For Quick Alerts
ALLOW NOTIFICATIONS  
For Daily Alerts

ಹಣವನ್ನು ಆಕರ್ಷಿಸುವುದು ಹೇಗೆ? ಈ 7 ವಿಧಾನಗಳನ್ನು ಅನುಸರಿಸಿದರೆ ಸಂಪತ್ತು ನಿಮ್ಮ ಬಳಿ ಬರಲಿದೆ

|

ಹಣ ಅಂದಾಕ್ಷಣ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಹಣ ಎಂದರೆ ಜೀವ ಬಿಡುವ ಜನರಿದ್ದಾರೆ. ಜಗತ್ತಿನಲ್ಲಿ ಹಣ ಎಂದರೆ ಎಲ್ಲ ಎಂದು ಹೇಳುವವರೇ ಹೆಚ್ಚು. ಅಷ್ಟರ ಮಟ್ಟಿಗೆ ಆಧುನಿಕ ಜೀವನದಲ್ಲಿ ಹಣವೆಂಬುದು ಮನುಷ್ಯನ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದೆ.

ಹಣ ಸಂಪಾದಿಸುವ ಮೂಲಕ ಅತಿ ಹೆಚ್ಚು ಸಂಪತ್ತನ್ನು ಹೊಂದಬೇಕೆಂಬ ಕನಸು ಕಾಣುವುದು ಸಹಜ. ಆದರೆ ಈ ಸಂಪತ್ತು ಗಳಿಕೆಯು ಅಷ್ಟು ಸುಲಭವಾಗಿಲ್ಲ. ಕೆಲವರಿಗಂತೂ ಏನೂ ಮಾಡದಿದ್ದರೂ ಹಣ ತಾನಾಗಿಯೇ ಬಂದು ಅವರ ಬಳಿ ಸೇರುತ್ತಿರುತ್ತದೆ. ಮತ್ತೆ ಕೆಲವರು ಎಷ್ಟು ಪ್ರಯತ್ನಿಸಿದರೂ ದುಡ್ಡೇ ಉಳೀತಿಲ್ಲಾ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಹಾಗಿದ್ದರೆ ಈ ಹಣವನ್ನು ಆಕರ್ಷಿಸುವ ಸುಲಭ ವಿಧಾನಗಳು ಯಾವುವು? ಸಂಪತ್ತನ್ನು ಆಕರ್ಷಿಸುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ 7 ಸರಳ ವಿಧಾನಗಳನ್ನು ಈ ಕೆಳಗೆ ತಿಳಿಸಲಾಗಿದೆ. ನೀವು ಮುಕ್ತ ಮನಸ್ಸಿನಿಂದ ಅರ್ಥೈಸಿಕೊಂಡರೆ ಮಾತ್ರ ಈ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.

1. ಹಣದ ಆಕರ್ಷಣೆಯು ಮನಸ್ಥಿತಿಯನ್ನು ಆಧರಿಸಿರುತ್ತದೆ
 

1. ಹಣದ ಆಕರ್ಷಣೆಯು ಮನಸ್ಥಿತಿಯನ್ನು ಆಧರಿಸಿರುತ್ತದೆ

ಹಣವು ನೀವಿರುವ ಕಡೆಗೆ ಆಕರ್ಷಿತವಾಗಬೇಕಾದರೆ ಯಾವುದೋ ಕೋರ್ಸ್ ಮಾಡುವ ಮೂಲಕ ಇಲ್ಲವೇ ಅರ್ಥಶಾಸ್ತ್ರಜ್ಞದ ಸಿದ್ಧಾಂತಗಳನ್ನು ಅನುಸರಿಸಿ ಬರುವಂತದ್ದಲ್ಲ. ಬದಲಾಗಿ ಹಣವನ್ನು ಆಕರ್ಷಿಸುವ ಪರಿಕಲ್ಪನೆಗಳು ಸಕಾರಾತ್ಮಕ ಮನೋವಿಜ್ಞಾನದಿಂದ ಬಂದಿವೆ. ಇದು ಸಾವಧಾನತೆ ಆಧಾರಿತ ಚಿಂತನೆಯಲ್ಲಿ ಆಳವಾಗಿ ಬೇರೂರಿದೆ.

ಯಾರೇ ಹಣವನ್ನು ಆಕರ್ಷಿಸಲು ಮೊದಲು ಸಾವಧಾನತೆಯ ಮನಸ್ಸನ್ನು ಅಳವಡಿಸಿಕೊಳ್ಳಬೇಕು. ದಿಢೀರ್ ಎಂದು ರಾತ್ರಿ ಬೆಳಗಾಗುವುದರಲ್ಲಿ ಶ್ರೀಮಂತನಾಗಲು ಸಾಧ್ಯವಿಲ್ಲ. ಹಣದ ಕುರಿತಾಗಿ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ.

2. ನೀವು ಸಂತೋಷಕ್ಕೆ ಅರ್ಹರು ಎಂದು ನಂಬಬೇಕು

2. ನೀವು ಸಂತೋಷಕ್ಕೆ ಅರ್ಹರು ಎಂದು ನಂಬಬೇಕು

ಸಂಪತ್ತನ್ನು ಆಕರ್ಷಿಸುವ ಮೊದಲ ಹೆಜ್ಜೆಯೇ ನೀವು ಸಂತೋಷಕ್ಕೆ ಅರ್ಹರೆಂದು ಮೊದಲು ನಂಬಬೇಕು. ಅದರರ್ಥ ನೀವು ಸಂತೋಷಕ್ಕೆ ಅರ್ಹರಾಗಿಲ್ಲ ಎಂದಲ್ಲ. ಸಂತೋಷವನ್ನು ಸೃಷ್ಠಿಸುವ ರಹಸ್ಯವು ನಿಮ್ಮ ಸ್ವ-ದೃಷ್ಠಿಕೋನದಿಂದಲೇ ಪ್ರಾರಂಭವಾಗುತ್ತದೆ. ನೀವು ಸಂತೋಷಕ್ಕೆ ಅರ್ಹರೆಂದು ನಂಬುವವರೆಗೂ ನಾವು ಹೇಳುವ ಯಾವ ವಿಧಾನಗಳನ್ನು ಪಾಲಿಸಿದರೂ ಉಪಯೋಗವಾಗದು.

ನೀವು ಸಂತೋಷಕ್ಕೆ ಅರ್ಹರಾಗಲು ಈ ಹಿಂದಿನ ನೋವು, ಅವಮಾನಕ್ಕೆ ಸಂಬಂಧಿಸಿದ ದುಃಖವನ್ನು ಹೊರಹಾಕಬೇಕು. ಇದು ಸಂಭವಿಸಿದರೆ ಮಾತ್ರ ನೀವು ಹೊಸ ದಿಕ್ಕಿನೆಡೆಗೆ ಹೆಜ್ಜೆ ಇಡಲು ಸಾಧ್ಯವಾಗುತ್ತದೆ.

3. ನೀವು ಏನನ್ನು ಹೊಂದಿದ್ದೀರ ಅದರ ಬಗ್ಗೆ ಮೊದಲು ಗಮನಹರಿಸಿ

3. ನೀವು ಏನನ್ನು ಹೊಂದಿದ್ದೀರ ಅದರ ಬಗ್ಗೆ ಮೊದಲು ಗಮನಹರಿಸಿ

ಬಹುತೇಕ ಜನರು ತಮ್ಮ ಬಳಿ ಇಲ್ಲದ ಅಥವಾ ಕಳೆದು ಹೋದ ವಸ್ತು/ವಿಚಾರಗಳ ಕುರಿತಾಗಿಯೇ ಚಿಂತೆ ಮಾಡುತ್ತಾ ಕಾಲ ವ್ಯರ್ಥ ಮಾಡುತ್ತಾರೆ. ಈ ರೀತಿಯಾದ ಯೋಚನೆಗಳನ್ನು ಹೊಂದಿದ್ದರೆ ನಕಾರಾತ್ಮಕ ಶಕ್ತಿಗಳಿಗೆ ನಿಮಗೆ ತಿಳಿಯದಂತೆಯೇ ಮಣಿದು ಬಿಡುತ್ತೀರ. ಇದರ ಬದಲಾಗಿ ನಿಮ್ಮ ಬಳಿ ಏನಿದೆ ಆ ಕೌಶಲ್ಯಗಳನ್ನೇ ಬಹುಮಾನವೆಂದು ತಿಳಿದುಕೊಂಡು ಅದರ ಕುರಿತಾಗಿಯೇ ಹೆಚ್ಚು ಗಮನಹರಿಸಿ. ಸದ್ಯದ ಸಮಯವು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಬಹುದೇ ಹೊರತು ನಿನ್ನೆ ಆದ ವಿಚಾರಗಳು,ಘಟನೆಗಳು ಯೋಚಿಸುತ್ತಾ ಕುಳಿತಾರ ಪರಿಹಾರ ಸಿಗುವುದಿಲ್ಲ. ಹೀಗಾಗಿ ಸದ್ಯದ ವಿಚಾರಗಳ ಕುರಿತು ಗಮನ ಹರಿಸಬೇಕಾಗಿರುವುದು ಮುಖ್ಯ.

4. ಕಲಿಕೆಯ ಅಸಹಾಯಕತೆಯ ಮನಸ್ಥಿತಿಯನ್ನು ಕೊನೆಗೊಳಿಸಿ
 

4. ಕಲಿಕೆಯ ಅಸಹಾಯಕತೆಯ ಮನಸ್ಥಿತಿಯನ್ನು ಕೊನೆಗೊಳಿಸಿ

ಜೀವನದಲ್ಲಿ ಯಶಸ್ಸಿನ ಹೆಜ್ಜೆಯನ್ನಿಡಲು ಮೊದಲು ರೂಢಿಸಿಕೊಳ್ಳಬೇಕಾದ ಮನಸ್ಥಿತಿ ಇದಾಗಿದೆ. ವಯಸ್ಸು ಎಷ್ಟಾಗಿದ್ದರೂ ಕಲಿಕೆಯ ಅಸಹಾಯಕತೆಯ ಇರಬಾರದು. ನಿಮ್ಮ ಜೀವನದಲ್ಲಿ ನನ್ನಿಂದ ಇದು ಸಾಧ್ಯವಿಲ್ಲ ಎಂಬ ಮನಸ್ಥಿತಿಯನ್ನು ಇಟ್ಟುಕೊಂಡಿರುವವರೆಗೂ ನೀವು ಸಂಪತ್ತನ್ನು ಅಥವಾ ಹಣವನ್ನು ಆಕರ್ಷಿಸಲು ಸಾಧ್ಯವಿಲ್ಲ.

ಹೀಗಾಗಿ ನೀವು ಎಂದಿಗೂ ಆಗುವುದಿಲ್ಲ ಎಂದು ಹೇಳುವ ಮನಸ್ಥಿತಿಯನ್ನು ಬದಲಿಸಿ ನನ್ನಿಂದ ಇದು ಸಾಧ್ಯ ಎಂಬ ಮಾತುಗಳನ್ನು ಆಡುವುದರ ಜೊತೆಗೆ ರೂಢಿಸಿಕೊಂಡರೆ ಹಣವನ್ನು ಆಕರ್ಷಿಸಬಹುದು.

5. ಅಸೂಯೆ ಪಡುವುದನ್ನು ಬಿಟ್ಟುಬಿಡಿ

5. ಅಸೂಯೆ ಪಡುವುದನ್ನು ಬಿಟ್ಟುಬಿಡಿ

ನೀವು ಇನ್ನೊಬ್ಬರ ಬಗ್ಗೆ ಅಸೂಯೆ ಪಡುತ್ತಿದ್ದೀರ ಎಂದರೆ ನೀವು ನಿಮ್ಮ ಮನಸ್ಸನ್ನು ಭ್ರಮೆಯಿಂದ ಆವರಿಸಿಕೊಳ್ಳುತ್ತಿದ್ದೀರಾ ಎಂದರ್ಥ. ಯಾರಾದರೂ ದುಬಾರಿ ಕಾರು ಓಡಿಸುತ್ತಿದ್ದಾರೆ ಎಂದರೆ ಅವರ ಬಳಿ ಅಗತ್ಯವಾದ ಹಣವಿದೆ ಅಥವಾ ಸಾಕಷ್ಟು ಹಣವಿದೆ ಎಂದಲ್ಲ. ಅಸೂಯೆ ಪಡುವುದು ಎಂದಿಗೂ ಸತ್ಯದಲ್ಲಿ ನೆಲೆಗೊಳ್ಳುವುದಿಲ್ಲ. ಹೀಗಾಗಿ ಅಸೂಯೆಯನ್ನು ಹೊರಹಾಕಿ ಸಂತೋಷಕ್ಕೆ ಅವಕಾಶ ಮಾಡಿಕೊಡಿ.

ಹೀಗೆ ಮಾಡಿದರೆ ನಕಾರಾತ್ಮಕ ಅಂಶಗಳನ್ನು ಹೊರಹಾಕಿ ಸರಳವಾದ ವಿಷಯಗಳನ್ನು ಒಪ್ಪಿಕೊಂಡು ಶಾಂತಿಯಿಂದ ಬದುಕಲು ಸಾಧ್ಯ.

6.ಹಣದ ಶಕ್ತಿಯನ್ನು ಗೌರವಿಸಿ

6.ಹಣದ ಶಕ್ತಿಯನ್ನು ಗೌರವಿಸಿ

ನೀವು ಕಷ್ಟಪಟ್ಟು ದುಡಿದು ಪಡೆಯುವ ಪ್ರತಿಫಲವೇ ಹಣವಾಗಿದೆ. ಹೀಗಾಗಿ ನೀವು ಹಣವನ್ನು ಅಗೌರಿಸಿದರೆ, ನಿಮಗೆ ನೀವೆ ಅಗೌರವ ತೋರಿದಂತೆ. ಹಣವನ್ನು ಗೌರವಿಸುವುದು ಎಂದರೆ ಅದನ್ನು ಸಂಘಟಿತವಾಗಿಡುವುದು. ಅಂದರೆ ನಿಯಮಿತವಾಗಿ ಅದನ್ನು ಟ್ರ್ಯಾಕ್ ಮಾಡುವುದು. ಹಣವು ಉಗಮಕ್ಕೂ ಕಾರಣವಾಗುವ ಶಕ್ತಿಯ ಜೊತೆಗೆ ವಿನಾಶಗೊಳಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಅದನ್ನು ಲಘುವಾಗಿ ಪರಿಗಣಿಸಬಾರದು.

ಹಣವನ್ನು ಸರಿಯಾಗಿ ಬಳಸಿದ್ದಲ್ಲಿ ಅದು ನಿಮ್ಮನ್ನು ಬೆಳೆಸುತ್ತದೆ ಮತ್ತು ಮುಂದಿನ ಬಹಳ ವರ್ಷಗಳ ಕಾಲ ನಿಮ್ಮನ್ನು ಕಾಯುತ್ತದೆ. ಯಾವಾಗ ನೀವು ಹಣವನ್ನು ಲಘುವಾಗಿ ಪರಿಗಣಿಸುತ್ತೀರೋ ಅದು ನಕಾರಾತ್ಮಕ ಪ್ರಭಾವ ಬೀರುವುದಲ್ಲದೆ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹಣಕ್ಕೆ ಗೌರವ ನೀಡುವುದು ಎಂದರೆ ಅನಗತ್ಯವಾಗಿ ಖರ್ಚು ಮಾಡಿ ತಮ್ಮ ಪ್ರತಿಷ್ಠೆಯನ್ನು ತೋರಿಸುವುದನ್ನು ತಪ್ಪಿಸಿ ಉತ್ತಮ ರೀತಿಯಲ್ಲಿ ಬಳಸುವುದಾಗಿದೆ.

7. ದಾನಮಾಡಿ ಅಥವಾ ಬೇರೆಯವರಿಗೆ ಸಹಾಯ ಮಾಡಿ

7. ದಾನಮಾಡಿ ಅಥವಾ ಬೇರೆಯವರಿಗೆ ಸಹಾಯ ಮಾಡಿ

ಈ ಅಂತಿಮ ವಿಧಾನವು ಆಧ್ಮಾತ್ಮಕ ಮತ್ತು ಕರ್ಮಶಕ್ತಿಗೆ ಸಂಬಂಧಿಸಿದಂತ ವಿಷಯವಾಗಿದೆ. ಯಾರು ಕಷ್ಟದಲ್ಲಿರುತ್ತಾರೋ ಅಂತವರಿಗೆ ಸಹಾಯ ಮಾಡುವುದು ಅಥವಾ ಅವರಿಗೆ ಚೈತನ್ಯವನ್ನು ತುಂಬಲು ನೀವು ಸಹಾಯ ಮಾಡಿದರೆ ಅದು ಹಿಂತಿರುಗಿ ಬರುತ್ತದೆ. ಹಣವನ್ನು ಸಂಗ್ರಹಿಸಿಡುತ್ತಾ ಹೋದರೆ ಅದು ನಿಮ್ಮಿಂದ ಇನ್ನಷ್ಟು ದೂರ ಹಿಂದೆ ಸರಿಯುತ್ತಾ ಸಾಗುತ್ತದೆ.

ಹೀಗಾಗಿ ಯಾರಿಗೆ ತೀರಾ ಅಗತ್ಯವಿರುತ್ತದೆಯೇ ಅಂತವರಿಗೆ ನೀವು ಸಹಾಯ ಮಾಡಬೇಕು. ನಿಮ್ಮ ಮುಂದೆಯೇ ಹೆಣಗಾಡುತ್ತಿರುವ ಕುಟುಂಬಕ್ಕೆ ಸಹಾಯ ಮಾಡಿದರೆ ಹಣದಷ್ಟೇ ಅಮೂಲ್ಯವಾದ ಸಮಯವನ್ನು ನೀಡಿದಂತಾಗುತ್ತದೆ. ನೀವು ಇತರರಿಗೆ ಪ್ರೀತಿ ಹಾಗೂ ಸಹಾನುಭೂತಿ ತೋರಿಸುತ್ತಿದ್ದೀರಾ ಎಂದರೆ ಅದು ಸಂಪತ್ತಿನ ಪೂರ್ವ ಸೂಚಕವಾಗಿದೆ. ಈ ಏಳು ವಿಧಾನಗಳನ್ನು ನಿಜವಾಗಿಯೂ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಸಂಪತ್ತನ್ನು ಆಕರ್ಷಿಸಲು ಪ್ರಾರಂಭಿಸಿದ್ದೀರ ಎಂದರ್ಥ.

English summary

Seven Simple Steps To Attract Wealth

These are the seven simple steps to instantly attract wealth to your life
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more