For Quick Alerts
ALLOW NOTIFICATIONS  
For Daily Alerts

ಬ್ಯಾಂಕ್, ಅಂಚೆ ಕಚೇರಿಯಿಂದ ಹಣ ಹಿಂಪಡೆಯಲು ಟಿಡಿಎಸ್ ನಿಯಮ ಬದಲು

|

ನಗದು ವಹಿವಾಟುಗಳನ್ನು ಕಡಿಮೆಗೊಳಿಸಲು ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು, ಆದಾಯ ತೆರಿಗೆ ಇಲಾಖೆ, ಈ ತಿಂಗಳಿನಿಂದ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಂದ ಹಣವನ್ನು ಹಿಂಪಡೆಯಲು ಕೆಲ ಟಿಡಿಎಸ್ ನಿಯಮಗಳನ್ನು ಬದಲಾಯಿಸಿದೆ.

ಇಲ್ಲಿಯವರೆಗೆ, ನೀವು ಒಂದು ವರ್ಷದಲ್ಲಿ 1 ಕೋಟಿ ರುಪಾಯಿ ಮೀರಿದ ನಗದು ಹಿಂಪಡೆಯುವಿಕೆಯ ಮೇಲೆ 2% ರಷ್ಟು ಟಿಡಿಎಸ್ ಪಾವತಿಸಬೇಕಾಗಿತ್ತು. 1 ಜುಲೈ 2020 ರಿಂದ ಜಾರಿಗೆ ಬರುವಂತೆ, ಇದೀಗ ಇದನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಬ್ಯಾಂಕ್ ನಿಂದ ನಗದು ತೆಗೆಯುವ ಮುನ್ನ ಟಿಡಿಎಸ್ ಗಮನದಲ್ಲಿರಲಿಬ್ಯಾಂಕ್ ನಿಂದ ನಗದು ತೆಗೆಯುವ ಮುನ್ನ ಟಿಡಿಎಸ್ ಗಮನದಲ್ಲಿರಲಿ

ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟುಗಳಿಗೆ, ಟಿಡಿಎಸ್ ದರವು ಕಳೆದ ಮೂರು ವರ್ಷಗಳಿಂದ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಸಲ್ಲಿಸಿದ್ದೀರಾ ಅಥವಾ ಇಲ್ಲವೇ ಎಂಬುದರ ಮೇಲೆ ನೇರವಾಗಿ ಅವಲಂಬಿತವಾಗಿರುತಿತ್ತು. ಕಳೆದ 3 ವರ್ಷಗಳಿಂದ ಐಟಿಆರ್ ಸಲ್ಲಿಸಿದವರಿಗೆ ಟಿಡಿಎಸ್ ನಿಯಮಗಳು ಇಂತಿವೆ.

ಸೆಕ್ಷನ್ 194 ಎನ್ ಅನ್ನು ಪರಿಚಯಿಸಿತ್ತು

ಸೆಕ್ಷನ್ 194 ಎನ್ ಅನ್ನು ಪರಿಚಯಿಸಿತ್ತು

2019 ರ ಕೇಂದ್ರ ಬಜೆಟ್ ನಲ್ಲಿ, ಆದಾಯ ತೆರಿಗೆ ಕಾಯ್ದೆಯಲ್ಲಿ ಸರ್ಕಾರವು ಹೊಸ ಸೆಕ್ಷನ್ 194 ಎನ್ ಅನ್ನು ಪರಿಚಯಿಸಿತ್ತು, ಇದರ ಅಡಿಯಲ್ಲಿ 1 ಕೋಟಿಗಿಂತ ಹೆಚ್ಚಿನ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಹಿಂಪಡೆಯುವ ಬಗ್ಗೆ ಟಿಡಿಎಸ್ ವಿಧಿಸಲಾಗುತ್ತದೆ. ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಇದರ ವ್ಯಾಪ್ತಿಗೆ ಬರುತ್ತವೆ.

20% ಹೆಚ್ಚಿನ ಟಿಡಿಎಸ್

20% ಹೆಚ್ಚಿನ ಟಿಡಿಎಸ್

ಆದಾಗ್ಯೂ, ಬ್ಯಾಂಕಿನ ದಾಖಲೆಗಳಲ್ಲಿ ಯಾರ ಪ್ಯಾನ್ ನವೀಕರಿಸದಿದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206 ಎಎ ಅಡಿಯಲ್ಲಿ 20% ಹೆಚ್ಚಿನ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಐಟಿಆರ್ ಸಲ್ಲಿಸಿದ್ದರೆ
 

ಕಳೆದ ಮೂರು ವರ್ಷಗಳಿಂದ ಐಟಿಆರ್ ಸಲ್ಲಿಸಿದ್ದರೆ

ನೀವು ಪ್ಯಾನ್ ಸಲ್ಲಿಸಿದ್ದರೆ ಮತ್ತು ಕಳೆದ ಮೂರು ವರ್ಷಗಳಿಂದ ಐಟಿಆರ್ ಅನ್ನು ಸಹ ಸಲ್ಲಿಸಿದ್ದರೆ, ಒಟ್ಟು 1 ಕೋಟಿ ರುಪಾಯಿಗಿಂತ ಕಡಿಮೆ ಹಣವನ್ನು ಹಿಂಪಡೆಯಲು ಯಾವುದೇ ಟಿಡಿಎಸ್ ವಿಧಿಸಲಾಗುವುದಿಲ್ಲ.

ಬ್ಯಾಂಕ್‌ಗೆ ವಿನಂತಿಸಬಹುದು

ಬ್ಯಾಂಕ್‌ಗೆ ವಿನಂತಿಸಬಹುದು

ಕಳೆದ ಮೂರು ವರ್ಷಗಳ ಐಟಿಆರ್-ವಿ (ಐಟಿಆರ್ ಸಲ್ಲಿಸುವ ಸ್ವೀಕೃತಿ) ಅನ್ನು ಪುರಾವೆಯಾಗಿ ಸಲ್ಲಿಸಲು ನಿಮ್ಮ ಬ್ಯಾಂಕ್ ನಿಮ್ಮನ್ನು ಕೇಳಬಹುದು. ಪರ್ಯಾಯವಾಗಿ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಟಿಡಿಎಸ್ ದರವನ್ನು ನೇರವಾಗಿ ಪರಿಶೀಲಿಸಲು ನೀವು ಬ್ಯಾಂಕ್‌ಗೆ ವಿನಂತಿಸಬಹುದು, ಅಲ್ಲಿ ಸೆಕ್ಷನ್ 194 ಎನ್ ಅಡಿಯಲ್ಲಿ ಟಿಡಿಎಸ್ ದರವನ್ನು ನಿರ್ಧರಿಸುವ ಸಾಧನವನ್ನು ಸಕ್ರಿಯಗೊಳಿಸಲಾಗಿದೆ.

English summary

New TDS Rates on High-Value Cash Withdrawals Apply from Today

Some TDS Rules Change For Money From Banks And Post Offices
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X