For Quick Alerts
ALLOW NOTIFICATIONS  
For Daily Alerts

ಸೈಬರ್ ದಾಳಿಗೆ ಎಸ್‌ಬಿಐ ವಿಮಾ ಸುರಕ್ಷೆ, ಇಲ್ಲಿದೆ ವಿವರ

|

ಎಸ್‌ಬಿಐ ಜನರಲ್ ಇನ್ಶುರೆನ್ಸ್ ಸೈಬರ್ ವಿಮೆ ಯೋಜನೆಯನ್ನು ಜಾರಿಗೆ ಮಾಡಿದ್ದು ಇದು ವೈಯಕ್ತಿಕ ಸೈಬರ್ ವಿಮೆಯಾಗಿದೆ. ಈ ಸೈಬರ್ ವಿಮೆಯು ಸೈಬರ್ ದಾಳಿಯಿಂದಾಗಿ ಆಗುವ ಹಣಕಾಸು ನಷ್ಟಕ್ಕೆ ಪರಿಹಾರವನ್ನು ಕಲ್ಪಿಸುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಡಿಜಿಟಲ್ ಸೌಕರ್ಯಗಳ ಬಳಕೆಯು ಅಧಿಕವಾಗಿದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಹಲವಾರು ಮಂದಿ ವರ್ಕ್ ಫ್ರಮ್ ಹೋಮ್‌ಗೆ ಅನಿವಾರ್ಯವಾಗಿ ಶರಣಾಗಿದ್ದಾರೆ. ಪಾವತಿ ವಿಧಾನವೂ ಕೂಡಾ ಈಗ ಡಿಜಿಟಲ್ ಆಗಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚಾಗಿ ಡಿಜಿಟಲ್ ರೂಪಕ್ಕೆ ತಿರುಗಿದ ಪಾವತಿ ವಿಧಾನ ಈಗ ಹೆಚ್ಚು ಚಾಲ್ತಿಯಲ್ಲಿರುವ ವಿಧಾನವಾಗಿದೆ.

ಗ್ರಾಹಕರೇ ಗಮನಿಸಿ; ವಿಮೆಗಾಗಿ ಸಾಲ: ಶೀಘ್ರವೇ ಜಾರಿ!ಗ್ರಾಹಕರೇ ಗಮನಿಸಿ; ವಿಮೆಗಾಗಿ ಸಾಲ: ಶೀಘ್ರವೇ ಜಾರಿ!

ಈ ಡಿಜಿಟಲ್ ದುನಿಯಾವು ನಮ್ಮನ್ನು ಸ್ವಾಗತಿಸುವಾಗ ಅಪಾಯ ಕೂಡಾ ನಮ್ಮನ್ನು ಬರಮಾಡಿಕೊಳ್ಳುತ್ತದೆ. ಈ ಇಂಟರ್‌ನೆಟ್ ಯುಗದಲ್ಲಿ ಸೈಬರ್ ದಾಳಿಗಳು ಹೆಚ್ಚಾಗುತ್ತಿದೆ. ಸೈಬರ್ ದಾಳಿಯ ಬೆದರಿಕೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಎಸ್‌ಬಿಐ ಸೈಬರ್ ಸುರಕ್ಷತೆಗಾಗಿ ವಿಮೆಯನ್ನು ಜಾರಿ ಮಾಡಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 2020-21ರಲ್ಲಿ ಸೈಬರ್ ದಾಳಿಗೆ ಎಷ್ಟು ನಷ್ಟ?

2020-21ರಲ್ಲಿ ಸೈಬರ್ ದಾಳಿಗೆ ಎಷ್ಟು ನಷ್ಟ?

CERT-In ಪ್ರಕಾರ 2021ರಲ್ಲಿ ಸುಮಾರು 14.02 ಲಕ್ಷ ರೂಪಾಯಿಯ ಸೈಬರ್ ದಾಳಿ ಪ್ರಕರಣಗಳು ದಾಖಲಾಗಿದೆ. 2018ರಲ್ಲಿ ಸುಮಾರು 2.08 ಲಕ್ಷ ಸೈಬರ್ ದಾಳಿ ಪ್ರಕರಣಗಳು ದಾಖಲಾಗಿದೆ. ಇನ್ನು ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಡೇಟಾ ಪ್ರಕಾರ 2020-21ರಲ್ಲಿ ಸೈಬರ್ ದಾಳಿ, ಎಟಿಎಂ/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್ ವಂಚನೆ ಮೂಲಕ ಆಗಿರುವ ನಷ್ಟವನ್ನು 63.4 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರ

 ಈ ವಿಮೆ ಯಾವುದಕ್ಕೆಲ್ಲ ಅನ್ವಯ?

ಈ ವಿಮೆ ಯಾವುದಕ್ಕೆಲ್ಲ ಅನ್ವಯ?

ಎಸ್‌ಬಿಐ ಜನರೆಲ್ ಸೈಬರ್ ವಾಲ್ಟ್ಎಂಡ್ಜ್ ಮೂಲಕ ಎಸ್‌ಬಿಐ ಸೈಬರ್ ಸುರಕ್ಷತೆಯನ್ನು ನೀಡುತ್ತಿದೆ. ಸೈಬರ್ ದಾಳಿಯಿಂದಾಗಿ ಯಾರ ಘನತೆಗೆ ಧಕ್ಕೆ ಉಂಟಾಗಿದೆಯೋ, ಕ್ರೆಡಿಟ್/ಡೆಬಿಟ್ ಕಾರ್ಡ್ ವಂಚನೆ, ವೈಯಕ್ತಿಕ ಮಾಹಿತಿ ಕಳ್ಳತನದ ಮೇಲೆ ಈ ಸೈಬರ್ ವಿಮೆಯು ಸುರಕ್ಷತೆಯನ್ನು ನೀಡುತ್ತದೆ. ಇನ್ನು ಆನ್‌ಲೈನ್ ಮೂಲಕ ನಡೆಯುವ ವಂಚನೆ, ಸ್ಟಾಕಿಂಗ್, ಟ್ರೋಲ್‌ಗಳ ಮೇಲೆಯೂ ಈ ವಿಮೆಯು ಸುರಕ್ಷತೆ ನೀಡಲಿದೆ.

 ಸೈಬರ್ ದಾಳಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಸುರಕ್ಷತೆ

ಸೈಬರ್ ದಾಳಿಯಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಸುರಕ್ಷತೆ

ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಬಿಐ ಜನರಲ್ ಇನ್ಶುರೆನ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ್ ಪೇಜಾವರ, "ಇಂಟರ್‌ನೆಟ್ ನಮ್ಮ ಜೀವನವನ್ನು ಸರಳಗೊಳಿಸಿದೆ. ಆದರೆ ಈ ಹಿಂದೆ ಎಂದಿಗಿಂತಲೂ ಅಪಾಯಕಾರಿಯಾದ ಜೀವನವನ್ನು ಕೂಡಾ ಈ ಇಂಟರ್‌ನೆಟ್ ಸೃಷ್ಟಿ ಮಾಡಿದೆ. ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಅಪಾಯಗಳು ಹಲವಾರು ಇದೆ. ಆದ್ದರಿಂದಾಗಿ ಎಸ್‌ಬಿಐ ಜನರಲ್ ಸೈಬರ್ ವಾಲ್ಟ್‌ಎಡ್ಜ್‌ ಅನ್ನು ಜಾರಿಗೆ ತರುತ್ತದೆ. ಈ ಇಂಟರ್‌ನೆಟ್ ಅಪಾಯ ಅಥವಾ ಸೈಬರ್ ದಾಳಿಯಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ನಾವು ಈ ವಿಮೆಯನ್ನು ಪರಿಚಯಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

 ಈ ವಿಮೆ ಹೇಗೆ ಕಾರ್ಯನಿರ್ವಹಣೆ?

ಈ ವಿಮೆ ಹೇಗೆ ಕಾರ್ಯನಿರ್ವಹಣೆ?

ಸೈಬರ್ ದಾಳಿಗೆ ಒಳಗಾಗಿ ನಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯಾವುದೇ ಡೇಟಾ ಕಳೆದುಹೋದರೆ ಅದನ್ನು ರಿಕವರ್ ಮಾಡಲು ಐಟಿ ತಂತ್ರಜ್ಞರನ್ನು ನಿಯೋಜನೆ ಮಾಡುವ ವೆಚ್ಚವು ಈ ವಿಮೆಯಲ್ಲಿ ಒಳಗೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ ಸೈಬರ್ ದಾಳಿಗೆ ಒಳಗಾಗಿ ಮಾನಸಿಕವಾಗಿ ಆಘಾತ ಉಂಟಾದ ಕಾರಣದಿಂದಾಗಿ ಮಾನಸಿಕ ತಜ್ಞರನ್ನು ಭೇಟಿಯಾದರೆ ಇದರ ವೆಚ್ಚವು ಕೂಡಾ ವಿಮೆಯಲ್ಲಿ ಬರಲಿದೆ.

English summary

SBI General's Cyber VaultEdge insurance plan launched for Individuals

SBI General Insurance has launched the Cyber VaultEdge insurance plan, a comprehensive cyber insurance cover for individuals that provides protection against financial losses arising from cyber risks and attacks. Know more.
Story first published: Tuesday, July 5, 2022, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X