For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳು: ಇಲ್ಲಿದೆ ಪಟ್ಟಿ

|

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ ರಾಷ್ಟ್ರವಾಗಿದ್ದು, ಚೀನಾವನ್ನು ಮಾತ್ರ ಹಿಂದಿಕ್ಕಿದೆ. ಚೀನಾವು 2019 ರಲ್ಲಿ 2.2 ಶತಕೋಟಿ ಮೆಟ್ರಿಕ್ ಟನ್ ಸಿಮೆಂಟ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಇದು ಜಾಗತಿಕ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿದೆ. ಆದರೆ ಭಾರತ ಜಾಗತಿಕ ಸಾಮರ್ಥ್ಯದ ಸುಮಾರು ಶೇಕಡ 8ರಷ್ಟನ್ನು ಹೊಂದಿದೆ. ಸಿಮೆಂಟ್ ಉದ್ಯಮವು ಸಾಮಾಜಿಕ-ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸರ್ಕಾರಕ್ಕೆ ಸಿಮೆಂಟ್ ಉತ್ಪಾದನೆಯಿಂದ 500 ಶತಕೋಟಿ ರೂಪಾಯಿಗೂ ಅಧಿಕ ಆದಾಯ ಲಭ್ಯವಾಗುತ್ತದೆ. ಹಾಗೆಯೇ ಆದಾಯ ಸಂಗ್ರಹದಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ. ಆದ್ದರಿಂದಾಗಿ ಸಿಮೆಂಟ್ ಉದ್ಯಮವು ಭಾರತದಲ್ಲಿ ಪ್ರಾಮುಖ್ಯವಾಗಿದೆ.

ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ವಲಯ, ಹೆಚ್ಚಿದ ಜಾಗತಿಕ ಬೇಡಿಕೆ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಂತಹ ಮೂಲಸೌಕರ್ಯ ಯೋಜನೆಗಳಲ್ಲಿ ಹೆಚ್ಚಿದ ಚಟುವಟಿಕೆಯಿಂದಾಗಿ ಸಿಮೆಂಟ್ ಉದ್ಯಮವು ಭಾರತದಲ್ಲಿ ವಿಸ್ತಾರವಾಗುತ್ತಿದೆ. ಉತ್ಪಾದನಾ ಸಾಮರ್ಥ್ಯವು ಹೆಚ್ಚಿದೆ. ಸಿಮೆಂಟ್ ಉತ್ಪಾದನೆಯಲ್ಲಿ ಭಾರತ ಈಗ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

ಅತೀ ದೊಡ್ಡ ಡೀಲ್: ಅದಾನಿ ತೆಕ್ಕೆಗೆ ಎಸಿಸಿ, ಅಂಬುಜಾ ಸಿಮೆಂಟ್ಸ್ಅತೀ ದೊಡ್ಡ ಡೀಲ್: ಅದಾನಿ ತೆಕ್ಕೆಗೆ ಎಸಿಸಿ, ಅಂಬುಜಾ ಸಿಮೆಂಟ್ಸ್

2025 ರ ಹೊತ್ತಿಗೆ, ಭಾರತದಲ್ಲಿ ಸಿಮೆಂಟ್ ಉದ್ಯಮವು ವರ್ಷಕ್ಕೆ ಸರಿಸುಮಾರು 550 ರಿಂದ 600 ಮಿಲಿಯನ್ ಟನ್‌ಗಳ ಬೇಡಿಕೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ವಸತಿ, ಕೈಗಾರಿಕಾ ಕಟ್ಟಡ, ವಾಣಿಜ್ಯ ನಿರ್ಮಾಣ ಸೇರಿದಂತೆ ವಿವಿಧ ಕೈಗಾರಿಕೆಗಳು ವಿಸ್ತಾರಗೊಳ್ಳುತ್ತಿವೆ. ಇದಲ್ಲದೆ, ಭಾರತದಲ್ಲಿ ಮೂಲಸೌಕರ್ಯವು ವೇಗವಾಗಿ ಹೆಚ್ಚುತ್ತಿದೆ. ಹಾಗಾದರೆ ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳು ಯಾವುದು ಎಂದು ತಿಳಿಯೋಣ ಮುಂದೆ ಓದಿ....

 ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್! ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!

 ಟಾಪ್ 1: ಅಲ್ಟ್ರಾಟೆಕ್ ಸಿಮೆಂಟ್

ಟಾಪ್ 1: ಅಲ್ಟ್ರಾಟೆಕ್ ಸಿಮೆಂಟ್

ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ ಮತ್ತು ವಿಶ್ವದ ಅತ್ಯಂತ ಪ್ರತಿಷ್ಠಿತ ಸಿಮೆಂಟ್ ಉತ್ಪಾದಕರಲ್ಲಿ ಒಂದಾಗಿದೆ. ಅಲ್ಟ್ರಾಟೆಕ್ ಭಾರತದಲ್ಲಿ ಗ್ರೇ ಸಿಮೆಂಟ್, ವೈಟ್ ಸಿಮೆಂಟ್ ಮತ್ತು ರೆಡಿ-ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಯ ಅತಿದೊಡ್ಡ ಉತ್ಪಾದಕವಾಗಿದೆ. ವಾರ್ಷಿಕ 102.75 ಮಿಲಿಯನ್ ಟನ್‌ಗಳ ಬೂದು ಸಿಮೆಂಟ್ ಅನ್ನು ಸಂಸ್ಥೆ ಉತ್ಪಾದನೆ ಮಾಡುತ್ತದೆ. ಅಲ್ಟ್ರಾಟೆಕ್ 22 ಸಂಯೋಜಿತ ಉತ್ಪಾದನಾ ಘಟಕಗಳು, 27 ಗ್ರೈಂಡಿಂಗ್ ಘಟಕಗಳು, ಏಳು ಬೃಹತ್ ಪ್ಯಾಕೇಜಿಂಗ್ ಟರ್ಮಿನಲ್‌ಗಳನ್ನು ಹೊಂದಿದೆ. ಬಿರ್ಲಾ ವೈಟ್ ಎಂಬುದು ಅಲ್ಟ್ರಾಟೆಕ್ ಅನ್ನು ಮಾರಾಟ ಮಾಡುವ ಬ್ರಾಂಡ್ ಹೆಸರು.

ಆದಾಯ: 38,657 ಕೋಟಿ
ಮಾರುಕಟ್ಟೆ ಕ್ಯಾಪ್: 107,207 ಕೋಟಿ
ಉದ್ಯೋಗಿಗಳು: 120,000

 ಟಾಪ್ 2: ಅಂಬುಜಾ ಸಿಮೆಂಟ್ಸ್

ಟಾಪ್ 2: ಅಂಬುಜಾ ಸಿಮೆಂಟ್ಸ್

ಅಂಬುಜಾ ಸಿಮೆಂಟ್ಸ್ ಪಶ್ಚಿಮ ಭಾರತದಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಭಾರತದ ಅತಿದೊಡ್ಡ ಸಿಮೆಂಟ್ ತಯಾರಕ ಸಂಸ್ಥೆಯಾಗಿದ್ದು, 1986 ರಲ್ಲಿ ಉತ್ಪಾದನೆಯನ್ನು ಉತ್ಪಾದನೆ ಪ್ರಾರಂಭವಾಗಿದೆ. ಗುಜರಾತ್ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಅನ್ನು ನಂತರ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಬಹುರಾಷ್ಟ್ರೀಯ ಸಿಮೆಂಟ್ ಕಂಪನಿ ಹೋಲ್ಸಿಮ್ 2006 ರಲ್ಲಿ ಅಂಬುಜಾ ಸಿಮೆಂಟ್ಸ್ ಅನ್ನು ಖರೀದಿ ಮಾಡಿತು. ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಮಾಲೀಕತ್ವವನ್ನು ಪಡೆಯಿತು. ದೇಶಾದ್ಯಂತ, ಕಂಪನಿಯು ಐದು ಸಮಗ್ರ ಸಿಮೆಂಟ್ ಉತ್ಪಾದನಾ ಘಟಕಗಳನ್ನು ಮತ್ತು ಎಂಟು ಸಿಮೆಂಟ್ ಗ್ರೈಂಡಿಂಗ್ ಘಟಕಗಳನ್ನು ಹೊಂದಿದೆ. ಅಂಬುಜಾ ಸಿಮೆಂಟ್ಸ್ ವಿಶ್ವದ ಅತ್ಯಂತ ಪರಿಣಾಮಕಾರಿ ಸಿಮೆಂಟ್ ತಯಾರಕರಲ್ಲಿ ಒಂದಾಗಿದೆ. ಪ್ರಸ್ತುತ ಈ ಕಂಪನಿಯನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ.

ಆದಾಯ: 26,646 ಕೋಟಿ
ಉದ್ಯೋಗಿಗಳು: 5180
ಮಾರುಕಟ್ಟೆ ಬಂಡವಾಳ: 39,187 ಕೋಟಿ

 ಟಾಪ್ 3: ಎಸಿಸಿ ಲಿಮಿಟೆಡ್

ಟಾಪ್ 3: ಎಸಿಸಿ ಲಿಮಿಟೆಡ್

ಎಸಿಸಿ ಲಿಮಿಟೆಡ್ 17 ಸಿಮೆಂಟ್ ಕಾರ್ಖಾನೆಗಳು, 75 ಸಿದ್ಧ ಮಿಶ್ರಣ ಕಾಂಕ್ರೀಟ್ ಘಟಕಗಳು, 6,700 ಕ್ಕೂ ಹೆಚ್ಚು ಉದ್ಯೋಗಿಗಳು, 50,000+ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿರುವ ಭಾರತದ ಪ್ರಮುಖ ಸಿಮೆಂಟ್ ತಯಾರಕ ಸಂಸ್ಥೆಯಲ್ಲಿ ಒಂದಾಗಿದೆ. ಇದು ಭಾರತದ 3 ನೇ ಪ್ರಮುಖ ಸಿಮೆಂಟ್ ಕಂಪನಿಯಾಗಿದೆ. 1936 ರಲ್ಲಿ ಪ್ರಾರಂಭವಾದಾಗಿನಿಂದ ಸಿಮೆಂಟ್ ಮತ್ತು ಕಾಂಕ್ರೀಟ್ ತಯಾರಿಕೆಯಲ್ಲಿ ತೊಡಗಿದೆ. 1960 ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿನಿಂದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇವರೆಗೆ ಎಸಿಸಿ ಸಿಮೆಂಟ್ ದೇಶಾದ್ಯಂತ ಐಕಾನಿಕ್ ಹೆಗ್ಗುರುತುಗಳ ಅಡಿಪಾಯದಲ್ಲಿದೆ. 2005 ರಲ್ಲಿ, ಎಸಿಸಿ ಸ್ವಿಟ್ಜರ್ಲೆಂಡ್‌ನ ಹೆಸರಾಂತ ಹೋಲ್ಸಿಮ್ ಗ್ರೂಪ್‌ನ ಭಾಗವಾಯಿತು. 2015 ರಲ್ಲಿ ಹೋಲ್ಸಿಮ್ ಲಿಮಿಟೆಡ್ ಮತ್ತು ಲಾಫಾರ್ಜ್ ಎಸ್ಎ ವಿಲೀನದ ಅಡಿಯಲ್ಲಿ ಇತ್ತು. ಆದರೆ ಈಗ ಅದಾನಿ ಗ್ರೂಪ್ ಹೋಲ್ಸಿಮ್ ಗ್ರೂಪ್‌ ಪಾಲನ್ನು ಖರೀದಿ ಮಾಡಿದೆ.

ಆದಾಯ: 15,398 ಕೋಟಿ
ಮಾರುಕಟ್ಟೆ ಕ್ಯಾಪ್: 27,886 ಕೋಟಿ
ಉದ್ಯೋಗಿಗಳು: 6731

 ಟಾಪ್ 4: ಶ್ರೀ ಸಿಮೆಂಟ್

ಟಾಪ್ 4: ಶ್ರೀ ಸಿಮೆಂಟ್

ಶ್ರೀ ಸಿಮೆಂಟ್ ಲಿಮಿಟೆಡ್ ಭಾರತದ ಟಾಪ್ 5 ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಶ್ರೀ ಸಿಮೆಂಟ್ ಲಿಮಿಟೆಡ್‌ನ ಮುಖ್ಯ ಉತ್ಪನ್ನಗಳು ಅಥವಾ ಸೇವೆಗಳು ಸಿಮೆಂಟ್ ಮತ್ತು ಕ್ಲಿಂಕರ್ ಆಗಿದೆ. ಸುಮಾರು ಆರು ರಾಜ್ಯಗಳಲ್ಲಿ ಇದು ಘಟಕಗಳನ್ನು ಹೊಂದಿದೆ. ರಾಜಸ್ಥಾನ, ಉತ್ತರಾಖಂಡ, ಬಿಹಾರ, ಹರಿಯಾಣ, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದಲ್ಲಿ ಈ ಕಂಪನಿ ಕಾರ್ಯ ನಿರ್ವಹಿಸುತ್ತದೆ. ಇದು ವಾರ್ಷಿಕ 44.4 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಶ್ರೀ ಜಂಗ್ ರೋಧಕ್, ಬಂಗೂರ್ ಮತ್ತು ರಾಕ್‌ಸ್ಟ್ರಾಂಗ್ ಕಂಪನಿಯ ಬ್ರಾಂಡ್‌ಗಳು ಆಗಿದೆ. ಮಾರುಕಟ್ಟೆ ಕ್ಯಾಪಿಟಲ್ 94,784 ಕೋಟಿ ರೂಪಾಯಿ ಆಗಿದೆ.

ಆದಾಯ: 12,555 ಕೋಟಿ
ಮಾರುಕಟ್ಟೆ ಕ್ಯಾಪ್: 64,420 ಕೋಟಿ
ಉದ್ಯೋಗಿಗಳು: 6,299

 ಟಾಪ್ 5: ದಾಲ್ಮಿಯಾ ಭಾರತ್ ಲಿಮಿಟೆಡ್

ಟಾಪ್ 5: ದಾಲ್ಮಿಯಾ ಭಾರತ್ ಲಿಮಿಟೆಡ್

ದಾಲ್ಮಿಯಾ ಭಾರತ್ ಲಿಮಿಟೆಡ್ ಒಟ್ಟು ಆದಾಯದ ಪ್ರಕಾರ ಸಿಮೆಂಟ್‌ನ ಟಾಪ್ 10 ಕಂಪನಿಗಳಲ್ಲಿ ಐದನೇ ಸ್ಥಾನದಲ್ಲಿದೆ. ಕಂಪನಿಯು ದಕ್ಷಿಣದ ರಾಜ್ಯಗಳಾದ ತಮಿಳುನಾಡು ಆಂಧ್ರಪ್ರದೇಶದಲ್ಲಿ ವಾರ್ಷಿಕ 9 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಉತ್ಪಾದನಾ ಘಟಕಗಳನ್ನು ಹೊಂದಿದೆ. 1939 ರಿಂದ ಸಿಮೆಂಟ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಾಲ್ಮಿಯಾ ಭಾರತ್ ಲಿಮಿಟೆಡ್ ತೈಲ ಬಾವಿಗಳು, ರೈಲ್ವೇ ಸ್ಲೀಪರ್‌ಗಳು ಮತ್ತು ಏರ್‌ಸ್ಟ್ರಿಪ್‌ಗಳಿಗೆ ಬಳಸುವ ಸೂಪರ್-ಸ್ಪೆಷಾಲಿಟಿ ಸಿಮೆಂಟ್ ತಯಾರಿಕ ಸಂಸ್ಥೆಯಾಗಿದೆ.

ಆದಾಯ: 9,642 ಕೋಟಿ
ಮಾರುಕಟ್ಟೆ ಕ್ಯಾಪ್: 16,343 ಕೋಟಿ
ಉದ್ಯೋಗಿಗಳು: 5,634

 ಟಾಪ್ 6: ಬಿರ್ಲಾ ಕಾರ್ಪೊರೇಷನ್ ಲಿಮಿಟೆಡ್

ಟಾಪ್ 6: ಬಿರ್ಲಾ ಕಾರ್ಪೊರೇಷನ್ ಲಿಮಿಟೆಡ್

ಬಿರ್ಲಾ ಎಂಪಿ ಬಿರ್ಲಾ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ. 1919 ರಲ್ಲಿ ಬಿರ್ಲಾ ಜೂಟ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ಆಗಿ ಸಂಘಟಿತವಾದ ದಿವಂಗತ ಮಾಧವ್ ಪ್ರಸಾದ್ ಬಿರ್ಲಾ ಅವರು ಇದಕ್ಕೆ ಒಂದು ಆಯಾಮವನ್ನು ನೀಡಿದ್ದಾರೆ. ಕಂಪನಿಯ ಅಧ್ಯಕ್ಷರಾಗಿ ಈ ಸಂಸ್ಥೆಯನ್ನು ವಿಸ್ತಾರ ಮಾಡುತ್ತಾ ಬಂದರು. ಇದು ಭಾರತದ ಪ್ರಮುಖ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಪ್ರಿಯಂವದಾ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ಕಂಪನಿಯು ರೂ. 1,300 ಕೋಟಿ ವಹಿವಾಟು ಮಾಡಿದೆ. ಇದರ ಹೆಸರನ್ನು 1998 ರಲ್ಲಿ ಬಿರ್ಲಾ ಎಂದು ಬದಲಾಯಿಸಲಾಯಿತು. ಇದು ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಆದಾಯ: 6,778 ಕೋಟಿ
ಮಾರುಕಟ್ಟೆ ಕ್ಯಾಪ್: 4,307 ಕೋಟಿ
ಉದ್ಯೋಗಿಗಳು: 5,776

 ಟಾಪ್ 7: ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್

ಟಾಪ್ 7: ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್

ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಅನ್ನು ಎಸ್ ಎನ್ ಎನ್ ಶಂಕರಲಿಂಗ ಅಯ್ಯರ್ ಮತ್ತು ಟಿ ಎಸ್ ನಾರಾಯಣಸ್ವಾಮಿ ಎಂಬ ಇಬ್ಬರು ವ್ಯಕ್ತಿಗಳು 1946 ರಲ್ಲಿ ಸ್ಥಾಪಿಸಿದರು. ಕೈಗಾರಿಕಾ ಭಾರತಕ್ಕಾಗಿ ಕನಸುಗಳನ್ನು ಪ್ರೇರೇಪಿಸುವ ದೃಷ್ಟಿಕೋನವನ್ನು ಇಬ್ಬರು ಹೊಂದಿದ್ದು, ಈ ನಿಟ್ಟಿನಲ್ಲಿ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಅನ್ನು ಸ್ಥಾಪನೆ ಮಾಡಿದರು. 1989 ರಲ್ಲಿ ಕೇವಲ 1.3 ಮಿಲಿಯನ್ ಟನ್ ಸಾಮರ್ಥ್ಯದ ಎರಡು ಸ್ಥಾವರ ಹೊಂದಿರುವ ಕಂಪನಿ ಇದಾಗಿತ್ತು. ಇಂಡಿಯಾ ಸಿಮೆಂಟ್ಸ್ ಕಳೆದ ಎರಡು ದಶಕಗಳಲ್ಲಿ ವರ್ಷಕ್ಕೆ 15.5 ಮಿಲಿಯನ್ ಟನ್‌ಗಳ ಒಟ್ಟು ಸಾಮರ್ಥ್ಯದಷ್ಟು ಬೆಳವಣಿಗೆ ಹೊಂದಿದೆ. ಇದು ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇಂಡಿಯಾ ಸಿಮೆಂಟ್ಸ್ ಈಗ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 8 ಇಂಟಿಗ್ರೇಟೆಡ್ ಸಿಮೆಂಟ್ ಪ್ಲಾಂಟ್‌ಗಳನ್ನು ಹೊಂದಿದೆ ಮತ್ತು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದರಂತೆ ಎರಡು ಗ್ರೈಂಡಿಂಗ್ ಘಟಕಗಳನ್ನು ಹೊಂದಿದೆ.

ಆದಾಯ: 5,770 ಕೋಟಿ
ಮಾರುಕಟ್ಟೆ ಕ್ಯಾಪ್: 2,462 ಕೋಟಿ
ಉದ್ಯೋಗಿಗಳು: 4300

 ಟಾಪ್ 8: ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್

ಟಾಪ್ 8: ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್

ರಾಮ್‌ಕೋ ಸಿಮೆಂಟ್ಸ್ ಲಿಮಿಟೆಡ್ ದಕ್ಷಿಣ ಭಾರತದ ಪ್ರಸಿದ್ಧ ವ್ಯಾಪಾರ ಸಮೂಹವಾದ ರಾಮ್‌ಕೋ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ. ಇದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ. ಇದು ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕಂಪನಿಯ ಮುಖ್ಯ ಉತ್ಪನ್ನ ಪೋರ್ಟ್‌ಲ್ಯಾಂಡ್ ಸಿಮೆಂಟ್ ಆಗಿದೆ. ಇದು ಎಂಟು ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳಲ್ಲಿ ತಯಾರಿಸಲ್ಪಡುತ್ತದೆ. ಒಟ್ಟು ಉತ್ಪಾದನಾ ಸಾಮರ್ಥ್ಯ 16.45 ಮೆಟ್ರಿಕ್ ಟನ್ ಆಗಿದೆ. ಇದು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಸಿಮೆಂಟ್ ಬ್ರಾಂಡ್ ಆಗಿದೆ.

ಆದಾಯ: 5,310 ಕೋಟಿ
ಮಾರುಕಟ್ಟೆ ಕ್ಯಾಪ್: 17,090 ಕೋಟಿ
ಉದ್ಯೋಗಿಗಳು: 3034

 ಟಾಪ್ 9: ಓರಿಯಂಟ್ ಸಿಮೆಂಟ್ ಲಿಮಿಟೆಡ್

ಟಾಪ್ 9: ಓರಿಯಂಟ್ ಸಿಮೆಂಟ್ ಲಿಮಿಟೆಡ್

1979 ರಲ್ಲಿ ಸ್ಥಾಪನೆಯಾದ ಓರಿಯಂಟ್ ಸಿಮೆಂಟ್ ಹಿಂದೆ ಓರಿಯಂಟ್ ಪೇಪರ್ ಮತ್ತು ಇಂಡಸ್ಟ್ರೀಸ್‌ನ ಒಂದು ಭಾಗವಾಗಿತ್ತು. ಇದನ್ನು 2012 ರಲ್ಲಿ ಬೇರ್ಪಡಿಸಲಾಯಿತು. ಅಂದಿನಿಂದ, ಇದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಪ್ರಮುಖ ಸಿಮೆಂಟ್ ತಯಾರಕರಲ್ಲಿ ಒಂದಾಗಿ ಹೊರಹೊಮ್ಮಿದೆ. ಓರಿಯಂಟ್ ಸಿಮೆಂಟ್ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ದೇವಾಪುರದಲ್ಲಿ 1982 ರಲ್ಲಿ ಸಿಮೆಂಟ್ ಉತ್ಪಾದನೆಯನ್ನು ಪ್ರಾರಂಭ ಮಾಡಿತು. 1997 ರಲ್ಲಿ, ಮಹಾರಾಷ್ಟ್ರದ ಜಲಗಾಂವ್‌ನ ನಾಶಿರಾಬಾದ್‌ನಲ್ಲಿ ಸ್ಪ್ಲಿಟ್-ಗ್ರೈಂಡಿಂಗ್ ಘಟಕವನ್ನು ಸೇರಿಸಲಾಯಿತು. ಇದು ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. 2015 ರಲ್ಲಿ, ಓರಿಯಂಟ್ ಸಿಮೆಂಟ್ ಕರ್ನಾಟಕದ ಗುಲ್ಬರ್ಗಾದ ಚಿತ್ತಾಪುರದಲ್ಲಿರುವ ತನ್ನ ಸಮಗ್ರ ಸಿಮೆಂಟ್ ಸ್ಥಾವರದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿತು. ಒಟ್ಟು 8 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದೊಂದಿಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶ, ತಮಿಳುನಾಡು, ಕೇರಳ, ಗುಜರಾತ್ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳಿಗೆ ಸೇವೆ ಸಲ್ಲಿಸುತ್ತಿದೆ.

ಆದಾಯ: 2,182 ಕೋಟಿ
ಮಾರುಕಟ್ಟೆ ಕ್ಯಾಪ್: 4,357 ಕೋಟಿ
ಉದ್ಯೋಗಿಗಳು: 1100

 ಟಾಪ್ 10: ಹೈಡೆಲ್ಬರ್ಗ್ ಸಿಮೆಂಟ್ ಇಂಡಿಯಾ ಲಿಮಿಟೆಡ್

ಟಾಪ್ 10: ಹೈಡೆಲ್ಬರ್ಗ್ ಸಿಮೆಂಟ್ ಇಂಡಿಯಾ ಲಿಮಿಟೆಡ್

ಹೈಡೆಲ್ಬರ್ಗ್ ಸಿಮೆಂಟ್ ಇಂಡಿಯಾ ಲಿಮಿಟೆಡ್ ಜರ್ಮನಿಯ ಹೈಡೆಲ್ಬರ್ಗ್ ಸಿಮೆಂಟ್ ಗ್ರೂಪ್‌ನ ಅಂಗಸಂಸ್ಥೆಯಾಗಿದೆ. ಕಂಪನಿಯು ಮಧ್ಯ ಭಾರತದಲ್ಲಿ ದಾಮೋಹ್ (ಮಧ್ಯಪ್ರದೇಶ), ಝಾನ್ಸಿ (ಉತ್ತರ ಪ್ರದೇಶ) ಮತ್ತು ದಕ್ಷಿಣ ಭಾರತದಲ್ಲಿ ಅಮ್ಮಸಂದ್ರದಲ್ಲಿ (ಕರ್ನಾಟಕ) ಕಾರ್ಯನಿರ್ವಹಣೆ ಮಾಡುತ್ತದೆ. 2013 ರಲ್ಲಿ ಮಧ್ಯ ಭಾರತದಲ್ಲಿ ತನ್ನ ಸೌಲಭ್ಯಗಳ ವಿಸ್ತರಣೆಯ ಮೂಲಕ ಕಂಪನಿಯು ತನ್ನ ಸಾಮರ್ಥ್ಯವನ್ನು 5.4 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಿದೆ. ಇದು ಭಾರತದ ಟಾಪ್ 10 ಸಿಮೆಂಟ್ ಕಂಪನಿಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಹೊಸ ಉತ್ಪಾದನಾ ಸಾಮರ್ಥ್ಯವು ಕಂಪನಿಯು ಮಧ್ಯ ಭಾರತದಲ್ಲಿ ಅಂದರೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮತ್ತು ಬಿಹಾರ, ಹರಿಯಾಣ ಮತ್ತು ಉತ್ತರಾಖಂಡದ ಮಾರುಕಟ್ಟೆಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ.

ಆದಾಯ: 2,570 ಕೋಟಿ
ಮಾರುಕಟ್ಟೆ ಕ್ಯಾಪ್: 1,838 ಕೋಟಿ
ಉದ್ಯೋಗಿಗಳು: 1500

English summary

Top 10 Cement Companies in India; Here is the List

Here is a list of the top 10 cement companies in India, ranked by revenue and market share. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X