For Quick Alerts
ALLOW NOTIFICATIONS  
For Daily Alerts

20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟಿಗೆ ಪ್ಯಾನ್, ಆಧಾರ್ ಕಡ್ಡಾಯ

|

ಸರ್ಕಾರವು ಮೇ 10, 2022 ರಂದು ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ರ್ಕಾರವು ವಿಶೇಷವಾಗಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅಥವಾ ಆಧಾರ್ ಇಲ್ಲದೆ ಹಣಕಾಸಿನ ವಹಿವಾಟು ಮಾಡುವವರಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಹೊರತಂದಿದೆ.

 

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಆದಾಯ-ತೆರಿಗೆ (ಹದಿನೈದನೇ ತಿದ್ದುಪಡಿ) ನಿಯಮಗಳು, 2022 ಎಂಬ ಹೊಸ ನಿಯಮಗಳನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ, ಕೆಲವು ವಹಿವಾಟುಗಳಿಗೆ ಪ್ಯಾನ್ ಅಥವಾ ಆಧಾರ್ ಅನ್ನು ಒದಗಿಸುವುದು ಕಡ್ಡಾಯವಾಗಿದೆ.

 

ಎಲ್‌ಐಸಿಗೆ ಪ್ಯಾನ್‌, ಆಧಾರ್‌ ಶೀಘ್ರ ಅಪ್‌ಡೇಟ್‌ ಮಾಡಿಕೊಳ್ಳಿ: ಇಲ್ಲಿದೆ ವಿವರಎಲ್‌ಐಸಿಗೆ ಪ್ಯಾನ್‌, ಆಧಾರ್‌ ಶೀಘ್ರ ಅಪ್‌ಡೇಟ್‌ ಮಾಡಿಕೊಳ್ಳಿ: ಇಲ್ಲಿದೆ ವಿವರ

(ಎ) ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹೊಂದಿರುವ ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ರೂ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಠೇವಣಿ ವೇಳೆ ಪ್ಯಾನ್ ಅಥವಾ ಆಧಾರ್ ಕಡ್ಡಾಯವಾಗಿದೆ.

 20 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟಿಗೆ ಪ್ಯಾನ್, ಆಧಾರ್ ಕಡ್ಡಾಯ

(ಬಿ) ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹೊಂದಿರುವ ವ್ಯಕ್ತಿಯ ಒಂದು ಅಥವಾ ಹೆಚ್ಚಿನ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ರೂ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಹಿಂಪಡೆಯುವಿಕೆ ವೇಳೆ ಆಧಾರ್ ಅಥವಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

(ಸಿ) ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹೊಂದಿರುವ ವ್ಯಕ್ತಿಯು ಕರೆಂಟ್ ಅಕೌಂಟ್ ಅಥವಾ ನಗದು ಕ್ರೆಡಿಟ್ ಖಾತೆಯನ್ನು ತೆರೆಯುವಾಗ ಪ್ಯಾನ್ ಅಥವಾ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ನಂಗಿಯಾ ಮತ್ತು ಕೋ ಎಲ್‌ಎಲ್‌ಪಿ ಪಾಲುದಾರ ಶೈಲೇಶ್ ಕುಮಾರ್, "ದೊಡ್ಡ ವಹಿವಾಟುಗಳಿಗೆ ಪ್ರವೇಶಿಸಬಹುದಾದ ಆದರೆ ಪ್ಯಾನ್ ಹೊಂದಿರದ ಜನರನ್ನು ಈಗ ತೆರಿಗೆ ಅಡಿಯಲ್ಲಿ ತರಲು ಸರ್ಕಾರವು ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡ ಮೊತ್ತದ ವಹಿವಾಟುಗಳನ್ನು ನಡೆಸುವವರಿಗೆ ಪ್ಯಾನ್ ಅಥವಾ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಜನರಲ್ಲಿ ತೆರಿಗೆಗೆ ಒಳಪಡುವ ಆದಾಯವಿರಬಹುದು. ಹೊಂದಿರದೆಯೂ ಇರಬಹುದು. ಆದರೆ ಈಗ ಪ್ಯಾನ್ ಕಡ್ಡಾಯವಾಗಿದೆ," ಎಂದು ತಿಳಿಸಿದ್ದಾರೆ.

"ಅಂತಹ ವ್ಯಕ್ತಿಯು ಒಮ್ಮೆ ಪ್ಯಾನ್ ಅನ್ನು ಉಲ್ಲೇಖಿಸಿದರೆ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ತೆರಿಗೆ ಅಧಿಕಾರಿಗಳಿಗೆ ಸುಲಭವಾಗುತ್ತದೆ. ವ್ಯಕ್ತಿಯು ಆದಾಯದ ರಿಟರ್ನ್ ಸಲ್ಲಿಸುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಅದು ಅವರಿಗೆಯೇ ಕಷ್ಟಕರವಾಗಬಹುದು," ಎಂದು ಕೂಡಾ ಹೇಳಿದ್ದಾರೆ.

English summary

PAN, Aadhaar made mandatory for cash deposits or withdrawals above Rs 20 lakh

PAN, Aadhaar made mandatory for cash deposits or withdrawals above Rs 20 lakh. 20
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X