For Quick Alerts
ALLOW NOTIFICATIONS  
For Daily Alerts

ಮೊಬೈಲ್‌ ರೀಚಾರ್ಜ್‌ಗೆ ಫೋನ್‌ ಪೇ ವಿಧಿಸುತ್ತೆ ಶುಲ್ಕ, ಎಷ್ಟು?

|

ಈ ಹಿಂದೆ ನಾವು ಮೊಬೈಲ್‌ ರೀಚಾರ್ಜ್‌ ಶಾಪ್‌ಗಳಲ್ಲಿ ಮೊಬೈಲ್‌ಗೆ ರೀಚಾರ್ಜ್‌ ಮಾಡುವುದಾದರೆ ಕೆಲವು ಶಾಪ್‌ಗಳಲ್ಲಿ ಒಂದು ರೂಪಾಯಿ ಅಧಿಕ ಹಣವನ್ನು ನಮ್ಮಿಂದ ಅಧಿಕವಾಗಿ ಪಡೆಯುತ್ತಿದ್ದರು. ಆದರೆ ಈಗ ಆನ್‌ಲೈನ್‌ನಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡುವುದಕ್ಕೆ ದರ ವಿಧಿಸಲು ಫೋನ್‌ ಪೇ ಮುಂದಾಗಿದೆ. ಈ ಮೂಲಕ ಆನ್‌ಲೈನ್‌ನಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡುವುದಕ್ಕೆ ದರ ವಿಧಿಸುವ ಭಾರತದಲ್ಲಿ ಮೊದಲ ಆಪ್‌ ಫೋನ್‌ ಪೇ ಆಗಲಿದೆ.

ಡಿಜಿಟಲ್‌ ಪೇಮೆಂಟ್‌ ಆಪ್‌ ಫೋನ್‌ ಪೇ ಈಗ ಮೊಬೈಲ್‌ ರೀಚಾರ್ಜ್‌ಗೆ ದರ ವಿಧಿಸಲು ಮುಂದಾಗಿದೆ. 50 ರೂಪಾಯಿಗಿಂತ ಅಧಿಕ ರೀಚಾರ್ಜ್‌ ಮಾಡಿದರೆ 1 ರಿಂದ 2 ರೂಪಾಯಿಯನ್ನು ಮೊಬೈಲ್‌ ರೀಚಾರ್ಜ್‌ನ ಪ್ರಕ್ರಿಯೆ ಶುಲ್ಕವಾಗಿ ಫೋನ್‌ ಪೇ ಪಡೆಯಲಿದೆ ಎಂದು ತಿಳಿಸಿದೆ. ಇನ್ನು ಇದೇ ಸಂದರ್ಭದಲ್ಲಿ 50 ರೂಪಾಯಿಗಿಂತ ಕಡಿಮೆ ದರದ ಮೊಬೈಲ್‌ ರೀಚಾರ್ಜ್‌ಗೆ ಯಾವುದೇ ದರವನ್ನು ನಾವು ವಿಧಿಸುವುದಿಲ್ಲ ಎಂದು ಕೂಡಾ ಡಿಜಿಟಲ್‌ ಪೇಮೆಂಟ್‌ ಆಪ್‌ ಫೋನ್‌ ಪೇ ಹೇಳಿದೆ.

ಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳುಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳು

"50 ರಿಂದ 100 ರೂಪಾಯಿವರೆಗಿನ ಮೊಬೈಲ್‌ ರೀಚಾರ್ಜ್‌ಗೆ 1 ರೂಪಾಯಿಯನ್ನು ನಾವು ಪ್ರಕ್ರಿಯೆ ಶುಲ್ಕವಾಗಿ ಪಡೆಯುತ್ತೇವೆ. 100 ರೂಪಾಯಿಗಿಂತ ಅಧಿಕ ದರ ರೀಚಾರ್ಜ್‌ಗೆ ನಾವು ಪ್ರಕ್ರಿಯೆ ಶುಲ್ಕವಾಗಿ 2 ರೂಪಾಯಿಯನ್ನು ಪಡೆಯುತ್ತೇವೆ," ಎಂದು ಫೋನ್‌ ಪೇ ಮಾಹಿತಿ ನೀಡಿದೆ.

ಮೊಬೈಲ್‌ ರೀಚಾರ್ಜ್‌ಗೆ ಫೋನ್‌ ಪೇ ಶುಲ್ಕವೆಷ್ಟು?

ಈ ಬಗ್ಗೆ ಹೇಳಿಕೆ ನೀಡಿರುವ ಫೋನ್‌ ಪೇ, "ಕೆಲವು ಜನರು ಮೊಬೈಕ್‌ ರೀಚಾರ್ಜ್‌ ಅನ್ನು ನಮ್ಮ ಆಪ್‌ನಿಂದ ಮಾಡುತ್ತಿರುವ ನಾವು ಒಂದು ಸಣ್ಣ ಪ್ರಮಾಣದ ಪ್ರಯೋಗವನ್ನು ನಡೆಸಲು ಮುಂದಾಗಿದ್ದೇವೆ. 50 ರೂಪಾಯಿಗಿಂತ ಕಡಿಮೆ ದರದ ಮೊಬೈಲ್‌ ರೀಚಾರ್ಜ್‌ಗೆ ಯಾವುದೇ ದರವನ್ನು ನಾವು ವಿಧಿಸುವುದಿಲ್ಲ. ಆದರೆ 50 ರಿಂದ 100 ರೂಪಾಯಿವರೆಗಿನ ಮೊಬೈಲ್‌ ರೀಚಾರ್ಜ್‌ಗೆ 1 ರೂಪಾಯಿ ವಿಧಿಸಲಾಗುತ್ತದೆ. 100 ರೂಪಾಯಿಗಿಂತ ಅಧಿಕ ದರದ ಮೊಬೈಲ್‌ ರೀಚಾರ್ಜ್‌ಗೆ 2 ರೂಪಾಯಿಯನ್ನು ವಿಧಿಸಲಾಗುತ್ತದೆ. ಪ್ರಯೋಗದ ಒಂದು ಭಾಗವಾಗಿ, ಬಹುಪಾಲು ಬಳಕೆದಾರರು ಏನನ್ನೂ ಪಾವತಿಸುತ್ತಿಲ್ಲ ಅಥವಾ ರೂಪಾಯಿ 1 ಪಾವತಿ ಮಾಡುತ್ತಿದ್ದಾರೆ," ಎಂದು ವಿವರಿಸಿದೆ.

ಬೇರೆ ಸೇವೆಗಳಿಗೆ ಇಲ್ಲ ಶುಲ್ಕ

ಈ ನಡುವೆ ಫೋನ್‌ ಪೇ ಕ್ರೆಡಿಟ್‌ ಕಾರ್ಡ್ ಬಳಸಿ ಮಾಡುವ ಪಾವತಿಗಳಿಗೆ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ. ಸಾಮಾನ್ಯವಾಗಿ ಬೇರೆ ಎಲ್ಲಾ ಆನ್‌ಲೈನ್‌ ಪೇಮೆಂಟ್‌ ಆಪ್‌ಗಳು ಕ್ರೆಡಿಟ್‌ ಕಾರ್ಡ್ ಬಳಸಿ ಮಾಡುವ ಪಾವತಿಗಳಿಗೆ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತದೆ. ಆದರೆ ಈವರೆಗೆ ಬೇರೆ ಯಾವುದೇ ಡಿಜಿಟಲ್‌ ಪೇಮೆಂಟ್‌ ಆಪ್‌ಗಳು ಮೊಬೈಲ್‌ ರೀಚಾರ್ಜ್‌ಗೆ ಯಾವುದೇ ಇತರೆ ಶುಲ್ಕವನ್ನು ವಿಧಿಸಿಲ್ಲ. ಫೋನ್‌ ಪೇ ಮಾತ್ರ ಮೊಬೈಲ್‌ ರೀಚಾರ್ಜ್‌ಗೆ ಇತರೆ ಶುಲ್ಕವನ್ನು ವಿಧಿಸಲು ಆರಂಭ ಮಾಡಿದೆ. ಇನ್ನು ಫೋನ್‌ ಪೇ ಯಲ್ಲಿ ಬೇರೆ ಹಣಕಾಸು ವ್ಯವಹಾರಕ್ಕೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅದು ಈ ಹಿಂದಿನಂತೆ ಉಚಿತವಾಗಲಿದೆ.

ಇಂಡೂಸ್ಓಎಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಫೋನ್‌ಪೇ ಮಾತುಕತೆಇಂಡೂಸ್ಓಎಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಫೋನ್‌ಪೇ ಮಾತುಕತೆ

"ಇನ್ನು ನಾವು ಬಿಲ್ ಪಾವತಿಗಳ ಬಗ್ಗೆ ಸ್ಪಷ್ಟಪಡಿಸಬೇಕಾದರೆ, ಬಿಲ್‌ ಪಾವತಿಗೆ ಶುಲ್ಕವನ್ನು ವಿಧಿಸುವ ಏಕೈಕ ಆನ್‌ಲೈನ್‌ ಆಪ್‌ ನಮ್ಮದು ಅಲ್ಲ. ಬೇರೆ ಆಪ್‌ಗಳಲ್ಲೂ ಶುಲ್ಕವನ್ನು ವಿಧಿಸಲಾಗುತ್ತದೆ. ಬಿಲ್ ಪಾವತಿಗಳ ಮೇಲೆ ಸಣ್ಣ ಶುಲ್ಕವನ್ನು ವಿಧಿಸುವುದು ಈಗ ಪ್ರಮಾಣಿತ ಉದ್ಯಮದ ಅಭ್ಯಾಸವಾಗಿದೆ. ಈ ಕಾರ್ಯವನ್ನು ಇತರ ಬಿಲ್ಲರ್ ವೆಬ್‌ಸೈಟ್‌ಗಳು ಮತ್ತು ಡಿಜಿಟಲ್‌ ಪೇಮೆಂಟ್‌ ಆಪ್‌, ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಿಂದಲೂ ಮಾಡಲಾಗುತ್ತದೆ. ನಾವು ಕ್ರೆಡಿಟ್‌ ಕಾರ್ಟ್‌ಗಳ ಪಾವತಿಗೆ ಮಾತ್ರ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತೇವೆ. ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಕನ್ವೆನಿಯಸ್‌ ಫೀ ಎಂದು ಕರೆಯಲಾಗುತ್ತದೆ," ಎಂದು ಫೋನ್‌ಪೇ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

English summary

PhonePe starts charging users for paying mobile bills

PhonePe starts charging users for paying mobile bills. Details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X