For Quick Alerts
ALLOW NOTIFICATIONS  
For Daily Alerts

2021 ರಲ್ಲಿ ಟೆಕ್‌ ಕ್ಷೇತ್ರದಲ್ಲಾದ ಅತೀ ದೊಡ್ಡ 'ವೈಫಲ್ಯಗಳು': ಇಲ್ಲಿದೆ ವಿವರ

|

ತಂತ್ರಜ್ಞಾನ ಉದ್ಯಮಕ್ಕೆ 2021 ಒಂದು ವಿಚಿತ್ರ ವರ್ಷವೆಂದೇ ಹೇಳಬಹುದು. ಪೂರೈಕೆಯ ಕೊರತೆಯಿಂದಾಗಿ ತೊಂದರೆಗೆ ಒಳಗಾಗಿರುವ ಅನೇಕ ಸಂಸ್ಥೆಗಳು ಇನ್ನೂ ಕೂಡಾ ಬೇಡಿಕೆಯನ್ನು ಕೂಡಾ ಹೆಚ್ಚಿಸಲು ಸಾಧ್ಯವಾಗಿಲ್ಲ. ಹಲವಾರು ಅಗತ್ಯ ತಾಂತ್ರಿಕ ವಸ್ತುಗಳ ಕೊರತೆ ಉಂಟಾಗಿ ಕೊನೆಗೆ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಘಟನೆಗಳು ಕೂಡಾ ನಡೆದಿದೆ.

ಫೇಸ್‌ಬುಕ್‌ ತನ್ನ ಮಾತೃ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿಕೊಂಡಿತು. ಮೆಟಾ ಎಂದು ಹೆಸರನ್ನು ಬದಲಾವಣೆ ಮಾಡಿಕೊಂಡಿತು. ಆಕ್ಟಿವಿಸನ್ ಬ್ಲಿಝಾರ್ಡ್ ವಿಡಿಯೋ ಗೇಮ್‌ ಸಂಸ್ಥೆಯು ಫೇಸ್‌ಬುಕ್‌ ಜೊತೆ ಸೇರುವ ನಿರ್ಧಾರ ಮಾಡಿಕೊಂಡಿತು. ಈ ಸಂಸ್ಥೆಯ ಫ್ರಾಟ್ ಬಾಯ್ ಸಂಸ್ಕೃತಿಯ ಸುದ್ದಿಯು 2021 ರಲ್ಲಿ ಸುದ್ದಿ ಮಾಡಿತು.

ಡಿ.23: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?ಡಿ.23: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ಇನ್ನು ಇಂಟರ್‌ನೆಟ್‌ ಲೋಕದಲ್ಲಿ ಟ್ವೀಟ್‌ಗಳು, ಜಿಫ್‌ಗಳು, ಸ್ಟಿಕರ್‌ಗಳು ಮೊದಲಾದವ ಬಳಕೆಯು ಅಧಿಕವಾಯಿತು. ಇವೆಲ್ಲದರ ನಡುವೆ ಈ ವರ್ಷವು ತಾಂತ್ರಿಕ ವಲಯಕ್ಕೆ ವಿಚಿತ್ರ ವರ್ಷವಾಗಿದೆ. ಟೆಕ್‌ ವಲಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದೇ ಆಗಿದೆ. ಹಾಗಾದರೆ ಈ ವರ್ಷ ಯಾವೆಲ್ಲಾ ಬ್ಲಾಪರ್‌ ಸೋಲುಗಳು ಟೆಕ್‌ ವಲಯ ಕಂಡಿದೆ ಎಂದು ತಿಳಿಯೋಣ.. ಮುಂದೆ ಓದಿ...

ಪೂರೈಕೆ ಸರಪಳಿ ಬಿಕ್ಕಟ್ಟಿನಿಂದ ಸಂಕಷ್ಟ

ಪೂರೈಕೆ ಸರಪಳಿ ಬಿಕ್ಕಟ್ಟಿನಿಂದ ಸಂಕಷ್ಟ

ಪ್ರಮುಖವಾಗಿ 2021 ರಲ್ಲಿ ತಂತ್ರಜ್ಞಾನ ವಲಯವು ಪೂರೈಕೆ ಸರಪಳಿಯಲ್ಲಿನ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಒಳಗಾಯಿತು. ಪ್ಲೇ ಸ್ಟೇಷನ್ 5, ಎಕ್ಸ್ ಬಾಕ್ಸ್ ಸರಣಿ ಎಕ್ಸ್|ಎಸ್‌, ಗ್ರಾಫಿಕ್ಸ್ ಕಾರ್ಡ್ಸ್ ಹಾಗೂ ಮೊದಲಾದವುಗಳ ಪೂರೈಕೆಗೆ ಅಡೆತಡೆ ಉಂಟಾಗಿದೆ. ಷೇರುಗಳನ್ನು ಒಮ್ಮೆ ಖರೀದಿ ಮಾಡಿ ಬಳಿಕ ಅಧಿಕ ಬೆಲೆಗೆ ಮಾರಾಟ ಮಾಡುವ ಷೇರುದಾರರಂತೆ ತಾಂತ್ರಿಕ ವಲಯದಲ್ಲೂ ಕೆಲವು ಜನರು ವರ್ತನೆ ಮಾಡಿದ್ದಾರೆ. ಟೆಕ್‌ ವಲಯದ ಕೆಲವರು ಅಂಗಡಿಯಲ್ಲಿ ಇರುವ ಬಾಟ್‌ಗಳನ್ನು ಖರೀದಿ ಮಾಡಿ ಬಳಿಕ ಅದರ ಕೊರತೆ ಉಂಟಾದಾಗ ಅತೀ ಅಧಿಕ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಸಮಸ್ಯೆಯು ತಾಂತ್ರಿಕ ವಲಯವನ್ನೇ ಅಲುಗಾಡಿಸಿದೆ. "ಈ ಸಮಸ್ಯೆಯನ್ನು ನಾವು 2022 ರ ಕೊನೆಯ ತ್ರೈಮಾಸಿಕದವರೆಗೆ ಪರಿಹರಿಸಲಾಗುವುದಿಲ್ಲ," ಎಂದು ಹಲವಾರು ಕಂಪನಿಗಳು ಹೇಳುತ್ತದೆ.

ಫೇಸ್‌ಬುಕ್‌ ಹೆಸರು ಬದಲಾವಣೆ

ಫೇಸ್‌ಬುಕ್‌ ಹೆಸರು ಬದಲಾವಣೆ

ಫೇಸ್‌ಬುಕ್‌ ಹೆಸರು ಬದಲಾವಣೆಯು 2021 ರಲ್ಲಿ ಟೆಕ್‌ ವಲಯದಲ್ಲಿ ನಡೆದ ವಿಚಿತ್ರ ಘಟನೆಗಳಲ್ಲಿ ಒಂದಾಗಿದೆ. ಫೇಸ್ ಬುಕ್ ತನ್ನನ್ನು ರೀಬ್ರಾಂಡ್‌ ಮಾಡಲು ಮುಂದಾಯಿತು. ಫೇಸ್ ಬುಕ್ ಹಾಗೂ ಅದರ ಒಡೆತನದ ಇತರ ಸಂಸ್ಥೆಗಳನ್ನು ಜನರು ಪ್ರಾಥಮಿಕವಾಗಿ ಸಾಮಾಜಿಕ ಜಾಲತಾಣವೆಂದೇ ಗುರುತಿಸುತ್ತಿದ್ದರಾದರೂ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಮೆಟಾವರ್ಸ್ (ಭವಿಷ್ಯತ್ ನ ಕಾನ್ಸೆಪ್ಟ್ ಹೊಂದಿದ ಸಂಸ್ಥೆಗಳು) ಕಂಪನಿಯೆಂದು ಗುರುತಿಸಲು ಪ್ರಾರಂಭಿಸಿದ್ದಾರೆ ಅದಕ್ಕೆ ತಕ್ಕಂತೆ ಫೇಸ್ ಬುಕ್ ತನ್ನನ್ನು ರೀಬ್ರಾಂಡಿಂಗ್‌ಗೆ ಒಡ್ಡಿಕೊಂಡಿತು. ತರ ಅದು ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿತು. "ರೀ ಬ್ರಾಂಡ್‌ ಮಾಡಲು ಇದ್ದಕಿಂತ ಕೆಟ್ಟ ಸಮಯ ದೊರೆಯಲಿಲ್ಲವೇ ಅಥವಾ ಬೇಕೆಂದೆ ಈ ರೀತಿ ಮಾಡಲಾಗಿದೆಯೇ?" ಎಂದು ತಜ್ಞರು ಹೇಳಿದ್ದಾರೆ.

ಟೆಕ್‌ನ ಫ್ರಾಟ್‌ ಬಾಯ್‌ ಕಲ್ಚರ್‌

ಟೆಕ್‌ನ ಫ್ರಾಟ್‌ ಬಾಯ್‌ ಕಲ್ಚರ್‌

ಕಳೆದ ವರ್ಷ, ಯೂಬಿಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಅನುಭವಿಸಿದ ಲೈಂಗಿಕ ಕಿರುಕುಳ ಮತ್ತು ನಿಂದನೆಯ ಬಗ್ಗೆ ಸುದ್ದಿ ಹೊರಬಂದಿರುವುದು ನಿಮಗೆ ತಿಳಿದಿದೆ. ಈ ಸಮಸ್ಯೆಯನ್ನು ಬಹಿರಂತ ಪಡಿಸುವುದು ಇತರ ಸಂಸ್ಥೆಗಳಿಗೆ ಎಚ್ಚರಿಕೆಯೂ ಹೌದು. ಆದರೆ ಈ ವಿಚಾರದಲ್ಲಿ ಸಂಸ್ಥೆಯು ಮೂರ್ಖತನದ ಕೆಲಸವನ್ನು ಮಾಡಿತು. ಈ ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ ಸಮಸ್ಯೆಯನ್ನು ಕಡೆಗಣಿಸಿತು. ಇನ್ನು ಈ ವೇಳೆ ಆಪಲ್‌ಟೂ ಎಂಬುವುದು ಭಾರೀ ಸದ್ದು ಮಾಡಿತು. ಲೈಂಗಿಕ ಶೋಷಣೆ, ಅತ್ಯಾಚಾರ ಮೊದಲಾದ ಬಗ್ಗೆ metoo ಅಭಿಯಾನದಂತೆ ಆಪಲ್‌ ಸಂಸ್ಥೆಯ ಸಿಬ್ಬಂದಿಗಳು #AppleToo ಆಂದೋಲನ ಮಾಡಿದರು. ಈ ಆಂದೋಲನದ ಮೂಲಕ ರ್ಣಭೇದ ನೀತಿ, ಲಿಂಗಭೇದಭಾವ, ತಾರತಮ್ಯ ಮತ್ತು ಅನ್ಯಾಯದ ಘಟನೆಗಳನ್ನು ಬಹಿರಂಗಪಡಿಸಿದರು.

ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಬಬಲ್‌

ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಬಬಲ್‌

ಅಂತರ್ಜಾಲ ಕ್ಷೇತ್ರದಲ್ಲಿ ನಡೆದ ಇನ್ನೊಂದು ದೊಡ್ಡ ಸೋಲು ಅಥವಾ ಕೆಟ್ಟ ಕ್ಷಣ ಎದರೆ ಲಕ್ಷಾಂತರ ಡಾಲರ್‌ಗಳಿಗೆ JPEG ಗಳು ಮತ್ತು ಟ್ವೀಟ್‌ಗಳನ್ನು ಖರೀದಿಸುವುದನ್ನು ಅನುಮೋದಿಸಲು ನಿರ್ಧಾರ ಮಾಡಿದ್ದು. ಜಾಕ್ ಡೋರ್ಸೆ ಟ್ವಿಟ್ಟರ್‌ನಲ್ಲಿ ಮೊದಲ ಟ್ವೀಟ್ ಅನ್ನು 2.9 ಮಿಲಿಯನ್‌ ಡಾಲರ್‌ಗೆ ಮಾರಾಟ ಮಾಡುವುದರಿಂದ ಹಿಡಿದು Nyan Cat GIF ವರೆಗಿನ ಮಾರಾಟ ನಡೆದಿದೆ. ಈ ಹರಾಜಿನಲ್ಲಿ ಸುಮಾರು 600,000 ಡಾಲರ್‌‌ಗೆ Nyan Cat GIF ಮಾರಾಟವಾಗಿದೆ. ಇನ್ನು ಭವಿಷ್ಯದಲ್ಲಿ ಜನರು ಡಿಜಿಟಲ್‌ JPEG ಗಳನ್ನು ತಮ್ಮ ಸಂಗ್ರಹ ವಸ್ತುಗಳಂತೆ ಮಾರಾಟ ಮಾಡುವ ಸ್ಥಿತಿಯು ಬರಬಹುದು.

English summary

The biggest tech fails of 2021: Here is the List in Kannada

The biggest tech fails of 2021: Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X