For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಬೆಲೆ, ಐಎಂಪಿಎಸ್‌ ಶುಲ್ಕ: ಫೆ.1ರಿಂದ ಬದಲಾಗುವ ನಿಯಮಗಳನ್ನು ತಿಳಿಯಿರಿ

|

ನಮ್ಮ ಸಾಮಾನ್ಯ ಜೀವನದಲ್ಲಿ ವೈಯಕ್ತಿಕ ಹಣಕಾಸು ಬಹಳ ಮುಖ್ಯವಾಗಿದೆ. ನಮ್ಮ ನಿರಂತರ ಜೀವನದ ವೈಯಕ್ತಿಕ ಹಣಕಾಸಿನ ಮೇಲೆ ಯಾವುದೇ ನಿಯಮ ಬದಲಾವಣೆಯು ಪ್ರಭಾವ ಬೀರಲಿದೆ. ಕೆಲವು ನಿಯಮ ಬದಲಾವಣೆಯು ನಮಗೆ ಸಹಕಾರಿಯಾದರೆ, ಕೆಲವು ಬದಲಾವಣೆಯಿಂದ ನಮ್ಮ ಜೇಬಿಗೆ ಕತ್ತರಿ ಬೀಳಲಿದೆ.

ಫೆಬ್ರವರಿ 1 ರಿಂದ ಮಂಗಳವಾರದಿಂದ, ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್, ಹಣಕಾಸು ಸಂಬಂಧಿತ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಆದ್ದರಿಂದ, ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ನಡುವೆ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ 2022 ಅನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ಈ ಬಜೆಟ್‌ ಕೂಡಾ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಗಮನಿಸಿ: 2022 ರಲ್ಲಿ ಈ ವಸ್ತುಗಳು ದುಬಾರಿ!ಗಮನಿಸಿ: 2022 ರಲ್ಲಿ ಈ ವಸ್ತುಗಳು ದುಬಾರಿ!

ಕಳೆದ ತಿಂಗಳು ಕೆಲವು ಬದಲಾವಣೆಗಳು ಆಗಿದೆ. ಕಾರುಗಳು ಬೆಲೆ ಅಧಿಕವಾಗಿದೆ. ಹಾಗೆಯೇ ಎಟಿಎಂ ವಹಿವಾಟಿನ ಮೇಲಿನ ಶುಲ್ಕವೂ ಅಧಿಕವಾಗಿದೆ. ಈ ತಿಂಗಳಿನಲ್ಲಿ ಎಲ್‌ಪಿಜಿ ಬೆಲೆ ಬದಲಾವಣೆಯಿಂದ ಹಿಡಿದು ಐಎಂಪಿಎಸ್‌ ವಹಿವಾಟುಗಳ ಮೇಲಿನ ಹೆಚ್ಚಿದ ಶುಲ್ಕದವರೆಗೆ ಹಲವಾರು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ. ಹಾಗಾದರೆ ಈ ತಿಂಗಳಿನಲ್ಲಿ ಯಾವೆಲ್ಲಾ ಬದಲವಾಣೆಗಳು ಆಗಿದೆ ಹಾಗೂ ಯಾವೆಲ್ಲಾ ಬದಲಾವಣೆಗಳು ಆಗಲಿದೆ ಎಂದು ತಿಳಿಯಲು ಮುಂದೆ ಓದಿ...

 ಎಸ್‌ಬಿಐ ಐಎಂಪಿಎಸ್‌ ವಹಿವಾಟು ಶುಲ್ಕ

ಎಸ್‌ಬಿಐ ಐಎಂಪಿಎಸ್‌ ವಹಿವಾಟು ಶುಲ್ಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಐಎಂಪಿಎಸ್‌ ವಹಿವಾಟು ಶುಲ್ಕವನ್ನು ಹೆಚ್ಚಳ ಮಾಡಿದೆ. ಗ್ರಾಹಕರು ಫೆಬ್ರವರಿ 1 ರಿಂದ ಹೊಸ ವಹಿವಾಟು ದರಗಳ ಪ್ರಕಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಗ್ರಾಹಕರು IMPS ಮೂಲಕ ಈ ಸೌಲಭ್ಯದಲ್ಲಿ ಕನಿಷ್ಠ ಒಂದು ರೂಪಾಯಿಯಿಂದ 5 ಲಕ್ಷ ರೂ ವರ್ಗಾವಣೆ ಮಾಡಬಹುದಾಗಿದೆ. ಅಂದರೆ ಎಸ್‌ಬಿಐ ಹಣದ ವಹಿವಾಟುಗಳ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದೆ. ಆದರೆ ಶುಲ್ಕವನ್ನು ವಿಧಿಸುತ್ತದೆ. ರೂ 2 ಲಕ್ಷದಿಂದ ರೂ 5 ಲಕ್ಷದ ನಡುವಿನ ಐಎಂಪಿಎಸ್ ವಹಿವಾಟುಗಳಿಗೆ ರೂ 20 + ಜಿಎಸ್‌ಟಿ ಅನ್ನು ವಿಧಿಸಲಾಗುತ್ತದೆ ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 2 ಲಕ್ಷಕ್ಕಿಂತ ಕಡಿಮೆ ಮೊತ್ತದ 2 ಲಕ್ಷಕ್ಕಿಂತ ಕಡಿಮೆ ಮೊತ್ತದ IMPS ವಹಿವಾಟುಗಳಿಗೆ ಶುಲ್ಕ ಇರುವುದಿಲ್ಲ.

IMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶIMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶ

 ಪಿಎನ್‌ಬಿ ಕನಿಷ್ಠ ಬ್ಯಾಲೆನ್ಸ್ ನಿಯಮ

ಪಿಎನ್‌ಬಿ ಕನಿಷ್ಠ ಬ್ಯಾಲೆನ್ಸ್ ನಿಯಮ

ಫೆಬ್ರವರಿ 1, 2022 ರಿಂದ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಇಎಂಐ ಅಥವಾ ಇತರ ಕಂತುಗಳನ್ನು ಪಾವತಿಸುವಲ್ಲಿ ವಿಫಲವಾದಲ್ಲಿ ರೂ 250 ದಂಡವನ್ನು ವಿಧಿಸುತ್ತದೆ. ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಯಾವುದೇ ಪಾವತಿ ವಿಫಲವಾದರೆ 100 ರೂಪಾಯಿ ದಂಡವನ್ನು ವಿಧಿಸಲಾಗುತ್ತಿತ್ತು.

 ಬ್ಯಾಂಕ್ ಆಫ್ ಬರೋಡಾ ಪಾಸಿಟಿವ್‌ ಪೇ
 

ಬ್ಯಾಂಕ್ ಆಫ್ ಬರೋಡಾ ಪಾಸಿಟಿವ್‌ ಪೇ

ಫೆಬ್ರವರಿ 1, 2022 ರಿಂದ ತನ್ನ ಚೆಕ್ ಪಾವತಿ ನಿಯಮಗಳನ್ನು ಬ್ಯಾಂಕ್‌ ಆಫ್‌ ಬರೋಡಾ ಬದಲಾವಣೆ ಮಾಡಿದೆ. ಬ್ಯಾಂಕ್ ಆಫ್ ಬರೋಡಾ ಚೆಕ್‌ಗಳ ಮೂಲಕ ಮಾಡಿದ ಪಾವತಿಗಳಿಗೆ ಪಾಸಿಟಿವ್‌ ಪೇ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಪಾಸಿಟಿವ್‌ ಪೇ ಮೂಲಕ ಚೆಕ್‌ನಲ್ಲಿ ಮೋಸವಾದರೆ ಪತ್ತೆ ಮಾಡಲಾಗುತ್ತದೆ. ಅದನ್ನು ಪಾವತಿ ಮಾಡದಂತೆ ತಡೆಯಲಾಗುತ್ತದೆ. ಇದರರ್ಥ ಪಾವತಿ ಮೊತ್ತವನ್ನು ಬದಲಾಯಿಸಿದ ಅಥವಾ ಕದ್ದ ಬಗ್ಗೆ ತಿಳಿಯಲು ಚೆಕ್‌ ಬಗ್ಗೆ ಪರಿಶೀಲನೆ ನಡೆಸುವುದು. ಚೆಕ್ ವಂಚನೆಯನ್ನು ನಿಲ್ಲಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಬ್ಯಾಂಕ್‌ ಆಫ್ ಬರೋಡಾದ ಈ ನಿಯಮವು 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.

 ಎಲ್‌ಪಿಜಿ ಬೆಲೆ ಬದಲಾವಣೆ

ಎಲ್‌ಪಿಜಿ ಬೆಲೆ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನದಂದು, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಎಲ್‌ಪಿಜಿ ಬೆಲೆಗಳನ್ನು ನವೀಕರಿಸುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ದರಗಳನ್ನು ಗಮನಿಸಿ ಈ ಬದಲಾವಣೆಯನ್ನು ಮಾಡಲಾಗುತ್ತದೆ. ಸಿಲಿಂಡರ್‌ಗಾಗಿ ಬುಕ್‌ ಮಾಡುವ ಮೊದಲು ಹೊಸ ದರವನ್ನು ನೀವು ಪರಿಶೀಲನೆ ಮಾಡುವುದು ಉತ್ತಮ.

English summary

LPG prices to IMPS fee: Here's a Details about rules changing from Feb 1

LPG prices to IMPS fee: Here's a Details about rules changing from Feb 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X