For Quick Alerts
ALLOW NOTIFICATIONS  
For Daily Alerts

ಯುಪಿಐ ಪಾವತಿ ಮಾಡುವಾಗ ಈ 5 ಅಂಶ ನೆನಪಿರಲಿ

|

ಪ್ರಸ್ತುತ ಎಲ್ಲವೂ ಡಿಜಿಟಲ್ ಆಗಿದೆ. ಪ್ರಮುಖವಾಗಿ ಡಿಜಿಟಲ್ ಯುಗಕ್ಕೆ ಜನರು ಒಗ್ಗಿಕೊಳ್ಳಲು ಕೊರೊನಾ ಸಾಂಕ್ರಾಮಿಕವೂ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಜನರು ಈ ಎಲ್ಲ ವಹಿವಾಟನ್ನು ಆನ್‌ಲೈನ್ ಮೂಲಕ ಮಾಡಲು ಆರಂಭ ಮಾಡಿದ್ದಾರೆ. ಪ್ರಸ್ತುತ ಪ್ರತಿ ತಿಂಗಳು ಯುಪಿಐ ವಹಿವಾಟಿನ ಸಂಖ್ಯೆಯು ಅಧಿಕವಾಗುತ್ತಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪ್ರಸ್ತುತ ಹಣಕಾಸು ವಹಿವಾಟಿನಲ್ಲಿ ಅತೀ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಜನರು ಎಲ್ಲ ಸಣ್ಣ ಪುಟ್ಟ ಹಣಕಾಸು ವಹಿವಾಟನ್ನು ಯುಪಿಐ ಮೂಲಕ ಮಾಡುತ್ತಿದ್ದಾರೆ. ಆದರೆ ಇದಕ್ಕೂ ಕೂಡಾ ವಂಚಕರ ಕಣ್ಣು ಬಿದ್ದಿದೆ. ಸ್ಕ್ಯಾಮರ್‌ಗಳು ಯುಪಿಐ ವಹಿವಾಟಿನ ವಿಚಾರದಲ್ಲಿ ಜನರಿಂದ ಹಣವನ್ನು ಬಾಚುವ ಕಾರ್ಯವನ್ನು ಮಾಡುತ್ತಿದ್ದಾರೆ.

ಆಗಸ್ಟ್‌ನಲ್ಲಿ 6.57 ಬಿಲಿಯನ್ ರೂಪಾಯಿ ದಾಖಲೆಯ ಯುಪಿಐ ವಹಿವಾಟುಆಗಸ್ಟ್‌ನಲ್ಲಿ 6.57 ಬಿಲಿಯನ್ ರೂಪಾಯಿ ದಾಖಲೆಯ ಯುಪಿಐ ವಹಿವಾಟು

ನಾವು ಯುಪಿಐ ವಹಿವಾಟನ್ನು ನಡೆಸುವ ಸಂದರ್ಭದಲ್ಲಿ ಸುರಕ್ಷಿತ ವಹಿವಾಟನ್ನು ನಡೆಸುತ್ತಿದ್ದೇವೆಯೇ?, ಸ್ಕ್ಯಾಮರ್‌ಗಳ ಕಣ್ಣಿನಿಂದ ತಪ್ಪಿಸಿಕೊಂಡಿದ್ದೇವೆಯೇ ಎಂದು ತಿಳಿಯಬೇಕಾದರೆ ನಾವು ಕೆಲವು ವಿಚಾರಗಳ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಯುಪಿಐ ವಹಿವಾಟು ನಡೆಸುವ ಸಂದರ್ಭದಲ್ಲಿ ನೀವು ತಿಳಿದಿರಬೇಕಾದ ಈ ಐದು ಅಂಶಗಳು ಇಲ್ಲಿದೆ ಮುಂದೆ ಓದಿ...

 ವಹಿವಾಟಿನ ಮೊದಲು ಯುಪಿಐ ಐಡಿಯನ್ನು ಪರಿಶೀಲಿಸಿ

ವಹಿವಾಟಿನ ಮೊದಲು ಯುಪಿಐ ಐಡಿಯನ್ನು ಪರಿಶೀಲಿಸಿ

ಯಾವುದೇ ಪಾವತಿ ಮಾಡುವ ಮೊದಲು, ಯುಪಿಐ ಐಡಿಯನ್ನು ಎರಡು ಬಾರಿ ಪರಿಶೀಲಿಸಿ. ಅದೇ ರೀತಿ, ನೀವು ಹಣವನ್ನು ಸ್ವೀಕರಿಸುತ್ತಿರುವಾಗ, ಯಾವಾಗಲೂ ಸರಿಯಾದ ಯುಪಿಐ ಐಡಿಯನ್ನು ಹಂಚಿಕೊಳ್ಳಿ. ವಹಿವಾಟಿನಲ್ಲಿ ಯಾವುದೇ ತಪ್ಪು ಆಗದಂತೆ ನೋಡಲು ಯುಪಿಐ ಐಡಿಯನ್ನು ಪರಿಶೀಲನೆ ಮಾಡಿ. ಬೇರೆಯವರಿಗೆ ಹಣವನ್ನು ಕಳುಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ದೃಢೀಕರಣಕ್ಕಾಗಿ ನೀವು ಕನಿಷ್ಟ ರೂ 1 ರ ಮೊತ್ತವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು.

IMPS vs UPI : ಐಎಂಪಿಎಸ್‌ಗಿಂತ ಯುಪಿಐ ವ್ಯವಹಾರ ವಿಭಿನ್ನ ಹೇಗೆ?IMPS vs UPI : ಐಎಂಪಿಎಸ್‌ಗಿಂತ ಯುಪಿಐ ವ್ಯವಹಾರ ವಿಭಿನ್ನ ಹೇಗೆ?

 ನಿಮ್ಮ ಯುಪಿಐ ಪಿನ್ ಅನ್ನು ಹಂಚಿಕೊಳ್ಳಬೇಡಿ

ನಿಮ್ಮ ಯುಪಿಐ ಪಿನ್ ಅನ್ನು ಹಂಚಿಕೊಳ್ಳಬೇಡಿ

ನಿಮ್ಮ 6 ಅಥವಾ 4-ಅಂಕಿಯ ಯುಪಿಐ ಪಿನ್ ಅನ್ನು ಯಾರೊಂದಿಗೂ ಕೂಡಾ ಹಂಚಿಕೊಳ್ಳಬೇಡಿ. ಬ್ಯಾಂಕ್ ಪ್ರತಿನಿಧಿಗಳಂತೆ ನಟಿಸುವ ವಂಚಕರು ಪಿನ್‌ಗಳು, ಒಟಿಪಿಗಳು, ಪಾಸ್‌ವರ್ಡ್‌ಗಳು ಮತ್ತು ಮುಂತಾದವುಗಳನ್ನು ಒಳಗೊಂಡಂತೆ ನಿಮ್ಮ ಕಾರ್ಡ್/ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ನೀವು ಹಂಚಿಕೊಳ್ಳಬೇಡಿ. ಅದರಲ್ಲಿ ಮುಖ್ಯವಾಗಿ ಪಿನ್ ಅನ್ನು ಹಂಚಿಕೊಳ್ಳಬೇಡಿ. ನೀವು ಆಪ್ ತೆರೆಯುವಾಗ ವಹಿವಾಟು ನಡೆಸುವಾಗ ಮುಖ್ಯವಾಗುವ ಈ ಪಿನ್ ವಂಚಕರಿಗೆ ತಿಳಿದರೆ ಅವರು ಸುಲಭವಾಗಿ ಹಣವನ್ನು ಎಗರಿಸುತ್ತಾರೆ.

 ನಿಮ್ಮ ಫೋನ್‌ನಲ್ಲಿ ಸರಿಯಾದ ಭದ್ರತೆ ಇರಲಿ

ನಿಮ್ಮ ಫೋನ್‌ನಲ್ಲಿ ಸರಿಯಾದ ಭದ್ರತೆ ಇರಲಿ

ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಯುಪಿಐ ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಸುರಕ್ಷಿತ ವಹಿವಾಟಿಗಾಗಿ ಅಪ್ಲಿಕೇಶನ್ ತೆರೆಯುವ ಮೊದಲು ನಿಮ್ಮ ಫೋನ್ ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಕೇಳುತ್ತವೆ. ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಸೇರಿಸುವುದರಿಂದ ನಿಮ್ಮ ಫೋನ್ ಕಳವಾದರೆ ಅಥವಾ ದುರುಪಯೋಗಪಡಿಸಿಕೊಂಡರೆ ವಂಚನೆಯ ಸಾಧ್ಯತೆಯನ್ನು ಕಡಿಮೆ ಆಗಲಿದೆ. ಇನ್ನು ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ಆಗಾಗ್ಗೆ ಬದಲಾವಣೆ ಮಾಡುವುದು ಕೂಡಾ ಉತ್ತಮ.

 ಒಂದಕ್ಕಿಂತ ಹೆಚ್ಚು ಯುಪಿಐ ಅಪ್ಲಿಕೇಶನ್ ಬಳಸುವುದನ್ನು ತಪ್ಪಿಸಿ

ಒಂದಕ್ಕಿಂತ ಹೆಚ್ಚು ಯುಪಿಐ ಅಪ್ಲಿಕೇಶನ್ ಬಳಸುವುದನ್ನು ತಪ್ಪಿಸಿ

ಹಲವಾರು ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಬದಲಾಗಿ ಯಾವುದಾದರೂ ತಪ್ಪು ವಹಿವಾಟು ನಡೆಯುವ ಸಾಧ್ಯತೆ ಇದೆ. ಆದ್ದರಿಂದ, ಒಂದೇ ಯುಪಿಐ ಐಡಿಯನ್ನು ಬಳಸುವುದು ಉತ್ತಮ.

 ಪರಿಶೀಲಿಸದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

ಪರಿಶೀಲಿಸದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

ನೀವು ಎಸ್‌ಎಂಎಸ್, ವಾಟ್ಸಾಪ್ ಅಥವಾ ಇಮೇಲ್ ಮೂಲಕ ನಿಮ್ಮ ಫೋನ್‌ನಲ್ಲಿ ವಂಚನೆ ಲಿಂಕ್‌ಗಳನ್ನು ಸ್ವೀಕರಿಸಬಹುದು. ಪರಿಶೀಲಿಸದಿರುವ ಅಥವಾ ಫಿಶಿಂಗ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ, ಬದಲಾಗಿ ಅದನ್ನು ಡಿಲೀಟ್ ಮಾಡಿ. ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಲು ನಿಮ್ಮ ಗುರುತನ್ನು ಹಾಗೆಯೇ ನಿಮ್ಮ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ಮತ್ತು ಪಿನ್‌ಗಳನ್ನು ಕದಿಯಲು ಈ ಲಿಂಕ್‌ಗಳನ್ನು ಬಳಕೆ ಮಾಡಲಾಗುತ್ತದೆ.

English summary

These 5 Things You Should Keep In Mind While Making UPI Payments, Details Here

Receiving and sending money digitally has been easy these days. These 5 Things You Should Keep In Mind While Making UPI Payments, details here.
Story first published: Saturday, September 10, 2022, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X