ಮಾರ್ಚ್ 31ರೊಳಗೆ ಕನಿಷ್ಠ ಠೇವಣಿ ಮಾಡದಿದ್ದರೆ ಈ ಖಾತೆಗಳು ನಿಷ್ಕ್ರಿಯ

ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿರುವುದರಿಂದ, ಹಲವು ತೆರಿಗೆ-ಉಳಿತಾಯ ಯೋಜನೆಗಳನ್ನು ನಾವು ಮುಂದುವರಿಸಲು ಕನಿಷ್ಠ ಠೇವಣಿ ಅಗತ್ಯ ಇದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯು ಈ ಯೋಜನೆಗಳಲ್ಲಿ ಸೇರಿದೆ.

ನೀವು ಈ ಖಾತೆಗಳನ್ನು ತೆರೆದಿದ್ದರೆ ಮತ್ತು ಹಣಕಾಸು ವರ್ಷದಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡಲು ವಿಫಲವಾದರೆ, ಈ ಖಾತೆಗಳು ನಿಷ್ಕ್ರಿಯವಾಗುತ್ತವೆ. ಆದರಿಂದಾಗಿ ಮಾರ್ಚ್ 31ರೊಳಗೆ ಈ ಖಾತೆಗಳಲ್ಲಿ ಕನಿಷ್ಠ ಠೇವಣಿಯನ್ನು ನೀವು ಮಾಡಬೇಕಾಗಿದೆ.

ನೀವು ಒಂದು ವೇಳೆ ಕನಿಷ್ಠ ಠೇವಣಿ ಹೊಂದಿಲ್ಲದಿದ್ದರೆ ಆ ಖಾತೆಯನ್ನು ನಿಷ್ಕ್ರೀಯ ಮಾಡಲಾಗುತ್ತದೆ. ಹಾಗೆ ಒಮ್ಮೆ ನಿಷ್ಕ್ರೀಯವಾದ ಖಾತೆಯನ್ನು ಮತ್ತೆ ಪುನಃ ಸಕ್ರಿಯಗೊಳಿಸಲು ಸಾಕಷ್ಟು ಸಮಯ ಬೇಕಾಗಲಿದೆ. ಇಂತಹ ಸುದೀರ್ಘ ಕಾರ್ಯವಿಧಾನವನ್ನು ತಪ್ಪಿಸಲು, ಮಾರ್ಚ್ 31 ರ ಆರ್ಥಿಕ ವರ್ಷ ಮುಗಿಯುವ ಮೊದಲು ನೀವು ಕನಿಷ್ಠ ಠೇವಣಿಗಳನ್ನು ಮಾಡಬೇಕು. ಹಾಗಾದರೆ ಈ ಉಳಿತಾಯ ಯೋಜನೆಗಳು ಯಾವುದು, ಈ ಖಾತೆಗಳು ನಿಷ್ಕ್ರೀಯ ಆಗುವುದನ್ನು ತಪ್ಪಿಸಲು ನೀವು ಎಷ್ಟು ಠೇವಣಿ ಮಾಡಬೇಕು ಎಂದು ತಿಳಿಯಲು ಮುಂದೆ ಓದಿ...

 ಮಾರ್ಚ್ 31ರೊಳಗೆ ಕನಿಷ್ಠ ಠೇವಣಿ ಮಾಡದಿದ್ದರೆ ಈ ಖಾತೆಗಳು ನಿಷ್ಕ್ರಿಯ

ಸಾರ್ವಜನಿಕ ಭವಿಷ್ಯ ನಿಧಿ: ಒಂದು ಹಣಕಾಸು ವರ್ಷದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗೆ ಕನಿಷ್ಠ ವಾರ್ಷಿಕ ಠೇವಣಿ 500 ರೂ ಆಗಿದೆ. ಠೇವಣಿ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಗ್ರಾಹಕರು ಈ ದಿನಾಂಕದೊಳಗೆ ಕೊಡುಗೆ ನೀಡಲು ವಿಫಲರಾದರೆ, ಅವರು ಪ್ರತಿ ವರ್ಷಕ್ಕೆ 50 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಹಣಕಾಸು ವರ್ಷದಲ್ಲಿ ಕನಿಷ್ಠ ಕೊಡುಗೆಯನ್ನು ನೀಡದಿದ್ದರೆ, ಪಿಪಿಎಫ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್‌ಪಿಎಸ್‌ ಖಾತೆದಾರರಿಗೆ, ಖಾತೆಯು ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ವರ್ಷದಲ್ಲಿ ಕನಿಷ್ಠ 1,000 ರೂ.ಗಳನ್ನು ಠೇವಣಿ ಮಾಡುವುದು ಕಡ್ಡಾಯವಾಗಿದೆ. ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಠೇವಣಿ ಮಾಡದಿದ್ದರೆ, ಖಾತೆಯು ನಿಷ್ಕ್ರಿಯಗೊಳ್ಳುತ್ತದೆ. ಆ ಖಾತೆಯನ್ನು ಪುನರುಜ್ಜೀವನಗೊಳಿಸಲು, ನೀವು ಕನಿಷ್ಟ ಕೊಡುಗೆಗಳೊಂದಿಗೆ ಪ್ರತಿ ವರ್ಷ ರೂ 100 ದಂಡವನ್ನು ಪಾವತಿಸಬೇಕಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ: ಒಂದು ಆರ್ಥಿಕ ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಸಕ್ರಿಯವಾಗಿಡಲು ಠೇವಣಿ ಮಾಡಬೇಕಾದ ಕನಿಷ್ಠ ಮೊತ್ತ 250 ರೂಪಾಯಿ ಎಂದು ಖಾತೆದಾರರು ಗಮನಿಸಬೇಕು. ಹಣಕಾಸು ವರ್ಷದಲ್ಲಿ ಕನಿಷ್ಠ ಠೇವಣಿ ಮಾಡದಿದ್ದರೆ, ಅದನ್ನು ಡೀಫಾಲ್ಟ್ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ಖಾತೆಯನ್ನು ಸಕ್ರಿಯಗೊಳಿಸಬಹುದು. ಅದಕ್ಕಾಗಿ ನೀವು ಕನಿಷ್ಟ 250 ರೂಪಾಯಿಗಳ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ಪ್ರತಿ ವರ್ಷಕ್ಕೆ 50 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+