For Quick Alerts
ALLOW NOTIFICATIONS  
For Daily Alerts

ಉತ್ತಮ ಬೆಲೆಗೆ ಮನೆ ಮಾರಾಟ ಮಾಡಲು ಇಲ್ಲಿದೆ ಟಿಪ್ಸ್

|

ನೀವು ಉದ್ಯೋಗ, ಶಿಕ್ಷಣದ ಕಾರಣದಿಂದಾಗಿ ಸ್ಥಳಾಂತರಗೊಳ್ಳುತ್ತಿದ್ದೀರಾ? ಅದಕ್ಕಾಗಿ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದೀರಾ? ಅಥವಾ ನೀವು ವಾಸವಿಲ್ಲದ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದೀರಾ? ನೀವು ಮನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಹಾಯಕವಾದ ಟಿಪ್ಸ್ ಅನ್ನು ನಾವು ಇಲ್ಲಿ ನೀಡಿದ್ದೇವೆ.

 

ಯಾರೇ ಆದರೂ ಹೊಸ ಮನೆಯನ್ನು ಖರೀದಿಸುತ್ತಿರಲಿ ಮನೆ ಇದೇ ರೀತಿ ಹೊಂದಿರಬೇಕು ಎಂದು ನಿರೀಕ್ಷೆಯನ್ನು ಹೊಂದಿರುತ್ತಾರೆ. ಆದರೆ ಮನೆ ಖರೀದಿ ಮಾಡುವ ಎಲ್ಲರಿಗೂ ಸಾಮಾನ್ಯವಾಗಿ ಕೆಲವೊಂದು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗಿರುವಾಗ ನಾವು ಮಾರಾಟ ಮಾಡುವ ಮನೆಯಲ್ಲಿ ಕೆಲವೊಂದು ಸಾಮಾನ್ಯ ಅಂಶಗಳು ಇರಬೇಕು. ಹಾಗಾದರೆ ಮಾತ್ರ ನಮ್ಮ ಮನೆಯು ಉತ್ತಮ ಬೆಲೆಗೆ ಮಾರಾಟವಾಗಲು ಸಾಧ್ಯವಾಗಲಿದೆ.

ಮನೆ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯಿತಿ: ಇಲ್ಲಿದೆ ವಿವರಮನೆ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯಿತಿ: ಇಲ್ಲಿದೆ ವಿವರ

ನೀವು ಮನೆ ಮಾರಾಟಕ್ಕಿದೆ ಎಂದು ಬೋರ್ಡ್ ಹಾಕುವ ಮುನ್ನವೇ ಮನೆಯಲ್ಲಿ ಮಾಡಬೇಕಾದ ಮುಖ್ಯ ಬದಲಾವಣೆಗಳನ್ನು ತಿಳಿಯಿರಿ. ನಿಮ್ಮ ಮನೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ನಾವು ನಿಮಗೆ ಟಿಪ್ಸ್ ನೀಡಿದ್ದೇವೆ. ಮುಂದೆ ಓದಿ....

 ಸರಿಯಾದ ಬೆಲೆಯನ್ನು ಹೇಳಿ

ಸರಿಯಾದ ಬೆಲೆಯನ್ನು ಹೇಳಿ

ತಂತ್ರಜ್ಞಾನವು ನಿಮ್ಮ ಮನೆಗೆ ಸರಿಯಾದ ಬೆಲೆಯನ್ನು ನೀಡಲು ಸಹಾಯ ಮಾಡುತ್ತದೆ. ಕೆಲವು ಪ್ಲಾಟ್‌ಫಾರ್ಮ್‌ಗಳ ಮೂಲಕ ನಿಮ್ಮ ಮನೆಯ ಸರಿಯಾದ ಬೆಲೆ ಏನು ಎಂದು ನೀವು ತಿಳಿಯಬಹುದು. ಕೆಲವು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದೇಶದಲ್ಲಿನ ಗುಣಲಕ್ಷಣಗಳು, ಆ ಪ್ರದೇಶದಲ್ಲಿನ ಚದರ ಅಡಿ ಬೆಲೆ, ಮೊದಲಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ನೀವು ಇದಕ್ಕಿದ್ದಂತೆ ಬೆಲೆಯನ್ನು ಕಡಿಮೆ ಮಾಡಿದರೆ, ನಿಮ್ಮ ಮನೆ ಇರುವ ಪ್ರದೇಶದಲ್ಲಿ ಏನೋ ಸಮಸ್ಯೆ ಇರಬಹುದು ಎಂದು ಖರೀದಿದಾರರು ಭಾವಿಸುತ್ತಾರೆ. ಆದ್ದರಿಂದಾಗಿ ವಿನಾಕಾರಣ ಬೆಲೆಯನ್ನು ಒಮ್ಮೆಲೆ ಕಡಿಮೆ ಮಾಡದಿರಿ. ಸರಿಯಾದ ಬೆಲೆಯನ್ನು ಗೊತ್ತುಪಡಿಸಿ. ಮನೆಯನ್ನು ನವೀಕರಿಸಲು ಮತ್ತು ನಿರ್ವಹಿಸಲು ನೀವು ಖರ್ಚು ಮಾಡಿದ ಹಣವನ್ನು ಸೇರಿಸಲು ಮರೆಯಬೇಡಿ.

 ಮಾರಾಟಕ್ಕಾಗಿ ನಿಮ್ಮ ಮನೆಯನ್ನು ಸಿದ್ಧಪಡಿಸಿ

ಮಾರಾಟಕ್ಕಾಗಿ ನಿಮ್ಮ ಮನೆಯನ್ನು ಸಿದ್ಧಪಡಿಸಿ

ನಿಮ್ಮ ಮನೆಯನ್ನು ನೀವು ಮಾರಾಟ ಮಾಡುವಾಗ ಸಂಭವನೀಯ ಖರೀದಿದಾರರಿಗೆ ನಿಮ್ಮ ಮನೆಯು ಮಾರಾಟಕ್ಕೆ ಸಿದ್ಧವಾಗಿದೆ ಎಂದು ತಿಳಿಯುವಂತೆ ನಿಮ್ಮ ಮನೆಯನ್ನು ಸಿದ್ಧಪಡಿಸಿ. ಆಸ್ತಿ ನಿರ್ವಹಣೆ, ಲಾಕ್‌ಗಳನ್ನು ಸರಿಪಡಿಸುವುದು, ಸೋರಿಕೆಯಾಗುವ ಛಾವಣಿಗಳು ಮತ್ತು ಟ್ಯಾಪ್‌ಗಳನ್ನು ಸರಿಪಡಿಸುವುದು, ಎಲ್ಲಾದರೂ ರಂಧ್ರಗಳು ಇದ್ದದರೆ ಅದನ್ನು ಸರಿಪಡಿಸುವುದು, ಯಾವುದೇ ರಿಪೇರಿ ಇದ್ದರೆ ಸರಿಪಡಿಸುವ ಕಾರ್ಯವನ್ನು ಮಾಡಿ. ಅದಕ್ಕಾಗಿ ಎಲ್ಲಾ ಕಾರ್ಯಗಳ ಪಟ್ಟಿಯನ್ನು ಮಾಡಿಟ್ಟಿಕೊಳ್ಳಿ.

 ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಚಿತ್ರ
 

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಚಿತ್ರ

ನೀವು ನಿಮ್ಮ ಮನೆಯನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವುದಾದರೆ ಮನೆಯ ಉತ್ತಮ ಚಿತ್ರವನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಹಾಕಿ. ಎಲ್ಲಾ ಆಂಗಲ್‌ಗಳಲ್ಲಿ ಚಿತ್ರಗಳನ್ನು ಹಾಕಿ. ಖರೀದಿದಾರರು ಚಿತ್ರಗಳ ಮೂಲಕವೇ ಮನೆಯಲ್ಲಿರುವ ಲೋಪ ದೋಷಗಳನ್ನು ಕಂಡುಹಿಡಿಯಬಲ್ಲರು ಎಂಬುವುದು ಗಮನದಲ್ಲಿ ಇರಲಿ. ಇನ್ನು ನಿಮ್ಮ ಮನೆಯ 3D ಚಿತ್ರವನ್ನು ಹಾಕಿದರೆ ಖರೀದಿದಾರರಿಗೆ ಇನ್ನಷ್ಟು ಇಷ್ಟವಾಗುವ ಸಾಧ್ಯತೆ ಇದೆ. ಉತ್ತಮ ಬೆಲೆಯು ಲಭ್ಯವಾಗಬಹುದು.

 ಬೆಳಕನ್ನು ಸರಿಪಡಿಸಿ

ಬೆಳಕನ್ನು ಸರಿಪಡಿಸಿ

ಚೆನ್ನಾಗಿ ಬೆಳಗದ ಮನೆಗಿಂತ ಚೆನ್ನಾಗಿ ಬೆಳಗಿದ ಮನೆ ಜನರನ್ನು ಹೆಚ್ಚು ಸೆಳೆಯುತ್ತದೆ. ಮನೆಗೆ ಮುಖ್ಯವಾಗಿ ಬೇಕಾಗಿರುವುದು ಬೆಳಕು. ಉತ್ತಮವಾದ ಬೆಳಕು ಇದ್ದರೆ ಮನೆಯು ಸುಂದರವಾಗಿರುತ್ತದೆ. ಮನೆಯಲ್ಲಿ ಬೆಳಕು ಇಲ್ಲವಾದರೆ ನಿರುತ್ಸಾಹ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ. ಪೀಠೋಪಕರಣಗಳು ಅಥವಾ ಟೇಬಲ್ ಲ್ಯಾಂಪ್‌ಗಳಂತಹ ಗೃಹೋಪಯೋಗಿ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ವಸ್ತುಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಲು ಪ್ರಯತ್ನಿಸಿ.

 ಬಣ್ಣ, ಡಾಕ್ಯೂಮೆಂಟ್ ಎಂದಿಗೂ ಸುಂದರ

ಬಣ್ಣ, ಡಾಕ್ಯೂಮೆಂಟ್ ಎಂದಿಗೂ ಸುಂದರ

ಹೊಸದಾಗಿ-ಬಣ್ಣ ಹಚ್ಚಿದ ಮನೆಯು ಯಾರನ್ನೇ ಆದರೂ ಸೆಳೆಯುತ್ತದೆ. ಆದ್ದರಿಂದ ನಿಮ್ಮ ಮನೆಯನ್ನು ಮಾರಾಟ ಮಾಡುವುದಕ್ಕೂ ಮುನ್ನ ಮನೆಗೆ ಬಣ್ಣವನ್ನು ಹಾಕಿ. ಮನೆಗೆ ಬಣ್ಣ ಹಾಕಿದರೆ ಸುಂದರವಾಗಿ ಕಂಡಾಗ ಖರೀದಿದಾರರು ಆಕರ್ಷಿತರಾಗುತ್ತಾರೆ. ಮನೆ ಮಾರಾಟಗಾರರು ಆಸ್ತಿಯ ಎಲ್ಲಾ ಕಾನೂನು ದಾಖಲೆಗಳನ್ನು ಒಟ್ಟುಗೂಡಿಸುವುದು ಬಹಳ ಮುಖ್ಯ. ನಿರೀಕ್ಷಿತ ಖರೀದಿದಾರರು ಯಾವುದೇ ಕಾನೂನು ವಿವಾದಗಳಿಲ್ಲದ ಮನೆಯನ್ನು ಖರೀದಿ ಮಾಡಲು ಮುಂದಾಗುತ್ತಾರೆ.

English summary

Things to help homeowners fetch the best deal for their house in Kannada

Here is the list for first-time home sellers to fetch the best deal for their house in Kannada. Read on.
Story first published: Wednesday, May 11, 2022, 20:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X