For Quick Alerts
ALLOW NOTIFICATIONS  
For Daily Alerts

NEFT ಅಥವಾ IMPS ಆನ್ ಲೈನ್ ಬ್ಯಾಂಕ್ ವ್ಯವಹಾರಕ್ಕೆ ಯಾವುದು ಸೂಕ್ತ?

|

"ನಮಗೇನೋ ಡಿಜಿಟಲ್ ವ್ಯವಹಾರ ಹಾಗೂ ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಆಸಕ್ತಿ ಇದೆ. ಆದರೆ ಅದರಲ್ಲಿ ಪ್ರತಿಯೊಂದಕ್ಕೂ ಶುಲ್ಕ, ಜತೆಗೆ ಹಣ ವರ್ಗಾವಣೆಗೆ ಮಿತಿ ಇದೆ" -ಹೀಗೆ ಆಕ್ಷೇಪಣೆ ಮಾಡುತ್ತಿದ್ದವರಿಗೆ ಇದೀಗ ಒಳ್ಳೆ ಸುದ್ದಿ ಇದೆ.

ಅದಕ್ಕೂ ಮುನ್ನ NEFT (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್), IMPS (ಇಮಿಡಿಯೆಟ್ ಪೇಮೆಂಟ್ ಸರ್ವೀಸ್) ಹಾಗೂ RTGS (ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್) ಎಂಬ ಹಣ ವರ್ಗಾವಣೆಯ ಸಾಧಕ- ಬಾಧಕ ಗೊತ್ತಾಗಬೇಕು.

ಮೊದಲಿಗೆ NEFTಗಿಂತ IMPSನ ಮುಖ್ಯ ಅನುಕೂಲ ಏನಾಗಿತ್ತು ಅಂದರೆ, ಅದರ ಸೇವೆ 24X7 ಸಿಗುತ್ತಿತ್ತು. ಅದರೆ NEFT ಬೆಳಗ್ಗೆ 8ರಿಂದ ರಾತ್ರಿ 7ರ ಮಧ್ಯೆ, ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಉಪಯೋಗಕ್ಕೆ ಇರುತ್ತಿತ್ತು. ಅರ್ಧ ಗಂಟೆಗೆ ಒಮ್ಮೆಯಂತೆ 23 ಬ್ಯಾಚ್ ಗಳಲ್ಲಿ ತೀರುವಳಿ ಆಗುತ್ತಿತ್ತು.

NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು ...NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು ...

ಆದರೆ, IMPS ಮೂಲಕ ಮಾಡಿದ ಹಣದ ವರ್ಗಾವಣೆ ತಕ್ಷಣ ಆಗುತ್ತದೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಘೋಷಣೆ ಮಾಡಿದ್ದು 24X7ನಂತೆ NEFT ಸೌಲಭ್ಯ ದೊರೆಯಲಿದೆ. ಅಷ್ಟೇ ಅಲ್ಲ, ಬ್ಯಾಂಕ್ ಗಳ ರಜಾ ದಿನಗಳಲ್ಲೂ ಈ ಸೌಲಭ್ಯ ದೊರೆಯಲಿದೆ. ಇದೀಗ NEFT ಮತ್ತು IMPS ಸೌಲಭ್ಯ ಸದಾ ದೊರೆಯುತ್ತದೆ.

NEFT ಅಥವಾ IMPS ಆನ್ ಲೈನ್ ಬ್ಯಾಂಕ್ ವ್ಯವಹಾರಕ್ಕೆ ಯಾವುದು ಸೂಕ್ತ?

ಹಾಗಿದ್ದರೆ ಈ ಎರಡರ ಪೈಕಿ ಯಾವುದು ಹೆಚ್ಚು ಅನುಕೂಲ ಎಂಬ ಪ್ರಶ್ನೆ ಮೂಡುವುದು ಸಹಜ.

* ಸಣ್ಣ ಮೊತ್ತದ ಹಣದ ವರ್ಗಾವಣೆಗಾಗಿ ರೂಪುಗೊಂಡಿರುವುದು IMPS. 2 ಲಕ್ಷ ರುಪಾಯಿಯೊಳಗಿನ ಮೊತ್ತವನ್ನು ವರ್ಗಾವಣೆ ಮಾಡಬಹುದು. ಇದಕ್ಕೆ ಕನಿಷ್ಠ ಮೊತ್ತದ ಮಿತಿ ಇಲ್ಲ. ಇನ್ನು NEFT ಮೂಲಕ ಹಣ ವರ್ಗಾವಣೆಗೆ ಗರಿಷ್ಠ ಮಿತಿ ಇಲ್ಲ. ಇದರರ್ಥ ದೊಡ್ಡ ಮೊತ್ತದ ಹಣವನ್ನು ಕೂಡ NEFT ಮೂಲಕ ದಿನದ ಎಲ್ಲ ಸಮಯದಲ್ಲೂ ವರ್ಗಾವಣೆ ಮಾಡಬಹುದು. UPI ಅಥವಾ IMPS ಮೂಲಕ ವರ್ಗಾವಣೆ ಮಾಡಲಾರದಷ್ಟು ದೊಡ್ಡ ಮೊತ್ತವನ್ನು NEFT ಮೂಲಕ ಮಾಡಬಹುದು.

* ಕಳೆದ ಜುಲೈನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿರುವಂತೆ NEFT ಹಾಗೂ RTGS ವ್ಯವಹಾರಗಳಿಗೆ 2020ರ ಜನವರಿಯಿಂದ ಅನ್ವಯ ಆಗುವಂತೆ ಶುಲ್ಕವನ್ನು ತೆಗೆದುಹಾಕಿದೆ. ಅದರೆ ಈಗಲೂ IMPSಗೆ ಶುಲ್ಕ ಇದ್ದೇ ಇದೆ. ಎಷ್ಟು ಮೊತ್ತದ ಹಣ ಎಂಬುದರ ಆಧಾರದಲ್ಲಿ 1 ರುಪಾಯಿಯಿಂದ ಆರಂಭವಾಗಿ 25 ರುಪಾಯಿ ತನಕ ಶುಲ್ಕ ವಿಧಿಸಲಾಗುತ್ತದೆ.

* IMPS ವ್ಯವಹಾರದ ಮುಖ್ಯ ಅನುಕೂಲ ಏನೆಂದರೆ, ಪ್ರತಿ ಸಲ ಹಣ ವರ್ಗಾವಣೆ ಮಾಡುವಾಗಲೂ ಯಾರ ಖಾತೆಗೆ ವರ್ಗಾವಣೆ ಮಾಡುತ್ತೀರೋ ಅವರ ಬ್ಯಾಂಕ್ ಖಾತೆಯ ಎಲ್ಲ ಮಾಹಿತಿ ನೀಡಬೇಕಿಲ್ಲ. ಯಾರ ಖಾತೆಗೆ ಹಣ ಹಾಕಬೇಕೋ ಅವರ MMID (ಮೊಬೈಲ್ ಮನಿ ಐಡೆಂಟಿಫೈಯರ್ ಡೀಟೇಲ್ಸ್) ಸಾಕು. ಹೀಗಂದರೆ ಆ ಖಾತೆದಾರರ ಏಳು ಸಂಖ್ಯೆಯ ವಿಶಿಷ್ಟ ಮಾಹಿತಿ. ಇದನ್ನು ಬ್ಯಾಂಕ್ ಬಳಿ ನೋಂದಣಿ ವೇಳೆ ನೀಡಲಾಗುತ್ತದೆ. ಆದರೆ NEFTನಲ್ಲಿ ಇಂಟರ್ ನೆಟ್ ಮೂಲಕ ಖಾತೆದಾರರ ಮಾಹಿತಿಯನ್ನು ಸೇರ್ಪಡೆ ಮಾಡಬೇಕು. ಬ್ಯಾಂಕ್ ಅಕೌಂಟ್ ನಂಬರ್, ಐಎಫ್ ಎಸ್ ಸಿ ಸಂಖ್ಯೆ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ.

ಇಷ್ಟನ್ನೂ ತಿಳಿದುಕೊಂಡ ಮೇಲೆ ಎಷ್ಟು ಮೊತ್ತ, ನಿಮ್ಮ ಅಗತ್ಯ ಯಾವ ರೀತಿ ಇದೆ ಎಂಬ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಿ.

English summary

NEFT Or IMPS Which One To Choose For Online Banking Transaction?

Online banking transactions are more popular now a days. Here is an explainer about NEFT and IMPS. Which one is better?
Story first published: Monday, December 30, 2019, 10:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X