For Quick Alerts
ALLOW NOTIFICATIONS  
For Daily Alerts

ಮುಕೇಶ್ ಅಂಬಾನಿಗಿಂತ 4 ಪಟ್ಟು ಅಧಿಕ ವೇತನ ಪಡೆಯುವ ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ, ಯಾರವರು?

|

ಪ್ರಮುಖ ಐಟಿ ಸಂಸ್ಥೆಯಾದ ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ರವಿ ಕುಮಾರ್ ಎಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಗಿಂತ ಅಧಿಕ ವೇತನವನ್ನು ಪಡೆಯಲಿದ್ದಾರೆ. ಕಾಗ್ನಿಜೆಂಟ್‌ ಸಿಇಒ ಮತ್ತು ಬೋರ್ಡ್ ಮೆಂಬರ್‌ ಆಗಿ ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ರವಿ ಕುಮಾರ್‌ ಅವರನ್ನು ನೇಮಿಸಲಾಗಿದೆ. ಅಷ್ಟಕ್ಕೂ ವೇತನವನ್ನು ಕೇಳಿದ್ರೆ ನೀವು ನಿಬ್ಬೆರಾಗಾಗುವುದು ಖಂಡಿತ.

 

ಬ್ರಿಯಾನ್ ಹಂಫ್ರೀಸ್‌ರಿಂದ ರವಿ ಕುಮಾರ್ ಸಿಇಒ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಮಾರ್ಚ್ 15ರವೆರೆಗೆ ಕಾಗ್ನಿಜೆಂಟ್‌ ಸಂಸ್ಥೆಯ ವಿಶೇಷ ಸಲಹೆಗಾರರಾಗಿ ಉಳಿದುಕೊಳ್ಳಲಿದ್ದಾರೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ಉಲ್ಲೇಖಿಸಿದೆ. ರವಿ ಕುಮಾರ್ ದೇಶದ ಅತೀ ಶ್ರೀಮಂತ ವ್ಯಕ್ತಿಯಾದ, ವಿಶ್ವದಲ್ಲೇ ಮೂರನೇ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಗಿಂತ ಅಧಿಕ ವೇತನವನ್ನು ಪಡೆಯುವ ನಿರೀಕ್ಷೆಯಿದೆ.

ಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳ

ವರದಿ ಪ್ರಕಾರ ರವಿ ಕುಮಾರ್ ವಾರ್ಷಿಕವಾಗಿ 57 ಕೋಟಿ ರೂಪಾಯಿ ಆದಾಯವನ್ನು ಆಫರ್ ಮಾಡಿದೆ. ಮುಕೇಶ್ ಅಂಬಾನಿಯ ವಾರ್ಷಿಕ ಆದಾಯಕ್ಕಿಂತ 4 ಪಟ್ಟು ಅಧಿಕವಾಗಿದೆ ಈ ಆದಾಯ. 2020ರ ಲೆಕ್ಕಾಚಾರದ ಪ್ರಕಾರ ಮುಕೇಶ್ ಅಂಬಾನಿ ಆದಾಯವು ವಾರ್ಷಿಕವಾಗಿ 15 ಕೋಟಿ ರೂಪಾಯಿ ಆಗಿದೆ. ಇನ್ನು ಸಂಸ್ಥೆ ಸೇರ್ಪಡೆಯಾದ ಬೋನಸ್ ಆಗಿ 7,50,000 ಡಾಲರ್ (6 ಕೋಟಿ ರೂಪಾಯಿ) ಅನ್ನು ರವಿ ಕುಮಾರ್ ಪಡೆಯಲಿದ್ದಾರೆ. ರವಿ ಕುಮಾರ್ ಯಾರು, ಆದಾಯ ಎಷ್ಟಿರಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ವೇತನದ ಬಗ್ಗೆ ಇಲ್ಲಿದೆ ವಿವರ

ವೇತನದ ಬಗ್ಗೆ ಇಲ್ಲಿದೆ ವಿವರ

* ವಾರ್ಷಿಕ ಪರಿಹಾರ 7 ಮಿಲಿಯನ್ ಡಾಲರ್ (57 ಕೋಟಿ ರೂಪಾಯಿ), ಈ ಪೈಕಿ ಮೂಲ ವೇತನ 1 ಮಿಲಿಯನ್ ಡಾಲರ್ ಆಗಿದೆ.
* 750,000 ಯುಎಸ್ ಡಾಲರ್ ಸೈನ್ ಆನ್ ಬೋನಸ್ ಆಗಿದೆ.
* ವಾರ್ಷಿಕ ಈಕ್ವಿಟಿ ಅವಾರ್ಡ್ ಆಗಿ 11.5 ಮಿಲಿಯನ್ ಡಾಲರ್ ಲಭ್ಯವಾಗಲಿದೆ. ವಾರ್ಷಿಕವಾಗಿ ಭತ್ಯೆ 2 ಮಿಲಿಯನ್ ಡಾಲರ್ ಆಗಿರಲಿದೆ.

 ರವಿ ಕುಮಾರ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ

ರವಿ ಕುಮಾರ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ

ರವಿ ಕುಮಾರ್ 20 ವರ್ಷಗಳ ಕಾಲ ಇನ್ಫೋಸಿಸ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ ಬಳಿಕ ಕಾಗ್ನಿಜೆಂಟ್‌ಗೆ ಸೇರ್ಪಡೆಯಾಗಿದ್ದರು. ಇನ್ಫೋಸಿಸ್‌ನಲ್ಲಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸಿದ್ದಾರೆ. 2016ರ ಜನವರಿಯಿಂದ 2022ರ ಅಕ್ಟೋಬರ್‌ವರೆಗೆ ಇನ್ಫೋಸಿಸ್‌ನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ರವಿ ಕುಮಾರ್ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಡಸ್ಟ್ರಿ ಸೆಗ್‌ಮೆಂಟ್, ಡ್ರೈವಿಂಗ್ ಡಿಜಿಟಲ್ ಟ್ರಾನ್ಸ್‌ಫಾರ್ಮೆಷನ್ ಸೇವೆ, ಕನ್ಸಲ್ಟಿಂಗ್ ಸೇವೆ, ತಾಂತ್ರಿಕ ಸೇವೆ, ಇಂಜಿನಿಯರಿಂಗ್ ಸೇವೆ, ಮೊದಲಾವುಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. 20 ವರ್ಷಗಳ ವೃತ್ತಿ ಜೀವನ ಇವರದ್ದಾಗಿದೆ.

 ರವಿ ಕುಮಾರ್ ಹೇಳುವುದೇನು?
 

ರವಿ ಕುಮಾರ್ ಹೇಳುವುದೇನು?

"ಕಾಗ್ನಿಜೆಂಟ್ ತನ್ನ ಬ್ಯುಜಿನೆಸ್ ವಿಸ್ತಾರಿಸಲು, ಡಿಜಿಟಲ್ ಪೋರ್ಟ್‌ ಪೋಲಿಯೋ ಮತ್ತು ಸಾಮರ್ಥ್ಯ ವಿಸ್ತರಿಸುವುದನ್ನು ನಾವು ನೋಡಿದ್ದೇವೆ. ಗ್ರಾಹಕರ ಸಂಬಂಧ ಹಾಗೂ ಪಾಲುದಾರಿಕೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದೆ. ಕಾರ್ಯನಿರ್ವಹಣೆಯಲ್ಲಿ ಒಂದು ಶಿಸ್ತನ್ನು ಕೂಡಾ ಸಂಸ್ಥೆ ಹೊಂದಿದೆ," ಎಂದು ರವಿ ಕುಮಾರ್ ಹೇಳಿದ್ದಾರೆ.

English summary

Cognizant CEO Ravi Kumar Will Earn 4 Times More Than Mukesh Ambani, Annual Salary, Other Details in Kannada

Former Infosys President Ravi Kumar S. expected to earn more than Mukesh Ambani. Ravi Kumar Will Earn 4 Times More Than Mukesh Ambani, Annual Salary, other details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X