For Quick Alerts
ALLOW NOTIFICATIONS  
For Daily Alerts

ಆರ್‌ಬಿಐ ಹೊಸ ಕ್ರೆಡಿಟ್ ಕಾರ್ಡ್ ನಿಯಮ; ಮಿನಿಮಮ್ ಅಮೌಂಟ್ ಕಟ್ಟುವವರು ನಿರಾಳ

|

ಕ್ರೆಡಿಟ್ ಕಾರ್ಡ್ ಬಗ್ಗೆ ಜನರಿಗೆ ಎರಡು ಕಾರಣಕ್ಕೆ ಭಯ ಇದೆ. ಒಂದು ಇದು ಜನರ ವೆಚ್ಚ ಹೆಚ್ಚಿಸುತ್ತದೆ. ಇನ್ನೊಂದು, ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ವರ್ಷಗಟ್ಟಲೆ ಕನಿಷ್ಠ ಮೊತ್ತ ಕಟ್ಟುತ್ತಾ ಹೋಗುವವರು ಸಾಲದ ಸುಳಿಯಲ್ಲಿ ಸಿಕ್ಕಿದ ಅನುಭವವಾಗುತ್ತದೆ. ಈಗ ಇಂಥದಕ್ಕೆ ಮುಕ್ತಿ ಹಾಡಲು ಆರ್‌ಬಿಐ ಮುಂದಾಗಿದೆ. ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಪ್ರತೀ ತಿಂಗಳು ಮಿನಿಮಮ್ ಅಮೌಂಟ್ ಮಾತ್ರವೇ ಕಟ್ಟಿದರೂ ಅಸಲು ಬಾಕಿ ಹಣ ಕಡಿಮೆ ಆಗುತ್ತಾ ಹೋಗುವ ರೀತಿಯಲ್ಲಿ ಮಿನಿಮಮ್ ಅಮೌಂಟ್ ನಿಗದಿ ಮಾಡಿ ಎಂದು ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಆರ್‌ಬಿಐ ಸೂಚಿಸಿದೆ.

ಪಾವಿತಸದೇ ಉಳಿದ ಮೊತ್ತಕ್ಕೆ ದಂಡ, ಶುಲ್ಕ, ತೆರಿಗೆ ಇತ್ಯಾದಿ ಸೇರಿ ಆ ಮೊತ್ತಕ್ಕೆ ಬಡ್ಡಿಯೂ ಬೆಳೆಯುತ್ತಾ ಹೋಗದಂತೆ ಕ್ರಮ ತೆಗೆದುಕೊಳ್ಳಲು ಬ್ಯಾಂಕ್‌ಗಳಿಗೆ ತಿಳಿಸಿದೆ. 2022 ಅಕ್ಟೋಬರ್ 1ರಿಂದ ಈ ನಿಯಮ ಅನ್ವಯವಾಗಬೇಕು ಎಂದು ಆರ್‌ಬಿಐ ನಿರ್ದೇಶನ ನೀಡಿದೆ.

ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಚೀನಾಗಿಂತ ಭಾರತ ಉತ್ತಮ ಎಂದು ಮೂಡೀಸ್ ಹೇಳಲು ಏನು ಕಾರಣ?ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಚೀನಾಗಿಂತ ಭಾರತ ಉತ್ತಮ ಎಂದು ಮೂಡೀಸ್ ಹೇಳಲು ಏನು ಕಾರಣ?

ಏನಿದು ಕ್ರೆಡಿಟ್ ಕಾರ್ಡ್ ನಿಯಮ?

ಏನಿದು ಕ್ರೆಡಿಟ್ ಕಾರ್ಡ್ ನಿಯಮ?

ಆರ್‌ಬಿಐ ರೂಪಿಸಿರುವ ಹೊಸ ನಿಯಮ ಏನು ಎಂದು ತಿಳಿಯುವ ಮುನ್ನ ಈಗ ನಾವು ಹೊಂದಿಕೊಂಡು ಬಂದಿರುವ ಹಳೆಯ ಕ್ರೆಡಿಟ್ ಕಾರ್ಡ್ ಬಿಲಿಂಗ್ ನಿಯಮ ಹೇಗಿದೆ ಎಂಬುದನ್ನು ಗಮನಿಸೋಣ. ನಮ್ಮಲ್ಲಿ ಬಹಳ ಮಂದಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿರುತ್ತೇವೆ. ಪ್ರತೀ ತಿಂಗಳು ನಿಗದಿತ ದಿನದಂದು ಬಿಲ್ ಬರುತ್ತದೆ. ಬಿಲ್ ಮೊತ್ತ ಕಟ್ಟಲು ನಮಗೆ ಮೂರು ಆಯ್ಕೆಗಳಿರುತ್ತವೆ. ಒಂದು, ಪೂರ್ಣ ಮೊತ್ತ, ಇನ್ನೊಂದು ಕನಿಷ್ಠ ಮೊತ್ತ, ಮತ್ತೊಂದು ನಮ್ಮಿಷ್ಟದ ಮೊತ್ತ.

ಈ ತಿಂಗಳು ಮಿನಿಮಮ್ ಅಮೌಂಟ್ ಕಟ್ಟಿದರಾಯಿತು. ಮುಂದಿನ ತಿಂಗಳು ಹೆಚ್ಚುವರಿ ಹಣ ಸಿಕ್ಕಾಗ ಪೂರ್ತಿ ದುಡ್ಡು ಕಟ್ಟೋಣ ಎಂದು ಭಾವಿಸಿ ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಕನಿಷ್ಠ ಮೊತ್ತ ಕಟ್ಟುತ್ತೇವೆ. ಇಂಥವರ ಸಂಖ್ಯೆ ಬಹಳ ಇದೆ. ಇದು ಪ್ರವೃತ್ತಿಯಾಗಿ ಬೆಳೆದು ಪ್ರತೀ ತಿಂಗಳೂ ಮಿನಿಮಮ್ ಅಮೌಂಟ್ ಮಾತ್ರ ಕಟ್ಟಿಕೊಂಡು ಹೋಗುತ್ತೇವೆ. ನಾವು ಒಂದು ವರ್ಷ ಇದೇ ರೀತಿ ಮಿನಿಮ್ ಅಮೌಂಟ್ ಕಟ್ಟಿದರೂ ಅಸಲು ಮೊತ್ತ ಮಾತ್ರ ಕಡಿಮೆ ಆಗಿರುವುದಿಲ್ಲ.

ಇದನ್ನು ನಾವು ಗಮನಿಸಬೇಕು. ಈಗ ಈ ಅಸಲು ಮೊತ್ತ ಕಡಿಮೆ ಆಗುವ ರೀತಿಯಲ್ಲಿ ಮಿನಿಮಮ್ ಅಮೌಂಟ್ ನಿಗದಿಪಡಿಸಬೇಕೆಂದು ಆರ್‌ಬಿಐ ಸೂಚಿಸುತ್ತಿರುವುದು.

ಬಡ್ಡಿ ಇತ್ಯಾದಿ ಲೆಕ್ಕ ಹೇಗೆ?

ಬಡ್ಡಿ ಇತ್ಯಾದಿ ಲೆಕ್ಕ ಹೇಗೆ?

ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಶಾಪಿಂಗ್ ಮಾಡಿ ಖರ್ಚು ಮಾಡಿರುವ ಹಣದ ಮೇಲೆ ಶೇ. 2 ಅಥವಾ ಅದಕ್ಕಿಂತ ಹೆಚ್ಚು ಬಡ್ಡಿ ಹಾಕಲಾಗುತ್ತದೆ. ನೀವು ಶಾಪಿಂಗ್ ಮಾಡಿದ ದಿನದಿಂದ ಬಿಲ್ ಹಾಕುವ ದಿನದವರೆಗೆ ಒಟ್ಟು ಎಷ್ಟು ದಿನ ಆಗಿದೆ ಅದಕ್ಕೆ ಬಡ್ಡಿ ವಿಧಿಸಲಾಗುತ್ತದೆ.

ಉದಾಹರಣೆಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ದಿನ 17ನೇ ತಾರೀಖು, ಬಿಲ್ ಪಾವತಿಸುವ ಕೊನೆಯ ದಿನ 5ನೇ ತಾರೀಖು ಎಂದಿಟ್ಟುಕೊಳ್ಳಿ. ಕಾರ್ಡ್ ಸ್ವೈಪ್ ಮಾಡಿ ನವೆಂಬರ್ 2ರಂದು 1 ಲಕ್ಷ ರೂ ವ್ಯಯಸುತ್ತೀರಿ. ನವೆಂಬರ್ 17ರಂದು ಬರುವ ಬಿಲ್‌ನಲ್ಲಿ ನೀವು ಒಂದು ಲಕ್ಷ ರೂ ಪೂರ್ಣ ಮೊತ್ತವನ್ನು ಪಾವತಿಸಬಹುದು. ಅಥವಾ ಮಿನಿಮಮ್ ಅಮೌಂಟ್ ಆಗಿ ಸುಮಾರು 5 ಸಾವಿರ ರೂ ಇರುತ್ತದೆ ಎಂದು ಭಾವಿಸೋಣ. ನೀವು ಕನಿಷ್ಠ ಮೊತ್ತವಾದ 5 ಸಾವಿರ ರು ಅನ್ನು ಪಾವತಿಸಿದಾಗ ಉಳಿಯುವುದು 95 ಸಾವಿರ ರೂ ಹಣ. ಇದು ಔಟ್‌ಸ್ಟ್ಯಾಂಡಿಂಗ್ ಮೊತ್ತ. ನವೆಂಬರ್ 2ರಂದು ಶಾಪಿಂಗ್ ಮಾಡಿದ ದಿನದಿಂದ ನವೆಂಬರ್ 17ರವರೆಗೆ 95 ಸಾವಿರ ರೂ ಹಣಕ್ಕೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಇದರ ಜೊತೆಗೆ ತೆರಿಗೆ, ಸರ್ವಿಸ್ ಚಾರ್ಜ್ ಇತ್ಯಾದಿ ಶುಲ್ಕಗಳು ಸೇರುತ್ತಾ ಹೋಗುತ್ತವೆ.

ನೀವು ಪ್ರತೀ ತಿಂಗಳೂ ಮಿನಿಮಮ್ ಅಮೌಂಟ್ ಮಾತ್ರ ಕಟ್ಟುತಲೇ ಹೋದಾಗ ಇಂತಿಷ್ಟು ತಿಂಗಳಾದ ಬಳಿಕ ಬಡ್ಡಿ ಮತ್ತಿತರ ಶುಲ್ಕಗಳ ಮೊತ್ತವು ಕನಿಷ್ಠ ಮೊತ್ತಕ್ಕೆ ಸಮನಾಗಿ ಹೋಗುತ್ತದೆ, ಅಥವಾ ಅದಕ್ಕಿಂತಲೂ ಹೆಚ್ಚೇ ಆಗಿ ಹೋಗುತ್ತದೆ. ಆಗ ನಿಮ್ಮ ಔಟ್‌ಸ್ಟ್ಯಾಂಡಿಂಗ್ ಮೊತ್ತ ಅಥವಾ ಅಸಲು ಮೊತ್ತ ಇದ್ದ ಹಾಗೆಯೇ ಇರುತ್ತದೆ, ಅಥವಾ ಇನ್ನೂ ಹೆಚ್ಚಾಗಿ ಹೋಗುತ್ತಿರುತ್ತದೆ.

ಸಾಲದ ಸುಳಿ

ಸಾಲದ ಸುಳಿ

ನೀವು ಪೂರ್ತಿ ಮೊತ್ತ ಕಟ್ಟಡದೇ ಔಟ್‌ಸ್ಟ್ಯಾಂಡಿಂಗ್ ಹಣವನ್ನು ಹಾಗೆಯೇ ಇರಿಸಿಕೊಳ್ಳುತ್ತಾ ಹೋದಿರೆಂದಿಟ್ಟುಕೊಳ್ಳಿ, ಆಗ ನೀವು ಹೊಸದಾಗಿ ಕ್ರೆಡಿಟ್ ಕಾರ್ಡ್‌ನಿಂದ ಶಾಪಿಂಗ್ ಮಾಡಿದಾಗ ಆ ಹಣಕ್ಕೂ ಬಡ್ಡಿ ಅನ್ವಯ ಆಗುತ್ತದೆ. ನಿಮಗೆ ಬಡ್ಡಿರಹಿತ ಕಾಲಾವಕಾಶ ಇರುವುದಿಲ್ಲ. ಇದೊಂದು ರೀತಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಂತೆ.

ಹೊಸ ನಿಯಮ ಏನು ಹೇಳುತ್ತದೆ?

ಹೊಸ ನಿಯಮ ಏನು ಹೇಳುತ್ತದೆ?

ಆರ್‌ಬಿಐ ರೂಪಿಸಿರುವ ಹೊಸ ನಿಯಮದ ಪ್ರಕಾರ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರು ಕಟ್ಟಬಹುದಾದ ಕನಿಷ್ಠ ಮೊತ್ತವನ್ನು ಹೆಚ್ಚಿಸಬೇಕು. ಇದರಿಂದ ಪ್ರತೀ ತಿಂಗಳು ಮಿನಿಮಮ್ ಅಮೌಂಟ್ ಕಟ್ಟುತ್ತಾ ಹೋದರೆ ಔಟ್‌ಸ್ಟ್ಯಾಂಡಿಂಗ್ ಮೊತ್ತ ಕಡಿಮೆ ಆಗುತ್ತಾ ಹೋಗಬೇಕು. ಆ ರೀತಿಯಲ್ಲಿ ಕನಿಷ್ಠ ಮೊತ್ತವನ್ನು ನಿಗದಿ ಪಡಿಸುವಂತೆ ಸೂಚಿಸಿದೆ. ಎಷ್ಟು ಮೊತ್ತವನ್ನು ಮಿನಿಮಮ್ ಅಮೌಂಟ್ ಆಗಿ ನಿಗದಿ ಮಾಡಬೇಕೆಂಬುದು ಕ್ರೆಡಿಟ್ ಕಾರ್ಡ್ ಕಂಪನಿಗಳ ನಿರ್ಧಾರಕ್ಕೆ ಬಿಟ್ಟಿದ್ದು. ಒಟ್ಟಿನಲ್ಲಿ ಕನಿಷ್ಠ ಮೊತ್ತವನ್ನು ಪಾವತಿಸುತ್ತಾ ಹೋದಂತೆಲ್ಲಾ ಬಾಕಿ ಅಸಲು ಮೊತ್ತ ಕಡಿಮೆ ಆಗುತ್ತಾ ಹೋಗಬೇಕು ಎಂಬುದು ಉದ್ದೇಶ.

ಸದ್ಯ, ಒಟ್ಟು ಬಿಲ್ ಮೊತ್ತದ ಶೇ. 5ರಷ್ಟು ಹಣವನ್ನು ಮಿನಿಮಮ್ ಪಾವತಿಯ ಮೊತ್ತವಾಗಿ ಗಣಿಸಲಾಗುತ್ತದೆ. ಈ ಮೊತ್ತವನ್ನು ಶೇ. 10ಕ್ಕೆ ಹೆಚ್ಚಿಸಬಹುದು. ನೀವು 10 ಸಾವಿರ ರೂ ಶಾಪಿಂಗ್ ಮಾಡಿದರೆ ಮಿನಿಮಮ್ ಅಮೌಂಟ್ 500 ರೂ ಇರುತ್ತದೆ. ಇದನ್ನು 1 ಸಾವಿರ ರೂಪಾಯಿಯಾಗಿ ನಿಗದಿ ಮಾಡಬಹುದು.

 

ಮಿನಿಮಮ್ ಅಮೌಂಟ್ ಪಾವತಿ ಪ್ರವೃತ್ತಿ ಬಿಡಿ

ಮಿನಿಮಮ್ ಅಮೌಂಟ್ ಪಾವತಿ ಪ್ರವೃತ್ತಿ ಬಿಡಿ

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸರಿಯಾಗಿ ಕಟ್ಟದೇ ಇದ್ದರೆ ಬಡ್ಡಿ ದರ ವಿಪರೀತವಾಗಿರುತ್ತದೆ. ತಿಂಗಳಿಗೆ ಶೇ. 2ರಿಂದ ಹಿಡಿದು ಶೇ. 4 ಅಥವಾ 5ರವರೆಗೂ ಬಡ್ಡಿ ಬೀಳಬಹುದು. ನೀವು ಪ್ರತೀ ತಿಂಗಳೂ ಕನಿಷ್ಠ ಮೊತ್ತ ಮಾತ್ರ ಪಾವತಿಸುತ್ತಿದ್ದರೆ ಅಸಲು ತೀರುವ ಹೊತ್ತಿಗೆ ಬಹಳ ಹೆಚ್ಚಿನ ಬಡ್ಡಿ ಕಟ್ಟಿರುತ್ತೀರಿ. ಈಗ ಬ್ಯಾಂಕುಗಳಲ್ಲಿ ಹೆಚ್ಚೂಕಡಿಮೆ ನಿಮಗೆ ವರ್ಷಕ್ಕೆ ಶೇ. 18ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಶೇ. 30ರಿಂದ 50ರವರೆಗೆ ಬಡ್ಡಿ ಕಟ್ಟುವ ಪ್ರಮೇಯ ಬರುತ್ತದೆ.

ಸಾಧ್ಯವಾದಷ್ಟೂ ಬಿಲ್‌ನ ಪೂರ್ಣ ಮೊತ್ತವನ್ನು ಕಟ್ಟಿರಿ. ಆಗ ನಿಮ್ಮ ಹಣಕ್ಕೆ ಯಾವ ಬಡ್ಡಿಯೂ ಬೀಳುವುದಿಲ್ಲ. ಬಡ್ಡಿ ರಹಿತವಾಗಿ ನೀವು ಸಾಲವನ್ನು ನಿಭಾಯಿಸಬಹುದು.

ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ದೊಡ್ಡ ಮೊತ್ತದ ಶಾಪಿಂಗ್ ಮಾಡುವ ಅಗತ್ಯ ಬಿದ್ದಲ್ಲಿ ನೀವು ಇಎಂಐ ಆಗಿ ಅದನ್ನು ಪರಿವರ್ತಿಸಿಕೊಳ್ಳಬಹುದು. 40 ಸಾವಿರ ರೂನಷ್ಟು ಸ್ವೈಪ್ ಮಾಡಿದ್ದಿರಿ ಎಂದುಕೊಳ್ಳಿ, ಅದನ್ನು 6 ತಿಂಗಳ ಕಂತುಗಳಂತೆ ಕಟ್ಟುವ ಅವಕಾಶ ಇರುತ್ತದೆ. ಅದನ್ನು ಉಪಯೋಗಿಸಿಕೊಳ್ಳಿ. ಆಗ ನಿಮಗೆ ಹೊರೆಯಾಗದು. ಬಡ್ಡಿಯೂ ಬೀಳದು.

English summary

RBI Directs Credit Card Companies To Fix Minimum Amount Due Formula

The Reserve Bank of India (RBI) recently asked banks and card issuers to calculate the minimum amount due on credit card bills in a way that does not result in negative amortisation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X