For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್‌ ಸೇವೆ ಸ್ಥಗಿತ!

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶಾದ್ಯಂತ ತನ್ನ ಲಕ್ಷಾಂತರ ಜನರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್‌ ಖಾತೆಯನ್ನು ಹೊಂದಿರುವವರು ಬ್ಯಾಂಕ್‌ನ ಸೂಚನೆಯಂತೆ ಈ ಒಂದು ಕಾರ್ಯವನ್ನು ಮಾಡದಿದ್ದರೆ ಅವರ ಬ್ಯಾಂಕಿಂಗ್‌ ಸೇವೆ ಶೀಘ್ರವೇ ಸ್ಥಗಿತವಾಗಲಿದೆ. ಆದ್ದರಿಂದ ಆ ಕೆಲಸವನ್ನು ನೀವು ಮಾಡಿಬಿಡಿ.

ಹೌದು, ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಹೇಳಿದೆ. ಬ್ಯಾಂಕ್ ತನ್ನ ಬಳಕೆದಾರರಿಗೆ ಕೊನೆಯ ದಿನಾಂಕಕ್ಕೂ ಮುನ್ನ ಅಗತ್ಯ ಕಾರ್ಯವನ್ನು ಮಾಡುವಂತೆ ಎಚ್ಚರಿಕೆ ನೀಡಿದೆ. ಕೊನೆಯ ದಿನಾಂಕಕ್ಕೂ ಮುನ್ನ ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಬ್ಯಾಂಕಿಂಗ್ ಸೇವೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

IMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶ IMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶ

ಈ ಬಗ್ಗೆ ಟ್ವೀಟ್‌ ಮಾಡಿರುವ ಎಸ್‌ಬಿಐ, "ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸುವುದನ್ನು ಮುಂದುವರಿಸಲು ನಮ್ಮ ಗ್ರಾಹಕರಿಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ," ಎಂದು ಹೇಳಿದೆ.

 ಈ ಕಾರ್ಯ ಮಾಡದಿದ್ದರೆ ನಿಮ್ಮ ಎಸ್‌ಬಿಐ ಬ್ಯಾಂಕಿಂಗ್‌ ಸೇವೆ ಸ್ಥಗಿತ!

"ಲಿಂಕ್ ಮಾಡದಿದ್ದರೆ, ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಸಾಧ್ಯವಾಗದು," ಎಂದು ಕೂಡಾ ಬ್ಯಾಂಕ್‌ ಸೇರಿಸಿದೆ. ಇನ್ನು ಕೊರೊನಾ ವೈರಸ್‌ ಸಾಂಕ್ರಾಮಿಕದ ಹಿನ್ನೆಲೆಯಿಂದಾಗಿ ಎಸ್‌ಬಿಐ ಆಧಾರ್‌ನೊಂದಿಗೆ ಪ್ಯಾನ್‌ ಅನ್ನು ಅನ್ನು ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30 2021 ರಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಿದೆ. ಹಾಗಾದರೆ ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್‌ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ....

 ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ

ಪ್ಯಾನ್-ಆಧಾರ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ?

ಹಂತ 1: ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://www.incometaxindiaefiling.gov.in/homeಹಂತ 2: 'ಲಿಂಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಹೊಸ ಪುಟದಲ್ಲಿ, ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿ.
ಹಂತ 4: ನಿಮ್ಮ ದಾಖಲೆಯಲ್ಲಿ ಜನ್ಮ ದಿನಾಂಕವನ್ನು ಮಾತ್ರ ನಮೂದಿಸಿದ್ದರೆ 'I have only year of birth in aadhaar card' ಎಂಬ ಬಾಕ್ಸ್ ಅನ್ನು ಆಯ್ಕೆಮಾಡಿ
ಹಂತ 5: ಕ್ಯಾಪ್ಚಾ ಕೋಡ್ ಹಾಕಿ, ಒಟಿಪಿ ಆಯ್ಕೆಯನ್ನು ಕ್ಲಿಕ್‌ ಮಾಡಿ
ಹಂತ 6: ಲಿಂಕ್ ಆಧಾರ್ ಬಟನ್ ಅನ್ನು ಆಯ್ಕೆ ಮಾಡಿ. ಈ ವೇಳೆ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ.

ಎಸ್‌ಎಂಎಸ್‌ ಮೂಲಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿ

ಹಂತ 1: ಎಸ್‌ಎಂಎಸ್‌ ಮೂಲಕ UIDPAN ಅನ್ನು ಟೈಪ್‌ ಮಾಡಿ
ಹಂತ 2: ಟೈಮ್‌ ಮಾಡಿದ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿದರೆ, ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.

IMPS ವರ್ಗಾವಣೆ ಮಿತಿ ಏರಿಕೆ

ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವಾಗ ಐಎಂಪಿಎಸ್ ಬಳಸುವ ಗ್ರಾಹಕರಿಗೆ ವರ್ಗಾವಣೆ ಮಿತಿ ತೊಂದರೆಯಾಗುತ್ತಿತ್ತು. ಈಗ IMPS ವರ್ಗಾವಣೆ ಮಿತಿ ಏರಿಕೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರು ಫೆಬ್ರವರಿ 1 ರಿಂದ ಹೊಸ ವಹಿವಾಟು ದರಗಳ ಪ್ರಕಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಬ್ಯಾಂಕಿಂಗ್ ವಲಯ ಹೆಚ್ಚಿನ ಅನುದಾನ, ಡಿಜಿಟಲ್ ಸೌಕರ್ಯ ಹಾಗೂ ಸೌಲಭ್ಯಗಳನ್ನು ನಿರೀಕ್ಷಿಸಿದೆ. ಅದಕ್ಕೆ ತಕ್ಕಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ.

English summary

SBI Banking Services Will Soon Stop if You Fail to Do This

SBI Alert! Your banking services will soon stop if you fail to do THIS, bank cautions 40 crore users.
Story first published: Monday, February 7, 2022, 19:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X