For Quick Alerts
ALLOW NOTIFICATIONS  
For Daily Alerts

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

|

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಒಂಟೆ ಹಾಲು ಅಚ್ಚುಮೆಚ್ಚು. ಈ ಹಾಲು ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿದೆ. ಭಾರತದ ಅಪೌಷ್ಟಿಕತೆ ಹೋಗಲಾಡಿಸಲು ಒಂಟೆ ಹಾಲು ಬಳಸುವ ಬಗ್ಗೆ ಮೋದಿ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿರುವ ಬೆನ್ನಲ್ಲೇ, ದೇಶದ ಪ್ರಮುಖ ಹೈನುಗಾರಿಕಾ ಸಂಸ್ಥೆ ಅಮುಲ್ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಒಂಟೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದೆ.

 

ಅಮುಲ್ ಪ್ರಯೋಗಾರ್ಥವಾಗಿ ಒಂಟೆ ಹಾಲು ಮಾರಾಟಕ್ಕೆ ಮುಂದಾಗಿದೆ. ಗುಜರಾತಿನ ಗಾಂಧಿನಗರ, ಅಹಮದಾಬಾದ್ ಹಾಗೂ ಕಛ್ ಮಾರುಕಟ್ಟೆಯಲ್ಲಿ ಸದ್ಯ ಒಂಟೆ ಹಾಲು ಸಿಗುತ್ತಿದೆ.

 

ಒಂಟೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಆರೋಗ್ಯಕ್ಕೂ ಬಹಳ ಒಳ್ಳೆಯದು. ಮಧುಮೇಹ ರೋಗಿಗಳಿಗೆ ಇದು ಬೆಸ್ಟ್. ಯಾವುದೇ ಅಲರ್ಜಿ ಗುಣವಿಲ್ಲದಿರುವುದರಿಂದ ಒಂಟೆ ಹಾಲು ಎಲ್ಲರೂ ಸೇವಿಸಬಹುದು ಎಂದು ವೈದ್ಯರು ನೀಡಿದ ಪ್ರಮಾಣ ಪತ್ರವನ್ನು ಅಮುಲ್ ನೀಡುತ್ತಿದೆ. ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಅಮುಲ್ ಹಾಲು ಬಹಳ ಪ್ರಯೋಜನಕಾರಿ ಎಂದು ಕಂಪನಿ ಹೇಳಿದೆ.

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

ಲಭ್ಯ ಮಾಹಿತಿಯಂತೆ, 500 ಎಂಎಲ್ ಒಂಟೆ ಹಾಲಿನ ಬೆಲೆ 50 ರೂಪಾಯಿ. ಗ್ರಾಹಕರ ಬೇಡಿಕೆ ಹಾಗೂ ಪ್ರತಿಕ್ರಿಯೆ ನೋಡಿಕೊಂಡು ರಾಜಸ್ಥಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ತರಿಸಿಕೊಳ್ಳಲು ಅಮುಲ್ ನಿರ್ಧರಿಸಿದೆ.

Read more about: amul
English summary

Amul test-launches camel milk in select Gujarat markets

Dairy major Amul for the first time has launched camel milk in select Gujarat markets — Gandhinagar, Ahmedabad and the Kutch. Amul had earlier introduced a camel milk chocolate which continues to receive a good response, it said.
Story first published: Wednesday, January 23, 2019, 19:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X