For Quick Alerts
ALLOW NOTIFICATIONS  
For Daily Alerts

CIBIL ಸ್ಕೋರ್ ಉಚಿತವಾಗಿ ಪರಿಶೀಲಿಸುವುದು ಹೇಗೆ?

|

ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಸಿಗುತ್ತದೋ ಇಲ್ಲವೋ ಎಂಬುದು ಕ್ರೆಡಿಟ್ ಸ್ಕೋರ್ ಮೇಲೆ ಆಧಾರವಾಗಿ ಇರುತ್ತದೆ. ಅದನ್ನು ತಿಳಿಯುವುದಕ್ಕೆ CIBIL ಸ್ಕೋರ್ ಎಂಬುದನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸಿಬಿಲ್ ಸ್ಕೋರ್ ಎಂಬುದು ಒಬ್ಬ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯವನ್ನು ಅಳೆಯುವುದಕ್ಕೆ ಮೂರಂಕಿಯ ಸಾಧನ.

ಈ ಮೂಲಕ ಒಬ್ಬ ವ್ಯಕ್ತಿಯ ಸಾಲದ ಇತಿಹಾಸ ಕೂಡ ತಿಳಿಯಬಹುದು. ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಯ ಈ ಹಿಂದಿನ ಹಣಕಾಸು ವ್ಯವಹಾರಗಳ ಬಗ್ಗೆ ಸಿಬಿಲ್ ಜತೆಗೆ ಮಾಹಿತಿ ಹಂಚಿಕೊಂಡಿರುತ್ತವೆ. ಸಿಬಿಲ್ ಸ್ಕೋರ್ 300ರಿಂದ 900ರ ಮಧ್ಯೆ ಇರುತ್ತದೆ.

ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಅತಿ ಹೆಚ್ಚು ಸಿಬಿಲ್ ಸ್ಕೋರ್ ಅಂದರೆ 900. ಇಷ್ಟು ಪ್ರಮಾಣದಲ್ಲಿ ಸ್ಕೋರ್ ಇರುವಾಗ ಸಾಲವು ಸುಲಭವಾಗಿ ದೊರೆಯುತ್ತದೆ. ಅಂದಹಾಗೆ ಭಾರತದಲ್ಲಿ ನಾಲ್ಕು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಇದ್ದು, ಅದರಲ್ಲಿ ಸಿಬಿಲ್ ಕೂಡ ಒಂದು. ಈ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.

CIBIL ಸ್ಕೋರ್ ಉಚಿತವಾಗಿ ಪರಿಶೀಲಿಸುವುದು ಹೇಗೆ?

ಉಚಿತ ಖಾತೆ ಹೊಂದಿದ್ದಲ್ಲಿ ವರ್ಷಕ್ಕೆ ಒಮ್ಮೆ ಪರಿಶೀಲಿಸಿಕೊಳ್ಳಬಹುದು. ಅಥವಾ ಪ್ರೀಮಿಯಂ ಪ್ಯಾಕೇಜ್ ಸಬ್ ಸ್ಕ್ರಿಪ್ಷನ್ ಖರೀದಿ ಮಾಡಿದ್ದಲ್ಲಿ ಅದರ ಮೂಲಕವೂ ಮಾಡಬಹುದು. ಈ ಪ್ರೀಮಿಯಂ ಪ್ಯಾಕೇಜ್ ನಲ್ಲಿ ಇತರ ಅನುಕೂಲಗಳು ಇರುತ್ತವೆ. ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುವುದು ಹೇಗೆ ಎಂಬುದು ಹಂತ ಹಂತವಾಗಿ ವಿವರಿಸಲಾಗಿದೆ.

* ಅಧಿಕೃತ ವೆಬ್ ಸೈಟ್ CIBIL (https://www.cibil.com/) ಮತ್ತು ಬಲ ಭಾಗದ ತುದಿಯಲ್ಲಿ "Get your CIBIL Score" ಎಂಬುದರ ಮೇಲೆ ಕ್ಲಿಕ್ ಮಾಡಿ.

* ಈಗ ಸಬ್ ಸ್ಕ್ರಿಪ್ಷನ್ ಆಯ್ಕೆ ತೆರೆದುಕೊಳ್ಳುತ್ತದೆ. ಅಲ್ಲಿ 'Free Annual CIBIL Score and Report Online' ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

* ಖಾತೆ ತೆರೆಯುವ ಸಲುವಾಗಿ ನಿಮ್ಮ ಇಮೇಲ್ ID, ಹೆಸರು, ಪಾಸ್ ವರ್ಡ್, ಐಡಿ ದೃಢೀಕರಣ(PAN ಕಾರ್ಡ್, ಮತದಾನ ಗುರುತಿನ ಚೀಟಿ, ಆಧಾರ್), ಜನ್ಮ ದಿನಾಂಕ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು.

* ಒಂದು ಸಲ ಈ ಮಾಹಿತಿ ತುಂಬಿದ ನಂತರ 'ACCEPT & CONTINUE' ಮೇಲೆ ಕ್ಲಿಕ್ ಮಾಡಿ.

* ಮುಂದಿನ ಪುಟದಲ್ಲಿ ಮಾಹಿತಿಯನ್ನು ಖಾತ್ರಿ ಪಡಿಸಲು ಮೊಬೈಲ್ ಮೂಲಕ ಬರುವ OTPಯನ್ನು ನಮೂದಿಸಬೇಕು.

* 'Continue' ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಯಶಸ್ವಿಯಾಗಿ ನೋಂದಣಿ ಮಾಡಿದ ಮೇಲೆ ಮೇಲ್ ಐಡಿಗೆ ಮಾಹಿತಿ ಬರುತ್ತದೆ.

* 'GO TO DASHBOARD' ಕ್ಲಿಕ್ ಮಾಡಿದರೆ CIBIL ಸ್ಕೋರ್ ಪರಿಶೀಲಿಸಬಹುದು.

* ಈಗ (myscore.cibil.com) ನಿಮ್ಮ CIBIL ಸ್ಕೋರ್ ಮತ್ತು CIBIL ವರದಿಗಳನ್ನು ಉಚಿತವಾಗಿ ಪರಿಶೀಲಿಸುವ ಪುಟಕ್ಕೆ ತೆರಳುತ್ತೀರಿ.

ಒಂದು ಸಲ ನೋಂದಣಿ ಪ್ರಕ್ರಿಯೆ ಸಂಪೂರ್ಣ ಆದ ಮೇಲೆ ಖಾತೆಯ ಮಾಹಿತಿ ಬಳಸಿ ನಿಮ್ಮ CIBIL ಸ್ಕೋರ್ ಮಾಹಿತಿ ಪರಿಶೀಲಿಸಬಹುದು. ಅದಕ್ಕಾಗಿ ಇಮೇಲ್ ಹಾಗೂ ಪಾಸ್ ವರ್ಡ್ ಬಳಬಹುದು. ಅದಕ್ಕಾಗಿ ವೆಬ್ ಸೈಟ್: https://myscore.cibil.com/ ಭೇಟಿ ನೀಡ್ ಮತ್ತು 'Member Login' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಇದಕ್ಕಾಗಿ ಪ್ಲಾನ್ ಆಯ್ಕೆ ಮಾಡಿಕೊಂಡು, ಸಬ್ ಸ್ಕ್ರೈಬ್ ಆಗಬೇಕು. ಅಗತ್ಯಕ್ಕೆ ತಕ್ಕಂತೆ ನಿಮ್ಮ CIBIL ಸ್ಕೋರ್ ಅನ್ನು ಮತ್ತೆ ಅದೇ ಆರ್ಥಿಕ ವರ್ಷದಲ್ಲಿ ಪರಿಶೀಲಿಸಬಹುದು.

English summary

Personal Finance: How To Check Your CIBIL Score For Free?

Here is the details of how to check your CIBIL score for free. explianer article about personal finance.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X