For Quick Alerts
ALLOW NOTIFICATIONS  
For Daily Alerts

ಶೇ.7.45 ಬಡ್ಡಿದರ ನೀಡುತ್ತೆ ಈ ಎಎಎ ರೇಟೆಡ್ ಎಫ್‌ಡಿ!

|

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಹೂಡಿಕೆಯ ಅವಕಾಶಗಳನ್ನು ಈಗ ಭಾರತದ ಅನೇಕ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬೆಲೆಗೆ ನೀಡುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳಿಗಿಂತ ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ಬಜಾಜ್ ಫೈನಾನ್ಸ್ ಈಗ ನೀಡುತ್ತಿದೆ.

ಎಫ್‌ಡಿ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಹೂಡಿಕೆ ಸಾಧನಗಳಲ್ಲಿ ಒಂದಾಗಿದೆ. ಅಲ್ಲಿ ಹೂಡಿಕೆದಾರರಿಗೆ ನಿಶ್ಚಿತ ಅವಧಿಯ ನಂತರ ಸ್ಥಿರ ಆದಾಯದ ಬಗ್ಗೆ ಭರವಸೆ ನೀಡಬಹುದು. ಹಲವಾರು ಮಂದಿ ತಮ್ಮಲಿರುವ ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ತಾಣ ಎಫ್‌ಡಿ ಎಂದೇ ನಂಬಿದ್ದಾರೆ.

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

ರೂ. 5 ಲಕ್ಷಗಳ ಎಫ್‌ಡಿ ಹೂಡಿಕೆಗಳನ್ನು ಕೇಂದ್ರ ಸರ್ಕಾರದಿಂದ ಭರವಸೆದಾಯಕವಾಗಿದೆ. ಆದ್ದರಿಂದ ಇದು ಭದ್ರತೆಯೊಂದಿಗೆ ಲಾಭದಾಯಕ ಹೂಡಿಕೆಯ ಆಯ್ಕೆಯಾಗಿದೆ. ಜನರು ಎಫ್‌ಡಿ ಮಾಡಲು ಮುಂದಾದರೆ ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಉತ್ತಮ ಆಯ್ಕೆ ಎಂದೇ ಹೇಳಬಹುದು.

 ಶೇ.7.45 ಬಡ್ಡಿದರ ನೀಡುತ್ತೆ ಈ ಎಎಎ ರೇಟೆಡ್ ಎಫ್‌ಡಿ!

ಈಕ್ವಿಟಿ ಮಾರುಕಟ್ಟೆಗಳು ಒತ್ತಡದಲ್ಲಿರುವಾಗ ಮತ್ತು ಚಿನ್ನದ ದರಗಳು ಕುಸಿಯುತ್ತಿರುವ ಸಮಯದಲ್ಲಿ, ಜನರು ಈಕ್ವಿಟಿ ಮಾರುಕಟ್ಟೆ, ಚಿನ್ನದ ಹೂಡಿಕೆ ಬದಲಾಗಿ ಫಿಕ್ಸಿಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡಬಹುದು. ಈ ಮೂಲಕ ಸ್ಥಿರ ಆದಾಯವನ್ನು ಜನರು ಗಳಿಸಬಹುದು.

 ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು? ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್: ನೂತನ ದರವೆಷ್ಟು?

ಎಎಪಿ ರೇಟಿಂಗ್

ರೇಟಿಂಗ್ ಸಂಸ್ಥೆ ಕ್ರಿಸಿಲ್ ಈ ಎಫ್‌ಡಿಗೆ ಎಫ್‌ಎಎಎ/ಸ್ಥಿರ ರೇಟಿಂಗ್ ಅನ್ನು ನೀಡಿದೆ. ಐಸಿಆರ್‌ಎ ಈ ಎಫ್‌ಡಿಗೆ ಎಂಎಎಎ/ಸ್ಥಿರ ರೇಟಿಂಗ್ ನೀಡಿದೆ. ಬಜಾಜ್ ಫೈನಾನ್ಸ್ ಎಫ್‌ಡಿಗಳು ದೀರ್ಘಾವಧಿಯ ಎಫ್‌ಡಿ ಹೂಡಿಕೆಯಾಗಿದ್ದು, ಇದರಲ್ಲಿ ಶೇಕಡ 7.45ರವರೆಗೆ ಆದಾಯವನ್ನಯ ಗಳಿಸಬಹುದು. ಈ ಹೂಡಿಕೆಯ ಅಡಿಯಲ್ಲಿ, ಕನಿಷ್ಠ ರೂ. 15,000 ಹೂಡಿಕೆಯನ್ನು ಮಾಡಬಹುದು. ಕೆಳಗೆ, ಬಡ್ಡಿದರಗಳನ್ನು ಹಂಚಿಕೊಳ್ಳಲಾಗಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇಕಡ 0.25 ಬಡ್ಡಿ ದರ ಅನ್ವಯಿಸುತ್ತದೆ.

ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ

36-60 ತಿಂಗಳು: ಶೇಕಡ 7.00 ಬಡ್ಡಿದರ
33 ತಿಂಗಳು: ಶೇಕಡ 6.75 ಬಡ್ಡಿದರ
44 ತಿಂಗಳು: ಶೇಕಡ 7.20 ಬಡ್ಡಿದರ

ಹಿರಿಯ ನಾಗರಿಕರಿಗೆ ಬಡ್ಡಿ ದರ

36-60 ತಿಂಗಳು: ಶೇಕಡ 7.25 ಬಡ್ಡಿದರ
33 ತಿಂಗಳು: ಶೇಕಡ 7.00 ಬಡ್ಡಿದರ
44 ತಿಂಗಳು: ಶೇಕಡ 7.45 ಬಡ್ಡಿದರ

English summary

This AAA Rated FD Offers Interest Rates Of 7.45%

This AAA Rated FD Offers Interest Rates Of 7.45%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X