For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಪಿಪಿಎಫ್ ಆಯ್ಕೆ ಮಾಡಿಕೊಳ್ಳಿ, ಒಂದು ಕೋಟಿ ರೂ.ಗಳಿಸಿ

|

ಬೆಂಗಳೂರು ಜನವರಿ 08: ನೀವು ಕೋಟ್ಯಾಧಿಪತಿಯಾಗಲು ಬಯಸುತ್ತೀರಾ? ಕೋಟಿ ಸಂಪಾದನೆ ಹೇಗೆ ಮಾಡುವುದು ಎಂದು ನೀವು ಯೋಚಿಸುತ್ತಿದ್ದೀರಾ?.ಇದು ಸಾಧ್ಯ. ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಹೌದು ಇದೀಗ ಮೇಲ್ಮಧ್ಯಮ ವರ್ಗದವರು ಇಲ್ಲವೇ ಕೋಟಿ ಗಳಿಸುವ ಆಸೆ ಇರುವವರು ಕೋಟಿ ಗೆಲ್ಲಬಹುದು. ಅದಕ್ಕೆ ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ (PPF) ನೆರವಾಗಲಿದೆ. ಇದು ಹಣಕಾಸಿನ ಗುರಿಗಳಲ್ಲಿ ಒಂದು ದಾರಿಯಾಗಿದೆ. ನೀವು ನಿಮ್ಮ ಮಾಸಿಕ ವೇತನದ ಒಂದು ಭಾಗವನ್ನು ಸಾರ್ವಜನಿಕ ಭವಿಷ್ಯ ನಿಧಿಗೆ ಮೀಸಲಿಡಬಹುದು.

 ಫಿಫ್ಟಿ ಫಿಫ್ಟಿ FF 31: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ ಫಿಫ್ಟಿ ಫಿಫ್ಟಿ FF 31: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

ಈ ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿ ಕೋಟಿ ಗಳಿಸಲು ಉತ್ತಮ ಆಯ್ಕೆಯಾಗಿದ್ದು, ಸುರಕ್ಷಿತ ಹೂಡಿಕೆಯು ಆಗಿದೆ.

ಅಂಚೆ ಕಚೇರಿ ಪಿಪಿಎಫ್ ಆಯ್ಕೆ ಮಾಡಿಕೊಳ್ಳಿ, ಒಂದು ಕೋಟಿ ರೂ.ಗಳಿಸಿ

ಈ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ನಿಮಗೆ ವಾರ್ಷಿಕ 7.1 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯು ಹೂಡಿಕೆದಾರರಿಗೆ ಸಂಯುಕ್ತ ಬಡ್ಡಿಯ ಲಾಭವನ್ನು ಒಸಗಿಸುತ್ತದೆ. ಇದರ ಮೆಚ್ಯೂರಿಟಿ ಅವಧಿಯು 15 ವರ್ಷಗಳು. ಒಪ್ಪಿಗೆ ಇದ್ದಲ್ಲಿ 15ವರ್ಷದ ನಂತರ ಇನ್ನೂ 10 ವರ್ಷಗಳವರೆಗೆ ಹೂಡಿಕೆ ವಿಸ್ತರಿಸಬಹುದು. ಮುಖ್ಯ ಈ ಯೋಜನೆಯಡಿ ಹೂಡಕೆ ಮಾಡವವರಿಗೆ ಆದಾಯ ತೆರಿಗೆ ವಿನಾಯಿತಿಗಳ ಪ್ರಯೋಜನ ಸಹ ಇದೆ.

ಕೋಟ್ಯಾಧಿಪತಿಯಾಗಲು ನೀವು ವರ್ಷಕ್ಕೆ 1.5 ಲಕ್ಷ ರೂ, ತಿಂಗಳಿಗೆ 12500 ರೂ. ದೈನಂದಿನ ಅಂಕಿ ಅಂಶಗಳಲ್ಲಿ ನೋಡುವದಾದರೆ ಪ್ರತಿದಿನಕ್ಕೆ 417 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 15 ವರ್ಷಗಳ ನಂತರ 22.50 ಲಕ್ಷ ರೂ. ಆಗುತ್ತದೆ. ಯೋಜನೆಯಡಿ ನಿಮಗೆ ಶೇ.7.1 ರ ದರದಲ್ಲಿ ಬಡ್ಡಿಯನ್ನು ಸೇರಿಸಿದರೆ, ಒಬ್ಬ ವ್ಯಕ್ತಿಯು 18.18 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಡೆಯುತ್ತಾನೆ.

ಅಂದರೆ 15 ವರ್ಷಗಳ ನಂತರ ನಿಮ್ಮ ಬಳಿ 41 ಲಕ್ಷ ರೂ. ನೀವು ಈ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಮುಂದಿನ 10 ವರ್ಷಗಳವರೆಗೆ ವರ್ಷಕ್ಕೆ 1.5 ಲಕ್ಷ ರೂಪಾಯಿಗಳನ್ನು ಸೇರಿಸಬಹುದು. ಆಗ ನೀವು ಹೂಡಿದ ಮೊತ್ತ 66 ಲಕ್ಷ ರೂ. ನೀವು ಬಡ್ಡಿಯನ್ನು ಸೇರಿಸಿದರೆ, 25 ವರ್ಷಗಳ ಹೂಡಿಕೆಯ ನಂತರ, ನೀವು ಕೋಟ್ಯಾಧಿಪತಿಯಾಗಬಹುದು.

ಅಂಚೆ ಕಚೇರಿ ಪಿಪಿಎಫ್ ಆಯ್ಕೆ ಮಾಡಿಕೊಳ್ಳಿ, ಒಂದು ಕೋಟಿ ರೂ.ಗಳಿಸಿ

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ನಿಮಗೆ ಖಾತರಿ ಆದಾಯವನ್ನು ನೀಡುತ್ತದೆ. ಈ ಪಿಪಿಎಫ್ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್ ಶಾಖೆಯ ಮೂಲಕ ತೆರೆಯಬಹುದು. ಆದರೆ ಜಂಟಿ ಖಾತೆ ತೆರೆಯಲು ಅವಕಾಶ ಇಲ್ಲ ಎನ್ನಲಾಗಿದೆ. ಭಾರತೀಯ ನಾಗರಿಕರು ಮಾತ್ರ ಪೋಸ್ಟ್ ಆಫೀಸ್ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅನಿವಾಸಿ ಭಾರತೀಯರು ಈ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.

English summary

One crore Rupees earn by post Office PPF Scheme

One crore Rupees earn by post Office Public Provident Fund Scheme (PPF). How to invest in PPF, Know more,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X