For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟಿಗೆ ಕಾರ್ಡ್ ದಾರರಿಗೆ ಅವಕಾಶ ನೀಡಲಿದೆ ಮಾಸ್ಟರ್ ಕಾರ್ಡ್

By ಅನಿಲ್ ಆಚಾರ್
|

ಹಣಕಾಸು ಸೇವಾ ಸಂಸ್ಥೆಯಾದ ಮಾಸ್ಟರ್ ಕಾರ್ಡ್ ಬುಧವಾರದಂದು ಘೋಷಣೆ ಮಾಡಿರುವ ಪ್ರಕಾರ, ತನ್ನ ನೆಟ್ ವರ್ಕ್ ನಲ್ಲಿ ಕೆಲವು ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಕಾರ್ಡ್ ದಾರರಿಗೆ ಅವಕಾಶ ನೀಡಲಿದೆ. "ನಾವು ಭವಿಷ್ಯದ ಕ್ರಿಪ್ಟೋ ಹಾಗೂ ಪಾವತಿಗೆ ಸಿದ್ಧರಾಗುತ್ತಿದ್ದೇವೆ. ಮಾಸ್ಟರ್ ಕಾರ್ಡ್ ನಿಂದ ಆಯ್ದ ಕ್ರಿಪ್ಟೋಕರೆನ್ಸಿಗೆ ನಮ್ಮ ನೆಟ್ ವರ್ಕ್ ನಲ್ಲಿ ಈ ವರ್ಷ ಬೆಂಬಲಿಸಲಿದ್ದೇವೆ," ಎಂದು ಬ್ಲಾಗ್ ಪೋಸ್ಟ್ ನಲ್ಲಿ ಮಾಸ್ಟರ್ ಕಾರ್ಡ್ ಹೇಳಿದೆ.

 

ಹೊಸ ಡಿಜಿಟಲ್ ಕರೆನ್ಸಿಗಳ ಆರಂಭಕ್ಕೆ ಸಂಬಂಧಿಸಿದಂತೆ ಇರುವ ಯೋಜನೆಯೊಂದಿಗೆ ವಿಶ್ವದಾದ್ಯಂತ ಇರುವ ಕೇಂದ್ರ ಬ್ಯಾಂಕ್ ಗಳ ಜತೆಗೆ ಸಂಸ್ಥೆಯು "ಸಕ್ರಿಯವಾಗಿ ತೊಡಗಿಕೊಂಡಿದೆ". ಗ್ರಾಹಕರ ಸುರಕ್ಷತೆ ಮತ್ತು ನಿಯಮಾವಳಿಗಳಿಗೆ ತನ್ನದೇ ಯೋಜನೆಗಳ ಮೂಲಕವಾಗಿ ಪ್ರಾಮುಖ್ಯ ನೀಡಲಿದೆ ಎಂದು ಡಿಜಿಟಲ್ ಅಸೆಟ್ ಮತ್ತು ಬ್ಲ್ಯಾಕ್ ಚೈನ್ ಉತ್ಪನ್ನ ಹಾಗೂ ಪಾರ್ಟನರ್ ಷಿಪ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಜ್ ದಾಮೋದರನ್ ಹೇಳಿದ್ದಾರೆ.

 

ಟೆಸ್ಲಾದಿಂದ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಖರೀದಿಟೆಸ್ಲಾದಿಂದ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬಿಟ್ ಕಾಯಿನ್ ಖರೀದಿ

ಮಾಸ್ಟರ್ ಕಾರ್ಡ್ ಈಗಾಗಲೇ ದೊಡ್ಡ ಕ್ರಿಪ್ಟೋಕರೆನ್ಸಿ ಸಂಸ್ಥೆಗಳಾದ ವೈರೆಕ್ಸ್ ಮತ್ತು ಬಿಟ್ ಪೇ ಸೇರಿ ಇತರ ಸಂಸ್ಥೆಗಳ ಜತೆಗೆ ಸಹಭಾಗಿತ್ವ ಮಾಡಿಕೊಂಡಿದೆ. "ಡಿಜಿಟಲ್ ಆಸ್ತಿಯನ್ನು ನೇರವಾಗಿ ಬೆಂಬಲಿಸಲು ನಾವು ಬದಲಾಗಿದ್ದರಿಂದ ಇನ್ನೂ ಹಲವು ವರ್ತಕರು ಕ್ರಿಪ್ಟೋ ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಸದ್ಯಕ್ಕೆ ಪ್ರತಿ ಡಿಜಿಟಲ್ ಆಸ್ತಿಯು ಆಯಾ ಸೀಮಿತ ಪ್ರೊಪರೈಟರಿ ಪದ್ಧತಿಗೆ ಮಿತಿಗೊಂಡಿದೆ," ಎಂದು ದಾಮೋದರನ್ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿ ವಹಿವಾಟು: ಕಾರ್ಡ್ ದಾರರಿಗೆ Master Card ಅನುವು

ಈ ಬದಲಾವಣೆಯಿಂದ ಕ್ಷಮತೆಯಲ್ಲಿನ ಕೊರತೆ ಕಡಿತಗೊಳಿಸಲಿದೆ. ಗ್ರಾಹಕರು ಮತ್ತು ಮತ್ತು ವರ್ತಕರ ಮಧ್ಯೆ ಕ್ರಿಪ್ಟೋ ವ್ಯವಹಾರ ಸಲೀಸಾಗಿ, ಖರೀದಿ ಸಾಂಪ್ರದಾಯಿಕವಾಗಿಯೇ ನಡೆದಂತಾಗುತ್ತದೆ. ಟೆಸ್ಲಾ ಇಂಕ್ ನಂತರ ಮಾಸ್ಟರ್ ಕಾರ್ಡ್ ಈ ಘೋಷಣೆ ಮಾಡಿದೆ. ಈ ವಾರ ನೂರೈವತ್ತು ಕೋಟಿ ಅಮೆರಿಕನ್ ಡಾಲರ್ ಅನ್ನು ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿರುವುದಾಗಿ ಘೋಷಿಸಿದ ಮೇಲೆ ಕ್ರಿಪ್ಟೋ ಕರೆನ್ಸಿ ಹೊಸ ದಾಖಲೆ ಬರೆಯಿತು.

ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ನಮ್ಮ ಸಿದ್ಧಾಂತ ನೇರವಾಗಿದೆ: ಇದು ಆಯ್ಕೆಯ ಸಂಗತಿ ಎಂದು ದಾಮೋದರನ್ ಹೇಳಿದ್ದಾರೆ ಕ್ರಿಪ್ಟೋಕರೆನ್ಸಿ ಬಳಕೆ ಶುರು ಮಾಡಿ ಎಂದು ಶಿಫಾರಸು ಮಾಡುವುದಕ್ಕೆ ಮಾಸ್ಟರ್ ಕಾರ್ಡ್ ಇರುವುದಲ್ಲ. ಆದರೆ ಗ್ರಾಹಕರು, ವರ್ತಕರು ಹಾಗೂ ವ್ಯವಹಾರಗಳಲ್ಲಿ ಡಿಜಿಟಲ್ ಮೌಲ್ಯಕ್ಕೆ ಬದಲಾಗಲು ಸಹಾಯ ಮಾಡುತ್ತೇವೆ ಎಂದು ಹೇಳಲಾಗಿದೆ.

English summary

Master Card Will Allow Cardholders To Transact In Cryptocurrency

Master card will allow cardholders to transact in cryptocurrency. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X