For Quick Alerts
ALLOW NOTIFICATIONS  
For Daily Alerts

ಟ್ರೇಡಿಂಗ್ ವ್ಯವಹಾರ ಸೆ. 1ರಿಂದಲೇ ಬದಲು; ಸೆಬಿಯಿಂದ ಹೊಸ ನಿಯಮಾವಳಿ

By ಅನಿಲ್ ಆಚಾರ್
|

ಈಚೆಗೆ ಷೇರು ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಕೊರೊನಾ ಬಿಕ್ಕಟ್ಟು ತಲೆದೋರಿದ ಮೇಲೆ ಮತ್ತೂ ಹೆಚ್ಚಾಗಿದೆ. ಸ್ಟಾಕ್ ಟ್ರೇಡಿಂಗ್ ಕುರಿತಾಗಿ ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಿದೆ. ಸೆಪ್ಟೆಂಬರ್ 1 ಮತ್ತು ಡಿಸೆಂಬರ್ 1ರ ಮಧ್ಯೆ ಹಂತಹಂತವಾಗಿ ಅವು ಅನುಷ್ಠಾನಕ್ಕೆ ಬರಲಿವೆ.

ವ್ಯವಸ್ಥೆಯ ಹುಳುಕನ್ನೇ ಉಪಯೋಗಿಸಿಕೊಂಡು, ಹೂಡಿಕೆದಾರರ ಹಣವನ್ನು ಕಳೆದ ವರ್ಷ ಕಾರ್ವಿ ಸಂಸ್ಥೆಯು ಸ್ವಂತ ಅನುಕೂಲಕ್ಕೆ ಬಳಸಿಕೊಂಡಿತ್ತು. ಆದ್ದರಿಂದ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಮಧ್ಯಪ್ರವೇಶ ಮಾಡಿ, ನಿಯಮಾವಳಿ ಚೌಕಟ್ಟನ್ನು ಇನ್ನಷ್ಟು ಬಲಗೊಳಿಸಲು ಹಲವು ಕ್ರಮಗಳನ್ನು ಪರಿಚಯಿಸುತ್ತಿದೆ.

ಹಾಗೆ ಮಾಡುವ ಮೂಲಕ ಕಾರ್ವಿ ಸಂಸ್ಥೆಯಲ್ಲಿ ಆದಂಥ ಅಪಸವ್ಯ ಭವಿಷ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬಹುದು ಎಂಬುದು ಇರಾದೆ. ಈ ಹೊಸ ನಿಯಮಾವಳಿಗಳು ಈಕ್ವಿಟಿ ಹಾಗೂ ಡೆರಿವೇಟಿವ್ ಮಾರ್ಕೆಟ್ ಗೆ ಅನ್ವಯ ಆಗುತ್ತವೆ. ಹೊಸ ನಿಯಮಾವಳಿಗಳು ಹೂಡಿಕೆದಾರಸ್ನೇಹಿ ಆಗಿದ್ದು, ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಪಾರದರ್ಶಕತೆ ತರುತ್ತದೆ.

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

"ಈ ಹೊಸ ವ್ಯವಸ್ಥೆಯಿಂದ ಹೂಡಿಕೆದಾರರಿಗೆ ಹೆಚ್ಚು ಅಧಿಕಾರ ಬರುತ್ತದೆ. ಹಾಗೂ ಬ್ರೋಕಿಂಗ್ ನಲ್ಲಿ ಪಾರದರ್ಶಕತೆ ಹೆಚ್ಚಿನ ಪ್ರಮಾಣದಲ್ಲಿ ತರಲು ಸಾಧ್ಯವಾಗುತ್ತದೆ" ಎನ್ನುತ್ತಾರೆ ವಿಶ್ಲೇಷಕರು. ಸೆಪ್ಟೆಂಬರ್ 1ನೇ ತಾರೀಕಿನಿಂದ ಆಗಿರುವ ಬದಲಾವಣೆಗಳೇನು ಎಂಬ ಬಗ್ಗೆ ವಿವರಗಳು ಇಲ್ಲಿವೆ.

ಷೇರಿನ ಡೆಲಿವರಿ

ಷೇರಿನ ಡೆಲಿವರಿ

ಈ ಪ್ರಕರಣದಲ್ಲಿ ಟ್ರೇಡಿಂಗ್ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಷೇರು ಖರೀದಿಗಾಗಿ ಆರ್ಡರ್ ಅನ್ನು ಹಾಕುವಾಗ ಬ್ಯಾಂಕ್ ಒಡೆತನದಲ್ಲಿ ಇರುವ ಬ್ರೋಕರ್ಸ್ ಅಥವಾ ಬ್ಯಾಂಕ್ ಖಾತೆಗೆ ಜೋಡಣೆಯಾದ ಷೇರುಗಳನ್ನು 'ಬ್ಲಾಕ್' ಮಾಡುತ್ತಾರೆ. ಇನ್ನು ಖರೀದಿ ವ್ಯವಹಾರದ ವೇಳೆಯಲ್ಲಿ ಬ್ಯಾಂಕ್ ಒಡೆತನದಲ್ಲಿನ ಬ್ರೋಕರ್ ಗಳು ಸಂಪೂರ್ಣ ಮೊತ್ತ ಬ್ಲಾಕ್ ಮಾಡುತ್ತಾರೆ. ಇನ್ನು ಮಾರಾಟ ಮಾಡುವಾಗ ಬ್ರೋಕರ್ ಗಳು ಷೇರುಗಳನ್ನು ಬ್ಲಾಕ್ ಮಾಡುತ್ತಾರೆ.

ಆದರೆ, ಈಗಿನ ನಿಯಮಾವಳಿ ಪ್ರಕಾರ ಬ್ರೋಕರ್ ಗಳು ಹಣವನ್ನು ಬ್ಲಾಕ್ ಮಾಡುವುದಷ್ಟೇ ಅಲ್ಲ, ಟ್ರೇಡಿಂಗ್ ಸಂದರ್ಭದಲ್ಲಿ ಡೆಬಿಟ್ ಮಾಡುತ್ತಾರೆ. ಇದು ಒಟ್ಟು ವ್ಯವಹಾರದ 20% ಆಗಿರಬಹುದು (ಕನಿಷ್ಠ ನಿಗದಿತ ಮೊತ್ತ) ಅಥವಾ ಸಂಪೂರ್ಣ ಮೊತ್ತವೇ ಆಗಿರಬಹುದು. ಉದಾಹರಣೆಗೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರನ್ನು 100 ರುಪಾಯಿಗೆ ಖರೀದಿ ಮಾಡಿದ್ದೀರಾ ಅಂದುಕೊಳ್ಳಿ. ಈ ಹಿಂದೆ ಆ ನೂರು ರುಪಾಯಿ ಸಂಪೂರ್ಣವಾಗಿ ಮರು ದಿನವೇ (T+1) ಡೆಬಿಟ್ ಆಗುತ್ತಿತ್ತು. ಬ್ರೋಕರ್ ಅದನ್ನು T+2 ದಿನ ಪಾವತಿ ಮಾಡಲು ಅನುಕೂಲವಾಗಲು ನೆರವಾಗಲಿ ಎಂದು ಹೀಗೇ ಮಾಡಲಾಗುತ್ತಿತ್ತು. ಆದರೆ ಹೊಸ ನಿಯಮಾವಳಿ ಪ್ರಕಾರ 20 ರುಪಾಯಿ ಅದೇ ದಿನ ಡೆಬಿಟ್ ಆಗುತ್ತದೆ. ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅದೇ ಮೊತ್ತ ಹಾಗೂ ಅದೇ ಪ್ರಮಾಣದ ಷೇರು ಮಾರಿದಲ್ಲಿ ಒಟ್ಟು ಮೌಲ್ಯದ 20% ಹಣವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ ಅಥವಾ ಮುಂಚಿತವಾಗಿಯೇ ಅದೇ ದಿನ ಬ್ರೋಕರ್ ಖಾತೆಗೆ ನಿಮ್ಮ ಡಿಮ್ಯಾಟ್ ಖಾತೆಯಿಂದ ಷೇರು ವರ್ಗಾವಣೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿ ಇರುವ ಹಣಕ್ಕೆ ಸ್ವಲ್ಪ ಮಟ್ಟಿಗೆ ಬಡ್ಡಿ ನಷ್ಟವಾಗುತ್ತದೆ.

ಇಂಟ್ರಾಡೇ ಟ್ರೇಡಿಂಗ್
 

ಇಂಟ್ರಾಡೇ ಟ್ರೇಡಿಂಗ್

ಇಂಟ್ರಾಡೇ ಟ್ರೇಡಿಂಗ್ ನಿಂದ ಬಂದ ಲಾಭವನ್ನು ಅದೇ ದಿನ ಬಳಸಿಕೊಂಡು, ಮತ್ತೊಂದು ಟ್ರೇಡಿಂಗ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ಲಾಭವು T+2 ದಿನದಲ್ಲಿ ಕಾಣಿಸುತ್ತದೆ. ಉದಾಹರಣೆಗೆ: ಸೋಮವಾರದ ದಿನ ಇಂಟ್ರಾಡೇ ವ್ಯವಹಾರದ ಮೂಲಕ ಲಾಭ ಗಳಿಸಿದಿರಿ ಅಂತಿಟ್ಟುಕೊಳ್ಳಿ. ಆ ಲಾಭವನ್ನು ಬುಧವಾರದಂದು ಟ್ರೇಡಿಂಗ್ ಚಟುವಟಿಕೆಗೆ ಬಳಸಬಹುದು. ಯಾರು ಇಂಟ್ರಾಡೇ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಅಂತಿರುತ್ತಾರೋ ಅಂಥವರಿಗೆ ಮಾರ್ಜಿನ್ ಹಣದ (ಕನಿಷ್ಠ ಮೊತ್ತ) ಅಗತ್ಯ ಹೆಚ್ಚಾಗುತ್ತದೆ. ಎಷ್ಟು ಮಾರ್ಜಿನ್ ಹಣ ಅಗತ್ಯ ಇದೆಯೋ ಅಷ್ಟು ಖಾತೆಯಲ್ಲಿ ಇಲ್ಲದಿದ್ದಲ್ಲಿ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ. ಈ ನಿಯಮ ಬರುವ ಮುನ್ನ ಮಾರ್ಜಿನ್ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿಯಮ ಪಾಲನೆ ಇರಲಿಲ್ಲ. ಇಂಟ್ರಾಡೇ ಹಾಗೂ ಇತರ ವ್ಯವಹಾರಗಳಿಗೆ ಮಾರ್ಜಿನ್ ಮೊತ್ತದ ಶೇಕಡಾ 100ರಷ್ಟು ವ್ಯವಹಾರ ಮಾಡುವುದಕ್ಕೆ ಅವಕಾಶ ನೀಡುತ್ತಿದ್ದ ಉದಾಹರಣೆಯೂ ಸಿಗುತ್ತದೆ. ಷೇರು ಖರೀದಿ ಮಾಡಬೇಕು ಅಂತಿರುವವರ ಖಾತೆಯಲ್ಲಿ ಕಡ್ಡಾಯವಾಗಿ ಆ ವ್ಯವಹಾರ ಮೊತ್ತದ ಶೇಕಡಾ 20ರಷ್ಟು ಹಣ ಮುಂಚಿತವಾಗಿಯೇ ಪಡೆದುಕೊಳ್ಳಲೇಬೇಕು. ಇದರಿಂದ ಅಲ್ಪಾವಧಿಯಲ್ಲಿ ಹಿನ್ನಡೆ ಅನುಭವಿಸಬೇಕಾಗಬಹುದು. ಆದರೆ ದೀರ್ಘಾವಧಿಯಲ್ಲಿ ಬ್ರೋಕಿಂಗ್ ಸಂಸ್ಥೆಗಳು, ಹೂಡಿಕೆದಾರರು ಅನುಕೂಲ ಪಡೆಯುತ್ತಾರೆ.

ಷೇರುಗಳು ಅಡಮಾನ

ಷೇರುಗಳು ಅಡಮಾನ

ಒಂದು ವೇಳೆ ಮಾರ್ಜಿನ್ ಹಣದ ಬದಲಿಗೆ ಷೇರುಗಳನ್ನು ಅಡಮಾನ ಮಾಡಿದಲ್ಲಿ ಆ ಷೇರುಗಳು ಹೂಡಿಕೆದಾರರ ಖಾತೆಯಿಂದ ಹೋಗಲ್ಲ. ಬದಲಿಗೆ ಬ್ರೋಕರ್ ಗೆ ಅವುಗಳ ಮೇಲೆ ಹಕ್ಕು ಬರುತ್ತದೆ. ಈ ಹಿಂದೆ ಅಡಮಾನ ಮಾಡಿದ ಷೇರುಗಳನ್ನು ಬ್ರೋಕರ್ ಗಳು ತಮ್ಮ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಅದಕ್ಕಾಗಿ ಪವರ್ ಆಫ್ ಅಟಾರ್ನಿ ಬಳಸುತ್ತಿದ್ದರು. ಕಾರ್ವಿ ಹಗರಣದಲ್ಲಿ ಆಗಿದ್ದು ಇದೇ. ಪವರ್ ಆಫ್ ಅಟಾರ್ನಿ ಬಳಸಿಕೊಂಡು ಗ್ರಾಹಕರಿಗೆ ಮೋಸ ಮಾಡಿದ್ದರು. ಒಂದು ಸಲ ಅವುಗಳ ಮೇಲೆ ಹಕ್ಕು ಬರುತ್ತಿದ್ದಂತೆ ಮಾರ್ಜಿನ್ ಅಗತ್ಯಕ್ಕಾಗಿ ಬ್ರೋಕರ್ ಅದನ್ನು ಕ್ಲಿಯರಿಂಗ್ ಕಾರ್ಪೊರೇಷನ್ ಗಳಿಗೆ ಅಡಮಾನ ಮಾಡುತ್ತಾರೆ. ಹೀಗೆ ಮಾಡುವ ಮುನ್ನ ಒನ್-ಟೈಮ್-ಪಾಸ್ ವರ್ಡ್ ಮೂಲಕ ಹೂಡಿಕೆದಾರರ ಅನುಮತಿಯನ್ನು ಬ್ರೋಕರ್ ಪಡೆಯಬೇಕಾಗುತ್ತದೆ. ಇನ್ನು ಡಿವಿಡೆಂಡ್, ರೈಟ್ಸ್ ಇಶ್ಯೂ ಇಂಥವೆಲ್ಲ ನೇರವಾಗಿ ಗ್ರಾಹಕರ ಖಾತೆಗೆ ಬರುತ್ತದೆ. ಈ ಹಿಂದೆ ಅದು ಬ್ರೋಕರ್ ಗಳ ಡಿಮ್ಯಾಟ್ ಖಾತೆಗೆ ಬರುತ್ತಿತ್ತು. ಈಗಿನ ಹೊಸ ನಿಯಮದಿಂದ ಹೂಡಿಕೆದಾರರಿಗೆ ಖಂಡಿತಾ ಅನುಕೂಲವಾಗುತ್ತದೆ.

English summary

SEBI Changed Stock Trading Rules From September 1st: Explained in Kannada

Stock market regulator SEBI changed stock trading frame work from September 1. Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X