For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ, ಆಕ್ಸಿಸ್ ಸೇರಿ ಹಲವು ಬ್ಯಾಂಕುಗಳ ಎಟಿಎಂ ವಿತ್‌ಡ್ರಾ ಶುಲ್ಕ ಏರಿಕೆ!

|

ಪ್ರಸ್ತುತ ಹಲವಾರು ಮಂದಿ ಬ್ಯಾಂಕ್‌ ಖಾತೆಯನ್ನು ಹೊಂದಿದ್ದಾರೆ. ನಿವೃತ್ತಿ ಹಣ ಪಡೆಯಲು, ಹಲವಾರು ಯೋಜನೆಗಳ ಹಣವನ್ನು ಪಡೆಯಬೇಕಾದರೆ ಬ್ಯಾಂಕ್ ಖಾತೆ ಇರುವುದು ಮುಖ್ಯವಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಇರುವಾಗಲೇ ಜಿರೋ ಬ್ಯಾಲೆನ್ಸ್ ಖಾತೆಯನ್ನು ತೆರೆಯಲಾಗುತ್ತದೆ. ಎಲ್ಲ ಗ್ರಾಹಕರಿಗೂ ಬ್ಯಾಂಕುಗಳು ಸೇವಾ ಶುಲ್ಕವನ್ನು ವಿಧಿಸುತ್ತದೆ. ಆದರೆ ಈ ಶುಲ್ಕವನ್ನು ಬಹುತೇಕ ಪ್ರಮುಖ ಬ್ಯಾಂಕುಗಳು ಏರಿಕೆ ಮಾಡಿದೆ.

ಹೌದು, ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೇವಾ ಶುಲ್ಕವನ್ನು ಏರಿಕೆ ಮಾಡಿದೆ. ಎಟಿಎಂ ವಿತ್‌ಡ್ರಾ ಶುಲ್ಕವನ್ನು ಹೆಚ್ಚಳ ಮಾಡಿದೆ. ಉಚಿತ ವಿತ್‌ಡ್ರಾ ಮಿತಿಯನ್ನು ಮೀರಿದ ಬಳಿಕ ಮಾತ್ರವೇ ಶುಲ್ಕ ವಿಧಿಸಲಾಗುತ್ತದೆ.

ಮುಂದಿನ ತಿಂಗಳು ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕ ದುಬಾರಿ: ಹೊಸ ದರ ಪರಿಶೀಲಿಸಿಮುಂದಿನ ತಿಂಗಳು ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕ ದುಬಾರಿ: ಹೊಸ ದರ ಪರಿಶೀಲಿಸಿ

ಇತ್ತೀಚೆಗೆ ಹಲವಾರು ಬ್ಯಾಂಕುಗಳು ಎಟಿಎಂ ವಿತ್‌ಡ್ರಾ ಶುಲ್ಕವನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ಪ್ರತಿ ತಿಂಗಳು ಉಚಿತ ಎಟಿಎಂ ವಿತ್‌ಡ್ರಾ ಮಿತಿ ಮೀರಿದ ಬಳಿಕ ಗ್ರಾಹಕರಿಗೆ ಪ್ರತಿ ಎಟಿಎಂ ವಹಿವಾಟಿಗೆ ಈ ಹಿಂದಿಗಿಂತ ಅಧಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಖಾತೆಯನ್ನು ಆಧರಿಸಿ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗಾದರೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಶುಲ್ಕವಿದೆ ಎಂದು ತಿಳಿಯೋಣ ಮುಂದೆ ಓದಿ...

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)

ತನ್ನ ಎಟಿಎಂ ಸೇವೆಗೆ ಮಾಸಿಕವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರತಿ ಪ್ರದೇಶದಲ್ಲಿ ಐದು ಉಚಿತ ವಿತ್‌ಡ್ರಾ ಅವಕಾಶವನ್ನು ನೀಡುತ್ತದೆ. ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಲ್ಲಿನ ಇತರ ಬ್ಯಾಂಕ್ ಎಟಿಎಂಗಳಲ್ಲಿ, ವಿತ್‌ಡ್ರಾ ಮಾಡುವುದಾದರೆ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಲು ಅವಕಾಶವಿದೆ. ಉಚಿತ ಮಿತಿಯನ್ನು ಮೀರಿದ ಬಳಿಕ ಎಸ್‌ಬಿಐ ತನ್ನ ಎಟಿಎಂನಿಂದಲೇ ಹಣ ವಿತ್‌ಡ್ರಾ ಮಾಡಲು ಹತ್ತು ರೂಪಾಯಿ ಹಾಗೂ ಬೇರೆ ಬ್ಯಾಂಕ್‌ನಲ್ಲಿ ಹಣ ವಿತ್‌ಡ್ರಾ ಮಾಡಲು 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಹಣಕಾಸೇತರ ವಹಿವಾಟಿಗೆ ಎಸ್‌ಬಿಐ ಎಟಿಎಂಗಳಲ್ಲಿ 5 ರೂಪಾಯಿ ಹಾಗೂ ಇತರ ಬ್ಯಾಂಕ್ ಎಟಿಎಂಗಳಲ್ಲಿ 8 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ಪ್ರತಿ ತಿಂಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್‌ನ ಎಟಿಎಂನಿಂದ ಐದು ಬಾರಿ ಉಚಿತವಾಗಿ ವಿತ್‌ಡ್ರಾ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ 3 ಹಾಗೂ ಮೆಟ್ರೋಯೇತರ ಪ್ರದೇಶದಲ್ಲಿ ಐದು ಬಾರಿ ಉಚಿತ ಎಟಿಎಂ ವಹಿವಾಟು ನಡೆಸಬಹುದು. ಅದಾದ ಬಳಿಕ ಎಟಿಎಂನಲ್ಲಿ ನಡೆಸುವ ಹಣಕಾಸು ವಹಿವಾಟಿಗೆ 21 ರೂಪಾಯಿ ಪ್ಲಸ್ ತೆರಿಗೆ ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 8.50 ರೂಪಾಯಿ ಹಾಗೂ ತೆರಿಗೆಯನ್ನು ವಿಧಿಸಲಾಗುತ್ತದೆ.

ಐಸಿಐಸಿಐ ಬ್ಯಾಂಕ್
 

ಐಸಿಐಸಿಐ ಬ್ಯಾಂಕ್

ಆರು ಮೆಟ್ರೋ ಪ್ರದೇಶಗಳಲ್ಲಿ, ಐಸಿಐಸಿಐ ಬ್ಯಾಂಕ್ 5 ಮತ್ತು 3 ಉಚಿತ ವಿತ್‌ಡ್ರಾ ಮಿತಿಯನ್ನು ಹೊಂದಿದೆ. ಐಸಿಐಸಿಐ ಬ್ಯಾಂಕ್‌ನ ಎಟಿಎಂನಿಂದಲೇ ಮಾಸಿಕವಾಗಿ ಐದು ಬಾರಿ ಉಚಿತವಾಗಿ ವಿತ್‌ಡ್ರಾ ಮಾಡಲು ಅವಕಾಶವಿದೆ. ಆದರೆ ಇತರೆ ಬ್ಯಾಂಕ್‌ಗಳಲ್ಲಿ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡುವ ಅವಕಾಶವಿದೆ. ಉಚಿತ ಮಿತಿ ಮುಗಿದ ಬಳಿಕ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಪ್ರತಿ ಹಣಕಾಸೇತರ ವಹಿವಾಟಿಗೆ ಬ್ಯಾಂಕ್ 8.50 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳು ಮತ್ತು ಇತರ ಬ್ಯಾಂಕ್‌ಗಳ ಎಟಿಎಂನಲ್ಲಿ ಮಾಡುವ ವಿತ್‌ಡ್ರಾ ಎರಡಕ್ಕೂ ಅನ್ವಯವಾಗುತ್ತದೆ.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಆಕ್ಸಿಸ್‌ ಬ್ಯಾಂಕ್‌ನಲ್ಲಿ ತನ್ನದೇ ಆದ ಎಟಿಎಂನಲ್ಲಿ ವಿತ್‌ಡ್ರಾ ಮಾಡುವುದಾದರೆ ಮಾಸಿಕವಾಗಿ ಐದು ಬಾರಿ ಉಚಿತ ವಹಿವಾಟು ಮಿತಿ ಇದೆ. ಆದರೆ ಬೇರೆ ಬ್ಯಾಂಕ್‌ನ ಎಟಿಎಂನಿಂದ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಲು ಅವಕಾಶವಿದೆ. ಈ ಉಚಿತ ವಹಿವಾಟು ಮುಗಿದ ಬಳಿಕ, ಆಕ್ಸಿಸ್ ಬ್ಯಾಂಕ್‌ನ ಅಥವಾ ಬೇರೆ ಯಾವುದೇ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 10 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.

 ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬೇರೆ ಬ್ಯಾಂಕ್‌ನಲ್ಲಿ ಮಾಸಿಕವಾಗಿ ಮೂರು ಬಾರಿ ಉಚಿತ ಎಟಿಎಂ ವಿತ್‌ಡ್ರಾ ಅವಕಾಶವನ್ನು ನೀಡುತ್ತದೆ. ಹಾಗೆಯೇ ತನ್ನದೇ ಎಟಿಎಂನಲ್ಲಿ ಐದು ಬಾರಿ ಉಚಿತವಾಗಿ ವಹಿವಾಟು ನಡೆಸುವ ಅವಕಾಶವನ್ನು ನೀಡುತ್ತದೆ. ಇದು ಮೆಟ್ರೋ ನಗರಗಳಿಗೆ ಅನ್ವಯವಾಗುತ್ತದೆ. ಈ ಉಚಿತ ವಹಿವಾಟಿನ ಮಿತಿಯ ಬಳಿಕ ತನ್ನದೇ ಬ್ಯಾಂಕ್‌ನ ಎಟಿಎಂಗಳಲ್ಲಿ ನಡೆಸುವ ಎಲ್ಲ ವಹಿವಾಟಿಗೆ ಬ್ಯಾಂಕ್ 10 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಬೇರೆ ಬ್ಯಾಂಕ್‌ಗಳಲ್ಲಿ ನಡೆಸುವ ಹಣಕಾಸು ವಹಿವಾಟಿಗೆ ಪಿಎನ್‌ಬಿ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಹಣಕಾಸೇತರ ವಹಿವಾಟಿಗೆ 9 ರೂಪಾಯಿ ಶುಲ್ಕವನ್ನು ಬ್ಯಾಂಕ್‌ ವಿಧಿಸುತ್ತದೆ.

English summary

SBI, PNB, Axis Other Banks Increase ATM Withdrawal Charges, Here's Details

For the use of their services, all banks impose a charge. SBI, PNB, Axis Other Banks Increase ATM Withdrawal Charges, Here's Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X