For Quick Alerts
ALLOW NOTIFICATIONS  
For Daily Alerts

Money and Finance Horoscope 2021: ಮೇಷದಿಂದ ಮೀನ ಯಾರಿಗೇನು?

By ಶಂಕರ್ ಭಟ್
|

2020ನೇ ಇಸವಿ ನಿಮ್ಮ ಪಾಲಿಗೆ ಹೇಗಿತ್ತೋ ಏನೋ ಗೊತ್ತಿಲ್ಲ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಹೇಗಿತ್ತೋ, ಕಷ್ಟ- ಸುಖ ಇತ್ಯಾದಿ ವಿಚಾರಗಳನ್ನು ಒಮ್ಮೆ ಮೆಲುಕು ಹಾಕಿ ನೋಡಿ. ಕೆಲವು ಘಟನೆಗಳ ಬಗ್ಗೆ ಮುಂಚೆಯೇ ಸುಳಿವು ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿರಬಹುದು. ಅಥವಾ ಅಂದುಕೊಂಡಂತೆ ಆ ಕೆಲಸ ಮಾಡಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅಂತಲೂ ಅನಿಸಿರಬಹುದು.

 

ಇರಲಿ, ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲ ಇಲ್ಲ. ನಮ್ಮೆಲ್ಲರ ಎದುರಿಗೆ ಈಗ 2021ನೇ ಇಸವಿ ಇದೆ. ನಿಮ್ಮ ರಾಶಿಗಳ ಆಧಾರದಲ್ಲಿ ಹಣಕಾಸಿನ ಸ್ಥಿತಿ ಹೇಗಿರುತ್ತದೆ. ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದುಕೊಳ್ಳಿ. ಒಂದಿಷ್ಟು ಮುಂಜಾಗ್ರತೆ ಹಾಗೂ ಕೆಲವು ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳುವ ಮೂಲಕ ಈ ಹಿಂದಿನ ವರ್ಷದ ಹಳಹಳಿಕೆ ಬಿಟ್ಟುಬಿಡಿ.

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿ

ಇನ್ನೇಕೆ ತಡ, ಹನ್ನೆರಡು ರಾಶಿಗಳ- ಮೇಷದಿಂದ ಮೀನದ ತನಕ ಹಣಕಾಸು ಭವಿಷ್ಯ ತಿಳಿಯಿರಿ.

ಮೇಷ

ಮೇಷ

 • ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ, ಅನುಕೂಲಕರ ವಾತಾವರಣವನ್ನು ನಿರೀಕ್ಷಿಸಬೇಡಿ. ಯಾರಿಂದಲೂ ಆರ್ಥಿಕ ನೆರವು ಸಿಗುವುದಿಲ್ಲ.
 • ವ್ಯಾಪಾರ- ವ್ಯವಹಾರ ಮಾಡುತ್ತಿದ್ದಲ್ಲಿ ಆದಾಯ- ಲಾಭ ಎರಡೂ ಬರುತ್ತದೆ. ನೀವು ಅತಿಯಾದ ಲಾಭಕ್ಕೆ ಆಸೆ ಪಡದೆ ಈಗಿನ ಸಮಸ್ಯೆ ನಿವಾರಣೆ ಕಡೆಗೆ ಗಮನ ನೀಡಿ.
 • ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡಬೇಕು, ಅಲ್ಲಿ ಹೋಗಿ ವ್ಯಾಪಾರ- ವ್ಯವಹಾರ ಮಾಡಬೇಕು ಎಂದಿದ್ದಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್ ಸೂಕ್ತ.
 • ಪಿತ್ರಾರ್ಜಿತವಾದ ಆಸ್ತಿ ವ್ಯಾಜ್ಯಗಳಿದ್ದಲ್ಲಿ, ಅದು ಕೋರ್ಟ್ ನಲ್ಲಿದ್ದರೆ ಸಮಸ್ಯೆ ಬಗೆಹರಿದು ಹಣ ಬರಲಿದೆ. ಅದರ ಸದ್ವಿನಿಯೋಗದ ಕಡೆಗೆ ಗಮನ ನೀಡಿ.
 • ಸಾಲ ಸಿಗುತ್ತದೆ ಹಾಗೂ ಬಡ್ಡಿ ಕಡಿಮೆ ಅಥವಾ ಬಡ್ಡಿಯೇ ಕಟ್ಟುವಂತಿಲ್ಲ ಎಂಬ ಕಾರಣಕ್ಕೆ ಲೋನ್ ತೆಗೆದುಕೊಳ್ಳಬೇಡಿ. ಇನ್ನು ಈ ಹಿಂದೆ ನೀವು ಮಾಡಿದ್ದ ಹೂಡಿಕೆಗಳಿಗೆ ಲಾಭ ಸಿಗುತ್ತದೆ.
ವೃಷಭ

ವೃಷಭ

 • ಉದ್ಯೋಗ ವಿಚಾರವಾಗಿ ಶುಭ ಸುದ್ದಿ ನಿರೀಕ್ಷಿಸಿ. ಐಟಿ, ಬಿಪಿಒದಲ್ಲಿ ಇರುವವರಿಗೆ ವಿದೇಶ ಪ್ರಯಾಣ, ವೇತನ ಹೆಚ್ಚಳ ನಿರೀಕ್ಷಿಸಬಹುದು.
 • ಸೋದರ- ಸೋದರಿಯರ ಮಧ್ಯೆ ಆಸ್ತಿ ಹಂಚಿಕೆ, ಹಣ ಹಂಚಿಕೆ ಇತ್ಯಾದಿಗಳು ಆಗಬೇಕಿದ್ದಲ್ಲಿ ಅಂದುಕೊಂಡಂತೆ ಬೆಳವಣಿಗೆಗಳು ಆಗಲ್ಲ.
 • ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ರಿಯಲ್ ಎಸ್ಟೇಟ್ ವ್ಯವಹಾರದವರು ಮತ್ತೂ ಹುಷಾರಾಗಿರಿ.
 • ನೀವು ಈ ಹಿಂದೆ ಮಾಡಿದ್ದ ಹೂಡಿಕೆಯನ್ನು ಈಗ ವ್ಯಾಪಾರ- ವ್ಯವಹಾರದ ಸಲುವಾಗಿ ತೆಗೆದುಕೊಳ್ಳುವಾಗ ಹಿರಿಯರು- ಅನುಭವಿಗಳಿಂದ ಸಲಹೆ, ಸೂಚನೆ ಪಡೆದುಕೊಳ್ಳಿ.
 • ನಿಮ್ಮ ಶತ್ರುಗಳಿಂದ ಹಣಕಾಸಿಗೆ ಸಂಬಂಧಿಸಿದ ಅನುಕೂಲ ಆಗಲಿದೆ. ಅವರು ನಿಮಗೆ ಕೇಡು ಬಯಸಿ ಮಾಡುವ ಕೆಲಸಗಳಿಂದ ಲಾಭ ಆಗಲಿದೆ.
ಮಿಥುನ
 

ಮಿಥುನ

 • ಬೇರೆಯವರ ಸಾಲಕ್ಕೆ ನೀವು ಜಾಮೀನಾಗಿ ನಿಂತು, ಹಣ ಕಟ್ಟಿಕೊಡುವಂಥ ಸನ್ನಿವೇಶ ಎದುರಾಗಲಿದೆ.
 • ಮನೆಯಲ್ಲಿನ ಹಿರಿಯರ ಅಥವಾ ನಿಮ್ಮದೇ ಅನಾರೋಗ್ಯದ ಸಲುವಾಗಿ ಉಳಿತಾಯದ ಹಣದ ದೊಡ್ಡ ಪಾಲು ಖರ್ಚಾಗಲಿದೆ.
 • ನಿಮ್ಮ ತಂದೆಯವರ ಪ್ರಭಾವದಿಂದ ವ್ಯಾಪಾರ- ವ್ಯವಹಾರ, ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆದುಕೊಳ್ಳಲಿದ್ದೀರಿ.
 • ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಲ್ಲೇ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಯಶಸ್ವಿ ಆಗಲಿದ್ದೀರಿ. ಆದರೆ ಈ ಹಾದಿಯಲ್ಲಿ ದೊಡ್ಡ ತ್ಯಾಗ ಮಾಡಬೇಕಾಗುತ್ತದೆ.
 • ಮನೆ- ಸೈಟು ಖರೀದಿ ಮಾಡುವ ಉದ್ದೇಶವೇ ಇಲ್ಲದಿದ್ದರೂ ಯಾವುದೋ ಒತ್ತಡ ಅಥವಾ ಆಮಿಷಕ್ಕೆ ಸಿಲುಕಿಕೊಂಡು, ಅಡ್ವಾನ್ಸ್ ನೀಡಿ ಮಾನಸಿಕ ಹಿಂಸೆ ಪಡುವಂತಾಗುತ್ತದೆ.
ಕರ್ಕಾಟಕ

ಕರ್ಕಾಟಕ

 • ನೀವಾಯಿತು, ನಿಮ್ಮ ಲೋಕವಾಯಿತು ಎಂದಿದ್ದು, ವ್ಯಾಪಾರ- ವ್ಯವಹಾರದ ಕಡೆ ಲಕ್ಷ್ಯ ನೀಡದೆ ನಷ್ಟವಾಗುವ ಸಾಧ್ಯತೆ ಇದೆ.
 • ಕಾನೂನು ವ್ಯಾಜ್ಯಗಳಿಗೆ ಹಣ ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ಉಳಿತಾಯದ ಹಣ ಕರಗಲಿದೆ.
 • ರಿಯಲ್ ಎಸ್ಟೇಟ್- ಜಮೀನು ಖರೀದಿಗಾಗಿ ಸಾಲ ಮಾಡಲಿದ್ದೀರಿ. ದೀರ್ಘಾವಧಿ ಹೂಡಿಕೆ ಆಗಿ ಅದು ಪರಿವರ್ತನೆ ಆಗಲಿದೆ.
 • ಹೊಸದಾಗಿ ಕಂಪೆನಿ ಶುರು ಮಾಡಬೇಕು ಎಂದಿದ್ದಲ್ಲಿ ಕಾನೂನು ನಿಯಮಗಳನ್ನು ಪಾಲಿಸಿ. ಇಲ್ಲದಿದ್ದಲ್ಲಿ ದಂಡ ಕಟ್ಟುವಂಥ ಸ್ಥಿತಿ ಎದುರಾಗುತ್ತದೆ. ಅವಮಾನದ ಪಾಲಾಗುತ್ತೀರಿ.
 • ಧಾರ್ಮಿಕ ಸಂಸ್ಥೆಗಳು, ಆಧ್ಯಾತ್ಮಿಕ ಕೇಂದ್ರಗಳ ಮೇಲುಸ್ತುವಾರಿ ನೋಡಿಕೊಳ್ಳುವವರು ಅಥವಾ ನಡೆಸುವವರ ಆದಾಯದಲ್ಲಿ ಭಾರೀ ಹೆಚ್ಚಳ ಆಗಲಿದೆ.
ಸಿಂಹ

ಸಿಂಹ

 • ನಿಮ್ಮ ಮಾತು ಹಾಗೂ ಆಲಸ್ಯ ಸ್ವಭಾವದಿಂದಾಗಿ ಲಾಭದ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲಿದ್ದೀರಿ.
 • ಈ ಹಿಂದೆ ನೀವು ಸಹಾಯ ಮಾಡಿದ್ದ ವ್ಯಕ್ತಿಯೊಬ್ಬರಿಂದ ನಿಮ್ಮ ವ್ಯಾಪಾರ- ವ್ಯವಹಾರದಲ್ಲಿ ಅತಿ ದೊಡ್ಡ ಮಟ್ಟದ ಲಾಭವನ್ನು ಕಾಣಲಿದ್ದೀರಿ.
 • ಸೈಟು, ಮನೆ, ಕಾರು, ಜಮೀನು ಖರೀದಿ ಮೊದಲಾದ ಶುಭ ಫಲಗಳನ್ನು ಕಾಣಲಿದ್ದೀರಿ.
 • ಕಂಪೆನಿಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲಿದ್ದು, ಷೇರುಗಳು ನಿಮ್ಮ ಪಾಲಿಗೆ ಬರಲಿವೆ.
 • ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು ಲಾಭಕ್ಕಾಗಿ ಇನ್ನೂ ಕೆಲ ಸಮಯ ಕಾಯಬೇಕಾಗುತ್ತದೆ.
ಕನ್ಯಾ

ಕನ್ಯಾ

 • ಈ ಹಿಂದಿನ ನಿಮ್ಮ ಸಾಧನೆ ಏನೇ ಆಗಿರಬಹುದು. ಹಣಕಾಸಿನ ವಿಷಯದಲ್ಲಿ ಅತಿ ಬುದ್ಧಿವಂತಿಕೆ ತೋರಿಸಬೇಡಿ. ಅಂದರೆ ಕಡಿಮೆ ಬಡ್ಡಿಗೆ ಸಾಲ ಪಡೆದು, ಅದನ್ನೇ ಹೆಚ್ಚಿನ ಬಡ್ಡಿಗೆ ನೀಡುವಂಥದ್ದು.
 • ವೈದ್ಯರಿಂದ ನಿರ್ಧರಿಸಲು ಸಾಧ್ಯವಾಗದಂಥ ಕೆಲವು ಅನಾರೋಗ್ಯ ಅಥವಾ ದೈಹಿಕ ಸಮಸ್ಯೆಗಳಿಗೆ ಹೆಚ್ಚು ಖರ್ಚಾಗಲಿದೆ.
 • ಯಾರಿಗೆ ನಿಮ್ಮ ಮೇಲೆ ಪ್ರೀತಿ- ವಿಶ್ವಾಸ ಮೂಡುವುದಕ್ಕೆ ಸಾಧ್ಯವೇ ಇಲ್ಲವೋ ಅಂಥವರನ್ನು ಒಲಿಸಿಕೊಳ್ಳುವುದಕ್ಕೆ ಬಹಳ ಖರ್ಚು ಮಾಡಿ, ಉಡುಗೊರೆಗಳನ್ನು ನೀಡುತ್ತೀರಿ. ಇಂಥ ವಿಫಲ ಯತ್ನ ಬಿಡಿ.
 • ಧಾರ್ಮಿಕ ಕಾರ್ಯಕ್ರಮಗಳಿಗೆ ನಿಮ್ಮ ದುಡಿಮೆಯ ಹಣದ ಒಂದು ಭಾಗ ಅಥವಾ ಹೆಚ್ಚಿನ ಭಾಗ ಸದ್ವಿನಿಯೋಗ ಆಗುತ್ತದೆ. ಇದು ಪುಣ್ಯ ಸಂಪಾದನೆ. ಈ ಬಗ್ಗೆ ಚಿಂತಿಸಬೇಡಿ.
 • ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಕೀರ್ತಿ- ಪ್ರತಿಷ್ಠೆ ಹೆಚ್ಚಾಗಲಿದೆ. ಆ ಮೂಲಕ ಹಣದ ಹರಿವು ಜಾಸ್ತಿ ಆಗಲಿದೆ.

(ತುಲಾದಿಂದ ಮೀನ ರಾಶಿ ಮುಂದಿನ ಭಾಗ)

English summary

Money and Finance Horoscope 2021 for Aries to Virgo Zodiac Signs in Kannada

Money and Finance Horoscope 2021 in Kannada: Read your Money and Finance 2021 Predictions and know what your planetary positions indicate about money & finance. Read on. ಹಣಕಾಸು ವರ್ಷ ಭವಿಷ್ಯ 2021:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X