For Quick Alerts
ALLOW NOTIFICATIONS  
For Daily Alerts

ಗಮನಿಸಿ: ಕೆವೈಸಿ ಅಪ್‌ಡೇಟ್ ಆಗದ ಎಸ್‌ಬಿಐ ಖಾತೆ ಬ್ಲಾಕ್, ನೀವೇನು ಮಾಡಬೇಕು?

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. ಈ ಬ್ಯಾಂಕ್‌ನಲ್ಲಿ ನೀವು ಖಾತೆ ಹೊಂದಿದ್ದರೆ ಮೊದಲು ಅದರ ಕೆವೈಸಿ ಮಾಡಿಕೊಂಡಿದ್ದೀರಾ ಪರಿಶೀಲಿಸಿ. ಈಗಾಗಲೇ ಕೆವೈಸಿ ಅಪ್‌ಡೇಟ್ ಮಾಡದ ಕಾರಣದಿಂದಾಗಿ ಬ್ಯಾಂಕ್ ಹಲವಾರು ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿದೆ ಎಂದು ವರದಿಯಾಗಿದೆ. ಎಸ್‌ಬಿಐ ಗ್ರಾಹಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಎಸ್‌ಬಿಐ ಅನ್ನು ಕೂಡಾ ಟ್ಯಾಗ್ ಮಾಡಿದ್ದಾರೆ.

ಜುಲೈ ಒಂದರ ಒಳಗಾಗಿ ಎಸ್‌ಬಿಐನ ಕೆವೈಸಿ ಅಪ್‌ಡೇಟ್ ಮಾಡಬೇಕಾಗಿತ್ತು. ಆದರೆ ಹಲವಾರು ಮಂದಿ ಇನ್ನು ಕೂಡಾ ಕೆವೈಸಿ ಅಪ್‌ಡೇಟ್ ಮಾಡಿಕೊಂಡಿಲ್ಲ. ಇದರಿಂದಾಗಿ ಗ್ರಾಹಕರು ತಮ್ಮ ಎಸ್‌ಬಿಐ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ.

SBI: ವೀಡಿಯೋ ಕೆವೈಸಿ ಮೂಲಕ ಉಳಿತಾಯ ಖಾತೆ ತೆರೆಯಿರಿ!SBI: ವೀಡಿಯೋ ಕೆವೈಸಿ ಮೂಲಕ ಉಳಿತಾಯ ಖಾತೆ ತೆರೆಯಿರಿ!

ಈ ಬಗ್ಗೆ ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಕೆವೈಸಿ ಮಾಡಿಲ್ಲ ಎಂಬ ಕಾರಣಕ್ಕೆ ಹಣ ವರ್ಗಾವಣೆಯನ್ನು ನಿಷೇಧ ಮಾಡಲಾಗಿದೆ. ಆದರೆ ಕನಿಷ್ಠ ಮೇಲ್ ಅಥವಾ ಸಂದೇಶವಾದರೂ ಬಂದಿದೆ. ಬಳಿಕ ನೇರವಾಗಿ ವಹಿವಾಟು ನಿಲ್ಲಿಸಲಾಗಿದೆ," ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಗ್ರಾಹಕರಿಗೆ ಎಸ್‌ಬಿಐ ಉತ್ತರವನ್ನು ಕೂಡಾ ನೀಡಿದೆ. ಹಾಗಾದರೆ ಎಸ್‌ಬಿಐ ಹೇಳುವುದು ಏನು, ನೀವು ಮಾಡಬೇಕಾಗಿರುವುದು ಏನು ಎಂದು ತಿಳಿಯಲು ಮುಂದೆ ಓದಿ....

 ಗ್ರಾಹಕರಿಗೆ ಎಸ್‌ಬಿಐ ಹೇಳುವುದು ಏನು?

ಗ್ರಾಹಕರಿಗೆ ಎಸ್‌ಬಿಐ ಹೇಳುವುದು ಏನು?

ಗ್ರಾಹಕರ ಟ್ವೀಟ್‌ಗೆ ಉತ್ತರ ನೀಡಿದ ಎಸ್‌ಬಿಐ, "ಕೆವೈಸಿ ನಿಯಮಿತವಾಗಿ ಸದ್ಯ ನಡೆಯುತ್ತಿರುವ ಕಾರ್ಯ ಎಂದು ಹೇಳಲು ನಾವು ಬಯಸುತ್ತೇವೆ. ನಿಮ್ಮ ಖಾತೆಯ ಕೆವೈಸಿ ಆಗಿಲ್ಲದೆ ಇರಬಹುದು. ಆದ್ದರಿಂದ ಈ ಸಂದೇಶ ಬಂದಿದೆ. ದಯವಿಟ್ಟು ಶಾಖೆಗೆ ಭೇಟಿ ನೀಡಿ ಮುಂದಿನ ಪ್ರಕ್ರಿಯೆ ಪೂರ್ಣ ಮಾಡಿ," ಎಂದು ತಿಳಿಸಿದ್ದಾರೆ. ಇನ್ನು ಮತ್ತೋರ್ವ ಗ್ರಾಹಕ ಗೌರವ್ ಅಗರ್ವಾಲ್ ಟ್ವೀಟ್ ಮಾಡಿ, "ಕೆವೈಸಿ ಅವಧಿ ಮೀರಿದ ಕಾರಣ ನನ್ನ ಖಾತೆಯನ್ನು ನಿಷ್ಕ್ರೀಯ ಮಾಡಲಾಗಿದೆ. ಯಾರೂ ನನ್ನ ಬಳಿ ಕೆವೈಸಿ ಮಾಡಬೇಕು ಎಂದು ಹೇಳಿಲ್ಲ. ಹಾಗಾದರೆ ನನ್ನ ಖಾತೆಯನ್ನು ಸ್ಥಗಿತ ಏಕೆ ಮಾಡಲಾಗಿದೆ. ಎಸ್‌ಬಿಐನಲ್ಲಿ ಎಲ್ಲರೂ ಮೂರ್ಖರೇ?," ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ " ಆರ್‌ಬಿಐ ಆದೇಶದ ಪ್ರಕಾರ, ಗ್ರಾಹಕರು ತಮ್ಮ KYC ಅನ್ನು ಸರಿಯಾದ ಸಮಯಕ್ಕೆ ಅಪ್‌ಡೇಟ್ ಮಾಡಬೇಕಾಗಿದೆ. ಕೆವೈಸಿ ಅಪ್‌ಡೇಟ್ ಬಾಕಿ ಇದ್ದರೆ ಎಸ್‌ಎಂಎಸ್, ಇಮೇಲ್ ಮೊದಲಾದವುಗಳ ಮೂಲಕ ತಿಳಿಸಲಾಗುತ್ತದೆ," ಎಂದು ಹೇಳಿದೆ.

ಸೈಬರ್ ದಾಳಿಗೆ ಎಸ್‌ಬಿಐ ವಿಮಾ ಸುರಕ್ಷೆ, ಇಲ್ಲಿದೆ ವಿವರಸೈಬರ್ ದಾಳಿಗೆ ಎಸ್‌ಬಿಐ ವಿಮಾ ಸುರಕ್ಷೆ, ಇಲ್ಲಿದೆ ವಿವರ

 ಕೆವೈಸಿ ಎಂದರೇನು?

ಕೆವೈಸಿ ಎಂದರೇನು?

KYC - Know Your Customer ಆಗಿದೆ. ಬ್ಯಾಂಕ್‌ಗಳು ಗ್ರಾಹಕರ ಗುರುತಿನ ಬಗ್ಗೆ ಮಾಹಿತಿಯನ್ನು ಪಡೆಯುವ ಮೂಲಕ ಅವರ ದೃಢೀಕರಣವನ್ನು ಪರಿಶೀಲಿಸುವ ಒಂದು ಪ್ರಕ್ರಿಯೆ ಇದಾಗಿದೆ. ಗ್ರಾಹಕರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಾಗ ಅಥವಾ ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವಾಗ ತಮ್ಮ ಕೆವೈಸಿ ಮಾಡಬೇಕಾಗುತ್ತದೆ.

 ಎಸ್‌ಬಿಐ ಕೆವೈಸಿಗೆ ಏನೆಲ್ಲಾ ದಾಖಲೆ ಬೇಕು?

ಎಸ್‌ಬಿಐ ಕೆವೈಸಿಗೆ ಏನೆಲ್ಲಾ ದಾಖಲೆ ಬೇಕು?

ಆಧಾರ್ ಪತ್ರ/ಕಾರ್ಡ್
ಮತದಾರರ ಗುರುತಿನ ಚೀಟಿ
ಚಾಲನೆ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)
ಪ್ಯಾನ್ ಕಾರ್ಡ್
ಪಾಸ್‌ಪೋರ್ಟ್
NREGA ಕಾರ್ಡ್

 ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?

ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?

ಎಸ್‌ಬಿಐ ಕೆವೈಸಿ ವಿವರಗಳನ್ನು ನವೀಕರಿಸಲು, ಗ್ರಾಹಕರು ಈ ಹಿಂದೆ ಒದಗಿಸಿದ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದಲ್ಲಿ ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ನಿಗದಿತ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ. ಎಸ್‌ಬಿಐ ಗ್ರಾಹಕರು ಕೆವೈಸಿ ಫಾರ್ಮ್ ಅನ್ನು ತಮ್ಮ ಹತ್ತಿರದ ಶಾಖೆಯಲ್ಲಿ ವೈಯಕ್ತಿಕವಾಗಿ ಅಂಚೆ ಮೂಲಕ ಅಥವಾ ನೋಂದಾಯಿತ ಇಮೇಲ್ ಐಡಿ ಮೂಲಕ ಸಲ್ಲಿಸಬಹುದು.

English summary

SBI Customers, Accounts Blocked for not Updating KYC? What You Should

The State Bank of India has stopped the functioning of several accounts for non-compliance with KYC (Know Your Customer) norms.
Story first published: Thursday, July 7, 2022, 21:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X