For Quick Alerts
ALLOW NOTIFICATIONS  
For Daily Alerts

15 ವರ್ಷಗಳ ಹಿಂದಕ್ಕೆ ತಲುಪಲಿದೆ ಗೃಹ ಸಾಲ ಬಡ್ಡಿ ದರ

|

ಶುಕ್ರವಾರ (ಮೇ 22) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಡ್ಡಿ ಕಡಿತದ ಬಗ್ಗೆ ಪ್ರಕಟಿಸಿದ್ದು ,ಸುರಕ್ಷಿತ ಆದಾಯ ಹೊಂದಿರುವ ಮನೆಮಾಲೀಕರಿಗೆ ಸಂತೋಷದ ಸುದ್ದಿ ಸಿಕ್ಕಿದೆ. ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 7 ಪರ್ಸೆಂಟ್‌ಗೆ ಇಳಿಸಲಾಗಿದೆ. ಇದು 15 ವರ್ಷಗಳಲ್ಲಿ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಇದಲ್ಲದೆ, ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಆದಾಯ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಾಲಗಾರರು ಹೆಚ್ಚುವರಿ ಮೂರು ತಿಂಗಳ ಇಎಂಐ ಮುಂದೂಡಿಕೆ ಸಿಕ್ಕಂತಾಗಿದೆ.

ಸಾಲದ ಹೊರೆ ಕಡಿಮೆ

ಸಾಲದ ಹೊರೆ ಕಡಿಮೆ

ಪ್ರಸ್ತುತ ಆದಾಯದ ಒತ್ತಡವನ್ನು ಅನುಭವಿಸುತ್ತಿರುವ ಸಾಲಗಾರರು ಮರುಪಾವತಿಯನ್ನು ಮೂರು ತಿಂಗಳವರೆಗೆ ಮುಂದೂಡಬಹುದು. ಜೊತೆಗೆ ಸಾಲದ ಹೊರೆ ತಗ್ಗಿಸಬಹುದು. ಉದಾಹರಣೆಗೆ 15 ವರ್ಷಗಳ ಉಳಿದ ಅವಧಿಯೊಂದಿಗೆ 30 ಲಕ್ಷ ರುಪಾಯಿಗಳ ಸಾಲಕ್ಕೆ, ಒಟ್ಟು ಹೆಚ್ಚುವರಿ ಬಡ್ಡಿ ಅಂದಾಜು 2.34 ಲಕ್ಷ ರುಪಾಯಿ, ಇದು ಎಂಟು ಇಎಂಐಗಳಿಗೆ ಸಮಾನವಾಗಿರುತ್ತದೆ. ಬಡ್ಡಿದರಗಳು ಕಡಿಮೆಯಾದ ಕಾರಣ ಈ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಈ ಮೊತ್ತದ ಭಾಗವನ್ನು ರಿಯಾಯಿತಿಯಲ್ಲಿ ಬಡ್ಡಿದರಕ್ಕೆ ಮನ್ನಾ ಮಾಡಬಹುದು.

ಬಡ್ಡಿ ದರ ಕಡಿತ

ಬಡ್ಡಿ ದರ ಕಡಿತ

ಬಡ್ಡಿದರ ಅಸ್ತಿತ್ವದಲ್ಲಿರುವ ಸಾಲಗಾರರಿಗೆ, ಎಸ್‌ಬಿಐನ ಗೃಹ ಸಾಲಕ್ಕೆ 30 ಲಕ್ಷ ರುಪಾಯಿಗಳ ಬಡ್ಡಿದರವನ್ನು 7.4 ಪರ್ಸೆಂಟ್‌ರಿಂದ 7 ಪರ್ಸೆಂಟ್‌ಗೆ ಇಳಿಸಲಾಗುತ್ತದೆ. 30 ಲಕ್ಷದಿಂದ 75 ಲಕ್ಷ ರುಪಾಯಿವರೆಗಿನ ಸಾಲಗಳಿಗೆ, 7.65 ಪರ್ಸೆಂಟ್‌ನಿಂದ 7.25 ಪರ್ಸೆಂಟ್‌ಗೆ ಇಳಿಕೆ ಕಾಣಲಿದೆ. ಇನ್ನು 75 ಲಕ್ಷ ರುಪಾಯಿಗಿಂತ ಹೆಚ್ಚಿನ ಸಾಲಗಳಿಗೆ ಬಡ್ಡಿದರವನ್ನು 7.75 ರಿಂದ 7.35 ಪರ್ಸೆಟ್‌ಗೆ ಇಳಿಸಲಾಗುತ್ತದೆ. ಮಹಿಳಾ ಸಾಲಗಾರರ ಬಡ್ಡಿದರವನ್ನು ಹೆಚ್ಚುವರಿ 5 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆಗೊಳಿಸಲಾಗುತ್ತದೆ.

30 ಲಕ್ಷ ರುಪಾಯಿ ಸಾಲಕ್ಕೆ ಇಎಂಐ ಕಡಿತ

30 ಲಕ್ಷ ರುಪಾಯಿ ಸಾಲಕ್ಕೆ ಇಎಂಐ ಕಡಿತ

ಅಕ್ಟೋಬರ್ 2019 ರಿಂದ, ಇಎಂಐ ಕೊರತೆಯು ಗೃಹ ಸಾಲದ ದರವನ್ನು ರೆಪೊ ದರಕ್ಕೆ ಜೋಡಿಸಿದಾಗಿನಿಂದ ಬಡ್ಡಿದರವು 1.4 ಪರ್ಸೆಂಟ್‌ರಷ್ಟು ಕುಸಿದಿದೆ. ಇದು 2019 ರ ಅಕ್ಟೋಬರ್‌ನಲ್ಲಿ 30 ಲಕ್ಷ ರುಪಾಯಿಯ ಸಾಲದ ಇಎಂಐ 22,855 ರುಪಾಯಿಯಿಂದ ಈಗ ಇಎಂಐ 19,959 ರುಪಾಯಿಗೆ ಇಳಿದಿದೆ. ಅಂದರೆ ಒಂದು ತಿಂಗಳಿಗೆ 2,896 ರುಪಾಯಿ ಕಡಿಮೆ.

ಮೇ 8 ರಂದು ಎಸ್‌ಬಿಐನಂತಹ ಕೆಲವು ಬ್ಯಾಂಕುಗಳು ಹೊಸ ಸಾಲಗಾರರ ಮೇಲಿನ ಸಾಲಗಾರರ ಬಡ್ಡಿದರವನ್ನು 20 ಬಿಪಿಎಸ್ ಹೆಚ್ಚಿಸಿವೆ. ರೆಪೊ ದರಕ್ಕೆ ಹೋಲಿಸಿದರೆ ಬಡ್ಡಿದರ 7.05 ಪರ್ಸೆಂಟ್ ಆಗಿತ್ತು. ಇದು ಮಾನದಂಡ ದರಕ್ಕಿಂತ ಹೆಚ್ಚಾಗಿದೆ. ಎಸ್‌ಬಿಐ ಪ್ರಕಾರ, ಸಾಂಕ್ರಾಮಿಕ ರೋಗದಿಂದಾಗಿ ಸಾಲಗಾರರ ಸಾಲದ ಅಪಾಯ ಹೆಚ್ಚಾಗಿದೆ , ಆದ್ದರಿಂದ ಬ್ಯಾಂಕ್ ರಿಸ್ಕ್ ಪ್ರೀಮಿಯಂ ಅನ್ನು 20 ಬಿಪಿಎಸ್ ಹೆಚ್ಚಿಸಲಾಗಿದೆ.

 

English summary

RBI Repo Rate Cut Impact Home Loan Rates Set To Fall To 15 Years Low

The 40 bps repo rate cut by RBI on Friday, which is the eighth consecutive respite for borrowers, has brought home loan rates to their lowest level in 15 years
Story first published: Saturday, May 23, 2020, 13:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X