For Quick Alerts
ALLOW NOTIFICATIONS  
For Daily Alerts

ಜೂನ್ 1ರಿಂದ ಎಲ್ಲಾ ರೀತಿಯ ಚಿನ್ನದ ಮೇಲೆ ಹಾಲ್‌ಮಾರ್ಕ್: ಇಲ್ಲಿದೆ ಪ್ರಮುಖ ಮಾಹಿತಿ

|

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಪ್ರಕಾರ ಪ್ರಸ್ತುತ 6 ಶುದ್ಧತೆಯ ವರ್ಗಗಳಲ್ಲಿ ಚಿನ್ನದ ಹಾಲ್‌ಮಾರ್ಕಿಂಗ್ ಮಾಡಲಾಗುತ್ತದೆ. 14KT, 18KT, 20KT, 22KT, 23KT ಮತ್ತು 24KT ಎಂದು ಹಾಲ್‌ಮಾರ್ಕಿಂಗ್ ಮಾಡಲಾಗುತ್ತದೆ. ಹೀಗಾಗಿ ಆಭರಣ ಮಾರಾಟ ಮಾಡುವ ಮೊದಲು ಇತರ ಶುದ್ಧತೆಯ (21KT ಅಥವಾ 19KT) ಚಿನ್ನದ ಆಭರಣಗಳನ್ನು ಕಡ್ಡಾಯವಾಗಿ ಹಾಲ್‌ಮಾರ್ಕ್ ಮಾಡಬೇಕಾಗಿಲ್ಲ. ಆದರೆ ಜೂನ್ ಒಂದರಿಂದ ಈ ನಿಯಮ ಬದಲಾವಣೆಯಾಗುತ್ತದೆ.

 

ಜೂನ್ 1, 2022 ರಿಂದ, ಆಭರಣಕಾರರು ಅದರ ಶುದ್ಧತೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬಹುದು. ಅಂದರೆ ಪ್ರತಿಯೊಂದು ಚಿನ್ನದ ಆಭರಣದ ಮೇಲೆ ಅದರ ಶುದ್ಧತೆಯ ಹಾಲ್‌ಮಾರ್ಕಿಂಗ್ ಕಡ್ಡಾಯವಾಗಿದೆ. ಏಪ್ರಿಲ್ 4, 2022 ರ ಅಧಿಸೂಚನೆಯ ಮೂಲಕ ಬಿಐಎಸ್ ಈ ಘೋಷಣೆಯನ್ನು ಮಾಡಿದೆ.

Gold Rate Today: 10 ದಿನದಲ್ಲಿ 6 ಬಾರಿ ಚಿನ್ನದ ದರ ಏರಿಕೆ: ಮೇ 25ರ ಬೆಲೆ ತಿಳಿಯಿರಿ

ಈ ಬಗ್ಗೆ ಮಾಹಿತಿ ನೀಡಿದ ಪಿಎಸ್‌ಎಲ್ ವಕೀಲರು ಮತ್ತು ಸಾಲಿಸಿಟರ್ಸ್‌ನ ವ್ಯವಸ್ಥಾಪಕ ಪಾಲುದಾರ ಸಮೀರ್ ಜೈನ್, "ಈ ನಿಯಮ ಜೂನ್ 1, 2022 ರಿಂದ ಜಾರಿಗೆ ಬರಲಿದೆ. ಬಿಐಎಸ್‌ನಿಂದ ಹಾಲ್‌ಮಾರ್ಕ್ ಮಾಡುವ ಮೊದಲು ಚಿನ್ನಾಭರಣ ವ್ಯಾಪಾರಿಗಳು ಯಾವುದೇ ಚಿನ್ನಾಭರಣವನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲಾ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿದೆ," ಎಂದು ಹೇಳಿದ್ದಾರೆ.

 ಚಿನ್ನದ ಆಭರಣಗಳ ಮೇಲೆ ಹಾಲ್‌ಮಾರ್ಕ್

ಚಿನ್ನದ ಆಭರಣಗಳ ಮೇಲೆ ಹಾಲ್‌ಮಾರ್ಕ್

ಚಿನ್ನದ ಹಾಲ್‌ಮಾರ್ಕ್ ಮಾಡುವುದರಿಂದ ಗ್ರಾಹಕರಿಗೆ ನಂಬಿಕೆ ಹೆಚ್ಚುತ್ತದೆ. ನಾವು ಖರೀದಿ ಮಾಡುವ ಚಿನ್ನ ಎಷ್ಟು ಶುದ್ಧತೆಯನ್ನು ಹೊಂದಿದೆ ಎಂಬುವುದು ಖಚಿತವಾಗುತ್ತದೆ. ಸರ್ಕಾರವು ಜೂನ್ 16, 2021 ರಿಂದ ಚಿನ್ನದ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸಿದೆ. 14KT, 18KT ಮತ್ತು 22 KT ಹೊಂದಿರುವ ಚಿನ್ನದ ಮೇಲೆ ಹಾಕ್‌ಮಾರ್ಕಿಂಗ್ ಕಡ್ಡಾಯವಾಗಿದೆ. ನಂತರ ಆರು ಕ್ಯಾರೆಟ್ ಚಿನ್ನದ ಮೇಲೆಯೂ ಹಾಲ್‌ ಮಾರ್ಕಿಂಗ್ ಕಡ್ಡಾಯ ಮಾಡಲಾಯಿತು. ಬಳಿಕ ಏಪ್ರಿಲ್ 4, 2022 ರಿಂದ ಜಾರಿಗೆ ಬರುವಂತೆ 14,18,20,22, 23 ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯವಾಗಿದೆ.

 ಚಿನ್ನಾಭರಣಗಳ ಮೇಲಿನ ಶುದ್ಧತೆಯ ಚಿಹ್ನೆ ಪರಿಷ್ಕರಣೆ

ಚಿನ್ನಾಭರಣಗಳ ಮೇಲಿನ ಶುದ್ಧತೆಯ ಚಿಹ್ನೆ ಪರಿಷ್ಕರಣೆ

ಚಿನ್ನಾಭರಣಗಳ ಮೇಲಿನ ಶುದ್ಧತೆಯ ಚಿಹ್ನೆಗಳನ್ನೂ ಸರ್ಕಾರ ಪರಿಷ್ಕರಿಸಿದೆ. ಜುಲೈ 1, 2021 ರಿಂದ, ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣವು ಈ ಕೆಳಗಿನ ಮೂರು ಚಿಹ್ನೆಗಳನ್ನು ಹೊಂದಿರುತ್ತದೆ:

* ಬಿಐಎಸ್ ಲೋಗೋ
* ಶುದ್ಧತೆ ದರ್ಜೆ (Purity/Fineness grade)
* ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ (HUID)

ಅದಕ್ಕೂ ಮೊದಲು ಹಾಲ್‌ಮಾರ್ಕಿಂಗ್‌ನ ನಾಲ್ಕು ಚಿಹ್ನೆಗಳು ಇದ್ದವು. ಬಿಐಎಸ್ ಲೋಗೋ, ಶುದ್ಧತೆ ದರ್ಜೆ, ಅಸ್ಸೆ ಸೆಂಟರ್‌ನ ಗುರುತು, ಆಭರಣದ ಗುರುತಿನ ಸಂಖ್ಯೆ ಇದ್ದವು.

 

 ಚಿನ್ನದ ಹಾಲ್‌ಮಾರ್ಕಿಂಗ್ ಹೇಗಿರುತ್ತದೆ?
 

ಚಿನ್ನದ ಹಾಲ್‌ಮಾರ್ಕಿಂಗ್ ಹೇಗಿರುತ್ತದೆ?

ಹಾಲ್‌ಮಾರ್ಕಿಂಗ್ ಶುಲ್ಕವಾಗಿ ನೀವು ಖರೀದಿಸುವ ಪ್ರತಿಯೊಂದು ಚಿನ್ನದ ವಸ್ತುವಿಗೆ ಆಭರಣ ವ್ಯಾಪಾರಿಯು ನಿಮಗೆ ಹೆಚ್ಚುವರಿಯಾಗಿ ರೂ 35 ವಿಧಿಸುತ್ತಾನೆ. ಚಿನ್ನದ ಹಾಲ್‌ಮಾರ್ಕಿಂಗ್ ಈ ಕೆಳಗಿನಂತೆ ಇರಲಿದೆ.

24KT: 24KS995
23KT: 23K958
22KT: 22K916
20KT: 20K833
18KT: 18K750
14KT: 14K585

 

 ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಮೇಲೆ ವಿನಾಯಿತಿ

ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಮೇಲೆ ವಿನಾಯಿತಿ

ಜೂನ್ 1, 2022 ರಿಂದ ಜಾರಿಗೆ ಬರುವಂತೆ, ಕೆಲವು ವಿನಾಯಿತಿ ಪಡೆದ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಚಿನ್ನಾಭರಣಗಳು ಮತ್ತು ಕಲಾಕೃತಿಗಳು ಕಡ್ಡಾಯವಾಗಿ ಹಾಲ್‌ಮಾರ್ಕ್ ಮಾಡಬೇಕಾಗುತ್ತದೆ. ಕೆಲವು ಚಿನ್ನದ ವಸ್ತುಗಳಿಗೆ ವಿನಾಯಿತಿ ಇದೆ. ಎರಡು ಗ್ರಾಂಗಿಂತ ಕಡಿಮೆ ತೂಕದ ಯಾವುದೇ ಚಿನ್ನದ ವಸ್ತು, ಯಾವುದೇ ಚಿನ್ನದ ದಾರ, ವಿಶೇಷ ವರ್ಗದ ಆಭರಣಗಳು - ಕುಂದನ್, ಪೋಲ್ಕಿ ಮತ್ತು ಜಡಾವು, ಚಿನ್ನದ ಗಟ್ಟಿ ಇತ್ಯಾದಿಯಾಗಿದೆ.

English summary

Gold Jewellery Buyers to Get Mandatory gold hallmarking from June 1, 2022

Mandatory gold hallmarking from June 1, 2022 : From June 1, 2022, jewellers can only sell hallmarked gold jewellery, irrespective of its purity. Know more.
Story first published: Thursday, May 26, 2022, 18:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X