For Quick Alerts
ALLOW NOTIFICATIONS  
For Daily Alerts

ಉಚಿತ ಗ್ಯಾಸ್ ಸಿಲಿಂಡರ್ ಬೇಕೆ? ಇಲ್ಲಿ ಓದಿ...ಹೀಗೆ ಮಾಡಿ

|

ಈ ಬೆಲೆ ಏರಿಕೆಯ ನಡುವೆ ಜನರು ತಿಂಗಳ ಬಜೆಟ್ ಅನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ಒದ್ದಾಡುವಂತಾಗಿದೆ. ಎಲ್‌ಪಿಜಿ ಬೆಲೆ ಏರಿಕೆಯು ನಮ್ಮ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ನಡುವೆ ಜನರಿಗೆ ಕೊಂಚ ರಿಲೀಫ್ ನೀಡುವ ಸುದ್ದಿ ಇದೆ. ಜನರು ಉಚಿಯ ಎಲ್‌ಪಿಜಿ ಸಿಲಿಂಡರ್ ಅನ್ನು ಪಡೆಯುವ ಆಫರ್ ಇದೆ.

ಭಾರತದ ಪ್ರಮುಖ ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಕಂಪನಿಯಾದ ಪೇಟಿಎಂ ಬ್ರ್ಯಾಂಡ್ ಅನ್ನು ಹೊಂದಿರುವ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಒಸಿಎಲ್) ಇಂದು ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಪಾವತಿಗಳ ಮೇಲೆ ಎರಡು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ. ಎರಡು ಕೊಡುಗೆಗಳು ಈಗಾಗಲೇ ಪೇಟಿಎಂ ಅಪ್ಲಿಕೇಶನ್‌ನಲ್ಲಿ ಇದೆ.

 ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಪೇಟಿಎಂಗೆ ನಿರಾಶೆ: 15 ನಿಮಿಷದಲ್ಲೇ ಷೇರು ಪಾತಾಳಕ್ಕೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಪೇಟಿಎಂಗೆ ನಿರಾಶೆ: 15 ನಿಮಿಷದಲ್ಲೇ ಷೇರು ಪಾತಾಳಕ್ಕೆ

ಈ ಆಫರ್ ಪೇಟಿಎಂನ ಹೊಸ ಬಳಕೆದಾರರಿಗೆ ಲಭ್ಯವಾಗಲಿದೆ. ಹೊಸ ಬಳಕೆದಾರರು ಈ ಕೊಡುಗೆಯನ್ನು ಮೊದಲ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ವೇಳೆ ನೀಡಲಿದೆ. ನಿಮ್ಮ ಮೊದಲ ಬುಕ್ಕಿಂಗ್‌ನಲ್ಲಿ ರೂ 50-ರೂ 1,000 ಕ್ಯಾಶ್‌ಬ್ಯಾಕ್ ಗೆಲ್ಲಲು ಸಾಧ್ಯವಾಗಲಿದೆ.

 ಉಚಿತ ಗ್ಯಾಸ್ ಸಿಲಿಂಡರ್ ಬೇಕೆ? ಇಲ್ಲಿ ಓದಿ...ಹೀಗೆ ಮಾಡಿ

ಈ ಕ್ಯಾಶ್‌ಬ್ಯಾಕ್‌ ಪಡೆಯುವುದು ಹೇಗೆ?

ಈ ಕ್ಯಾಶ್‌ಬ್ಯಾಕ್ ಪಡೆಯಲು ವಹಿವಾಟಿನ ಸಮಯದಲ್ಲಿ ಪ್ರೋಮೋ ಕೋಡ್ 'FIRSTGAS' ಅನ್ನು ನಮೂದಿಸಬೇಕು. ಇತರ ಕ್ಯಾಶ್‌ಬ್ಯಾಕ್ ಕೊಡುಗೆಯು ಅಸ್ತಿತ್ವದಲ್ಲಿರುವ ಎಲ್ಲಾ ಬಳಕೆದಾರರಿಗೆ ಅನ್ವಯಿಸುತ್ತದೆ. ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡುವಾಗ ಅಥವಾ ಪೇಟಿಎಂ ಮೂಲಕ ಅಸ್ತಿತ್ವದಲ್ಲಿರುವ ಬುಕಿಂಗ್‌ಗೆ ಪಾವತಿಸುವಾಗ ಪ್ರೋಮೋ ಕೋಡ್ 'GAS1000' ಅನ್ನು ನಮೂದಿಸುವ ಮೂಲಕ ರೂ 10-ರೂ 1,000 ಕ್ಯಾಶ್‌ಬ್ಯಾಕ್ ಗೆಲ್ಲಬಹುದು.

ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ

ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ ನಿಮ್ಮ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ.
ಹಂತ 2: ರೀಚಾರ್ಜ್ ಮತ್ತು ಬಿಲ್ ಪಾವತಿ ವಿಭಾಗದ ಅಡಿಯಲ್ಲಿ 'ಬುಕ್ ಗ್ಯಾಸ್ ಸಿಲಿಂಡರ್' ಟ್ಯಾಬ್‌ಗೆ ಹೋಗಿ
ಹಂತ 3: ಇದು ನಿಮಗೆ ಗ್ಯಾಸ್ ಪೂರೈಕೆದಾರರನ್ನು ಆಯ್ಕೆ ಮಾಡಿ
ಹಂತ 4: ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಎಲ್‌ಪಿಜಿ ಐಡಿ ಅಥವಾ ಗ್ರಾಹಕ ಸಂಖ್ಯೆಯನ್ನು ನಮೂದಿಸಿ
ಹಂತ 5: ನಂತರ, ಪೇಟಿಎಂ ವಾಲೆಟ್, ಪೇಟಿಎಂ ಯುಪಿಐ, ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್‌ನಂತಹ ನಿಮ್ಮ ಆದ್ಯತೆಯ ಮೋಡ್‌ಗಳನ್ನು ಬಳಸಿಕೊಂಡು ಪಾವತಿಸಿ. ಅಲ್ಲದೆ, ಕೂಪನ್ ಕೋಡ್ ವಿಭಾಗದಲ್ಲಿ ಪ್ರೋಮೋ ಕೋಡ್ 'FREEGAS' ಅನ್ನು ಸೇರಿಸಿ
ಹಂತ 6: ಪಾವತಿಯನ್ನು ಪೂರ್ಣಗೊಳಿಸಿದರೆ ನಿಮ್ಮ ನೋಂದಾಯಿತ ವಿಳಾಸಕ್ಕೆ ಸಿಲಿಂಡರ್ ಬರಲಿದೆ

ಈ ಬಗ್ಗೆ ಮಾಹಿತಿ ನೀಡಿರುವ ಪೇಟಿಎಂ, "ಪೇಟಿಎಂನಲ್ಲಿ ನಮ್ಮ ವೈವಿಧ್ಯಮಯ ಪಾವತಿಗಳು ಮತ್ತು ಹಣಕಾಸು ಸೇವೆಗಳೊಂದಿಗೆ ಬಳಕೆದಾರರನ್ನು ಅವರ ದೈನಂದಿನ ಜೀವನದಲ್ಲಿ ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ. ಎಲ್ಲಾ ರೀತಿಯ ಉಪಯುಕ್ತತೆಗಳ ಪಾವತಿಗಳಿಂದ ಹಿಡಿದು ಸಾಲಗಳು, ಆರೋಗ್ಯ ಸೇವೆಗಳು ಮತ್ತು ಹೆಚ್ಚಿನವುಗಳನ್ನು ನಾವು ನೀಡಲು ಬದ್ಧರಾಗಿದ್ದೇವೆ. ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಮತ್ತು ನಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಪಾವತಿಗಳ ಮೇಲೆ ನಾವು ಎರಡು ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಪರಿಚಯಿಸಿದ್ದೇವೆ," ಎಂದು ತಿಳಿಸಿದೆ.

 ಉಚಿತ ಗ್ಯಾಸ್ ಸಿಲಿಂಡರ್ ಬೇಕೆ? ಇಲ್ಲಿ ಓದಿ...ಹೀಗೆ ಮಾಡಿ

"ದೇಶಾದ್ಯಂತ ಹೆಚ್ಚುತ್ತಿರುವ ಗ್ಯಾಸ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದೇವೆ. ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಗಳು, ನಮ್ಮ ತಡೆರಹಿತ ಬುಕಿಂಗ್ ಮತ್ತು ಗ್ಯಾಸ್ ಸಿಲಿಂಡರ್‌ಗಳಿಗೆ ಪಾವತಿ ಸೌಲಭ್ಯದೊಂದಿಗೆ ಸೇರಿ, ನಮ್ಮ ಗ್ರಾಹಕರಿಗೆ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತವೆ," ಎಂದು ಉಲ್ಲೇಖ ಮಾಡಿದೆ.

ಪೇಟಿಎಂ ಆಪ್‌ ಮೂಲಕ 2 ಕೋಟಿಗೂ ಹೆಚ್ಚು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್

ಪೇಟಿಎಂ ಆಪ್ ಮೂಲಕ 2 ಕೋಟಿಗೂ ಹೆಚ್ಚು ಗ್ಯಾಸ್ ಸಿಲಿಂಡರ್ ವಿತರಣೆಯನ್ನು ಪೂರ್ಣಗೊಳಿಸಲಾಗಿದೆ. ಇದು ದೇಶಾದ್ಯಂತ ಬಳಕೆದಾರರಲ್ಲಿ ಅದರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆಯು ಹೇಳಿದೆ. ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವುದರ ಹೊರತಾಗಿ, ದೇಶಾದ್ಯಂತ 25 ಕ್ಕೂ ಹೆಚ್ಚು ಪೂರೈಕೆದಾರರು ನೀಡುವ ಪೈಪ್ಡ್ ಗ್ಯಾಸ್ ಸಂಪರ್ಕಗಳಿಗೆ ಪಾವತಿಸಲು ಪೇಟಿಎಂ ಬಳಕೆ ಮಾಡಬಹುದು.

English summary

Paytm Offers Exciting Cashback of Upto ₹1,000 on LPG Cylinder Bookings

Paytm Offers Exciting Cashback of Upto ₹1,000 on LPG Cylinder Bookings to help citizens amid rising prices.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X