For Quick Alerts
ALLOW NOTIFICATIONS  
For Daily Alerts

Medicines Price : ಪ್ಯಾರೆಸಿಟಮಾಲ್ ಸೇರಿ 128 ಔಷಧಿಗಳ ದರ ಪರಿಷ್ಕರಣೆ, ಇಲ್ಲಿದೆ ಮಾಹಿತಿ

|

ಕೇಂದ್ರ ಸರ್ಕಾರವು ಇತ್ತೀಚೆಗೆ 128 ಆಂಟಿ ಬಯೋಟಿಕ್ ಮತ್ತು ಆಂಟಿ ವೈರಲ್ ಔಷಧಿಗಳ ದರವನ್ನು ಪರಿಷ್ಕರಣೆ ಮಾಡಿದೆ. ಈ ಬಗ್ಗೆ ನ್ಯಾಷನಲ್ ಫಾರ್ಮಾಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‌ಪಿಪಿಎ) ನೋಟಿಫಿಕೇಷನ್ ಹೊರಡಿಸಿದೆ, ಇದರಲ್ಲಿ ಹೊಸ ದರವನ್ನು ಉಲ್ಲೇಖಿಸಿದೆ. ಈ ಬೆಲೆ ಪರಿಷ್ಕರಣೆಯಾದ ಔಷಧಿಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್, ಇಬುಪ್ರೊಫೇನ್, ಅಮೋಕ್ಸಿಸಿಲಿನ್ ಸೇರಿಂದಂತೆ ಹಲವು ಇದೆ.

ಮಾಧ್ಯಮಗಳ ವರದಿ ಪ್ರಕಾರ, 128 ಔಷಧಿಗಳ ಪೈಕಿ ಬೇರೆ ಬೇರೆ ರೀತಿಯ ಔಷಧಿಗಳು ಇದೆ. ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಸಿಡ್‌ನ ಆಂಟಿ ಬಯೋಟಿಕ್ ಇಂಜೆಕ್ಷನ್, ವ್ಯಾಂಕೋಮೈಸಿನ್, ಅಸ್ತಮಾಕ್ಕೆ ಬಳಕೆ ಮಾಡುವ ಸಾಲ್ಬುಟಮಾಲ್, ಕ್ಯಾನ್ಸರ್‌ಗೆ ಬಳಸಲಾಗುವ trastuzumab, ನೋವು ನಿರೋಧಕ ಔಷಧಗಳಾದ ಪ್ಯಾರಸಿಟಮಾಲ್, ಇಬುಪ್ರೊಫೇನ್ ಬೆಲೆಯನ್ನು ಕೂಡಾ ಪರಿಷ್ಕರಿಸಲಾಗಿದೆ.

ಕೊರೊನಾವೈರಸ್‌ಗೆ ಕೊರೊನಿಲ್ ಔಷಧಿ: ಉಲ್ಟಾ ಹೊಡೆದ ಪತಂಜಲಿಕೊರೊನಾವೈರಸ್‌ಗೆ ಕೊರೊನಿಲ್ ಔಷಧಿ: ಉಲ್ಟಾ ಹೊಡೆದ ಪತಂಜಲಿ

ಅಮೋಕ್ಸಿಸಿಲಿನ್ ಕ್ಯಾಪ್ಸುಲ್‌ಗಳ ದರವನ್ನು 2.18 ರೂಪಾಯಿ ಎಂದು ನಿಗದಿ ಮಾಡಲಾಗಿದೆ, ಈ ಸಂದರ್ಭದಲ್ಲೇ ಸಿಟ್ರಿಜಿನ್ ಟಾಬ್ಲೆಟ್‌ಗಳ ಬೆಲೆಯನ್ನು 1.68 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಹಾಗಾದರೆ ಬೇರೆ ಔಷಧಿಗಳ ನೂತನ ಬೆಲೆ ಎಷ್ಟಿದೆ, ಯಾವೆಲ್ಲ ಪ್ರಮುಖ ಔಷಧಿಗಳ ಬೆಲೆ ಬದಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಪ್ಯಾರೆಸಿಟಮಾಲ್ ಸೇರಿ 128 ಔಷಧಿಗಳ ದರ ಪರಿಷ್ಕರಣೆ, ಇಲ್ಲಿದೆ ಮಾಹಿತಿ

ಬೇರೆ ಯಾವೆಲ್ಲ ಔಷಧಿಗಳ ದರ ಏರಿಕೆ?

400 ಎಂಜಿಯ ಇಬುಪ್ರೊಫೇನ್ ಔಷಧಿಯ ನೂತನ ದರವನ್ನು ಎನ್‌ಪಿಪಿಎ ಪ್ರಕಟಿಸಿದೆ. ಎನ್‌ಪಿಪಿಎ ಪ್ರಕಾರ ಇಬುಪ್ರೊಫೇನ್ ನೂತನ ದರ 1.07 ರೂಪಾಯಿ ಆಗಿದೆ. ಇನ್ನು ಪ್ಯಾರಸಿಟಮಾಲ್, ಫೆನಿಲೆಫ್ರಿನ್ ಹೈಡ್ರೋಕ್ಲೋರೈಡ್, diphenhydramine hydrochloride, ಕಫದ ಟಾಬ್ಲೆಟ್‌ಗಳ ದರವನ್ನು 2.76 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಸಿಡ್‌ ಇಂಜೆಕ್ಷನ್‌ನ ಗರಿಷ್ಠ ದರ 90.38 ರೂಪಾಯಿ ಆಗಿದೆ. ಇನ್ನು ಡಯಾಬಿಟಿಕ್ ರೋಗಿಗಳ (ಮಧುಮೇಹ ರೋಗಿಗಳು) ಔಷಧಿಯ ದರವನ್ನು ಕೂಡಾ ಪರಿಷ್ಕರಣೆ ಮಾಡಲಾಗಿದೆ. 2013ರ ಡ್ರಗ್ ಪ್ರೈಸ್ ಕಂಟ್ರೋಲ್ ಆರ್ಡರ್ (ಡಿಪಿಸಿಒ) ಅಡಿಯಲ್ಲಿ ಎನ್‌ಪಿಪಿಎ 12 ಬೇರೆ ಬೇರೆ ಫಾರ್ಮೂಲೇಷನ್‌ನ ಔಷಧಿಗಳ ದರವನ್ನು ಪರಿಷ್ಕರಿಸಿದೆ.

ಮಧುಮೇಹ ಹೊಂದಿರುವ ರೋಗಿಗಳಿಗೆ ನೀಡಲಾಗುವ ಗ್ಲಿಮೆಪಿರೈಡ್, ವೋಗ್ಲಿಬೋಸ್, ಮೆಟ್‌ಫಾರ್ಮಿನ್ ಔಷಧಿಯ ದರವನ್ನು 13.83 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇದು ಒಂದು ಔಷಧಿಯ ದರವಾಗಿದೆ.

1997ರಲ್ಲಿ ನ್ಯಾಷನಲ್ ಫಾರ್ಮಾಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‌ಪಿಪಿಎ) ಸ್ಥಾಪನೆಯಾಗಿದ್ದು, ಫಾರ್ಮಾ ಉತ್ಪನ್ನಗಳ ದರವನ್ನು ನಿಗದಿ ಪಡಿಸುವ ಅಥವಾ ಪರಿಷ್ಕರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಹಾಗೆಯೇ ಡಿಪಿಸಿಒ ನಿಬಂಧನೆಯನ್ನು ಜಾರಿ ಮಾಡುವುದು, ಅದರ ನಿರ್ವಹಣೆ ಮಾಡುವುದು, ಔಷಧಿ ದರವನ್ನು ನಿಯಂತ್ರಿಸುವುದು ಕೂಡಾ ಇದರ ಹೊಣೆಯಾಗಿದೆ. ಈ ಮೇಲೆ ಉಲ್ಲೇಖ ಮಾಡಿರುವ ಎಲ್ಲ ದರಗಳು ಕೂಡಾ ಜಿಎಸ್‌ಟಿ ರಹಿತವಾಗಿದೆ. ಜಿಎಸ್‌ಟಿ ಸೇರ್ಪಡೆಯಾದಾಗ ಈ ಔಷಧಿಗಳ ದರ ಹೆಚ್ಚಾಗಲಿದೆ.

English summary

NPPA fixes new prices for 128 medicines, including Ibuprofen and Paracetamol, detail here

The government of India has recently revised the prices of 128 different medicines, including antibiotics and antiviral drugs. detail here in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X