For Quick Alerts
ALLOW NOTIFICATIONS  
For Daily Alerts

ಅಂಚೆಕಚೇರಿ Vs ಬ್ಯಾಂಕ್: ಎಲ್ಲಿ ಆರ್‌ಡಿ ಮಾಡಿದರೆ ಉತ್ತಮ?

|

ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಯಾವುದು ಸುರಕ್ಷತೆ ಹೂಡಿಕೆ ಎಂದು ನೋಡಿಕೊಂಡು ಹೂಡಿಕೆ ಮಾಡುತ್ತೇವೆ. ಜನರು ಹೆಚ್ಚಾಗಿ ಹೂಡಿಕೆ ಆಯ್ಕೆಯನ್ನು ಮಾಡುವಾಗ ಅಂಚೆ ಕಚೇರಿ ಹಾಗೂ ಬ್ಯಾಂಕ್‌ನ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಆಯ್ಕೆ ಮಾಡುವುದು ಉತ್ತಮ. ನಮ್ಮ ಕೈಯಲ್ಲಿ ಅಧಿಕ ಮೊತ್ತ ಇಲ್ಲದ ವೇಳೆ ನಾವು ಆರ್‌ಡಿಯನ್ನು ಮಾಡಿಕೊಂಡರೆ ಮಾಸಿಕ ಸಂಬಳದಿಂದ ಹೂಡಿಕೆ ಮಾಡಿಕೊಂಡು ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ.

 

ಆರ್‌ಡಿಯನ್ನು ಎಂದಿಗೂ ನಾವು ಕಡಿಮೆ ಅಪಾಯದ ಹೂಡಿಕೆ ಎಂದು ಪರಿಗಣಿಸುತ್ತೇವೆ. ಯಾರು ಮೊದಲ ಬಾರಿಗೆ ಹೂಡಿಕೆಯನ್ನು ಮಾಡುತ್ತಾರೋ ಅವರು ಆರ್‌ಡಿಯಲ್ಲಿ ಹೂಡಿಕೆ ಮಾಡುವುದು ಉತ್ತಮ ಹಾಗೂ ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಅಂಚೆ ಕಚೇರಿ ಎಫ್‌ಡಿ, ಆರ್‌ಡಿ ಆನ್‌ಲೈನ್‌ನಲ್ಲಿ ಡೆಪಾಸಿಟ್, ಬ್ಯಾಲೆನ್ಸ್ ಚೆಕ್ ಹೇಗೆ?ಅಂಚೆ ಕಚೇರಿ ಎಫ್‌ಡಿ, ಆರ್‌ಡಿ ಆನ್‌ಲೈನ್‌ನಲ್ಲಿ ಡೆಪಾಸಿಟ್, ಬ್ಯಾಲೆನ್ಸ್ ಚೆಕ್ ಹೇಗೆ?

ಹಾಗಿರುವಾಗ ನೀವು ಆರ್‌ಡಿ ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೀರಾ? ಆದರೆ ಯಾವುದು ಉತ್ತಮ? ಅಂಚೆ ಕಚೇರಿ ಆರ್‌ಡಿ ಅಥವಾ ಬ್ಯಾಂಕ್‌ ಆರ್‌ಡಿ?. ಇಲ್ಲಿ ನಾವು ಈ ಎರಡು ಆರ್‌ಡಿಗಳ ನಡುವೆ ತುಲನೆ ಮಾಡಿ ವಿವರಣೆಯನ್ನು ನೀಡಿದ್ದೇವೆ, ಯಾವುದು ಉತ್ತಮ ಎಂದು ತಿಳಿಯಲು ಮುಂದೆ ಓದಿ...

 ಅಂಚೆ ಕಚೇರಿ ಆರ್‌ಡಿ ಎಂದರೇನು?

ಅಂಚೆ ಕಚೇರಿ ಆರ್‌ಡಿ ಎಂದರೇನು?

ಅಂಚೆ ಕಚೇರಿಯು ಒಟ್ಟು 9 ಸರ್ಕಾರ ಪ್ರಮಾಣಿತ ಉಳಿತಾಯ ಯೋಜನೆಯನ್ನು ಹೊಂದಿದೆ. ಅದರಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯೇ ಅಂಚೆ ಕಚೇರಿಯ ಆರ್‌ಡಿ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹೂಡಿಕೆಯನ್ನು ಕನಿಷ್ಠ 5 ವರ್ಷಗಳ ಇರಿಸಬೇಕಾಗುತ್ತದೆ. ಅಂದರೆ ಹೂಡಿಕೆ ಅವಧಿ ಕನಿಷ್ಠ 5 ವರ್ಷವಾಗಿದೆ.

ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?

 ಅಂಚೆ ಕಚೇರಿ ಆರ್‌ಡಿಯ ಪ್ರಮುಖ ಮಾಹಿತಿ
 

ಅಂಚೆ ಕಚೇರಿ ಆರ್‌ಡಿಯ ಪ್ರಮುಖ ಮಾಹಿತಿ

* ಅಂಚೆ ಕಚೇರಿ ಆರ್‌ಡಿಯಲ್ಲಿ ಮಾಸಿಕವಾಗಿ ನಿರ್ದಿಷ್ಟ ಮೊತ್ತವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಬೇಕು.
* ಸಣ್ಣ ಮೊತ್ತದ ಹೂಡಿಕೆ ಮಾಡಲು ಬಯಸುವವರಿಗೂ ಕೂಡಾ ಅಂಚೆ ಕಚೇರಿ ಯೋಜನೆ ಸಹಾಯಕ. 100 ರೂಪಾಯಿ ಕೂಡಾ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಯ ಮಿತಿ ಇಲ್ಲ.
* ವಯಸ್ಕರು ಜಂಠಿ ಆರ್‌ಡಿಯನ್ನು ಕೂಡಾ ತೆರೆಯಬಹುದು. ಅಪ್ರಾಪ್ತರ ಹೆಸರಲ್ಲಿ ಕೂಡಾ ಆರ್‌ಡಿಯನ್ನು ತೆರೆಯಬಹುದು. ಒಂದಕ್ಕಿಂತ ಅಧಿಕ ಆರ್‌ಡಿ ಖಾತೆಯನ್ನು ಕೂಡಾ ತೆರೆಯಬಹುದು.
* ನೀವು ಮಾಸಿಕವಾಗಿ ಆರ್‌ಡಿಯನ್ನು ಜಮೆ ಮಾಡದಿದ್ದರೆ ಪ್ರತಿ 100 ರೂಪಾಯಿಯ ಶೇಕಡ 1ರಷ್ಟು ಮೊತ್ತವನ್ನು ದಂಡವಾಗಿ ಪಾವತಿ ಮಾಡಬೇಕಾಗುತ್ತದೆ.
* ಒಂದು ವರ್ಷದ ಬಳಿಕ ನೀವು ಕೊಂಚ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವ ಆಯ್ಕೆಯಿದೆ. ಸುಮಾರು ಶೇಕಡ 50ರಷ್ಟು ಮುಂಗಡವಾಗಿ ವಿತ್‌ಡ್ರಾ ಮಾಡಿಕೊಳ್ಳಬಹುದು.

 ಬ್ಯಾಂಕ್ ಆರ್‌ಡಿ ಎಂದರೇನು?

ಬ್ಯಾಂಕ್ ಆರ್‌ಡಿ ಎಂದರೇನು?

ರಿಕ್ಯೂರಿಂಗ್ ಡೆಪಾಸಿಟ್ ಅನ್ನು ಆರ್‌ಡಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿರುವ ಬ್ಯಾಂಕ್‌ಗಳು ಹೊಂದಿರುವ ವಿಶಿಷ್ಠ ಟರ್ಮ್ ಡೆಪಾಸಿಟ್ ಇದಾಗಿದೆ. ಜನರು ಮಾಸಿಕವಾಗಿ ಹೂಡಿಕೆ ಮಾಡಿ ಉಳಿತಾಯ ಮಾಡಲು ಇದು ಸಹಾಯಕವಾಗಿದೆ. ಹಾಗೆಯೇ ಬಡ್ಡಿದರವನ್ನು ಕೂಡಾ ಪಡೆಯಬಹುದು. ಬ್ಯಾಂಕ್ ಆರ್‌ಡಿಯಲ್ಲಿ ಹಲವಾರು ಅವಧಿಗಳ ಆಯ್ಕೆ ನಮಗೆ ಇರುತ್ತದೆ. ಹಾಗೆಯೇ ಹೂಡಿಕೆ ಮೊತ್ತದಲ್ಲೂ ಹಲವಾರು ಆಯ್ಕೆಗಳು ಇದೆ.

 ಬ್ಯಾಂಕ್ ಆರ್‌ಡಿಯ ಪ್ರಮುಖ ಮಾಹಿತಿ

ಬ್ಯಾಂಕ್ ಆರ್‌ಡಿಯ ಪ್ರಮುಖ ಮಾಹಿತಿ

* ನೀವು ಆರ್‌ಡಿಯನ್ನು ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ವರ್ಗಾವಣೆ ಮಾಡಬಹುದು.
* ಕನಿಷ್ಠ ಡೆಪಾಸಿಟ್ ಅವಧಿ ಆರು ತಿಂಗಳುಗಳು ಆಗಿದೆ. ಹಾಗೆಯೇ ಗರಿಷ್ಠ ಡೆಪಾಸಿಟ್ ಅವಧಿ 10 ವರ್ಷಗಳು ಆಗಿದೆ.
* ಫಿಕ್ಸಿಡ್ ಡೆಪಾಸಿಟ್‌ಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆಯೋ ಅಷ್ಟೇ ಬಡ್ಡಿದರ ಆರ್‌ಡಿಗೂ ಇರುತ್ತದೆ. ಬೇರೆ ಎಲ್ಲ ಉಳಿತಾಯ ಯೋಜನೆಗಿಂತ ಅಧಿಕ ಬಡ್ಡಿದರ ಇದಕ್ಕೆ ಇರುತ್ತದೆ.
* ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವ ಆಯ್ಕೆಯೂ ಕೂಡಾ ಇದೆ. ಡೆಪಾಸಿಟ್ ಅನ್ನು ಮೇಲಾಧಾರವಾಗಿ ಸಾಲವನ್ನು ಪಡೆಯುವ ಆಯ್ಕೆಯಿದೆ. ಡೆಪಾಸಿಟ್‌ ಮಾಡಿರುವ ಒಟ್ಟು ಮೊತ್ತದ ಶೇಕಡ 80ರಿಂದ ಶೇಕಡ 90ರವರೆಗೆ ಮಾತ್ರ ಸಾಲವನ್ನು ಪಡೆಯುವ ಅವಕಾಶವಿದೆ. ಸಾಲವನ್ನು ಪಡೆಯುವವರ ಮೇಲೆ ಇದು ನಿರ್ಧಾರವಾಗುತ್ತದೆ.

 ಬ್ಯಾಂಕ್, ಅಂಚೆ ಕಚೇರಿ ಆರ್‌ಡಿ ನಡುವೆ ವ್ಯತ್ಯಾಸ

ಬ್ಯಾಂಕ್, ಅಂಚೆ ಕಚೇರಿ ಆರ್‌ಡಿ ನಡುವೆ ವ್ಯತ್ಯಾಸ

* ಅಂಚೆ ಕಚೇರಿ ಆರ್‌ಡಿ ಅವಧಿ 5 ವರ್ಷಗಳು ಆಗಿದೆ. ಆದರೆ ಬ್ಯಾಂಕ್‌ನಲ್ಲಿ ಒಂದು ವರ್ಷದಿಂದ 10 ವರ್ಷದವರೆಗೆ ಅವಧಿ ಇದೆ.
* ಅಂಚೆ ಕಚೇರಿ ಆರ್‌ಡಿ ಮೇಲಿನ ಬಡ್ಡಿದರವನ್ನು ತ್ರೈಮಾಸಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಬ್ಯಾಂಕುಗಳು ಪದೇ ಪದೇ ಆರ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡುವುದಿಲ್ಲ.
* ಬ್ಯಾಂಕಿನಲ್ಲಿ ನೀವು ಆರ್‌ಡಿ ಅವಧಿಯನ್ನು ನಿಮಗೆ ಬೇಕಾದಂತೆ ವಿಸ್ತರಣೆ ಮಾಡಿಕೊಳ್ಳಬಹುದು. ಆದರೆ ಅಂಚೆ ಕಚೇರಿ ಆರ್‌ಡಿ ಅವಧಿ ನಿರ್ದಿಷ್ಟ 5 ವರ್ಷಗಳು ಮಾತ್ರವಾಗಿದೆ. ವಿಸ್ತರಣೆಯ ಅವಕಾಶವಿಲ್ಲ.
* ನೀವು ಅವಧಿಪೂರ್ವವಾಗಿ ಅಂಚೆ ಕಚೇರಿ ಆರ್‌ಡಿಯನ್ನು ವಿತ್‌ಡ್ರಾ ಮಾಡುವುದಾದರೆ ಒಟ್ಟು ಠೇವಣಿಯ ಶೇಕಡ 50ರಷ್ಟು ಮಾತ್ರ ವಿತ್‌ಡ್ರಾ ಮಾಡಲು ಅಂಚೆ ಕಚೇರಿ ಅನುವು ಮಾಡಿಕೊಡುತ್ತದೆ. ಆದರೆ ಬ್ಯಾಂಕ್‌ನಲ್ಲಿ ಒಟ್ಟು ಠೇವಣಿಯ ಶೇಕಡ 95ರಷ್ಟು ಅವಧಿಗೂ ಮುನ್ನ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ.

English summary

Post Office RD, Bank RD: Which is Better, Explained in Kannada

Post Office RD, Bank RD: Recurring deposits are ideal for investors who prefer low-risk investments. Which is Better, Explained in Kannada.
Story first published: Saturday, November 5, 2022, 13:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X