For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಪರಿಷ್ಕರಿಸಿದ ಪ್ರಮುಖ ಬ್ಯಾಂಕ್‌ಗಳು: ನೂತನ ದರ ತಿಳಿಯಿರಿ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಸತತ ಮೂರನೇ ಬಾರಿಗೆ ರೆಪೋ ದರವನ್ನು ಪರಿಷ್ಕರಣೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಈ ಬೆನ್ನಲ್ಲೆ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಏರಿಕೆ ಮಾಡುತ್ತಿದೆ.

ಸಾಮಾನ್ಯವಾಗಿ ಆರ್‌ಬಿಐ ತನ್ನ ವಿತ್ತೀಯ ನೀತಿಯಲ್ಲಿ ಮಾಡುವ ಬದಲಾವಣೆಯು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರದ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿದರೆ ಬ್ಯಾಂಕ್‌ಗಳು ಸಾಲದ ಬಡ್ಡಿದರ, ಎಫ್‌ಡಿ ದರವನ್ನು ಏರಿಕೆ ಮಾಡುತ್ತದೆ. ಆರ್‌ಬಿಐ ರೆಪೋ ದರವನ್ನು ಇಳಿಕೆ ಮಾಡಿದಾಗ ಬ್ಯಾಂಕ್‌ಗಳು ಸಾಲದ ಬಡ್ಡಿದರ, ಎಫ್‌ಡಿದರ ಇಳಿಕೆ ಮಾಡುತ್ತದೆ.

ಎಫ್‌ಡಿ ಬಡ್ಡಿದರ ಏರಿಕೆ ಮಾಡಿದ ಇಂಡಿಯನ್ ಬ್ಯಾಂಕ್ಎಫ್‌ಡಿ ಬಡ್ಡಿದರ ಏರಿಕೆ ಮಾಡಿದ ಇಂಡಿಯನ್ ಬ್ಯಾಂಕ್

ಮೂರನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದ ಬಳಿಕ ದೇಶದ ಪ್ರಮುಖ ಖಾಸಗೀ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಪ್ರಮುಖವಾಗಿ ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಮೊದಲಾದ ಬ್ಯಾಂಕ್‌ಗಳು ಬಡ್ಡಿದರ ಏರಿಸಿದೆ. ಈ ಪರಿಷ್ಕರಣೆ ಬಳಿಕ ಪ್ರಮುಖ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿದರ ಎಷ್ಟಿದೆ ಎಂದು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ.....

 ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿದರ

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿದರ

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಎರಡು ಕೋಟಿಗಿಂತ ಕಡಿಮೆ ಮೊತ್ತದ ಎಲ್ಲ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಇದು ಆಗಸ್ಟ್ 18ರಿಂದ ಜಾರಿಗೆ ಬಂದಿದೆ. ಎಫ್‌ಡಿ ಬಡ್ಡಿದರವನ್ನು 40 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಹಿರಿಯ ನಾಗರಿಕರಿಗೆ 50 ಮೂಲಾಂಕ ಅಧಿಕ ಬಡ್ಡಿದರ ನೀಡಲಾಗುತ್ತದೆ.

7-14 ದಿನ: ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
15-29 ದಿನ: ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
30-45 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
46-60 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
61-89 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
90 ದಿನ-6 ತಿಂಗಳು: ಶೇಕಡ 3.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.25 ಬಡ್ಡಿದರ
6 ತಿಂಗಳು 1 ದಿನ-9 ತಿಂಗಳು: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.15 ಬಡ್ಡಿದರ
9 ತಿಂಗಳು 1 ದಿನ-1 ವರ್ಷ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.15 ಬಡ್ಡಿದರ
1 ವರ್ಷ: ಶೇಕಡ 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.00 ಬಡ್ಡಿದರ
1 ವರ್ಷ 1 ದಿನ-2 ವರ್ಷ: ಶೇಕಡ 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.00 ಬಡ್ಡಿದರ
2 ವರ್ಷ 1 ದಿನ-3 ವರ್ಷ: ಶೇಕಡ 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.00 ಬಡ್ಡಿದರ
3 ವರ್ಷ 1 ದಿನ-5 ವರ್ಷ: ಶೇಕಡ 6.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.60 ಬಡ್ಡಿದರ
5 ವರ್ಷ 1 ದಿನ-10 ವರ್ಷ: ಶೇಕಡ 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ

ಎಫ್‌ಡಿ ಬಡ್ಡಿದರ ಏರಿಸಿದ ಪಿಎನ್‌ಬಿ: ನೂತನ ದರ ತಿಳಿಯಿರಿಎಫ್‌ಡಿ ಬಡ್ಡಿದರ ಏರಿಸಿದ ಪಿಎನ್‌ಬಿ: ನೂತನ ದರ ತಿಳಿಯಿರಿ

 ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿದರ
 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿದರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು 15 ಮೂಲಾಂಕ ಏರಿಕೆ ಮಾಡಿದೆ. 180 ದಿನಗಳಿಂದ 210 ದಿನಗಳ ನಡುವಿನ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡ 4.40ರಿಂದ ಶೇಕಡ 4.55ಕ್ಕೆ ಹೆಚ್ಚಳ ಮಾಡಿದೆ. ಇನ್ನು ಎಲ್ಲ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಎಸ್‌ಬಿಐ 15 ಮೂಲಾಂಕ ಹೆಚ್ಚಿಸಿದೆ. ಇನ್ನು ಒಂದು ವರ್ಷದ ಅವಧಿಗೆ ಅಧಿಕ ಡೆಪಾಸಿಟ್ ಮೊತ್ತದ ಮೇಲಿನ ಬಡ್ಡಿದರವನ್ನು 25-50 ಮೂಲಾಂಕ ಏರಿಸಲಾಗಿದೆ. ಒಂದು ವರ್ಷದಿಂದ ಅಧಿಕ ಅವಧಿಯ ಎಫ್‌ಡಿ ಮೇಲೆ 75-125ರಷ್ಟು ಮೂಲಾಂಕ ಹೆಚ್ಚಳ ಮಾಡಲಾಗಿದೆ.

 ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ದೇಶದ ಎರಡನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಸಿದೆ. 2 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದೆ. ಪಿಎನ್‌ಬಿ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ ಆಗಸ್ಟ್ 17ರಿಂದ ಹೊಸ ಬಡ್ಡಿದರವು ಜಾರಿಗೆ ಬಂದಿದೆ. ಹಿರಿಯ ನಾಗರಿಕರಿಗೆ ಸಾಮಾನ್ಯ ಜನರಿಗಿಂತ ಶೇಕಡ 0.5 ಅಧಿಕ ಬಡ್ಡಿದರ ನೀಡಲಾಗುತ್ತದೆ. ಈ ಕೆಳಗೆ ಬಡ್ಡಿದರವನ್ನು ವಾರ್ಷಿಕ ಲೆಕ್ಕಾಚಾರದಲ್ಲಿ ನೀಡಲಾಗಿದೆ.

91-179 ದಿನ: 4.05%, ಹಿರಿಯ ನಾಗರಿಕರಿಗೆ 5.30%
180-270 ದಿನ: 4.58%, ಹಿರಿಯ ನಾಗರಿಕರಿಗೆ 5.69 %
270-1 ವರ್ಷಕ್ಕಿಂತ ಕಡಿಮೆ: 4.60%, ಹಿರಿಯ ನಾಗರಿಕರಿಗೆ 5.73%
1 ವರ್ಷ: 5.67 %, ಹಿರಿಯ ನಾಗರಿಕರಿಗೆ 6.45 %
1 ವರ್ಷಕ್ಕಿಂತ ಮೇಲೆ-2 ವರ್ಷ: 5.67%, ಹಿರಿಯ ನಾಗರಿಕರಿಗೆ 6.45%
2 ವರ್ಷಕ್ಕಿಂತ ಮೇಲೆ-3 ವರ್ಷ: 5.94 %,ಹಿರಿಯ ನಾಗರಿಕರಿಗೆ 6.66%
3 ವರ್ಷಕ್ಕಿಂತ ಮೇಲೆ-5 ವರ್ಷ: 6.29%, ಹಿರಿಯ ನಾಗರಿಕರಿಗೆ 6.58%
5 ವರ್ಷಕ್ಕಿಂತ ಮೇಲೆ-10 ವರ್ಷ: 6.54%, ಹಿರಿಯ ನಾಗರಿಕರಿಗೆ 6.48%
1111 ದಿನ: 5.80%, ಹಿರಿಯ ನಾಗರಿಕರಿಗೆ 6.29%

 ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿದರ

ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿದರ

ಶೇಕಡ 6ರವರೆಗೆ ಬಡ್ಡಿದರವನ್ನು ನೀಡುವ ವಿಶೇಷ ಠೇವಣಿ ಯೋಜನೆಯನ್ನು ಬ್ಯಾಂಕ್ ಆಫ್ ಬರೋಡಾ ಆರಂಭ ಮಾಡಿದೆ. ಬರೋಡಾ ತಿರಂಗ ಡೆಪಾಸಿಟ್ ಸ್ಕೀಮ್ ಎಂದು ಎಂಬ ಹೆಸರಿನ ಈ ಯೋಜನೆಯನ್ನು 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯು 2022ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿ ಇರಲಿದೆ. ಈ ಯೋಜನೆಯಲ್ಲಿ ಎರಡು ಅವಧಿಯ ಠೇವಣಿಗೆ ಅವಕಾಶವಿದೆ. 444 ದಿನಗಳು ಅಥವಾ 555 ದಿನಗಳ ಡೆಪಾಸಿಟ್ ಅನ್ನು ಮಾಡಬಹುದಾಗಿದೆ. ಇದಕ್ಕೆ ಕ್ರಮವಾಗಿ ಶೇಕಡ 5.75 ಮತ್ತು ಶೇಕಡ 6ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಯೋಜನೆಯು ಮಂಗಳವಾರ ಜಾರಿಗೆ ತರಲಾಗಿದ್ದು,ಇದು 2 ಕೋಟಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಅನ್ವಯವಾಲಿದೆ. ಇನ್ನು ಹಿರಿಯ ನಾಗರಿಕರಿಗೆ ಕೊಂಚ ಅಧಿಕ ಬಡ್ಡಿದರ ಲಭ್ಯವಾಗಲಿದೆ.

ಐಡಿಎಫ್‌ಸಿ ಎಫ್‌ಡಿ ಬಡ್ಡಿದರ

ಐಡಿಎಫ್‌ಸಿ ಎಫ್‌ಡಿ ಬಡ್ಡಿದರ

ಖಾಸಗಿ ಬ್ಯಾಂಕ್ ಐಡಿಎಫ್‌ಸಿ ಕೂಡಾ 2 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದ್ದು ಈಗಾಗಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಈ ಪರಿಷ್ಕರಣೆ ಬಳಿಕ ಬ್ಯಾಂಕ್ 750 ದಿನದಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 6.90ರಷ್ಟು ಬಡ್ಡಿದರ ನೀಡುತ್ತದೆ. ಇದು ಅಧಿಕ ಬಡ್ಡಿದರವಾಗಿದೆ. ಇನ್ನು 2 ವರ್ಷ 1 ದಿನದಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 6.50ರಷ್ಟು ಬಡ್ಡಿದರ ನೀಡುತ್ತದೆ. ಇನ್ನು 2 ವರ್ಷ 1 ದಿನದಿಂದ 3 ವರ್ಷದ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 6.50ರಷ್ಟು ಬಡ್ಡಿದರ ನೀಡುತ್ತದೆ.

7-29 ದಿನ: 3.50%
30-90 ದಿನ: 4.00%
91-180 ದಿನ: 4.50%
181 ದಿನಕ್ಕಿಂತ ಅಧಿಕ: 5.75%
1 ವರ್ಷ-499 ದಿನ: 6.25%
500 ದಿನ-2 ವರ್ಷ : 6.50%
750 ದಿನ: 6.90%
751 ದಿನ-5 ವರ್ಷ: 6.50%
ತೆರಿಗೆ ಉಳಿತಾಯ ಎಫ್‌ಡಿ: 6.50%
5 ವರ್ಷ 1 ದಿನ-10 ವರ್ಷ: 6%

ಉಜ್ಜೀವನ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ಉಜ್ಜೀವನ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡಾ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡ 1.5ರಷ್ಟು ಹೆಚ್ಚಳ ಮಾಡಿದೆ. ಈ ನೂತನ ದರ 2022ರ ಆಗಸ್ಟ್ 9ರಿಂದಲೇ ಜಾರಿಗೆ ಬಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು ಎಫ್‌ಡಿ ಮೇಲಿನ ಬಡ್ಡಿದರವನ್ನು 30-150 ಮೂಲಾಂಕ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ. 75 ವಾರದ (525 ದಿನ) ಎಫ್‌ಡಿ ಮೇಲೆ ವಾರ್ಷಿಕವಾಗಿ ಶೇಕಡ 7.5ರಷ್ಟು ಬಡ್ಡಿದರ ನೀಡಲಾಗುತ್ತದೆ. 75 ವಾರಗಳಿಗೆ 1 ಲಕ್ಷ ಹೂಡಿಕೆ ಮಾಡಿದರೆ ಶೇಕಡ 7.5ರಷ್ಟು ಅಂದರೆ ರಿಟರ್ನ್ ನೀಡಲಾಗುತ್ತದೆ. ಅಂದರೆ ಮೆಚ್ಯೂರಿಟಿ ವೇಳೆ 1,11,282 ರೂಪಾಯಿ ಪಡೆಯಬಹುದು. ಹಿರಿಯ ನಾಗರಿಕರಿಗೆ ಶೇಕಡ 8.25ರಷ್ಟು ಬಡ್ಡಿದರ ನೀಡಲಾಗುತ್ತದೆ. ಅಂದರೆ ಮೆಚ್ಯೂರಿಟಿ ವೇಳೆ 1,12,466 ರೂಪಾಯಿ ಪಡೆಯಬಹುದು. 990 ದಿನದ ಎಫ್‌ಡಿ ಮೇಲೆ ಬಡ್ಡಿದರ ಈ ಹಿಂದಿನಂತೆ ಶೇಕಡ 7.20ರಷ್ಟಿದೆ. ಹಿರಿಯ ನಾಗರಿಕರ ಬಡ್ಡಿದರದಲ್ಲಿ ಸಾಮಾನ್ಯ ಜನರಿಗಿಂತ ಶೇಕಡ 0.75ರಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಸಾಮಾನ್ಯ ಜನರಿಗಿಂತ ಶೇಕಡ 0.50ರಷ್ಟು ಹೆಚ್ಚಳವಿತ್ತು.

 ಇತರೆ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿದರ

ಇತರೆ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿದರ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಹತ್ತು ಮೂಲಾಂಕ ಬಡ್ಡಿದರ ಏರಿಕೆ ಮಾಡಲಾಗಿದೆ. 444 ದಿನ ಹಾಗೂ 3 ವರ್ಷ ಅದಕ್ಕಿಂತ ಅಧಿಕ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರ ಹತ್ತು ಮೂಲಾಂಕ ಹೆಚ್ಚಿಸಲಾಗಿದೆ.
ಇಂಡಿಯನ್ ಬ್ಯಾಂಕ್ ಕೂಡಾ ಎಫ್‌ಡಿ ಮೇಲಿನ ಬಡ್ಡಿದರ 5-15 ಮೂಲಾಂಕ ಏರಿಸಿದೆ
ಐಸಿಐಸಿಐ ಬ್ಯಾಂಕ್ 2 ಕೋಟಿಯಿಂ 5 ಕೋಟಿವರೆಗಿನ ಎಫ್‌ಡಿ ಮೇಲೆಇ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ 2 ಕೋಟಿವರೆಗಿನ ಕೆಲವು ಅವಧಿಗಳ ಎಫ್‌ಡಿ ಮೇಲಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ.

English summary

Major Banks in India Revises Fixed Deposit Interest Rates, Here's Latest Updates

FD Interest Rates 2022 : HDFC Bank, SBI, Kotak Mahindra Bank, PNB, ICICI Bank, BoB, IOB, Ujjivan, IDFC bank Revises Fixed Deposit Interest Rates, Here's Latest Updates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X