For Quick Alerts
ALLOW NOTIFICATIONS  
For Daily Alerts

Alert: SBI ಎಟಿಎಂ ಹಣ ವಿತ್‌ಡ್ರಾ ಮೇಲಿನ ಸೇವಾ ಶುಲ್ಕ ಪರಿಷ್ಕರಣೆ

|

ಸರ್ಕಾರಿ ಸ್ವಾಮ್ಯದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಸೇವಾ ಶುಲ್ಕ ಪರಿಷ್ಕರಣೆ ಘೋಷಿಸಿದೆ. ಈ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ಹಣ ವಿತ್‌ಡ್ರಾ, ಚೆಕ್ ಬುಕ್, ಖಾತೆ ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಾಗಿವೆ.

SBI ಎಟಿಎಂ ಹಣ ವಿತ್‌ಡ್ರಾ ಮೇಲಿನ ಸೇವಾ ಶುಲ್ಕ ಪರಿಷ್ಕರಣೆ

ಶಾಖೆ ಸೇರಿದಂತೆ ಎಟಿಎಂಗಳಲ್ಲಿ ಹಣ ವಿತ್‌ಡ್ರಾಗಳಿಗಾಗಿ 4 ಉಚಿತ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ವಹಿವಾಟುಗಳನ್ನು ಮೀರಿದಂತೆ ಶುಲ್ಕ ವಿಧಿಸಲಾಗುತ್ತದೆ. ಶಾಖೆ ಅಥವಾ ಎಟಿಎಂನಲ್ಲಿ ನಿಗದಿತಕ್ಕಿತ ಹೆಚ್ಚುವರಿ ಹಣ ವಿತ್‌ಡ್ರಾ ವಹಿವಾಟಿಗೆ 15 ರೂಪಾಯಿ ಜೊತೆಗೆ ಜಿಎಸ್‌ಟಿ ಇರುತ್ತದೆ.

ಚೆಕ್‌ಬುಕ್‌ ಮೇಲಿನ ಶುಲ್ಕಗಳು:
ಎಸ್‌ಬಿಐ ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸು ವರ್ಷದಲ್ಲಿ 10 ಚೆಕ್ ಇರುವ ಪುಸ್ತಕವನ್ನು ಉಚಿತವಾಗಿ ನೀಡುತ್ತದೆ. ನಂತರದಲ್ಲಿ ಬೇಕಾದಲ್ಲಿ 10 ಚೆಕ್‌ ಇರುವ ಬುಕ್‌ಗೆ 40 ರೂಪಾಯಿ ಮತ್ತು ಜಿಎಸ್‌ಟಿ, 25 ಚೆಕ್‌ ಇರುವ ಬುಕ್‌ಗೆ 75 ರೂಪಾಯಿ ಪ್ಲಸ್ ಜಿಎಸ್‌ಟಿ, ತುರ್ತಾಗಿ ಚೆಕ್‌ ಬುಕ್‌ಗೆ 50 ರೂಪಾಯಿ ಪ್ಲಸ್‌ ಜಿಎಸ್‌ಟಿ ವಿಧಿಸಿದೆ.

ಹಿರಿಯ ನಾಗರಿಕರಿಗೆ ಈ ಪರಿಷ್ಕೃತ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

English summary

SBI ATM Cash Withdrawal Chequebook charges changed: Details Here

The country's top lender State Bank of India (SBI) has revised service charges for Basic Savings Bank Deposit (BSBD) account holders.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X