For Quick Alerts
ALLOW NOTIFICATIONS  
For Daily Alerts

ಗೃಹ ಸಾಲ: ಟಾಪ್‌ ಅಪ್‌ ಮೂಲಕ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಹೇಗೆ?

|

ಜನರು ನಾನಾ ಕಾರಣಗಳಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಾರೆ. ಅದ್ರಲ್ಲೂ ಪ್ರಮುಖವಾಗಿ ಬಹುತೇಕ ಸಮಯದಲ್ಲಿ ವೈಯಕ್ತಿಕ ಸಾಲಗಳ ಮೊರೆ ಹೋಗುತ್ತಾರೆ. ಇದಕ್ಕೆ ಕಾರಣ ಬಹಳ ಕಡಿಮೆ ಸಮಯದಲ್ಲಿ ಅಲ್ಪಾವಧಿ ಸಾಲಗಳನ್ನು ಪಡೆಯುತ್ತಾರೆ.

ವೈಯಕ್ತಿಕ ಸಾಲಕ್ಕೆ (Personal Loan) ಬಹುತೇಕವಾಗಿ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಇದರ ಬದಲು ನೀವು ಗೃಹ ಸಾಲವನ್ನು ಪಡೆದಿದ್ದಲ್ಲಿ ಅದರ ಮೇಲೆ ಟಾಪ್‌ ಅಪ್‌ ಮೂಲಕ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ಟಾಪ್ ಅಪ್ ಗೃಹ ಸಾಲವು ಬಹಳ ಅನುಕೂಲಕರ ಮಾರ್ಗವಾಗಿದೆ.

ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಆಗಿರಬೇಕು!

ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಆಗಿರಬೇಕು!

ಟಾಪ್ ಅಪ್ ಗೃಹ ಸಾಲ ಪಡೆಯಲು ಕೆಲವು ಷರತ್ತುಗಳಿವೆ. ನೀವು ಗೃಹ ಸಾಲದಲ್ಲಿ ಹೆಚ್ಚಿನದನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಕೊನೆಯ 12 ಮಾಸಿಕ ಕಂತು (ಇಎಂಐ) ಅನ್ನು ಸಮಯಕ್ಕೆ ಪಾವತಿಸಿರುವುದು ಬಹಳ ಮುಖ್ಯ. ಟಾಪ್-ಅಪ್ ಸಾಲದ ಮೊತ್ತವು ಬ್ಯಾಂಕ್ ಪಾವತಿಸುವ ಇಎಂಐ ಅನ್ನು ಅವಲಂಬಿಸಿರುತ್ತದೆ. 12 ತಿಂಗಳ ಕಂತು ನಂತರ, ಬ್ಯಾಂಕುಗಳು ನಿಮಗೆ ಗೃಹ ಸಾಲದ ಶೇಕಡಾ 10ರಷ್ಟು ಟಾಪ್-ಅಪ್‌ನಲ್ಲಿ ನೀಡಬಹುದು. ಅದೇ ಸಮಯದಲ್ಲಿ, 24 ಇಎಂಐಗಳ ನಂತರ, ಶೇಕಡಾ 20ರಷ್ಟು ಮೊತ್ತವನ್ನು ಟಾಪ್-ಅಪ್ ಸಾಲದಲ್ಲಿ ನೀಡಬಹುದು.

ಗೃಹ ಸಾಲದ ಮೇಲೆ ಟಾಪ್-ಅಪ್ ಸಾಲದ ಪ್ರಕ್ರಿಯೆ

ಗೃಹ ಸಾಲದ ಮೇಲೆ ಟಾಪ್-ಅಪ್ ಸಾಲದ ಪ್ರಕ್ರಿಯೆ

ಗೃಹ ಸಾಲದ ಮೇಲೆ ಟಾಪ್-ಅಪ್ ತೆಗೆದುಕೊಳ್ಳುವ ಪ್ರಕ್ರಿಯೆಯು ಗೃಹ ಸಾಲವನ್ನು ತೆಗೆದುಕೊಳ್ಳುವಂತೆಯೇ ಇರುತ್ತದೆ. ನೀವು ಆಸ್ತಿ ದಾಖಲೆಗಳು, ವಿಳಾಸ, ಗುರುತಿನ ಚೀಟಿ ಮತ್ತು ಆದಾಯದ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ. ಟಾಪ್-ಅಪ್ ಸಾಲದ ಅವಧಿ ಬ್ಯಾಂಕಿನ ಪ್ರಕಾರ ಬದಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ವರ್ಷಗಳ ಕಾಲ ಗೃಹ ಸಾಲದ ಮೇಲಿನ ಟಾಪ್‌ ಅಪ್ ಸಾಲವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಇಂಡಿಯನ್ ಬ್ಯಾಂಕ್ 10 ವರ್ಷಗಳ ಕಾಲ ಟಾಪ್-ಅಪ್ ನೀಡುತ್ತದೆ. ಬ್ಯಾಂಕ್ ಆಫ್ ಬರೋಡಾದಂತಹ ಕೆಲವು ಬ್ಯಾಂಕುಗಳು ಸಾಲಗಾರನ ವಯಸ್ಸಿನ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸುತ್ತವೆ.

 

ಟಾಪ್‌ ಅಪ್‌ ಸಾಲದಲ್ಲಿ ಕೊಂಚ ಹೆಚ್ಚಿನ ಬಡ್ಡಿ

ಟಾಪ್‌ ಅಪ್‌ ಸಾಲದಲ್ಲಿ ಕೊಂಚ ಹೆಚ್ಚಿನ ಬಡ್ಡಿ

ಹೌದು, ನೀವು ಗೃಹ ಸಾಲ ಪಡೆದಿದ್ದ ಬಡ್ಡಿಗಿಂತ ಕೊಂಚ ಹೆಚ್ಚಿನ ಬಡ್ಡಿಯನ್ನು ಟಾಪ್-ಅಪ್ ಸಾಲದಲ್ಲಿ ಪಾವತಿಸಬೇಕಾಗುತ್ತದೆ. ಆದರೆ ಇದು ವೈಯಕ್ತಿಕ ಸಾಲಕ್ಕಿಂತ ಕಡಿಮೆ ಇರುತ್ತದೆ. ಬಡ್ಡಿದರದ ಲೆಕ್ಕಾಚಾರವು ಸಾಲ ಪಡೆಯುವ ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಅವಲಂಬಿಸಿರುತ್ತದೆ.

ಉದಾಹರಣೆಗೆ, ಆಕ್ಸಿಸ್ ಬ್ಯಾಂಕಿನಲ್ಲಿ ಟಾಪ್-ಅಪ್ ಸಾಲಗಳ ಬಡ್ಡಿದರವು ಶೇಕಡಾ 8.65 ರಿಂದ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಇದು ಎಸ್‌ಬಿಐನಲ್ಲಿ ಶೇಕಡಾ 7.50 ರಿಂದ 9.80 ರಷ್ಟು ಆಗಿದೆ.. ಟಾಪ್-ಅಪ್ ಸಾಲದ ಅಡಿಯಲ್ಲಿ ಗರಿಷ್ಠ ಸಾಲದ ಮಿತಿಯೂ ಇದೆ. ಉದಾಹರಣೆಗೆ, ಆಕ್ಸಿಸ್ ಬ್ಯಾಂಕಿನಲ್ಲಿ ಉನ್ನತ ಸಾಲಗಳ ಗರಿಷ್ಠ ಮಿತಿ 50 ಲಕ್ಷ ರೂ. ಮತ್ತು ಇಂಡಿಯನ್ ಬ್ಯಾಂಕಿನಲ್ಲಿ 60 ಲಕ್ಷ ರೂ. ಆದರೆ, ಎಸ್‌ಬಿಐನಲ್ಲಿ ಯಾವುದೇ ಮಿತಿಯಿಲ್ಲ. ನಿಮ್ಮ ಮನೆಯ ದುರಸ್ತಿ ಅಥವಾ ನವೀಕರಣಕ್ಕಾಗಿ ನೀವು ಟಾಫ್ ಅಪ್ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಅದರ ಮೇಲೆ ನೀವು ತೆರಿಗೆ ರಿಯಾಯಿತಿಯನ್ನು ಸಹ ಪಡೆಯುತ್ತೀರಿ.

 

ಟಾಪ್ ಅಪ್ ಸಾಲ ಪಡೆಯಲು ಬೇಕಿರುವ ದಾಖಲೆಗಳು

ಟಾಪ್ ಅಪ್ ಸಾಲ ಪಡೆಯಲು ಬೇಕಿರುವ ದಾಖಲೆಗಳು

ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ವಿಳಾಸ ಗುರುತಿನ ಚೀಟಿ, ಬಾಡಿಗೆ ಒಪ್ಪಂದ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಯುಟಿಲಿಟಿ ಬಿಲ್‌ಗಳು ಇತ್ಯಾದಿಗಳಲ್ಲಿ ಯಾವುದಾದರೂ ಎರಡು ದಾಖಲೆಗಳು. ಸಂಬಳ ಪಡೆಯುವವರಿಗೆ ಮೂರರಿಂದ ಆರು ತಿಂಗಳವರೆಗೆ ಸ್ಯಾಲರಿ ಸ್ಲಿಪ್ ಮತ್ತು ಪಾಸ್‌ಪೋರ್ಟ್‌ ಗಾತ್ರದ ಫೋಟೊ ಬೇಕಾಗುತ್ತದೆ.

English summary

The Four Things To Know Before A Top Up On Home Loan

If you have a home loan, you can take the money on top of it. The Four Things To Know Before Top up home loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X