For Quick Alerts
ALLOW NOTIFICATIONS  
For Daily Alerts

Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!

|

ಕೇಂದ್ರ ಸರ್ಕಾರವು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿಯ ನೋಟನ್ನು ಅಪನಗದೀಕರಣ ಮಾಡಿ ಆರು ವರ್ಷಗಳು ಆಗಿದೆ. 2016ರ ನವೆಂಬರ್ 8ರಂದು ಸರ್ಕಾರವು ನೋಟು ಅಪನಗದೀಕರಣ ಮಾಡಿದೆ. ಆದರೆ ಪ್ರಸ್ತುತ ಜನರಲ್ಲಿ ಇರುವ ನಗದು ಪ್ರಮಾಣ ಮಾತ್ರ ಸಾರ್ವಕಾಲಿಕವಾಗಿ ಏರಿಕೆಯಾಗಿದೆ.

ಅಕ್ಟೋಬರ್ 21, 2022ರವರೆಗಿನ ಲೆಕ್ಕಾಚಾರದ ಪ್ರಕಾರ ಜನರ ಕೈಯಲ್ಲಿರುವ ನಗದು ಸಾರ್ವಕಾಲಿಕ ಏರಿಕೆಯಾಗಿದ್ದು, ಪ್ರಸ್ತುತ 30.88 ಲಕ್ಷ ಕೋಟಿ ರೂಪಾಯಿ ನಗದು ಇದೆ. ನವೆಂಬರ್ 4, 2016ರಲ್ಲಿ ಜನರ ಕೈಯಲ್ಲಿರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ 2022ರಲ್ಲಿ ಈ ನಗದು ಪ್ರಮಾಣ 2016ಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 72ರಷ್ಟು ಅಥವಾ 12.91 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನೋಟ್‌ ಬ್ಯಾನ್‌ ಆಗಿ ಐದು ವರ್ಷ: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಹೆಚ್ಚಳನೋಟ್‌ ಬ್ಯಾನ್‌ ಆಗಿ ಐದು ವರ್ಷ: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಹೆಚ್ಚಳ

ಇನ್ನು ಕೇಂದ್ರ ಸರ್ಕಾರವು 2016ರ ನವೆಂಬರ್ 8ರಂದು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿ ನೋಟನ್ನು ಅಪನಗದೀಕರಣ ಮಾಡಿದ ಬಳಿಕ, 2016ರ ನವೆಂಬರ್ 25ರಲ್ಲಿ ಜನರ ಬಳಿ ಸುಮಾರು 9.11 ಲಕ್ಷ ಕೋಟಿ ರೂಪಾಯಿ ಇತ್ತು. ಆ ಮೌಲ್ಯದಿಂದ ಪ್ರಸ್ತುತ ಜನರ ಕೈಯಲ್ಲಿರುವ ಇರುವ ನಗದು ಪ್ರಮಾಣವು ಸುಮಾರು ಶೇಕಡ 239ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

 2017ರಲ್ಲಿ ಭಾರೀ ಇಳಿಕೆಯಾಗಿದ್ದ Cash with public

2017ರಲ್ಲಿ ಭಾರೀ ಇಳಿಕೆಯಾಗಿದ್ದ Cash with public

ಆರ್‌ಬಿಐನ ಮಾಹಿತಿ ಪ್ರಕಾರ 2020ರ ಅಕ್ಟೋಬರ್ 21ರವರೆಗೆ ಜನರ ಕೈಯಲ್ಲಿ ಇರುವ ನಗದು ಪ್ರಮಾಣವು 25,585 ಕೋಟಿ ರೂಪಾಯಿ ಹೆಚ್ಚಳವಾಗಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಏರಿಕೆ ಕಂಡುಬಂದಿತ್ತು. ವರ್ಷದಿಂದ ವರ್ಷಕ್ಕೆ ಶೇಕಡ 9.3ರಷ್ಟು ಅಥವಾ 2.63 ಕೋಟಿ ರೂಪಾಯಿಯಷ್ಟು ಏರಿಕೆಯಾಗಿತ್ತು. ಇನ್ನು ಕೇಂದ್ರ ಸರ್ಕಾರವು ನೋಟಿನ ಅಪನಗದೀಕರಣ ಮಾಡುವ ಮುನ್ನ 2016ರ ನವೆಂಬರ್ 4ರ ವೇಳೆಗೆ ಜನರ ಬಳಿ ಇರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಅಪನಗದೀಕರಣ ಮಾಡಿದ ಬಳಿಕ 2017ಕ್ಕೆ ಜನರ ಬಳಿಕ ಇರುವ ನಗದು ಪ್ರಮಾಣವು 7.8 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು.

 ಆನ್‌ಲೈನ್‌ ವಹಿವಾಟಿಗೆ ಒತ್ತು

ಆನ್‌ಲೈನ್‌ ವಹಿವಾಟಿಗೆ ಒತ್ತು

ಒಟ್ಟು ಚಲಾವಣೆಯಲ್ಲಿರುವ ನಗದಿನಿಂದ ಬ್ಯಾಂಕ್‌ನಲ್ಲಿರುವ ನಗದನ್ನು ಕಳೆದು ಉಳಿಯುವ ನಗದು ಪ್ರಮಾಣವೇ ಜನರ ಕೈಯಲ್ಲಿರುವ ನಗದು ಎಂದು ಗುರುತಿಸಲಾಗುತ್ತದೆ. ಒಟ್ಟು ಚಲಾವಣೆಯಲ್ಲಿರುವ ನಗದು ಎಂದರೆ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ವ್ಯವಹಾರಕ್ಕೆ ಚಾಲ್ತಿಯಲ್ಲಿರುವ ನಗದು ಪ್ರಮಾಣವಾಗಿದೆ. ಒಟ್ಟು ನಗದು ಪ್ರಮಾಣವು ಹೆಚ್ಚಳವಾಗುತ್ತಿದೆ. ಈ ನಡುವೆ ಸರ್ಕಾರ ಹಾಗೂ ಆರ್‌ಬಿಐ ನಗದುರಹಿತ ವ್ಯಾಪಾರಕ್ಕಾಗಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಹಲವಾರು ನಿರ್ಬಂಧಗಳನ್ನು ಕೂಡಾ ಜಾರಿ ಮಾಡಿದೆ. ಇನ್ನು 2020ರಲ್ಲಿ ಕೋವಿಡ್ ಕಾರಣದಿಂದಾಗಿ ಲಾಕ್‌ಡೌನ್ ಮಾಡಿದ ಬಳಿಕ ಆನ್‌ಲೈನ್ ವಹಿವಾಟು ಅಧಿಕವಾಗಿದೆ. ಆದರೆ ಜನರು ತಮ್ಮ ದಿನಸಿ ಮೊದಲಾದ ಅಗತ್ಯಕ್ಕೆ ಬೇಕಾಗಿ ಅಧಿಕ ಹಣವನ್ನು ವಿತ್‌ಡ್ರಾ ಮಾಡಿಕೊಂಡು ಇಡಲು ಆರಂಭಿಸಿದರು.

 ನೋಟು ಬ್ಯಾನ್‌ನಿಂದ ಜಿಡಿಪಿ ಕುಸಿತ
 

ನೋಟು ಬ್ಯಾನ್‌ನಿಂದ ಜಿಡಿಪಿ ಕುಸಿತ

2016ರಲ್ಲಿ ದಿಡೀರ್ ಆಗಿ ಸರ್ಕಾರ ನೋಟು ಅಪನಗದೀಕರಣ ಮಾಡಿದ್ದು ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಪ್ರಭಾವ ಉಂಟು ಮಾಡಿದೆ. ಜಿಡಿಪಿ ತೀವ್ರ ಕುಸಿತ ಕಂಡಿದೆ. ಸುಮಾರು ಶೇಕಡ 1.5ಕ್ಕೆ ಇಳಿಕೆಯಾಗಿದೆ. ನೋಟು ಬ್ಯಾನ್‌ನಿಂದಾಗಿ ಹಲವಾರು ಸಣ್ಣ ಉದ್ಯಮಗಳು ನಷ್ಟದಿಂದಾಗಿ ಮುಚ್ಚಿ ಹೋಗಿದೆ. ಹಾಗೆಯೇ ಹಣದ ಅಭಾವ ಕೂಡಾ ಉಂಟು ಮಾಡಿತ್ತು. ಜನರು ದಿನಕ್ಕೆ ಇಷ್ಟೇ ಪ್ರಮಾಣದ ಹಣವನ್ನು ವಿತ್‌ಡ್ರಾ ಮಾಡಬೇಕು ಎಂಬ ತಾತ್ಕಾಲಿಕ ನಿಯಮವನ್ನು ಕೂಡಾ ಹೇರಲಾಗಿತ್ತು. ಸುಮಾರು ಹಣಕಾಸು ವರ್ಷ 2020ರವರೆಗೆ ಜಿಡಿಪಿ ಅನುಪಾತಕ್ಕೆ ಚಲಾವಣೆಯಲ್ಲಿರುವ ನಗದು ಶೇಕಡಾ 10-12 ರಷ್ಟಿತ್ತು. ಭಾರತದಲ್ಲಿ 2017-18 ರಲ್ಲಿ ಜಿಡಿಪಿ ಶೇಕಡ 10.7 ರಷ್ಟು ಇದ್ದರೆ, 2020-21 ರಲ್ಲಿ ಜಿಡಿಪಿ 14.4ಕ್ಕೆ ಏರಿಕೆಯಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ಬಳಿಕ ಮತ್ತೆ ಏರಿಳಿತವಾಗಿದೆ. ಈಗ ಡಿಜಿಟಲ್ ವಹಿವಾಟು ಹೆಚ್ಚಾಗಿದ್ದರೂ ಕೂಡಾ ಜನರ ಕೈಯಲ್ಲಿರುವ ಹಣದ ಪ್ರಮಾಣ ಅಧಿಕವಾಗಿದೆ.

  2 ಸಾವಿರ ರೂ. ನೋಟು ಚಲಾವಣೆ ಕುಸಿತ: ಯಾವ ನೋಟು ಎಷ್ಟು ಚಲಾವಣೆ? 2 ಸಾವಿರ ರೂ. ನೋಟು ಚಲಾವಣೆ ಕುಸಿತ: ಯಾವ ನೋಟು ಎಷ್ಟು ಚಲಾವಣೆ?

English summary

Six years After Note Ban Cash With Public at All-Time High

Six years to Note Ban: Cash with public rising, at all-time high, Cash with public at record high of Rs 30.88 lakh crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X