For Quick Alerts
ALLOW NOTIFICATIONS  
For Daily Alerts

ಪರಿಷ್ಕರಣೆ ಬಳಿಕ ಅಂಚೆ ಕಚೇರಿ, ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಎಷ್ಟಿದೆ?

|

ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ನಡುವೆ ಮಧ್ಯೆ 2022-23ರ ಮೊದಲ ತ್ರೈಮಾಸಿಕಕ್ಕೆ ಪಿಪಿಎಫ್ ಮತ್ತು ಎನ್‌ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರವು ಗುರುವಾರ ಬಡ್ಡಿದರಗಳನ್ನು ಬದಲಾವಣೆ ಮಾಡದೆಯೇ ಇರಿಸಿದೆ.

2020-21 ರ ಮೊದಲ ತ್ರೈಮಾಸಿಕದಿಂದಲೂ ದೇಶದಲ್ಲಿ ಪಿಪಿಎಫ್ ಮತ್ತು ಎನ್‌ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪರಿಷ್ಕರಣೆ ಮಾಡಿಲ್ಲ. ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಹಿಂದಿನಷ್ಟೇ ಬಡ್ಡಿದರ ಮುಂದುವರಿಯಲಿದೆ. ಶೇಕಡಾ 7.1 ಮತ್ತು 6.8 ರಷ್ಟು ವಾರ್ಷಿಕ ಬಡ್ಡಿ ದರ ಇರಲಿದೆ.

ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ? ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ?

"2022-23 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಏಪ್ರಿಲ್ 1, 2022 ರಿಂದ ಪ್ರಾರಂಭವಾಗಿ ಜೂನ್ 30, 2022 ರಂದು ಕೊನೆಗೊಳ್ಳುತ್ತದೆ. ಇದು ನಾಲ್ಕನೇ ತ್ರೈಮಾಸಿಕಕ್ಕೆ ಅನ್ವಯವಾಗುವ ಪ್ರಸ್ತುತ ದರಗಳಿಂದ ಬದಲಾವಣೆ ಆಗುವುದಿಲ್ಲ," ಎಂದು ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ಅಂಚೆ ಕಚೇರಿ, ಪಿಪಿಎಫ್, ಎನ್‌ಎಸ್‌ಸಿ ಬಡ್ಡಿದರ ಎಷ್ಟಿದೆ?

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಸೂಚಿಸಲಾಗುತ್ತದೆ. ಒಂದು ವರ್ಷದ ಅವಧಿಯ ಠೇವಣಿ ಯೋಜನೆಯು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5.5 ರ ಬಡ್ಡಿದರವನ್ನು ಗಳಿಸಲಿದೆ. ಹಾಗೆಯೇ ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆಯು ಶೇಕಡಾ 7.6 ಬಡ್ಡಿದರವನ್ನು ಪಡೆಯಲಿದೆ.

 ಪಿಎಫ್‌ ಅಲರ್ಟ್: ಒಂದಕ್ಕಿಂತ ಅಧಿಕ ಪಿಎಫ್‌ ಖಾತೆ ಇದೆಯಾ?, ಇಲ್ಲಿ ಗಮನಿಸಿ ಪಿಎಫ್‌ ಅಲರ್ಟ್: ಒಂದಕ್ಕಿಂತ ಅಧಿಕ ಪಿಎಫ್‌ ಖಾತೆ ಇದೆಯಾ?, ಇಲ್ಲಿ ಗಮನಿಸಿ

ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ವರ್ಷದ ಸ್ಥಿರ ಠೇವಣಿ ಮೇಲೆ 5 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದು.

ಇನ್ನು ಐದು ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ.7.4ರಲ್ಲೇ ಉಳಿಸಿಕೊಳ್ಳಲಾಗಿದೆ. ಹಿರಿಯ ನಾಗರಿಕರ ಯೋಜನೆಯ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಈ ಸಂದರ್ಭದಲ್ಲಿಯೇ ಉಳಿತಾಯ ಖಾತೆಯಲ್ಲಿನ ಬಡ್ಡಿದರವು ಶೇಕಡ 4ರಲ್ಲಿಯೇ ಉಳಿಯಲಿದೆ.

ಪಿಎಫ್ ಬಡ್ಡಿದರ ಇಳಿಕೆ

ಒಂದರಿಂದ ಐದು ವರ್ಷಗಳ ಅವಧಿಯ ಠೇವಣಿಗಳು ಶೇಕಡಾ 5.5-6.7 ರ ವ್ಯಾಪ್ತಿಯಲ್ಲಿ ಬಡ್ಡಿದರವನ್ನು ಪಡೆಯುತ್ತವೆ. ತ್ರೈಮಾಸಿಕ ಪಾವತಿಸಲು ಐದು ವರ್ಷಗಳ ಡೆಪಾಸಿಟ್‌ಗಳ ಮೇಲೆ ಶೇಕಡಾ 5.8 ರಷ್ಟು ಬಡ್ಡಿದರವಿರಲಿದೆ. ಇತ್ತೀಚೆಗೆ, ಪ್ರಾವಿಡೆಂಟ್ ಫಂಡ್ ದರವನ್ನು 2021-22 ಕ್ಕೆ 8.5 ಪ್ರತಿಶತದಿಂದ ನಾಲ್ಕು ದಶಕಗಳ ಕನಿಷ್ಠ 8.1 ಶೇಕಡಾಕ್ಕೆ ಇಳಿಸಲಾಗಿದೆ.

English summary

PPF, NSC, Post Office scheme interest rates: Here's a Details

PPF, NSC, Post Office scheme interest rates: Here's a Details . The interest rate for small savings schemes has not been revised since the first quarter of 2020-21.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X