For Quick Alerts
ALLOW NOTIFICATIONS  
For Daily Alerts

ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ

|

ಬೆಂಗಳೂರು, ಮೇ. 27: ಪೆಟ್ರೋಲ್ - ಡೀಸೆಲ್ ದರ ಏರಿಕೆಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ ಸುಂಕ ಇಳಿಕೆ ಮಾಡಿದೆ. ಆದರೆ, ಇದರ ಬೆನ್ನಲ್ಲೇ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಆಘಾತ ನೀಡುತ್ತಿದೆ. ಮೋಟಾರು ವಾಹನ ವಿಮೆ(Third Party) ಪ್ರೀಮಿಯಂ ದರ ಹೆಚ್ಚಳ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿದಸಿದೆ. ಈ ಮೂಲಕ ಪರಿಷ್ಕೃತ ದರ ಜೂನ್ 01, 2022 ರಿಂದ ಜಾರಿಗೆ ಬರಲಿದೆ.

ಜೂ. 1 ರಿಂದ ಪರಿಷ್ಕೃತ ಮೋಟಾರು ವಾಹನ(Third Party) ವಿಮೆಯ ಮೊತ್ತ ಜಾರಿಗೆ ಬರಲಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರಿಗೆ ವಾಹನ ವಿಮೆ ಪ್ರೀಮಿಯಮ್ ಹೊರೆ ಹೆಚ್ಚಾಗಲಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ವಿಳಂಬವಾಗಿದ್ದ ದರ ಪರಿಷ್ಕರಣೆಗೆ ಕೊನೆಗೂ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ವಿಮೆ ಪ್ರೀಮಿಯಂ ದರ ಹೆಚ್ಚಳದೊಂದಿಗೆ ಹೊಸ ಕಾರು, ಬೈಕು ಖರೀದಿಗೆ ಮುನ್ನ ದರ ಪಟ್ಟಿ ಪರಿಶೀಲಿಸುವುದು ಒಳಿತು.

ವಾಹನ ವಿಮೆ ಪರಿಷ್ಕರಣೆ ದರದ ವಿವರ

ವಾಹನ ವಿಮೆ ಪರಿಷ್ಕರಣೆ ದರದ ವಿವರ

ವಾಹನ ವಿಮೆ ಪರಿಷ್ಕರಣೆ ಪ್ರಕಾರ ಮೂರು ವರ್ಷದ ಸಿಂಗಲ್ ಪ್ರೀಮಿಯಂ ಪಾವತಿ ಮಾಡುವುದಿದ್ದರೆ, 1000 ಸಿಸಿ ಸಾಮರ್ಥ್ಯದೊಳಗಿನ ಕಾರುಗಳಿಗೆ 6521 ರೂ. ನಿಗದಿ ಮಾಡಲಾಗಿದೆ. 1000 ಸಿಸಿ ಮೇಲ್ಪಟ್ಟ ಹಾಗೂ 1500 ಸಿಸಿ ನಡುವಿನ ಕಾರುಗಳ ಮೂರು ವರ್ಷದ ಸಿಂಗಲ್ ಪ್ರೀಮಿಯಂ ದರ 10,640 ರೂ. ಆಗಲಿದೆ. 1500 ಕ್ಕೂ ಹೆಚ್ಚು ಸಾಮರ್ಥ್ಯದ ನೂತನ ಖಾಸಗಿ ಕಾರುಗಳಿಗೆ ಮೂರು ವರ್ಷಕ್ಕೆ 24,596 ರೂ. ಪ್ರೀಮಿಯಂ ನಿಗದಿ ಮಾಡಲಾಗಿದೆ.

350 ಸಿಸಿ ಸಾಮರ್ಥ್ಯದ ವಾಹನಗಳಿಗೆ ದುಬಾರಿ ಮೊತ್ತ

350 ಸಿಸಿ ಸಾಮರ್ಥ್ಯದ ವಾಹನಗಳಿಗೆ ದುಬಾರಿ ಮೊತ್ತ

ಐದು ವರ್ಷಗಳ ಅವಧಿಯ ಸಿಂಗಲ್ ಪ್ರೀಮಿಯಂ 75 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಪ್ರೀಮಿಯಂ ಮೊತ್ತ 2901 ರೂ. ನಿಗದಿ ಮಾಡಲಾಗಿದೆ. 75 ಸಿಸಿಯಿಂದ 150 ಸಿಸಿ ವರೆಗಿನ ದ್ವಿಚಕ್ರ ವಾಹನಗಳಿಗೆ ಐದು ವರ್ಷದ ಸಿಂಗಲ್ ಪ್ರೀಮಿಯಂ ದರ 3851 ರೂ. ನಿಗದಿ ಮಾಡಲಾಗಿದೆ. 150 ರಿಂದ 350 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ 7,365 ರೂ. ಹಾಗೂ 350 ಸಿಸಿಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಐದು ವರ್ಷದ ವಾಹನ ವಿಮೆ ಪ್ರೀಮಿಯಂ ದರ 15,117 ರೂ. ನಿಗದಿಯಾಗಿದೆ.

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಶುಲ್ಕ

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಶುಲ್ಕ

ನೂತನವಾಗಿ ಖರೀದಿ ಮಾಡುವ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ ದರ ( 30 KW ಸಾಮರ್ಥ್ಯ) 5543 ರೂ. 30 ಕೆವಿ ಸಾಮರ್ಥ್ಯ ಮೀರಿದ ಹಾಗೂ 65 ಕೆವಿ ಸಾಮರ್ಥ್ಯದ ಒಳಗಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ 9044 ರೂ. ಆಗಲಿದೆ. 65 ಕೆವಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ವಿಮಾ ಪ್ರೀಮಿಯಂ ದರ 20,907 ರೂ.ಗೆ ನಿಗದಿ ಮಾಡಲಾಗಿದೆ.

ವಿಮೆ ಪರಿಷ್ಕೃತ ಪ್ರೀಮಿಯಮ್ ದರ ಪರಿಷ್ಕರಣೆ

ವಿಮೆ ಪರಿಷ್ಕೃತ ಪ್ರೀಮಿಯಮ್ ದರ ಪರಿಷ್ಕರಣೆ

2019ರಲ್ಲೇ ವಾಹನ ವಿಮೆ ಪರಿಷ್ಕೃತ ಪ್ರೀಮಿಯಮ್ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಕೋವಿಡ್ ನಿಂದಾಗಿ ಹೊಸ ದರ ಪಟ್ಟಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಸದ್ಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಪ್ರಕಾರ, 1000 ಸಾವಿರ ಸಿಸಿ ಸಾಮರ್ಥ್ಯ ಕ್ಕಿಂತ ಕಡಿಮೆ ಸಾಮರ್ಥ್ಯ ಇರುವ ಕಾರುಗಳ Third Party ವಾಹನ ವಿಮೆ ಪ್ರಿಮಿಯಮ್ ದರ ವಾರ್ಷಿಕ 2,094 ಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಈ ಹಿಂದೆ ಈ ದರ ಕೇವಲ 2072 ರೂ. ಇತ್ತು. ವಾರ್ಷಿಕ 24 ರೂ. ಹೆಚ್ಚಿಸಲಾಗಿದೆ

Third Party ವಾಹನ ವಿಮೆ ಪ್ರೀಮಿಯಂ ಪಾವತಿ

Third Party ವಾಹನ ವಿಮೆ ಪ್ರೀಮಿಯಂ ಪಾವತಿ

1000 ಸಿಸಿ ಸಾಮರ್ಥ್ಯದಿಂದ 1500 ಸಿಸಿ ಸಾಮರ್ಥ್ಯದ ಕಾರುಗಳ Third Party ವಾಹನ ವಿಮೆ ಪ್ರೀಮಿಯಂ ಪಾವತಿ ಮೊತ್ತವನ್ನು 3,221 ರಿಂದ 3,416 ಕ್ಕೆ ಹೆಚ್ಚಿಸಲಾಗಿದೆ. ಸರಿ ಸುಮಾರು 200 ರೂ. ಹೆಚ್ಚಳ ಕಂಡು ಬಂದಿದೆ. ಇನ್ನು 500 ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿರುವ ಅತಿ ದೊಡ್ಡ ಕಾರುಗಳ ವಿಮಾ ಮೊತ್ತವನ್ನು 7897 ಇದ್ದಿದ್ದನ್ನು 7980 ಕ್ಕೆ ಇಳಿಸಲಾಗಿದೆ.


ದ್ವಿಚಕ್ರ ವಾಹನಗಳವಿಮೆ ಮೊತ್ತದ ಪ್ರೀಮಿಯಂ ದರ ಕೂಡಾ ಬದಲಾಗಲಿದ್ದು, 150 ಸಿಸಿ ಸಮಾರ್ಥ್ಯದಿಂದ 350 ಸಿಸಿ ಸಾಮರ್ಥ್ಯದ ವಿಮೆ ಪ್ರೀಮಿಯಂ 1366 ರೂ. ನಿಗದಿ ಮಾಡಲಾಗಿದೆ. 350 ಸಿಸಿಗೆ ಮೇಲ್ಪಟ್ಟ ದ್ವಿಚಕ್ರ ವಾಹನಗಳ ವಾಹನ ವಿಮೆ ಪ್ರೀಮಿಯಂ ಮೊತ್ತ 2804 ರೂ. ಪಾವತಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.

English summary

Third-party motor insurance premium to go up from June 1 revised rates List

According to the revised rates notified by the MoRTH, private cars with an engine capacity of 1,000 cc will attract rates of Rs 2,094 compared to Rs 2,072 in 2019-20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X