For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರಿಗೆ 4 ವಿಶೇಷ ಎಫ್‌ಡಿ ಯೋಜನೆಗಳು: ಮಾರ್ಚ್ 31ರವರೆಗೆ ಅವಕಾಶ

|

ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡಿ ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.

ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರೀಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.

ಕೋವಿಡ್-19 ಕಾರಣದಿಂದಾಗಿ ಬಡ್ಡಿದರಗಳು ಶೀಘ್ರವಾಗಿ ಕುಸಿಯುತ್ತಿರುವಾಗ ಹಿರಿಯ ನಾಗರಿಕರಿಗೆ ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿಶೇಷ ಎಫ್‌ಡಿ ಯೋಜನೆಯನ್ನು
ಬ್ಯಾಂಕ್‌ಗಳಲ್ಲಿ ಪ್ರಾರಂಭಿಸಲಾಯಿತು. ಹಿರಿಯ ನಾಗರಿಕರಿಗೆ ಈ ಬ್ಯಾಂಕುಗಳ ವಿಶೇಷ ಎಫ್‌ಡಿ ಯೋಜನೆಗಳು ಮಾರ್ಚ್ 31, 2021 ರವರೆಗೆ ಜಾರಿಯಲ್ಲಿವೆ.

ಈ ವಿಶೇಷ ಎಫ್‌ಡಿ ಯೋಜನೆಗಳು ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರವನ್ನು ನೀಡುತ್ತವೆ ಎಂಬುದರ ಮಾಹಿತಿ ಈ ಕೆಳಗಿದೆ.

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ

ಹಿರಿಯ ನಾಗರಿಕರಿಗಾಗಿ ಎಸ್‌ಬಿಐನ ವಿಶೇಷ ಎಫ್‌ಡಿ ಯೋಜನೆಯ ಬಡ್ಡಿದರವು ಸಾಮಾನ್ಯ ಸಾರ್ವಜನಿಕ ದರಕ್ಕಿಂತ 80 ಬೇಸಿಸ್ ಪಾಯಿಂಟ್‌ಗಳು (ಬಿಪಿಎಸ್) ಹೆಚ್ಚಿರುತ್ತದೆ. ಎಸ್‌ಬಿಐ ಪ್ರಸ್ತುತ ಐದು ವರ್ಷಗಳ ಠೇವಣಿಗಳ ಮೇಲೆ ಶೇ 5.4 ರಷ್ಟು ಬಡ್ಡಿದರವನ್ನು ಸಾಮಾನ್ಯ ಜನರಿಗೆ ನೀಡುತ್ತದೆ. ಎಸ್‌ಬಿಐ ಹಿರಿಯ ನಾಗರಿಕರ ಈ ವಿಶೇಷ ಎಫ್‌ಡಿ ಯೋಜನೆಯಡಿ ಅದೇ ಅವಧಿಗೆ ಶೇಕಡಾ 6.20ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಒಂದು ವರ್ಷದೊಳಗಿನ FD ಯೋಜನೆಗಳು

7 ದಿನಗಳಿಂದ 45 ದಿನಗಳವರೆಗೆ - 3.4%

46 ದಿನಗಳಿಂದ 179 ದಿನಗಳವರೆಗೆ - 4.4%

180 ದಿನಗಳಿಂದ 210 ದಿನಗಳವರೆಗೆ - 4.9%

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 4.9%


ಹತ್ತು ವರ್ಷದೊಳಗಿನ ಫಿಕ್ಸೆಡ್ ಡೆಪಾಸಿಟ್
1 ರಿಂದ 10 ವರ್ಷದೊಳಗಿನ FD ಬಡ್ಡಿ ದರಗಳು

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ - 5.6%

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ -5.6%

3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ - 5.8%

5 ವರ್ಷಗಳು ಮತ್ತು 10 ವರ್ಷಗಳವರೆಗೆ - 6.2%

ಚಿನ್ನದ ಇಟಿಎಫ್‌ಗಳು: ಹೂಡಿಕೆ ಮತ್ತು ಲಾಭದಾಯಕ ವ್ಯವಹಾರ ಮಾಡುವುದು ಹೇಗೆ?ಚಿನ್ನದ ಇಟಿಎಫ್‌ಗಳು: ಹೂಡಿಕೆ ಮತ್ತು ಲಾಭದಾಯಕ ವ್ಯವಹಾರ ಮಾಡುವುದು ಹೇಗೆ?

ಹೆಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

ಹೆಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

5 ವರ್ಷದ ಠೇವಣಿಗಳಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 0.75 ಬೇಸಿಸ್ ಪಾಯಿಂಟ್ ಹೆಚ್ಚಿನ ಬಡ್ಡಿದರವನ್ನು ಪಾವತಿಸುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಅಡಿಯಲ್ಲಿ ಹಿರಿಯ ನಾಗರಿಕರಿಗೆ ನಿಗದಿತ ಠೇವಣಿ ಮೇಲಿನ ಬಡ್ಡಿದರವನ್ನು ಶೇಕಡಾ 6.25 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಸಾಮಾನ್ಯ ನಾಗರಿಕರು ಕ್ರಮವಾಗಿ 5.5% ಬಡ್ಡಿದರವನ್ನು ಪಡೆಯುತ್ತಾರೆ.


7 ದಿನಗಳಿಂದ 14 ದಿನಗಳವರೆಗೆ - 3.00%

15 ದಿನಗಳಿಂದ 29 ದಿನಗಳವರೆಗೆ - 3.00%

30 ದಿನಗಳಿಂದ 45 ದಿನಗಳವರೆಗೆ - 3.50%

46 ದಿನಗಳಿಂದ 60 ದಿನಗಳವರೆಗೆ - 3.50%

61 ದಿನಗಳಿಂದ 90 ದಿನಗಳವರೆಗೆ - 3.50%

91 ದಿನಗಳಿಂದ 06 ತಿಂಗಳವರೆಗೆ - 4.00%

06 ತಿಂಗಳು 1 ದಿನದಿಂದ 9 ತಿಂಗಳವರೆಗೆ - 4.90%

09 ತಿಂಗಳು 1 ದಿನದಿಂದ 1 ವರ್ಷದೊಳಗೆ - 4.90%

1 ವರ್ಷ - 5.40%

1 ರಿಂದ 2 ವರ್ಷ - 5.40%

2 ರಿಂದ 3 ವರ್ಷ - 5.65%

3 ರಿಂದ 5 ವರ್ಷ - 5.80%

5 ರಿಂದ 10 ವರ್ಷ - 6.25%

 ಇಪಿಎಫ್‌ ಚಂದಾದಾರರಿಗೆ ಒಳ್ಳೆಯ ಸುದ್ದಿ: ಪಿಎಫ್ ಮೇಲಿನ ಬಡ್ಡಿ ಘೋಷಣೆ ಇಪಿಎಫ್‌ ಚಂದಾದಾರರಿಗೆ ಒಳ್ಳೆಯ ಸುದ್ದಿ: ಪಿಎಫ್ ಮೇಲಿನ ಬಡ್ಡಿ ಘೋಷಣೆ

ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

5 ವರ್ಷಗಳವರೆಗೆ ನಿಶ್ಚಿತ ಠೇವಣಿಗಳ ಮೇಲೆ, ಐಸಿಐಸಿಐ ಬ್ಯಾಂಕ್ 0.80 ಬೇಸಿಸ್ ಪಾಯಿಂಟ್ ಹೆಚ್ಚಿನ ಬಡ್ಡಿದರವನ್ನು ಪಾವತಿಸುತ್ತದೆ. ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯು ಹಿರಿಯ ನಾಗರಿಕರಿಗೆ ಶೇಕಡಾ 6.30 ರಷ್ಟು ವಾರ್ಷಿಕ ಬಡ್ಡಿದರವನ್ನು ಪಾವತಿಸುತ್ತದೆ. ಆದರೆ ಹಿರಿಯರಲ್ಲದ ನಾಗರಿಕರು ಅದೇ ಅವಧಿಗೆ ಶೇಕಡಾ 5.5ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ.

7 ದಿನಗಳಿಂದ 14 ದಿನಗಳವರೆಗೆ - 3.00%

15 ದಿನಗಳಿಂದ 29 ದಿನಗಳವರೆಗೆ - 3.00%

30 ದಿನಗಳಿಂದ 45 ದಿನಗಳವರೆಗೆ - 3.50%

46 ದಿನಗಳಿಂದ 60 ದಿನಗಳವರೆಗೆ - 3.50%

61 ದಿನಗಳಿಂದ 90 ದಿನಗಳವರೆಗೆ - 3.50%

91 ದಿನಗಳಿಂದ 06 ತಿಂಗಳವರೆಗೆ - 4.00%

121 ದಿನಗಳಿಂದ 184 ದಿನಗಳವರೆಗೆ - 4.00%

185 ದಿನಗಳಿಂದ 210 ದಿನಗಳು - 4.90%

211 ದಿನಗಳಿಂದ 270 ದಿನಗಳು - 4.90%

271 ದಿನಗಳಿಂದ 289 ದಿನಗಳು - 4.90%

290 ದಿನಗಳಿಂದ 1 ವರ್ಷದೊಳಗೆ - 4.90%

06 ತಿಂಗಳು 1 ದಿನದಿಂದ 9 ತಿಂಗಳವರೆಗೆ - 4.90%

09 ತಿಂಗಳು 1 ದಿನದಿಂದ 1 ವರ್ಷದೊಳಗೆ - 4.90%

1 ವರ್ಷದಿಂದ 389 ದಿನಗಳು - 5.40%

390 ದಿನಗಳಿಂದ 18 ತಿಂಗಳು - 5.40%

18 ತಿಂಗಳಿಂದ 2 ವರ್ಷ - 5.50%

2 ರಿಂದ 3 ವರ್ಷ - 5.65%

3 ರಿಂದ 5 ವರ್ಷ - 5.85%

5 ರಿಂದ 10 ವರ್ಷ - 6.30%

 

ಬ್ಯಾಂಕ್‌ ಆಫ್‌ ಬರೋಡಾ ವಿಶೇಷ ಎಫ್‌ಡಿ ಯೋಜನೆ

ಬ್ಯಾಂಕ್‌ ಆಫ್‌ ಬರೋಡಾ ವಿಶೇಷ ಎಫ್‌ಡಿ ಯೋಜನೆ

ಹಿರಿಯ ನಾಗರಿಕರು ಬ್ಯಾಂಕ್ ಆಫ್ ಬರೋಡಾದಲ್ಲಿ ನಿಶ್ಚಿತ ಠೇವಣಿಗಳ ಮೇಲೆ 100 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚು ಪಡೆಯುತ್ತಾರೆ. ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಲ್ಲಿ (5 ವರ್ಷದಿಂದ 10 ವರ್ಷಗಳವರೆಗೆ) ಶೇಕಡಾ 6.25ರಷ್ಟು ಬಡ್ಡಿ ಪಡೆಯಲಿದ್ದಾರೆ.

7 ದಿನಗಳಿಂದ 14 ದಿನಗಳವರೆಗೆ - 3.30%

15 ದಿನಗಳಿಂದ 45 ದಿನಗಳವರೆಗೆ - 3.30%

46 ದಿನಗಳಿಂದ 90 ದಿನಗಳವರೆಗೆ - 4.20%

91 ದಿನಗಳಿಂದ 180 ದಿನಗಳವರೆಗೆ - 4.20%

181 ದಿನಗಳಿಂದ 270 ದಿನಗಳವರೆಗೆ - 4.80%

271 ದಿನಗಳಿಂದ 1 ವರ್ಷದೊಳಗೆ - 4.90%

1 ವರ್ಷ - 5.40%

1 ವರ್ಷದಿಂದ ರಿಂದ 400 ದಿನಗಳು - 5.40%

400 ದಿನಗಳಿಂದ 2 ವರ್ಷಗಳು - 5.50%

2 ರಿಂದ 3 ವರ್ಷ - 5.60%

3 ರಿಂದ 05 ವರ್ಷ - 5.75%

5 ರಿಂದ 10 ವರ್ಷ - 6.25%

10 ವರ್ಷ ಮೇಲ್ಪಟ್ಟು - 5.10%

 

English summary

Special FD Schemes For Senior Citizens: Opt Before 31st March 2021

Top lenders provide special fixed deposit (FD) schemes for senior citizens. For senior citizens special FD schemes of these banks are in effect until March 31, 2021. Hence, let's check out the interest rates
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X