For Quick Alerts
ALLOW NOTIFICATIONS  
For Daily Alerts

SWIFT ನಿರ್ಬಂಧದ ಬಳಿಕ ರಷ್ಯಾ ಕರೆನ್ಸಿ ರೂಬಲ್‌ ಶೇ.26ರಷ್ಟು ಕುಸಿತ

|

ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಹಿನ್ನೆಲೆ ಪಾಶ್ಚಿಮಾತ್ಯ ನಿರ್ಬಂಧಗಳ ಮಧ್ಯೆ ಕುಸಿಯುತ್ತಿರುವ ರೂಬಲ್ ಅನ್ನು ಹೆಚ್ಚಿಸಲು ರಷ್ಯಾ ಕೇಂದ್ರ ಬ್ಯಾಂಕ್‌ ಪ್ರಯತ್ನ ನಡೆಸುತ್ತಿದೆ. ಆದರೆ ರೂಬಲ್‌ ಮಾತ್ರ ಶೇ.26 ಕುಸಿತ ಕಂಡಿದೆ. ಹತಾಶ ಪ್ರಯತ್ನದಲ್ಲಿ ರಷ್ಯಾದ ಕೇಂದ್ರ ಬ್ಯಾಂಕ್ ಸೋಮವಾರ ತನ್ನ ಪ್ರಮುಖ ದರವನ್ನು ತೀವ್ರವಾಗಿ ಹೆಚ್ಚಿಸಿದೆ.

 

ಬ್ಯಾಂಕ್ ಬೆಂಚ್ಮಾರ್ಕ್ ದರವನ್ನು 8.5% ರಿಂದ 20% ಕ್ಕೆ ಹೆಚ್ಚಿಸಿದೆ. ಇದು ದೇಶದ ಆರ್ಥಿಕ ಸ್ಥಿರತೆಗೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುವ ಅಭೂತಪೂರ್ವ ಕ್ರಮವಾಗಿದೆ. SWIFT ಜಾಗತಿಕ ಪಾವತಿ ವ್ಯವಸ್ಥೆಯಿಂದ ರಷ್ಯಾದ ಬ್ಯಾಂಕುಗಳನ್ನು ನಿರ್ಬಂಧಿಸುವ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಧಾರದಿಂದ ರಷ್ಯಾದ ಅಂದಾಜು 640 ಶತಕೋಟಿ ಡಾಲರ್‌ ಬೊಕ್ಕಸವು ನಷ್ಟವಾಗಿದೆ.

 

 ಉಕ್ರೇನ್-ರಷ್ಯಾ ಯುದ್ಧ: ಪಾತಾಳಕ್ಕೆ ಕುಸಿದ ಕ್ರಿಪ್ಟೋ ಮೌಲ್ಯ ಉಕ್ರೇನ್-ರಷ್ಯಾ ಯುದ್ಧ: ಪಾತಾಳಕ್ಕೆ ಕುಸಿದ ಕ್ರಿಪ್ಟೋ ಮೌಲ್ಯ

ಹಣಕಾಸು ವ್ಯವಸ್ಥೆಯಲ್ಲಿ ಹೆಚ್ಚಿನ ಹಣವನ್ನು ತುಂಬುವ ಮೂಲಕ ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ ಬಿಕ್ಕಟ್ಟನ್ನು ನಿಭಾಯಿಸಲು ಬ್ಯಾಂಕುಗಳಿಗೆ ಸಹಾಯ ಮಾಡಲು ಕೇಂದ್ರ ಬ್ಯಾಂಕ್ ಇತರ ಕ್ರಮಗಳನ್ನು ಆದೇಶಿಸಿದೆ. ಸೋಮವಾರದ ಆರಂಭದಲ್ಲಿ ಯುಎಸ್ ಡಾಲರ್ ವಿರುದ್ಧ ರೂಬಲ್ ಸುಮಾರು 30% ನಷ್ಟು ಕುಸಿದಿದೆ.

 ನಿರ್ಬಂಧದ ಬಳಿಕ ರಷ್ಯಾ ಕರೆನ್ಸಿ ರೂಬಲ್‌ ಶೇ.26ರಷ್ಟು ಕುಸಿತ

ಈ ಕೂಡಲೇ ರಷ್ಯಾದ ಕೇಂದ್ರ ಬ್ಯಾಂಕ್‌ ಕ್ರಮದ ನಂತರ ಸ್ಥಿರವಾಯಿತು. ಇದು ಪ್ರತಿ ಡಾಲರ್‌ಗೆ ದಾಖಲೆಯ ಕಡಿಮೆ 105.27 ನಲ್ಲಿ ವಹಿವಾಟು ನಡೆಸುತ್ತಿದೆ, ಶುಕ್ರವಾರ ತಡವಾಗಿ ಪ್ರತಿ ಡಾಲರ್‌ಗೆ 84ರಂತೆ ಇದ್ದು ಕಡಿಮೆಯಾಗಿದೆ. ಕಳೆದ ವಾರ ಘೋಷಿಸಿದ ನಿರ್ಬಂಧಗಳು ರಷ್ಯಾದ ಕರೆನ್ಸಿಯನ್ನು ಇತಿಹಾಸದಲ್ಲಿ ಡಾಲರ್‌ಗೆ ಹೋಲಿಸಿದರೆ ಅತ್ಯಂತ ಕಡಿಮೆ ಮಟ್ಟಕ್ಕೆ ಕೊಂಡೊಯ್ದವು.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ; ಷೇರುಪೇಟೆ ತಲ್ಲಣ, 2,000 ಸೆನ್ಸೆಕ್ಸ್ ಕುಸಿತಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ; ಷೇರುಪೇಟೆ ತಲ್ಲಣ, 2,000 ಸೆನ್ಸೆಕ್ಸ್ ಕುಸಿತ

ರೂಪಾಯಿ 40 ಪೈಸೆ ಕುಸಿತ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 40 ಪೈಸೆ ಕುಸಿದು 75.33 ಕ್ಕೆ ತಲುಪಿತು. ಹಿಂದಿನ ದಿನದ ವಹಿವಾಟಿನಲ್ಲಿ, ರೂಪಾಯಿ ಮೌಲ್ಯವು 27 ಪೈಸೆಯಷ್ಟು ಏರಿಕೆಯಾಗಿದ್ದು, ಡಾಲರ್ ಎದುರು 75.33 ಕ್ಕೆ ಸ್ಥಿರವಾಯಿತು. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಕಚ್ಚಾ ಬೆಲೆಗಳ ಏರಿಕೆಯೂ ಕಂಡು ಬಂದಿದೆ.

ರಷ್ಯಾವು ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದಂತೆ, ಮಾಸ್ಕೋದ ಮೇಲೆ ಹಲವಾರು ರಾಷ್ಟ್ರಗಳು ನಿರ್ಬಂಧವನ್ನು ಹೇರಲು ಮುಂದಾಗಿದೆ. ಈ ನಿರ್ಣಾಯಕ ಹಂತದಲ್ಲಿ, ಕ್ರಿಪ್ಟೋ ಕರೆನ್ಸಿಗಳು ಅಥವಾ ಡಿಜಿಟಲ್ ಕರೆನ್ಸಿಗಳು ನಿರ್ಬಂಧಗಳಿಂದ ದೂರವಿರಲು ಅಥವಾ ಆರ್ಥಿಕ ನಿರ್ಬಂಧಗಳಿಂದ ಪಾರಾಗಲು ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರ ಮಾಡಬಹುದು ಎಂದು ಸುದ್ದಿ ಆಗುತ್ತಿದೆ.

ಆರ್ಥಿಕ ನಿರ್ಬಂಧದಿಂದ ಪಾರಾಗಲು ರಷ್ಯಾ ಕ್ರಿಪ್ಟೋಕರೆನ್ಸಿಯನ್ನು ಬಳಸುವ ಸಾಧ್ಯತೆ. ಇದು ಡಿಜಿಟಲ್ ಕರೆನ್ಸಿಗಳ ಮೂಲಕ ಜಾಗತಿಕವಾಗಿ ಕೆಲಸ ಮಾಡುವ ಯಾರೊಂದಿಗಾದರೂ ಒಪ್ಪಂದಗಳನ್ನು ಮಾಡಿಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ. ಕ್ರೇಮಿಯಾವನ್ನು ರಷ್ಯಾವು 2014ರಲ್ಲಿ ಆಕ್ರಮಣ ಮಾಡಿದ ಬಳಿಕ ರಷ್ಯಾದ ಬ್ಯಾಂಕುಗಳು, ತೈಲ ಮತ್ತು ಅನಿಲ ಮಧ್ಯಸ್ಥರೊಂದಿಗೆ ವ್ಯಾಪಾರ ಮಾಡಲು ಯುಎಸ್‌ ನಿರ್ಬಂಧವನ್ನು ವಿಧಿಸಿತ್ತು. ಆಗ, ರಷ್ಯಾದ ಆರ್ಥಿಕತೆಯು ನಿರ್ಬಂಧಗಳಿಂದ ಭಾರೀ ಪೆಟ್ಟು ತಿಂದಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಅನ್ನು ಉಲ್ಲೇಖಿಸಿ ಬಿಸಿನೆಸ್ ಟುಡೇ ವರದಿ ಮಾಡಿದೆ.

English summary

Ruble Sinks 26% After SWIFT Sanctions Against Russian Banks

Ruble sinks 26% after SWIFT sanctions against Russian banks, Rupee crashes 40 paise.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X