For Quick Alerts
ALLOW NOTIFICATIONS  
For Daily Alerts

ಹಾಲಿನ ದರ ಮತ್ತೆ ಹೆಚ್ಚಿಸಿದ ಮದರ್ ಡೈರಿ, ಅಮುಲ್ ಮಿಲ್ಕ್, ಎಷ್ಟು ಹೆಚ್ಚಳ?

|

ಇನ್ಮುಂದೆ ರಾಜ್ಯಗಳಲ್ಲಿನ ಮಾಸಿಕ ಬಜೆಟ್‌ನಲ್ಲಿ ಹಾಲಿಗಾಗಿ ಅಧಿಕ ಹಣವನ್ನು ನೀವು ಇಡಬೇಕಾಗುತ್ತದೆ. ಯಾಕೆಂದರೆ ಅಮುಲ್ ಮತ್ತು ಮದರ್ ಡೈರಿ ಒಂದು ಲೀಟರ್ ಹಾಲಿನ ದರದಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರವು ಆಗಸ್ಟ್ 17ರಿಂದ ಜಾರಿಗೆ ಬರಲಿದೆ.

 

"ಅಮುಲ್‌ ಬ್ರಾಂಡ್‌ನಲ್ಲಿ ಹಾಲಿನ ಮಾರಾಟ ಮಾಡುವ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸಂಸ್ಥೆ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಹಾಲಿನ ದರ ಎರಡು ರೂಪಾಯಿ ಏರಿಕೆ ಮಾಡಲು ನಿರ್ಧಾರ ಮಾಡಿದೆ.

ಅಹಮದಾಬಾದ್, ಗುಜರಾತ್‌ನ ಸೌರಾಷ್ಟ್ರ, ದೆಹಲಿ ಎನ್‌ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಸೇರಿದಂತೆ ಎಲ್ಲ ಪ್ರದೇಶದಲ್ಲಿ ಅಮುಲ್ ಹಾಲಿನ ಬೆಲೆ ಎರಡು ರೂಪಾಯಿ ಹೆಚ್ಚಳವಾಗಲಿದೆ," ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಎರಡು ರೂಪಾಯಿ ಏರಿಕೆಯಾದರೆ ಎಂಆರ್‌ಪಿಯಲ್ಲಿ ಶೇಕಡ 4ರಷ್ಟು ಹೆಚ್ಚಳವಾದಂತೆ ಎಂದು ಸೇರಿಸಲಾಗಿದೆ.

ಅಮುಲ್ ಬ್ರ್ಯಾಂಡ್ ನಿಂದ 52,000 ಕೋಟಿಗೂ ಹೆಚ್ಚು ಸಮಗ್ರ ವಹಿವಾಟು

ಇನ್ನು ದೆಹಲಿ ಎನ್‌ಆರ್‌ಸಿಯಲ್ಲಿ ಮದರ್ ಡೈರಿ ಕೂಡಾ ಹಾಲಿನ ದರ ಹೆಚ್ಚಳವನ್ನು ಘೋಷಣೆ ಮಾಡಿದೆ. "ಆಗಸ್ಟ್ 17ರಿಂದ ಜಾರಿಗೆ ಬರುವಂತೆ ಮದರ್ ಡೈರಿ ಹಾಲಿನ ದರದಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಿದೆ. ಎಲ್ಲ ಪ್ರದೇಶದಲ್ಲಿ ಈ ದರ ಹೆಚ್ಚಳ ಅನ್ವಯವಾಗಲಿದೆ," ಎಂದು ಹೇಳಿದೆ. ಆದರೆ ರಿಟೇಲ್ ಹಾಲಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದರವು ಸ್ಥಿರವಾಗಿದೆ. ಹಾಗಾದರೆ ನೂತನ ದರ ಎಷ್ಟು ಎಂದು ತಿಳಿಯೋಣ ಮುಂದೆ ಓದಿ...

ಅಮುಲ್, ಮದರ್ ಡೈರಿ ಹಾಲಿನ ನೂತನ ದರವೆಷ್ಟು?

ಅಮುಲ್, ಮದರ್ ಡೈರಿ ಹಾಲಿನ ನೂತನ ದರವೆಷ್ಟು?

ಹಾಲಿನ ದರವನ್ನು ಏರಿಕೆ ಮಾಡಿದ ಬಳಿಕ, ಅಮುಲ್ ಗೋಲ್ಡ್ 500 ಮಿಲಿ ಲೀಟರ್‌ಗೆ 31 ರೂಪಾಯಿ ಆಗಲಿದೆ. ಅಮುಲ್ ತಾಜಾ 500 ಮಿಲಿ ಲೀಟರ್‌ ಬೆಲೆಯು 25 ರೂಪಾಯಿ ಆಗಲಿದೆ. ಅಮುಲ್ ಶಕ್ತಿ 500 ಮಿಲಿ ಲೀಟರ್‌ಗೆ 28 ರೂಪಾಯಿ ಆಗಲಿದೆ. ಇನ್ನು ಮದರ್ ಡೈರಿ ಫುಲ್ ಕೆನೆ ಹಾಲು ಬುಧವಾರದಿಂದ ಲೀಟರ್‌ಗೆ 61 ರೂಪಾಯಿ ಆಗಲಿದೆ. ಮದರ್ ಡೈರಿ ಟೋನ್ಡ್ ಹಾಲು (ಕೊಬ್ಬು ಇರುವ ಹಾಲು) 51 ರೂಪಾಯಿ ಆಗಲಿದೆ. ಇನ್ನು ಡಬಲ್ ಟೋನ್ಡ್ ಹಾಲು ಲೀಟರ್‌ಗೆ 45 ರೂಪಾಯಿ ಆಗಲಿದೆ. ಹಸುವಿನ ಹಾಲು ಲೀಟರ್‌ಗೆ 53 ರೂಪಾಯಿಗೆ ಏರಿದೆ. ಬಲ್ಕ್ ವೆಂಡೆಡ್ ಹಾಲು (ಟೋಕನ್ ಹಾಲು) 48 ರೂಪಾಯಿ ಆಗಿದೆ.

ಹಾಲಿನ ದರ ಏಕೆ ಏರಿಸಲಾಗುತ್ತಿದೆ?

ಹಾಲಿನ ದರ ಏಕೆ ಏರಿಸಲಾಗುತ್ತಿದೆ?

ಡೈರಿ ಕಂಪನಿಗಳು ಹಾಲಿನ ದರವನ್ನು ಏರಿಕೆ ಮಾಡುತ್ತಿದೆ. ಉತ್ಪದನಾ ದರ ಹೆಚ್ಚಳವಾಗಿರುವ ಕಾರಣದಿಂದಾಗಿ ಹಾಲಿನ ದರವನ್ನು ಅಧಿಕ ಮಾಡಲಾಗುತ್ತಿದೆ ಎಂದು ಹೇಳಿದೆ. "ಹಾಲು ಉತ್ಪಾದನಾ ವೆಚ್ಚ ಅಧಿಕವಾಗಿರುವ ಕಾರಣದಿಂದಾಗಿ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ. ಪಶುಗಳಿಗೆ ಮೇವು ಹಾಕುವ ವೆಚ್ಚವೇ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 20ರಷ್ಟು ಅಧಿಕವಾಗಿದೆ. ಮೇವಿನ ವೆಚ್ಚ ಅಧಿಕವಾದ ಕಾರಣದಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ.

ಮದರ್ ಡೈರಿಯು ಹಾಲಿನ ಮಾರಾಟ
 

ಮದರ್ ಡೈರಿಯು ಹಾಲಿನ ಮಾರಾಟ

"ಕೃಷಿ ಬೆಲೆಗಳಲ್ಲಿನ ಏರಿಕೆಯು ಗ್ರಾಹಕರಿಗೆ ಭಾಗಶಃ ವರ್ಗಾಯಿಸಲ್ಪಡುತ್ತದೆ, ಇದರಿಂದಾಗಿ ಪಾಲುದಾರರು - ಗ್ರಾಹಕರು ಮತ್ತು ರೈತರು ಇಬ್ಬರ ಹಿತಾಸಕ್ತಿಗಳನ್ನು ಭದ್ರಪಡಿಸುತ್ತದೆ. ಮದರ್ ಡೈರಿಯು ಹಾಲಿನ ಮಾರಾಟದ 75-80 ಪ್ರತಿಶತವನ್ನು ಹಾಲಿನ ಸಂಗ್ರಹಣೆಯ ಕಡೆಗೆ ಹಾದುಹೋಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಜವಾಬ್ದಾರಿಯುತ ಸಂಸ್ಥೆಯಾಗಿ, ಹಾಲು ಉತ್ಪಾದಕರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಲು ಮದರ್ ಡೈರಿ ನಿರಂತರವಾಗಿ ಕೆಲಸ ಮಾಡಿದೆ, "ಎಂದು ಸಂಸ್ಥೆ ಹೇಳಿದೆ.

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

English summary

Amul, Mother Dairy Hike Milk Prices by Rs 2 Per Litre From August 17

Mother Dairy, Amul Milk Hikes Prices by Rs.2 Per Litre. revised rates will come into effect from august 17.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X