For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಉಳಿತಾಯ ಯೋಜನೆಗಳು: ಎಷ್ಟು ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ?

|

ನೀವು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ ಮತ್ತು ಹೂಡಿಕೆ ಮಾಡಲು ಬಯಸಿದ್ದರೆ ಗುಡ್‌ನ್ಯೂಸ್ ಇಲ್ಲಿದೆ. 2021 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಇದರೊಂದಿಗೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಒಂದೇ ಆಗಿವೆ.

ಹೌದು, ಎಫ್‌ಡಿಯಂತಹ ಇತರ ಹೂಡಿಕೆ ಆಯ್ಕೆಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಪೋಸ್ಟ್ ಆಫೀಸ್ ಬಡ್ಡಿದರ ಕಡಿತವನ್ನು ಅಂದಾಜಿಸಲಾಗಿದೆ. ಹಾಗಿದ್ದರೆ ಎಲ್ಲಾ ಯೋಜನೆಗಳ ಬಡ್ಡಿದರಗಳೆಷ್ಟು ಮತ್ತು ಎಷ್ಟು ತಿಂಗಳುಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳು

ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳು

ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆ ಶೇಕಡಾ 7.6ರಷ್ಟು, ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇಕಡಾ 7.4ರಷ್ಟು, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಶೇಕಡಾ 7.1, ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಶೇಕಡಾ 6.9, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಶೇಕಡಾ 6.8, ಮಾಸಿಕ ಆದಾಯ ಯೋಜನೆ (ಎಂಐಎಸ್) ಶೇಕಡಾ 6.6, ಅಂಚೆ ಕಚೇರಿಉಳಿತಾಯ ಖಾತೆ ಶೇಕಡಾ 4, ಅಂಚೆ ಕಚೇರಿ ಮರುಕಳಿಸುವ ಠೇವಣಿ (ಆರ್‌ಡಿ) ಶೇ. 5.8 ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ ಶೇಕಡಾ 7.4 ಬಡ್ಡಿದರವಿದೆ.

ಅಂಚೆ ಕಚೇರಿ ಠೇವಣಿಯ ಮೇಲಿನ ಬಡ್ಡಿದರಗಳು

ಅಂಚೆ ಕಚೇರಿ ಠೇವಣಿಯ ಮೇಲಿನ ಬಡ್ಡಿದರಗಳು

ಪೋಸ್ಟ್ ಆಫೀಸ್ ಸಮಯ ಠೇವಣಿ (ಟಿಡಿ) 1 ವರ್ಷಕ್ಕೆ ಶೇ. 5.5, 2 ವರ್ಷಗಳಲ್ಲಿ ಶೇಕಡಾ 5.5, 3 ವರ್ಷಗಳಲ್ಲಿ ಶೇಕಡಾ 5.5 ಮತ್ತು 5 ವರ್ಷಗಳಲ್ಲಿ ಶೇಕಡಾ 6.7ರಷ್ಟು ಬಡ್ಡಿಯನ್ನು ನೀಡುತ್ತದೆ.

7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ

ಕಿಸಾನ್ ವಿಕಾಸ್ ಪತ್ರ

ಕಿಸಾನ್ ವಿಕಾಸ್ ಪತ್ರ

ಈ ಯೋಜನೆಯಲ್ಲಿ ಪ್ರಸ್ತುತ ಬಡ್ಡಿದರವು ಶೇಕಡಾ 6.9 ಆಗಿದೆ. ಈ ಬಡ್ಡಿದರ 2020 ರ ಏಪ್ರಿಲ್ 1 ರಿಂದ ಅನ್ವಯವಾಗುತ್ತದೆ ಮತ್ತು ಈಗ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೂ ಮುಂದುವರಿಯುತ್ತದೆ. ನೀವು ಕೆವಿಪಿಯಲ್ಲಿ ಠೇವಣಿ ಇಟ್ಟ ಹಣವನ್ನು 124 ತಿಂಗಳುಗಳಲ್ಲಿ (10 ವರ್ಷ ಮತ್ತು 4 ತಿಂಗಳು) ದ್ವಿಗುಣಗೊಳ್ಳಲಿದೆ. ಈ ಯೋಜನೆಯಲ್ಲಿ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ, ಏಕೆಂದರೆ ಇದು ಸರ್ಕಾರಿ ಯೋಜನೆಯಾಗಿದೆ.

ಬಡ್ಡಿದರಗಳು ಯಾವಾಗ ಬದಲಾಗಬಹುದು?

ಬಡ್ಡಿದರಗಳು ಯಾವಾಗ ಬದಲಾಗಬಹುದು?

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿದರಗಳ ಪರಿಶೀಲನೆಯನ್ನು ಸೆಪ್ಟೆಂಬರ್ 2021ರ ಕೊನೆಯಲ್ಲಿ ಮಾಡಲಾಗುತ್ತದೆ. ನಂತರ 2021 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಬಡ್ಡಿದರಗಳನ್ನು ನಿರ್ಧರಿಸಲಾಗುತ್ತದೆ. ಅಂಚೆ ಕಚೇರಿಉಳಿತಾಯ ಯೋಜನೆಗಳಲ್ಲಿ ಗಳಿಸಿದ ಬಡ್ಡಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ.

English summary

Post Office Schemes: How To Double Your Money?

Here the details of post office different schemes which can double your money
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X