರ್ಷ ಆರಂಭವಾಗುತ್ತಿರುವಾಗಲೇ ನೀವು ಶೀಘ್ರವೇ ಕೊನೆಯ ದಿನಾಂಕಕ್ಕೂ ಮುನ್ನ ನಿರ್ವಹಿಸಬೇಕಾದ ಹನ್ನೆರಡು ಕೆಲಸಗಳು ಇದೆ. ನೀವು ಈ ಹನ್ನೆರಡು ವೈಯಕ್ತಿಕ ಹಣಕಾಸು ವಿಚಾರವನ್ನು ಕೊನೆಯ ದಿನಾಂಕಕ್ಕೂ ಮುನ್ನ ಮಾಡದಿದ್ದರೆ ನಿಮ್ಮ ಮೇಲೆ ದಂಡ ಬೀಳಬಹುದು.

ಪ್ಯಾನ್‌ ಹಾಗೂ ಆಧಾರ್‌ ಕಾರ್ಡ್ ಅನ್ನು ಲಿಂಕ್‌ ಮಾಡುವುದು, ಬಾಕಿ ಉಳಿದಿರುವ ಐಟಿಆರ್‌ ಅನ್ನು ಸಲ್ಲಿಕೆ ಮಾಡುವುದು, ಪಿಂಚಣಿದಾರರು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು, ಟೋಕನೈಸೇಷನ್‌ ಮೊದಲಾದವುಗಳು ಒಳಗೊಂಡಿದೆ. ಹಾಗಾದರೆ ಯಾವೆಲ್ಲಾ ಕಾರ್ಯಗಳು ನೀವು ಈ ಹೊಸ ವರ್ಷದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುವುದನ್ನು ತಿಳಿಯಲು ಮುಂದೆ ಓದಿ...

ಕೇಂದ್ರ ಸರ್ಕಾರದ ಟಾಪ್-5 ಸಾಲ ಯೋಜನೆಗಳು : ನೀವೂ ಸಾಲ ಪಡೆಯಬಹುದುಕೇಂದ್ರ ಸರ್ಕಾರದ ಟಾಪ್-5 ಸಾಲ ಯೋಜನೆಗಳು : ನೀವೂ ಸಾಲ ಪಡೆಯಬಹುದು

 ತಡವಾಗಿ ಐಟಿಆರ್‌ ಸಲ್ಲಿಕೆ

ತಡವಾಗಿ ಐಟಿಆರ್‌ ಸಲ್ಲಿಕೆ

2020-21 ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್‌ 31, 2021 ಆಗಿದೆ. ಯಾರು ಈ ಕೊನೆಯ ದಿನಾಂಕ ಕಳೆದರೂ ಐಟಿಆರ್‌ ಸಲ್ಲಿಕೆ ಮಾಡಿಲ್ಲವೋ ಅವರು ಜನವರಿ 1, 2022 ರಿಂದ ಮಾರ್ಚ್ 31, 2022 ರವರೆಗಿನ ಅವಧಿಯಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಬಹುದು. ತಡವಾಗಿ ಐಟಿಆರ್‌ ಸಲ್ಲಿಕೆ ಮಾಡುವುದಕ್ಕೆ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಪರಿಷ್ಕೃತ ಐಟಿಆರ್‌ ಅನ್ನು ಕೂಡಾ ಮಾರ್ಚ್ 31, 2022ರವರೆಗೆ ಸಲ್ಲಿಕೆ ಮಾಡಬಹುದು.

ಪಿಂಚಣಿದಾರರು ಶೀಘ್ರ ಜೀವನ ಪ್ರಮಾಣ ಪತ್ರ ಸಲ್ಲಿಸಿ

ಪಿಂಚಣಿದಾರರು ಶೀಘ್ರ ಜೀವನ ಪ್ರಮಾಣ ಪತ್ರ ಸಲ್ಲಿಸಿ

ಪಿಂಚಣಿದಾರರು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕವು ಡಿಸೆಂಬರ್‌ 31, 2021 ಆಗಿತ್ತು. ಆದರೆ ಇದನ್ನು ಸರ್ಕಾರ ವಿಸ್ತರಣೆ ಮಾಡಿದೆ. ಈಗ ಫೆಬ್ರವರಿ 28, 2022ರವರೆಗೆ ಪಿಂಚಣಿದಾರರು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ. ನಿಮಗೆ ಬರುವ ಪಿಂಚಣಿಯು ಸ್ಥಗಿತವಾಗಬಾರದು ಎಂದಾದರೆ ನೀವು ಕೂಡಲೇ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಅತ್ಯಗತ್ಯವಾಗಿದೆ. ಪಿಂಚಣಿ ಪಡೆಯುವ ವ್ಯಕ್ತಿಯು ಜೀವಂತವಾಗಿದ್ದಾರೆ ಎಂಬುವುದನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲಾಗುತ್ತದೆ. ನೀವು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡದಿದ್ದರೆ ನಿಮಗೆ ಬರುವ ಪಿಂಚಣಿಯು ಸ್ಥಗಿತವಾಗಲಿದೆ.

2022ನೇ ಸಾಲಿನ ಬ್ಯಾಂಕ್ ರಜಾದಿನಗಳ ಪಟ್ಟಿ2022ನೇ ಸಾಲಿನ ಬ್ಯಾಂಕ್ ರಜಾದಿನಗಳ ಪಟ್ಟಿ

 ಪ್ಯಾನ್‌-ಆಧಾರ್‌ ಲಿಂಕ್‌ ಮಾಡಿಕೊಳ್ಳಿ

ಪ್ಯಾನ್‌-ಆಧಾರ್‌ ಲಿಂಕ್‌ ಮಾಡಿಕೊಳ್ಳಿ

ನೀವು ಪ್ಯಾನ್‌ ಕಾರ್ಡ್ ಹಾಗೂ ಆಧಾರ್‍ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವು ಮಾ‌ರ್ಚ್ 31, 2022 ಆಗಿದೆ. ನಿಮ್ಮ ಪ್ಯಾನ್‌ ಕಾರ್ಡ್ ಹಾಗೂ ಆಧಾರ್‌ ಕಾರ್ಡ್ ಅಥವಾ ಪ್ಯಾನ್‌ ಸಂಖ್ಯೆ ಹಾಗೂ ಆಧಾರ್‌ ಸಂಖ್ಯೆಯು ಲಿಂಕ್‌ ಆಗದಿದ್ದರೆ ನಿಮ್ಮ ಪ್ಯಾನ್‌ ಬಳಕೆಗೆ ಅರ್ಹವಾಗಿರುವುದಿಲ್ಲ. ಪ್ಯಾನ್‌ ಕಾರ್ಡ್‌ಗೆ ಆಧಾರ್‍ ಲಿಂಕ್‌ ಆಗದಿದ್ದರೆ ಆ ಪ್ಯಾನ್‌ ಕಾರ್ಡ್ ಹೊಂದಿರುವ ವ್ಯಕ್ತಿಗೆ ಯಾವುದೇ ಆರ್ಥಿಕ ವ್ಯವಹಾರ ನಡೆಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಕೊನೆಯ ದಿನಾಂಕ ಕಳೆದರೂ ಲಿಂಕ್‌ ಮಾಡದಿದ್ದರೆ ನಿಮಗೆ ಒಂದು ಸಾವಿರ ರೂಪಾಯಿ ದಂಡ ಬೀಳಲಿದೆ.

 ಬ್ಯಾಂಕ್‌ ಕೆವೈಸಿ

ಬ್ಯಾಂಕ್‌ ಕೆವೈಸಿ

ಬ್ಯಾಂಕ್‌ ಕೆವೈಸಿಯನ್ನು ಮಾಡುವ ಕೊನೆಯ ದಿನಾಂಕ ಈ ಹಿಂದೆ ಡಿಸೆಂಬರ್‍ 31, 2021 ಆಗಿತ್ತು. ಆದರೆ ಅದನ್ನು ಮಾರ್ಚ್ 31, 2022 ಕ್ಕೆ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ವಿಸ್ತರಣೆ ಮಾಡಿದೆ. ಈ ಅವಧಿಯಲ್ಲಿ ಬ್ಯಾಂಕಿನಲ್ಲಿ ವಹಿವಾಟು, ವಿತ್‌ಡ್ರಾ ನಡೆಸಲು ಬ್ಯಾಂಕುಗಳು ಅವಕಾಶ ನೀಡಿದೆ. ಇದು ಗ್ರಾಹಕರಿಗೆ ಕೊಂಚ ರಿಲೀಫ್‌ ನೀಡಿದೆ.

 2019-20 ಐಟಿಆರ್‌ನ ವೆರಿಫಿಕೇಶನ್‌

2019-20 ಐಟಿಆರ್‌ನ ವೆರಿಫಿಕೇಶನ್‌

2019-20ರ ವರ್ಷದ ಐಟಿಆರ್‌-ವಿ ವೆರಿಫಿಕೇಶನ್‌ ಅನ್ನು ಯಾರು ಮಾಡಲು ಸಾಧ್ಯವಾಗಲಿಲ್ಲವೋ ಅವರು ಫೆಬ್ರವರಿ 28, 2022ರ ಒಳಗೆ ಐಟಿಆರ್‌-ವಿ ವೆರಿಫಿಕೇಶನ್‌ ಅನ್ನು ಮಾಡಬೇಕಾಗಿದೆ. ಐಟಿಆರ್‌ ಪೋರ್ಟಲ್‌ನಲ್ಲಿ ಸಮಸ್ಯೆ ಇರುವ ಕಾರಣ ಆರ್‌ಬಿಐ ಕೊಂಚ ರಿಲೀಫ್‌ ನೀಡಿ ಕೊನೆಯ ದಿನಾಂಕವನ್ನು ಡಿಸೆಂಬರ್‍ 31, 2021ರಿಂದ ಫೆಬ್ರವರಿ 28, 2022ಕ್ಕೆ ವಿಸ್ತರಣೆ ಮಾಡಿದೆ.

 2020-21ರ ವರ್ಷದ ಅಡ್ವಾನ್ಸ್‌ ತೆರಿಗೆ ಪಾವತಿ

2020-21ರ ವರ್ಷದ ಅಡ್ವಾನ್ಸ್‌ ತೆರಿಗೆ ಪಾವತಿ

2020-21ರ ಹಣಕಾಸು ವರ್ಷದ ಅಡ್ವಾನ್ಸ್‌ ತೆರಿಗೆ ಪಾವತಿಗೆ ಕೊನೆಯ ದಿನಾಂಕ ಮಾರ್ಚ್ 15, 2022 ಆಗಿದೆ. ಈ ದಿನಾಂಕದ ಒಳಗೆ ನೀವು ಸಂಪೂರ್ಣವಾಗಿ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ. ನಿಮ್ಮ ಅಡ್ವಾನ್ಸ್‌ ತೆರಿಗೆ ಪಾವತಿಯಲ್ಲಿ ನಿಮ್ಮ ಮ್ಯೂಚುವಲ್‌ ಫಂಡ್‌, ಷೇರುಗಳು ಕೂಡಾ ಸೇರಿರಬೇಕು. ಇನ್ನು ಹಿರಿಯ ನಾಗರಿಕರಿಗೆ ಈ ಅಡ್ವಾನ್ಸ್‌ ತೆರಿಗೆ ಪಾವತಿಯಿಂದ ವಿನಾಯತಿ ಇದೆ.

 ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್ ಟೋಕನೈಸೇಷನ್‌

ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್ ಟೋಕನೈಸೇಷನ್‌

ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್ ಟೋಕನೈಸೇಷನ್‌ಗೆ ಕೊನೆಯ ದಿನಾಂಕವನ್ನು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾವು ಜೂನ್‌ 30, 2022ರ ವರೆಗೆ ವಿಸ್ತರಣೆ ಮಾಡಿದೆ. ಇದಕ್ಕೂ ಮುನ್ನ ಇದರ ಕೊನೆಯ ದಿನಾಂಕ ಜನವರಿ 1, 2022 ಆಗಿತ್ತು. ಈ ಟೋಕನೈಸೇಷನ್‌ ಮಾಡಿದ ಬಳಿಕ ನಿಮ್ಮ ಆನ್‌ಲೈನ್‌ ವಹಿವಾಟು ಸರಳ ಹಾಗೂ ಸುರಕ್ಷಿತವಾಗಲಿದೆ.

 2021-22ರ ಐಟಿರ್‌ ಸಲ್ಲಿಕೆ

2021-22ರ ಐಟಿರ್‌ ಸಲ್ಲಿಕೆ

2021-22ರ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಖ ಜುಲೈ 31, 2022 ಆಗಿದೆ. ಈ ಕೊನೆಯ ದಿನಾಂಕ ಮುಗಿದ ಬಳಿಕ ಐಟಿಆರ್‌ ಸಲ್ಲಿಕೆ ಮಾಡುವವರು ಸುಮಾರು ಐದು ಸಾವಿರದವರೆಗೆ ದಂಡವನ್ನು ಪಾವತಿ ಮಾಡಬೇಕಾಗಿ ಬರುತ್ತದೆ.

 ತೆರಿಗೆ ಉಳಿಸಲು ಈ ಕಾರ್ಯ ಮಾಡಿ..

ತೆರಿಗೆ ಉಳಿಸಲು ಈ ಕಾರ್ಯ ಮಾಡಿ..

ನೀವು ತೆರಿಗೆ ಉಳಿಸುವ ನಿಟ್ಟಿನಲ್ಲಿ ನೀವು ಮಾಡಬೇಕಾದ ಅಗತ್ಯ ಕಾರ್ಯಗಳನ್ನು ಮಾರ್ಚ್ 31, 2022ರ ಒಳಗೆ ಮಾಡಬೇಕಾಗಿದೆ. ನೀವು ವೈದ್ಯಕೀಯ ವಿಮೆಯ ಪ್ರೀಮಿಯಂ ಪಡೆಯಬೇಕಾದರೆ, ಪಿಂಚಣಿಗೆ ಹೂಡಿಕೆ ಮಾಡುವ ಮೂಲಕ ತೆರಿಗೆದಾರರು ತೆರಿಗೆ ವಿನಾಯತಿ ಪಡೆಯಲು ಸಾಧ್ಯವಾಗುತ್ತದೆ.

 2022-23ರ ಅಡ್ವಾನ್ಸ್‌ ತೆರಿಗೆ ಪಾವತಿ

2022-23ರ ಅಡ್ವಾನ್ಸ್‌ ತೆರಿಗೆ ಪಾವತಿ

2022-23ರ ಹಣಕಾಸು ವರ್ಷದ ಮೊದಲ ಅಡ್ವಾನ್ಸ್‌ ತೆರಿಗೆ ಪಾವತಿಯನ್ನು ನೀವು ಜೂನ್‌ 15, 2022ರ ಒಳಗೆ ಮಾಡಬಹುದು. ಈ ಕೊನೆಯ ದಿನಾಂಕಕ್ಕೂ ಮುನ್ನ ಜನರು ಶೇಕಡ 15ರಷ್ಟು ಅಡ್ವಾನ್ಸ್‌ ತೆರಿಗೆ ಪಾವತಿ ಮಾಡಬಹುದು. ಈ ದಿನಾಂಕದ ಬಳಿಕ ತೆರಿಗೆದಾರರಿಗೆ ಬಡ್ಡಿಯನ್ನು ವಿಧಿಸಲಾಗುತ್ತದೆ.

 2022-23ರ ಅಡ್ವಾನ್ಸ್‌ ತೆರಿಗೆ ಪಾವತಿಯ ಎರಡನೇ ಇನ್ಸ್ಟಾಲ್‌ಮೆಂಟ್‌

2022-23ರ ಅಡ್ವಾನ್ಸ್‌ ತೆರಿಗೆ ಪಾವತಿಯ ಎರಡನೇ ಇನ್ಸ್ಟಾಲ್‌ಮೆಂಟ್‌

2022-23 ಹಣಕಾಸು ವರ್ಷದ ತೆರಿಗೆಯನ್ನು ಮುಂಗಡವಾಗಿ ಪಾವತಿ ಮಾಡಲು ಬಯಸುವ ತೆರಿಗೆ ಪಾವತಿದಾರರು ಎರಡನೇ ಇನ್ಸಾಲ್‌ಮೆಂಟ್‌ ಅನ್ನು ಸೆಪ್ಟೆಂಬರ್‌ 15, 2022ರ ಒಳಗೆ ಪಾವತಿ ಮಾಡಬಹುದು. ಈ ಎರಡನೇ ಇನ್ಸಾಲ್‌ಮೆಂಟ್‌ ಅವಧಿಯಲ್ಲಿ ಶೇಕಡ 45ರಷ್ಟು ತೆರಿಗೆಯನ್ನು ಪಾವತಿ ಮಾಡಬಹುದು.

 2022-23ರ ಅಡ್ವಾನ್ಸ್‌ ತೆರಿಗೆ ಪಾವತಿಯ ಮೂರನೇ ಇನ್ಸ್ಟಾಲ್‌ಮೆಂಟ್‌

2022-23ರ ಅಡ್ವಾನ್ಸ್‌ ತೆರಿಗೆ ಪಾವತಿಯ ಮೂರನೇ ಇನ್ಸ್ಟಾಲ್‌ಮೆಂಟ್‌

2022-23ರ ಅಡ್ವಾನ್ಸ್‌ ತೆರಿಗೆ ಪಾವತಿಯ ಮೂರನೇ ಇನ್ಸ್ಟಾಲ್‌ಮೆಂಟ್‌ನ ಕೊನೆಯ ದಿನಾಂಕವು ಡಿಸೆಂಬರ್‍ 15, 2022 ಆಗಿದೆ. ಈ ಕೊನೆಯ ದಿನಾಂಕವರೆಗೆ ಶೇಕಡ 75ರಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಕೊನೆಯ ದಿನಾಂಕ ಕಳೆದರೆ ತೆರಿಗೆದಾರರಿಗೆ ಬಡ್ಡಿ ವಿಧಿಸಲಾಗುತ್ತದೆ.

English summary

List of Personal Finance Deadlines To Remember In 2022

From Belated Income Tax Return To PAN-Aadhaar Linking: Here Are List of 12 Personal Finance Deadlines To Remember In 2022. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X