For Quick Alerts
ALLOW NOTIFICATIONS  
For Daily Alerts

Alert: ಈ ಬ್ಯಾಂಕ್‌ಗಳ ಚೆಕ್‌ಬುಕ್‌ ಏಪ್ರಿಲ್ 1, 2021ರಿಂದ ಅಮಾನ್ಯವಾಗಲಿದೆ!

|

ನೀವು ಚೆಕ್‌ ಮೂಲಕ ವ್ಯವಹಾರ ಮಾಡುತ್ತಿದ್ದರೆ ಈ ಸುದ್ದಿ ಒಮ್ಮೆ ಓದಲೇಬೇಕು, ಏಕೆಂದರೆ ಏಪ್ರಿಲ್ 1, 2021ರಿಂದ ಎಂಟು ಬ್ಯಾಂಕ್‌ಗಳ ಹಳೆ ಚೆಕ್‌ಬುಕ್, ಪಾಸ್‌ ಬುಕ್‌ ಅಮಾನ್ಯವಾಗಲಿದೆ. ಹೀಗಾಗಿ ನೀವು ಹೊಸ ಚೆಕ್‌ಬುಕ್ ಹಾಗೂ ಪಾಸ್‌ಬುಕ್‌ಗಾಗಿ ಅರ್ಜಿ ಸಲ್ಲಿಸಬೇಕಿದೆ.

ಕೇಂದ್ರ ಸರ್ಕಾರವು ಆರ್‌ಬಿಐ ಜೊತೆಗೂಡಿ ಎಂಟು ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ ಬಳಿಕ ಆ ಬ್ಯಾಂಕಿನ ಗ್ರಾಹಕರು ಹೊಸ ಚೆಕ್‌ಬುಕ್‌, ಪಾಸ್‌ಬುಕ್‌ ಪಡೆಯಬೇಕಾಗುತ್ತದೆ.

ಯಾವೆಲ್ಲಾ ಬ್ಯಾಂಕ್‌ಗಳು?

ಯಾವೆಲ್ಲಾ ಬ್ಯಾಂಕ್‌ಗಳು?

ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಒರಿಯೇಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್ ಗ್ರಾಹಕರು ಹೊಸ ಪಾಸ್‌ಬುಕ್, ಚೆಕ್ ಪಡೆಯಬೇಕಿದೆ.

ಏಪ್ರಿಲ್ 2021 ರಿಂದ ಹಳೆಯ ಚೆಕ್‌ಬುಕ್ ಅಮಾನ್ಯವಾಗಲಿದೆ!

ಏಪ್ರಿಲ್ 2021 ರಿಂದ ಹಳೆಯ ಚೆಕ್‌ಬುಕ್ ಅಮಾನ್ಯವಾಗಲಿದೆ!

ಮುಂದಿನ ತಿಂಗಳಿನಿಂದ, ಈ ವಿಲೀನಗೊಂಡ ಎಂಟು ಬ್ಯಾಂಕುಗಳ ಗ್ರಾಹಕರ ಖಾತೆ ಸಂಖ್ಯೆಗಳು ಬದಲಾಗುತ್ತವೆ. ಹೀಗಾಗಿ ಈ ಬ್ಯಾಂಕುಗಳ ಖಾತೆದಾರರು ಹೊಸ ಚೆಕ್ ಬುಕ್ ಮತ್ತು ಪಾಸ್‌ಬುಕ್ ಪಡೆಯಬೇಕಾಗಿರುವುದರಿಂದ ಹಿಂದಿನವುಗಳು 1 ಏಪ್ರಿಲ್ 2021 ರಿಂದ ಅಮಾನ್ಯವಾಗುತ್ತವೆ

ಗ್ರಾಹಕರನ್ನ ಎಚ್ಚರಿಸಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್

ಗ್ರಾಹಕರನ್ನ ಎಚ್ಚರಿಸಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್

ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಈಗಾಗಲೇ ಅಸ್ತಿತ್ವದಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ಬುಕ್‌ಗಳನ್ನು ಏಪ್ರಿಲ್ 1 ರಿಂದ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿತ್ತು, ಏಕೆಂದರೆ ಅವುಗಳು 2021 ರ ಮಾರ್ಚ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ.

ಹೊಸ IFSC, MICR ಕೋಡ್‌

ಹೊಸ IFSC, MICR ಕೋಡ್‌

ವಿಲೀನಗೊಂಡ ಬ್ಯಾಂಕ್‌ಗಳ ಗ್ರಾಹಕರು ಕೇವಲ ಚೆಕ್‌ಬುಕ್, ಪಾಸ್‌ ಬುಕ್‌ ಅಷ್ಟೇ ಅಲ್ಲದೆ ಅಕೌಂಟ್ ನಂಬರ್ ಜೊತೆಗೆ ಹೊಸ ಐಎಫ್‌ಎಸ್‌ಸಿ ಕೋಡ್, ಎಂಐಸಿಆರ್‌ ಕೋಡ್ ಅನ್ನು ಪಡೆಯಬೇಕಾಗುತ್ತದೆ.

ಈ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು?

ಈ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು?

ಮೇಲ್ಕಂಡ ಬ್ಯಾಂಕುಗಳಲ್ಲದೆ, ಯಾವುದೇ ಬ್ಯಾಂಕ್ ಈ ರೀತಿ ನಿಯಮ ಜಾರಿಗೆ ತಂದರೆ, ಗ್ರಾಹಕರು ಮೊದಲಿಗೆ ತಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಅವಲಂಬಿತದ ಹೆಸರು ..ಇತ್ಯಾದಿ ವಿವರ ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಂತರ ಚೆಕ್ ಬುಕ್, ಪಾಸ್ ಬುಕ್ ವಿಲೀನಗೊಂಡ ಬ್ಯಾಂಕಿನಿಂದಲೇ ಪಡೆದುಕೊಳ್ಳಬೇಕು.

ಹೊಸ ಚೆಕ್‌ಬುಕ್ ಮತ್ತು ಪಾಸ್‌ಬುಕ್ ಪಡೆದ ನಂತರ, ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ವಿವಿಧ ಹಣಕಾಸು ಸಾಧನಗಳಲ್ಲಿ ದಾಖಲಿಸಬೇಕಾಗುತ್ತದೆ.

 

English summary

Passbook And Cheque Book Of These Banks To Become Invalid From April 1

Customers of eight banks which had merged with other bigger lenders should note that from next month onwards their bank account numbers are expected to change.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X