For Quick Alerts
ALLOW NOTIFICATIONS  
For Daily Alerts

ಅಯ್ಯೋ ಹೆಚ್ಚಾಯ್ತಪ್ಪ ಇಎಂಐ: ನಿಮಗೆ ರಿಲೀಫ್ ನೀಡುವ ಟಿಪ್ಸ್ ಇಲ್ಲಿದೆ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಮೇ ತಿಂಗಳಿನಲ್ಲಿ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಜೂನ್ ತಿಂಗಳಿನಲ್ಲಿ ಮತ್ತೆ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 4.90ಗೆ ತಲುಪಿದೆ. ಇದರಿಂದಾಗಿ ರೆಪೋ ಆಧಾರಿತ ಸಾಲದ ಮೇಲಿನ ಬಡ್ಡಿದರವು, ಮುಖ್ಯವಾಗಿ ಗೃಹ ಸಾಲದ ಮೇಲಿನ ಬಡ್ಡಿದರವು ಹೆಚ್ಚಾಗಲಿದೆ.

ಈಗಾಗಲೇ ಕಳೆದ ತಿಂಗಳು ಆರ್‌ಬಿಐ ಕೈಗೊಂಡ ಕ್ರಮದಿಂದಾಗಿ ಇಎಂಐ ದರ ಹೆಚ್ಚಾಗಿದೆ. ಈಗ ಮತ್ತೆ ಅಧಿಕವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಬ್ಯಾಂಕುಗಳು ತಮ್ಮ ಹೊರೆಯನ್ನು ಸಾಮಾನ್ಯವಾಗಿ ಗ್ರಾಹಕರ ಮೇಲೆ ವಿಧಿಸುತ್ತದೆ.

ರೆಪೋ ದರ ಮತ್ತೆ ಏರಿಕೆ: ಇಎಂಐ ಹೊರೆ ಅಧಿಕ ಸೇರಿ ವೈಯಕ್ತಿಕ ಹಣಕಾಸಿನ ಮೇಲೆ ಏನೆಲ್ಲ ಪ್ರಭಾವ?ರೆಪೋ ದರ ಮತ್ತೆ ಏರಿಕೆ: ಇಎಂಐ ಹೊರೆ ಅಧಿಕ ಸೇರಿ ವೈಯಕ್ತಿಕ ಹಣಕಾಸಿನ ಮೇಲೆ ಏನೆಲ್ಲ ಪ್ರಭಾವ?

ಈಗ ರೆಪೋ ದರ ಮತ್ತೆ ಹೆಚ್ಚಳ ಮಾಡಿರುವ ಕಾರಣದಿಂದಾಗಿ ಬ್ಯಾಂಕುಗಳು ಮತ್ತೆ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಒಂದೆರಡು ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸಿದೆ. ಈ ಸಾಲದ ಬಡ್ಡಿದರ ಹೆಚ್ಚಾದರೆ ನೀವು ಮಾಸಿಕವಾಗಿ ಕಟ್ಟಬೇಕಾದ ಇಎಂಐ ಮೊತ್ತ ಕೂಡಾ ಅಧಿಕವಾಗುತ್ತದೆ. ನಿಮ್ಮ ಇಎಂಐ ಮೊತ್ತ ಪಾವತಿ ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರುವಾಗ ನೀವು ಕೆಲವು ಕ್ರಮಗಳನ್ನು ಕೈಗೊಂಡು ರಿಲೀಫ್ ಆಗಲು ಸಾಧ್ಯವಾಗಲಿದೆ. ನಿಮ್ಮ ಇಎಂಐ ಕಡಿಮೆ ಮಾಡಲು ನಿಮಗೆ ಇಲ್ಲಿದೆ ಟಿಪ್ಸ್ ಮುಂದೆ ಓದಿ...

 ಕಡಿಮೆ ಬಡ್ಡಿದರ ಎಲ್ಲಿದೆ ಎಂದು ಪರಿಶೀಲಿಸಿ

ಕಡಿಮೆ ಬಡ್ಡಿದರ ಎಲ್ಲಿದೆ ಎಂದು ಪರಿಶೀಲಿಸಿ

ನೀವು ಈಗಾಗಲೇ ಗೃಹ ಸಾಲವನ್ನು ಪಡೆದುಕೊಂಡಿದ್ದರೆ, ಸಾಲದ ಬಡ್ಡಿದರ ಅಧಿಕವಾಗಿದ್ದರೆ ಬೇರೆ ಎಲ್ಲಿ ಕಡಿಮೆ ಬಡ್ಡಿದರ ಇದೆ ಎಂದು ಪರಿಶೀಲನೆ ಮಾಡಿ. ಎಲ್ಲಾ ಬ್ಯಾಂಕುಗಳು ಒಂದೇ ರೀತಿಯಾಗಿ ಬಡ್ಡಿದರವನ್ನು ವಿಧಿಸುವುದಿಲ್ಲ. ಎಸ್‌ಬಿಐನ ಬಡ್ಡಿದರಕ್ಕೂ ಎಚ್‌ಡಿಎಫ್‌ಸಿ ಬಡ್ಡಿದರಕ್ಕೂ ವ್ಯತ್ಯಾಸವಿದೆ. ನೀವು ಸಾಲ ಪಡೆದ ಬ್ಯಾಂಕ್‌ನಲ್ಲಿ ಬಡ್ಡಿದರವು ಅಧಿಕವಾಗಿದ್ದರೆ ನೀವು ಸಾಲವನ್ನು ಕಡಿಮೆ ಬಡ್ಡಿದರ ಇರುವ ಬ್ಯಾಂಕ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದು. ಹಲವಾರು ಬ್ಯಾಂಕುಗಳಲ್ಲಿ ಯಾವುದೇ ದಂಡವನ್ನು ವಿಧಿಸದೆಯೇ ಈ ಕ್ರಮಕೈಗೊಳ್ಳಲಾಗುತ್ತದೆ.

 ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿ

ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿ

ನೀವು ಇಎಂಐ ಅವಧಿಯನ್ನು ವಿಸ್ತರಣೆ ಮಾಡಿದಂತೆ ನಿಮ್ಮ ಇಎಂಐ ಮೊತ್ತವು ಕಡಿಮೆಯಾಗಲಿದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಮಾಸಿಕ ಬಜೆಟ್ ನಿರ್ವಹಣೆ ಹಲವಾರು ಮಂದಿಗೆ ದೊಡ್ಡ ಸಂಕಷ್ಟವಾಗಿದೆ. ಹೀಗಿರುವಾಗ ನಿಮಗೆ ಮಾಸಿಕ ಇಎಂಐ ಮೊತ್ತ ಅಧಿಕ ಎಂದಾದರೆ ನೀವು ಇಎಂಐ ಪಾವತಿ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಸಾಲದ ಪಡೆದವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿದ್ದರೆ ಹಲವಾರು ಬ್ಯಾಂಕುಗಳು ಅವಧಿ ವಿಸ್ತರಣೆಗೆ ಅವಕಾಶ ನೀಡುತ್ತದೆ.

 ಭಾಗಶಃ ಪಾವತಿ ಮಾಡಿದರೆ ಸೂಕ್ತ

ಭಾಗಶಃ ಪಾವತಿ ಮಾಡಿದರೆ ಸೂಕ್ತ

ಸಾಲ ಪಡೆದಿರುವವರು ತಮ್ಮ ಸಾಲದ ಕೊಂಚ ಮೊತ್ತವನ್ನು ಪ್ರೀ ಪೆಮೆಂಟ್ ಮಾಡಿಬಿಡಬಹುದು. ಕೆಲವು ಬ್ಯಾಂಕುಗಳಲ್ಲಿ ಇದಕ್ಕೆ ಕೆಲವು ಷರತ್ತುಗಳು ಇರುತ್ತದೆ. ಎಚ್‌ಡಿಎಫ್‌ಸಿಯಂತಹ ಕೆಲವು ಬ್ಯಾಂಕುಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಇಎಂಐ ಆಧಾರದಲ್ಲೇ ಪಾವತಿ ಮಾಡಬೇಕಾಗುತ್ತದೆ. ನೀವು ಈ ಅವಧಿ ಪೂರ್ಣಗೊಂಡ ಕೂಡಲೇ ನಿಮ್ಮಲ್ಲಿ ಇದ್ದ ಬೋನಸ್, ಇತರೆ ಯಾವುದೇ ಹಣವನ್ನು ಪಾವತಿಸಿ ಸಾಲದ ಹೊರೆಯನ್ನು ಒಮ್ಮೆಗೆ ಕೊಂಚ ಇಳಿಸಿಕೊಳ್ಳಿ. ಇದರಿಂದಾಗಿ ಮಾಸಿಕ ಇಎಂಐ ಮೊತ್ತ ಕಡಿಮೆಯಾಗುತ್ತದೆ. ನಿಮಗೆ ಒಂದು ಲಕ್ಷ ಸಾಲ ಇದೆ ಎಂದು ಅಂದುಕೊಳ್ಳಿ. ನೀವು ಐದು ಸಾವಿರದಂತೆ ಒಂದು ವರ್ಷ ಪಾವತಿ ಮಾಡಿದ್ದರೆ, ಐವತ್ತು ಸಾವಿರ ಪಾವತಿ ಮಾಡಿದ್ದಂತೆ ಆಗುತ್ತದೆ. ಆ ಬಳಿಕ ನೀವು ನಿಮ್ಮಲ್ಲಿದ್ದ ಉಳಿತಾಯದ ಮೊತ್ತವಾದ ಇಪ್ಪತ್ತು-ಮೂವತ್ತು ಸಾವಿರವನ್ನು ಒಮ್ಮೆಗೆ ಪಾವತಿಸಿದಿರಿ ಎಂದುಕೊಳ್ಳಿ. ಈ ವೇಳೆ ನೀವು ನೀಡಬೇಕಾದ ಸಾಲದ ಮೊತ್ತ ಕಡಿಮೆಯಾಗುತ್ತದೆ. ಸಾಲಕ್ಕೆ ಬಡ್ಡಿದರವೂ ಇರಲಿದೆ ಎಂಬುವುದು ನೆನಪಿರಲಿ. ನಿಮಗೆ ಈಗಲೇ ಭಾಗಶಃ ಪಾವತಿ ಮಾಡುವ ಆಯ್ಕೆಯಿದ್ದರೆ ಮಾಡಿಬಿಡಿ.

 ಹೂಡಿಕೆ ಮಾಡುತ್ತಿದ್ದೀರಾ?, ಇಲ್ಲಿ ಗಮನಿಸಿ

ಹೂಡಿಕೆ ಮಾಡುತ್ತಿದ್ದೀರಾ?, ಇಲ್ಲಿ ಗಮನಿಸಿ

ಸಾಲ ಹೊಂದಿರುವ ನೀವು ಬೇರೆ ಎಲ್ಲಾದರೂ ಹೂಡಿಕೆ ಮಾಡುತ್ತಿರಬಹುದು. ಈ ಹೂಡಿಕೆಯಿಂದಾಗಿ ನಿಮಗೆ ಎಷ್ಟು ರಿಟರ್ನ್ ಲಭ್ಯವಾಗುತ್ತಿದೆ ಎಂಬುವುದನ್ನು ಪರಿಶೀಲನೆ ಮಾಡಿಕೊಳ್ಳಿ. ನಿಮ್ಮ ಸಾಲದ ಬಡ್ಡಿದರಕ್ಕಿಂತ ತೀರಾ ಕಡಿಮೆ ರಿಟರ್ನ್ ನಿಮಗೆ ಲಭ್ಯವಾಗುತ್ತಿದ್ದರೆ ಈ ಹೂಡಿಕೆಯನ್ನು ಹಿಂದಕ್ಕೆ ಪಡೆದು ನಿಮ್ಮ ಸಾಲವನ್ನು ಮರುಪಾವತಿ ಮಾಡಿ. ಇದರಿಂದಾಗಿ ಇಎಂಐ ಮೊತ್ತವು ಇಳಿಕೆಯಾಗಲು ಸಾಧ್ಯವಾಗಲಿದೆ.

 ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಆಲೋಚಿಸಿ

ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಆಲೋಚಿಸಿ

ನೀವು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಎಂದು ಎರಡು ಬಾರಿ ಪರಿಶೀಲನೆ ಮಾಡಿಕೊಳ್ಳಿ. ನೀವು ಆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುವಂತಹ ಆರ್ಥಿಕ ಸ್ಥಿತಿ ಇದ್ದರೆ ಮಾತ್ರ ಸಾಲವನ್ನು ಪಡೆದುಕೊಳ್ಳಿ. ಸಾಲದ ಬಡ್ಡಿದರ ಇನ್ನಷ್ಟು ಹೆಚ್ಚಳವಾದರೆ ನಿಮಗೆ ಇದು ಸಂಕಷ್ಟವನ್ನು ಉಂಟು ಮಾಡಬಹುದು. ಆದ್ದರಿಂದ ತೀರಾ ಅಗತ್ಯವಿದ್ದರೆ, ಬೇರೆ ಯಾವುದೇ ದಾರಿ ಇಲ್ಲ ಎಂದಾದರೆ ಮಾತ್ರ ಸಾಲವನ್ನು ಪಡೆದುಕೊಳ್ಳಿ. ಇಲ್ಲವಾದರೆ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವುದು ಸೂಕ್ತ. ಇದು ಬೇರೆ ಸಾಲಕ್ಕಿಂತ ಕೊಂಚ ಕಡಿಮೆ ಬಡ್ಡಿದರದ ಸಾಲವಾಗಿದೆ. ನೀವು ಬೇರೆ ಸಾಲ ಹೊಂದಿದ್ದರೆ, ಆ ಸಾಲವನ್ನು ಮೊದಲು ಮರುಪಾವತಿ ಮಾಡಿಬಿಡಿ. ಆ ಬಳಿಕ ಬೇರೆ ಸಾಲದ ಆಲೋಚನೆ ಮಾಡಿ.

English summary

Rising EMIs: How you can decrease your home loan EMIs in Kannada

Rising EMIs due to RBI repo rate hike: Here we explain how you can decrease your home loan EMIs in Kannada. Read on.
Story first published: Saturday, June 11, 2022, 11:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X